ಅನೇಕ ವರ್ಷಗಳಿಂದ ದೇಶದಲ್ಲಿ ಪ್ರತಿವರ್ಷ ಅನೇಕ ‘ಸಸಿಗಳನ್ನು’ ನೆಡಲಾಗುತ್ತದೆ ಮತ್ತು ಅವುಗಳ ಮೂಲಕ ಭ್ರಷ್ಟಾಚಾರದ ರಾಕ್ಷಸನನ್ನು ಜೋಪಾನ ಮಾಡಲಾಗುತ್ತದೆ. ಅವುಗಳಲ್ಲಿನ ಹೆಚ್ಚಿನ ಸಸಿಗಳು ಗಿಡಗಳಾಗಿ ಬೆಳೆಯುವುದೇ ಇಲ್ಲ. