ಆಪತ್ಕಾಲದಲ್ಲಿ ಬದುಕುಳಿಯಲು ಪಾಶ್ಚಾತ್ಯರಿಂದಾಗುತ್ತಿರುವ ವ್ಯರ್ಥ ಪ್ರಯತ್ನಗಳು !

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೧. ವಿಜ್ಞಾನದಿಂದ ಪೃಥ್ವಿಯ ಅಸ್ತಿತ್ವ ಅಪಾಯಕ್ಕೀಡಾಗುವುದನ್ನು ನೋಡಿ ಜೀವವನ್ನು ಉಳಿಸಲು ಪ್ರಯತ್ನಿಸುವ ಪಾಶ್ಚಾತ್ಯ ಜಗತ್ತು !

‘ಸಾವಿರಾರು ವರ್ಷಗಳಲ್ಲಿ ಪೃಥ್ವಿಯ ಮೇಲೆ ಏನೆಲ್ಲ ಉತ್ಪನ್ನವಾಯಿತೋ, ಅದನ್ನೆಲ್ಲವನ್ನು ಮಾನವನು ಕೆಲವೇ ಶತಮಾನಗಳಲ್ಲಿ ನಾಶ ಮಾಡಿ ತಾನೂ ನಾಶವಾಗುವ ಮಾರ್ಗದಲ್ಲಿದ್ದಾನೆ. ಪೆಸಿಫಿಕ್‌ ಮಹಾಸಾಗರದ ಬೃಹತ್‌ ಕಂದಕ, ಅಂದರೆ ‘ಮರಿಯಾನಾ ಟ್ರೇಂಚ್’ ಇದು ಎಷ್ಟು ಆಳವಾಗಿದೆಯೆಂದರೆ, ಅದರಲ್ಲಿ ಇಡೀ ಹಿಮಾಲಯವನ್ನು ಇಟ್ಟರೂ, ಮೇಲಿನಿಂದ ಒಂದು ಮೈಲು ನೀರು ಹರಿಯಬಹುದು. ಸಂಶೋಧಕರಿಗೆ ದೀರ್ಘಕಾಲದಿಂದ ಇಷ್ಟು ಆಳದವರೆಗೆ ತಲುಪಲು ಆಗುತ್ತಿರಲಿಲ್ಲ; ಏಕೆಂದರೆ ನಾವು ಸಮುದ್ರದ ಆಳಕ್ಕೆ ಹೋದಂತೆ ನೀರಿನ ಒತ್ತಡ, ಕತ್ತಲೆ ಮತ್ತು ಪ್ರಾಣವಾಯುವಿನ ಕೊರತೆ ಇವು ಹೆಚ್ಚಾಗುತ್ತಾ ಹೋಗುತ್ತವೆ. ಮಾನವನಿಗೆ ತಲುಪಲು ಸಾಧ್ಯವಾಗದ ಇಂತಹ ಆಳಕ್ಕೆ ಮಾನವನಿರ್ಮಿತ ಕಸಕಡ್ಡಿಗಳು ತಲುಪಿವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ನಾವು ಒಮ್ಮೆ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್‌ ಕಸ ಆ ಆಳಕ್ಕೆ ತಲುಪಿದೆ.

ಪಾಶ್ಚಾತ್ಯ ದೇಶಗಳು ಈ ಬಗ್ಗೆ ನಿಧಾನವಾಗಿ ಚಿಂತನೆ ಮಾಡಲಾರಂಭಿಸಿವೆ. ಅಂದರೆ ಈ ಚಿಂತನೆಯೂ ಮಾಲಿನ್ಯಯುಕ್ತ ಕೋಕೋಕೋಲಾ ಕುಡಿಯುತ್ತಾ ಮತ್ತು ಕಸವನ್ನು ಉತ್ಪತ್ತಿ ಮಾಡುತ್ತಾ ನಡೆಯುತ್ತಿದೆ. ಈ ಪ್ರಯತ್ನವೂ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದೆ. ಒಂದು ಎಲ್ಲವೂ ನಾಶವಾದರೆ, ನಾವು ಹೇಗೆ ಬದುಕಬಹುದು ? ಮತ್ತೊಂದು ಎಲ್ಲವೂ ನಾಶವಾಗುತ್ತಿದ್ದರೆ ನಾವು ನಮ್ಮ ಜೀವವನ್ನು ಹೇಗೆ ಉಳಿಸಿಕೊಳ್ಳುವುದು ? ಅಂದರೆ ಅತೀ ಶ್ರೀಮಂತರು ಅಥವಾ ಮಹಾಶ್ರೀಮಂತರು ಈ ಪ್ರಯತ್ನ ಮಾಡುತ್ತಿದ್ದಾರೆ. ಹಣವಿದ್ದರೆ ಬದುಕುವ ಇಚ್ಛೆ ತಾನಾಗಿಯೇ ಹೆಚ್ಚಾಗುತ್ತದೆ !

ಡಗ್ಲಸ್‌ ರಶ್ಕಾಫ್‌ ಎಂಬವರಿಗೆ ಗಣಕಯಂತ್ರದ ಬಗ್ಗೆ ಹೆಚ್ಚು ಮಾಹಿತಿ ಇದೆ. ಅವರು ವಿವಿಧ ವಿಷಯಗಳ ಬಗ್ಗೆ ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ. ಅವರು ಬರೆದ ‘ಸರ್ವೈವಲ್‌ ಆಫ್‌ ದಿ ರಿಚೆಸ್ಟ್ : ಎಸ್ಕೇಪ್‌ ಫಾಂಟಸಿ ಆಫ್‌ ದ ಟೆಕ್‌ ಬಿಲಿಯನೇರ್ಸ್‌’ (ಶ್ರೀಮಂತರ ಬದುಕುಳಿಯುವಿಕೆ : ತಂತ್ರಜ್ಞಾನ ಕ್ಷೇತ್ರದಲ್ಲಿನ ಅಬ್ಜಾಧೀಶರ ಬಿಡುಗಡೆಯ ಕಲ್ಪನೆ) ಇಂತಹ ಒಂದು ಹೊಸ ಪುಸ್ತಕ ಬಂದಿದೆ.

ಈ ಡಗ್ಲಸ್‌ ಮಹಾಶಯರು ಮುಂದಿನಂತೆ ಬರೆದಿದ್ದಾರೆ, ನನಗೆ ಒಂದು ದೊಡ್ಡ ಮೊತ್ತವನ್ನು ನೀಡಿ ಒಂದೆಡೆಗೆ ಭಾಷಣಕ್ಕೆ ಕರೆಯಲಾಗಿತ್ತು. ವಿಮಾನಪ್ರಯಾಣ ಮಾಡಿ ನಿರ್ದಿಷ್ಟ ಸ್ಥಳಕ್ಕೆ, ಅಂದರೆ ಅವರು ಹೇಳಿದ ಅಜ್ಞಾತ ಮತ್ತು ನಿರ್ಜನ ಮರುಭೂಮಿಗೆ ತಲುಪಿದೆ. ಆಗ ನನಗೆ ಈ ಪ್ರಕರಣ ನನ್ನ ಅನಿಸಿಕೆಗಿಂತಲೂ ಹೆಚ್ಚು ಶ್ರೀಮಂತವಾಗಿದೆಯೆಂದು ತಿಳಿಯಿತು. ನನಗೆ ೫೦ ರಿಂದ ೧೦೦ ಜನರ ಮುಂದೆ ಮಾತನಾಡಲಿಕ್ಕಿರಬಹುದು ಎಂಬ ನಿರೀಕ್ಷೆಯಿತ್ತು, ಆದರೆ ಪ್ರತ್ಯಕ್ಷದಲ್ಲಿ ಕೇವಲ ೫ ಮಂದಿ ಅತಿ ಶ್ರೀಮಂತರು ಅಲ್ಲಿದ್ದರು !

ಡಗ್ಲಸ್‌ ಇವರು ಮುಂದುವರಿಯುತ್ತ ಹೀಗೆ ಬರೆಯುತ್ತಾರೆ, ‘ಅವರ ಪ್ರಶ್ನೆ ತಂತ್ರಜ್ಞಾನದ ವಿಷಯದಲ್ಲಿರಲಿಲ್ಲ. ಅದು ಬೇರೆಯೆ ಆಗಿತ್ತು. ಯಾವ ಸ್ಥಳದಲ್ಲಿ ಪರ್ಯಾವರಣದ ಬದಲಾವಣೆಯ ದುಷ್ಪರಿಣಾಮವು ಎಲ್ಲಕ್ಕಿಂತ ಕಡಿಮೆ ಪ್ರಮಾಣದಲ್ಲಿರುವುದು ? ಅಲಾಸ್ಕಾವೋ ಅಥವಾ ನ್ಯೂಝಿಲ್ಯಾಂಡ್‌ ? ಪೃಥ್ವಿಯ ಪರ್ಯಾವರಣ ಹದಗೆಟ್ಟಿದ್ದರಿಂದ ಜೀವ ಹಾನಿಯಾಗುವುದೋ ಅಥವಾ ಜೈವಿಕ ಯುದ್ಧದಿಂದ ಜೀವ ಹಾನಿಯಾಗುವುದೋ ? ಹೀಗಾದರೆ ಜೀವಿಸಲು ಎಲ್ಲಿ ಆಶ್ರಯವನ್ನು ಹುಡುಕಬೇಕು ? ಅಲ್ಲಿ ಯಾವ ಭದ್ರತೆಗಳನ್ನಿಡಬೇಕು ? ಇದರಿಂದ ಭೂಮಿಯ ನೀರಿನ ಮೇಲೆ ಪರಿಣಾಮವಾಗಬಹುದೇ ? ಒಬ್ಬರಂತೂ ಹೀಗೆ ಕೇಳಿದರು, ‘ನಾನು ಒಂದು ಆಪತ್ಕಾಲದ ಆಶ್ರಯವನ್ನು ನಿರ್ಮಿಸುತ್ತಿದ್ದೇನೆ; ಆದರೆ ಅಲ್ಲಿ ನಾನೇ ಇಟ್ಟಿರುವ ಸುರಕ್ಷಾರಕ್ಷಕರನ್ನು ಹೇಗೆ ನಿಯಂತ್ರಿಸುವುದು ?’, ಆಹಾರ ಸಾಮಗ್ರಿಗಳನ್ನು ತನ್ನ ನಿಯಂತ್ರಣದಲ್ಲಿ ಇಡುವುದರೊಂದಿಗೆ ಹಿಡಿದು ನಿವೃತ್ತ ನೇವಿ ಸೀಲ್‌ (ಅಮೇರಿಕಾದ ಅತೀ ಪ್ರಶಿಕ್ಷಕ ಸೈನಿಕರು) ಇವರನ್ನು ಸುರಕ್ಷೆಗಾಗಿ ಬಾಡಿಗೆಗೆ ತೆಗೆದುಕೊಳ್ಳುವರೆಗಿನ ವಿಚಾರ ಮಾಡಿದ್ದರು. ಡಗ್ಲಸ್‌ ಮುಂದೆ ಇನ್ನೂ ಏನೇನೋ ಬಹಳಷ್ಟು ಬರೆದಿದ್ದಾರೆ. ಅತೀ ಶ್ರೀಮಂತರು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಆಪತ್ಕಾಲದ ವಿಚಾರ ಅವರಿಗೆ ಮಹತ್ವದ್ದಾಗಿದೆ.

೨. ಮರುಬಳಕೆಗೆ ಒತ್ತುಕೊಟ್ಟು ವಸ್ತುಗಳನ್ನುಗುಜರಿಗೆ ಕೊಡುವುದಕ್ಕಿಂತ ಅವುಗಳಿಂದಲೇ ಪುನರನಿರ್ಮಿಸುವ ವೃತ್ತಾಕಾರ ಆರ್ಥಿಕತೆಯು ಜಗತ್ತಿಗೆ ಒಂದು ಆಶಾಕಿರಣವಾಗಿದೆ !

ಕಳೆದ ಒಂದು ದಶಕದ ಚಿಂತನೆಯಿಂದ ಒಂದು ಹೊಸ ಸಂಕಲ್ಪನೆ ಆಕಾರ ಪಡೆಯುತ್ತಿದೆ. ಅದುವೇ ವೃತ್ತಾಕಾರ ಆರ್ಥಿಕತೆ (ಸರ್ಕ್ಯುಲರ್‌ ಇಕಾನಾಮಿ) ! ಯಾವುದಾದರೊಂದು ವಸ್ತುವು ಮೇಲೆ ಹೋಗುತ್ತದೆ, ನಡುವೆ ಬರುತ್ತದೆ, ಪುನಃ ಕೆಳಗೆ ಬರುತ್ತದೆ ಮತ್ತು ಪುನಃ ಮೇಲೆ ಹೋಗುತ್ತದೆ. ಹೀಗೆ ವೃತ್ತಾಕಾರ ಗತಿಯಲ್ಲಿ ತಿರುಗುತ್ತಿರುತ್ತದೆ. ಈ ಸಂಕಲ್ಪನೆಯನ್ನು ಆಧರಿಸಿದ ಆರ್ಥಿಕತೆಯೇ ವೃತ್ತಾಕಾರ ಆರ್ಥಿಕತೆ ! ವಿಶ್ವ ಸಂಸ್ಥೆಯ ‘ವ್ಯಾಪಾರ ಮತ್ತು ವಿಕಾಸ’ ಈ ವಿಷಯದ ಪರಿಷತ್ತಿನಲ್ಲಿಯೂ ಈ ವೃತ್ತಾಕಾರ ಆರ್ಥಿಕತೆಯ ವಿಷಯ ಬಂದಿತ್ತು. ‘ವೃತ್ತಾಕಾರ, ಅಂದರೆ ವಸ್ತುಗಳ ಮರುಬಳಕೆಗೆ ಆದ್ಯತೆ ನೀಡುವ ವ್ಯವಸ್ಥೆ’, ಹೀಗೇನಾದರೂ ಹೇಳಬಹುದು. ಮರುಬಳಕೆಗೆ ಆದ್ಯತೆಯನ್ನು ನೀಡುವ ವಸ್ತುಗಳನ್ನು ಗುಜರಿಗೆ ಹಾಕದೇ ಅವುಗಳಿಂದಲೇ ಪುನರ್‌ನಿರ್ಮಿಸುವ ಅರ್ಥವ್ಯವಸ್ಥೆ. ಅದರಲ್ಲಿ ಉಪಯೋಗಿಸಿದ ವಸ್ತ್ರಗಳು, ಧಾತು, ಇಲೆಕ್ಟ್ರಾನಿಕ್‌ ವಸ್ತು ಇತ್ಯಾದಿಗಳನ್ನು ಪುನಃ ಉಪಯೋಗಿಸುವುದು. ವಸ್ತುಗಳನ್ನು ನಾಶ ಮಾಡದಿರುವುದು, ಮಾಲಿನ್ಯವನ್ನು ತಪ್ಪಿಸುವುದು, ವಸ್ತುಗಳನ್ನು ಹೆಚ್ಚೆಚ್ಚು ಬಳಸುವುದು ಮತ್ತು ಪುನರ್‌ನಿರ್ಮಿತಿ ಇವುಗಳಿಗೆ ಈ ವೃತ್ತಾಕಾರ ಆರ್ಥಿಕತೆಯಲ್ಲಿ ಒತ್ತನ್ನು ಕೊಡಲಾಗಿದೆ.

‘ಫ್ಯಾಶನ್’ ಉದ್ಯೋಗದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಬಟ್ಟೆಗಳು ತಯಾರಾಗುತ್ತವೆ ಮತ್ತು ಅವುಗಳನ್ನು ಉಪಯೋಗಿಸಿ ಎಸೆಯಲಾಗುತ್ತದೆ. ಜನರು ಬಟ್ಟೆಗಳನ್ನು ಎಸೆಯಬಹುದು ಮತ್ತು ಹೊಸ ಬಟ್ಟೆಗಳನ್ನು ಖರೀದಿಸಬಹುದು, ಹೀಗೆ ಮಾಡಿದರೆ ಅವುಗಳ ಮಾರಾಟವಾಗುತ್ತಿರುತ್ತದೆ ಮತ್ತು ಹೊಸ ಹೊಸ ‘ಫ್ಯಾಶನ್‌’ಗಳು ಬರುತ್ತವೆ. ‘ಫ್ಯಾಶನ್‌ ಉದ್ಯೋಗ’ ಇದರಿಂದಲೆ ನಡೆಯುತ್ತದೆ. ಇದರಲ್ಲಿ ಪರಿವರ್ತನೆಯನ್ನು ತರುವ ಪ್ರಯತ್ನ ನಡೆದಿದೆ. ‘ನಾಪಾಪೀಜೀರಿ’ ಇದೊಂದು ಬಟ್ಟೆಗಳ ಬ್ರ್ಯಾಂಡ್‌ ಆಗಿದೆ. ಅದು ನಿರ್ಮಿಸುತ್ತಿರುವ ಜಾಕೇಟ್‌ಗಳು ಹಾಳಾದರೂ ಅವು ಮಾಲಿನ್ಯವನ್ನುಂಟು ಮಾಡುವುದಿಲ್ಲ ಮತ್ತು ಅವುಗಳನ್ನು ಪುನಃ ಉಪಯೋಗಿಸಬಹುದು. ಅಮೇರಿಕಾದಲ್ಲಿ ಹಳೆ ಬಟ್ಟೆಗಳ ಖರೀದಿ ಮತ್ತು ಮಾರಾಟವನ್ನು ಮಾಡಲು ಒಂದು ‘ಪ್ಲಾಟ್‌ ಫಾರ್ಮ್‌’ ತಯಾರಿಸಲಾಗಿದೆ. ಇಂತಹ ವ್ಯವಸಾಯವನ್ನು ಫ್ರೆಂಚ್‌ ಕಂಪನಿಯೂ ಆರಂಭಿಸಿದೆ. ೨೦೨೭ ರ ವರೆಗೆ ಇಂತಹ ಉಪಯೋಗಿಸಿದ ಬಟ್ಟೆಗಳ ಸ್ಥಾನ ಯಾವುದೇ ವ್ಯಕ್ತಿಯ ಒಟ್ಟು ಬಟ್ಟೆಗಳ ಶೇ. ೧೧ ರಷ್ಟು ಇರುವುದು, ಎಂದು ಅಂದಾಜಿಸಲಾಗಿದೆ. ಬೀಡ್‌ನಲ್ಲಿನ ಸ್ವೀಡನ್‌ನ ‘ಎಚ್‌ ಎಂಡ್‌ ಎಮ್’ ಈ ಕಂಪನಿಯೂ ಅವರ ಬಟ್ಟೆಗಳು ಹೆಚ್ಚು ಕಾಲ ಬಾಳಿಕೆ ಬರುವ ಮತ್ತು ಹೆಚ್ಚು ಕಾಲ ಉತ್ತಮವಾಗಿರುವುದಕ್ಕೆ ಒತ್ತುಕೊಡುವ ವಿಚಾರವನ್ನು ಮಾಡಿದೆ. ಅದು ಕೇವಲ ಏನಾದರೊಂದು ತೋರಿಸಲಿಕ್ಕಾಗಿ ಮಾಡುತ್ತಿದೆಯೋ ಅಥವಾ ನಿಜವಾಗಿಯೂ ಮಾಡುತ್ತಿದೆಯೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ; ಆದರೆ ಎಷ್ಟು ವೇಗದಲ್ಲಿ ವಿಕಾಸದನೀರ್ಗುಳ್ಳೆಗಳು ಕಾಣಿಸುತ್ತಿವೆಯೋ ಹೊರತು ಅವು ಹೆಚ್ಚು ಕಾಲ ಉಳಿಯುವುದಿಲ್ಲ, ಎಂಬುದರ ಕಲ್ಪನೆಯಂತೂ ಎಲ್ಲರಿಗೂ ಇದೆ !

೩. ಭಾರತದಲ್ಲಿನ ಅಧ್ಯಾತ್ಮವನ್ನಾಧರಿಸಿದ ರಾಜ್ಯವ್ಯವಸ್ಥೆಯನ್ನು ಏಕೆ ಪರಿಶೀಲಿಸಿ ನೋಡಬಾರದು ?

ವೃತ್ತಾಕಾರ ಆರ್ಥಿಕತೆಯನ್ನು ನಿರ್ಮಿಸುವುದು ಅಥವಾ ಸಮಾಜದಿಂದ ಪಲಾಯನಗೈದು ತನ್ನದೇಯಾದ ಸುರಕ್ಷಿತ ದ್ವೀಪವನ್ನು ಕಟ್ಟುವುದು, ಇವುಗಳತ್ತ ಗಮನ ಹರಿಸುವುದೋ ಆಥವಾ ತನ್ನ ಅವಶ್ಯಕತೆಗಳ ಮೇಲೆ ಗಮನಹರಿಸುವುದೋ ? ಇವುಗಳ ಮೇಲೆ ಪಾಶ್ಚಿಮಾತ್ಯ ದೇಶಗಳಲ್ಲಿ ವಿಚಾರ ಪ್ರಾರಂಭವಾಗಿದೆ; ಆದುದರಿಂದ ನಾವೂ ಹಾಗೆಯೇ ವಿಚಾರ ಮಾಡುವುದೇ ? ಅಥವಾ ನಾಳೆ ವರ್ತುಳಾಕಾರ, ವೃತ್ತಾಕಾರ ಆರ್ಥಿಕತೆ ಅಥವಾ ಇನ್ನೂ ಏನಾದರೂ ಪರ್ಯಾಯಗಳನ್ನು ಕಂಡು ಹಿಡಿದು ಸೋತಾಗ ಪಾಶ್ಚಿಮಾತ್ಯ ದೇಶಗಳು ಭಾರತದಲ್ಲಿನ ಅಧ್ಯಾತ್ಮದ ಕಡೆಗೆ ಹೊರಳುತ್ತವೆಯೋ, ಆಗ ನಾವು ಹೊರಳುವುದೋ ? ಆವಶ್ಯಕತೆಗಳು ಮಿತಿಮೀರಿದ್ದರೆ, ಈ ಚಕ್ರ ನಡೆಯುತ್ತಲೇ ಇರುವುದು. ವ್ಯಕ್ತಿಯ, ಪರ್ಯಾಯವಾಗಿ ಸಮಾಜದ ಅವಶ್ಯಕತೆಗಳನ್ನು ಕಡಿಮೆಗೊಳಿಸಲು ಹಿಂದೂ ಸಂಸ್ಕೃತಿಯು ಒತ್ತು ಕೊಡುತ್ತದೆ. ಪಾಶ್ಚಿಮಾತ್ಯರು, ‘ಮೊದಲು ನಾನು – ನಂತರ ಜಗತ್ತು’ ಎಂದು ಹೇಳುತ್ತಾರೆ, ಆದರೆ ಹಿಂದೂ ಸಂಸ್ಕೃತಿಯು ‘ಮೊದಲು ವಿಶ್ವ, ಆ ಮೇಲೆ ರಾಷ್ಟ್ರ ಮತ್ತು ಆ ಮೇಲೆ ಸಮಾಜ, ಕೊನೆಗೆ ನಾನು’ ಎಂದು ಹೇಳುತ್ತದೆ. ಈ ತತ್ತ್ವವನ್ನು ನಾವು ಇತರರಿಗೆ ಕಲಿಸುವುದು ಬೇಡವೆ ? ವೃತ್ತಾಕಾರ ಆರ್ಥಿಕತೆ ಮತ್ತು ತಮಗೆ ಮಾತ್ರ ದ್ವೀಪವನ್ನು ತಯಾರಿಸುವುದರಿಂದ ಸಮಸ್ಯೆಯ ನಿವಾರಣೆಯಾಗುವುದಿಲ್ಲ, ಎಂಬುದು ಅರಿವಾದಾಗ ಯಾವಾಗ ಪಾಶ್ಚಿಮಾತ್ಯರು ‘ನಾನು ಕೊನೆಗೆ’ ಎಂಬುದನ್ನು ತಲೆಯ ಮೇಲಿಟ್ಟುಕೊಂಡು ಕುಣಿಲಾರಂಭಿಸುವರೋ, ಆಗ ನಮಗೆ ಅದರ ಮಹತ್ವ ತಿಳಿಯುವುದೋ ? ಎರಡನೇಯದೆಂದರೆ, ಜಗತ್ತಿನಾದ್ಯಂತ ಸಾಮ್ಯವಾದ, ಬಂಡವಾಳಶಾಹಿ ಅಂದರೆ ಭೋಗವಾದ, ಇಸ್ಲಾಮೀ ರಾಜ್ಯವ್ಯವಸ್ಥೆ ಇಂತಹ ಅನೇಕ ರಾಜ್ಯವ್ಯವಸ್ಥೆಗಳ ಪರ್ಯಾಯಗಳನ್ನು ಪರಿಶೀಲಿಸಿ ನೋಡಲಾಗಿದೆ. ಅವುಗಳ ಟೊಳ್ಳುತನದಿಂದಾಗಿಯೇ ಇಂದು ನಾವು ವಿನಾಶದ ಅಂಚಿಗೆ ಬಂದಿದ್ದೇವೆ. ಹಿಂದೂಗಳ ಅಧ್ಯಾತ್ಮವನ್ನು ಆಧರಿಸಿದ ರಾಜ್ಯವ್ಯವಸ್ಥೆಗೆ ಈಗಲಾದರೂ ಅವಕಾಶವನ್ನು ಕೊಡುವಿರೇ ? ಮತ್ತು ಅದಕ್ಕಾಗಿ ತಾವೇನು ಮಾಡುವಿರಿ ?’

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು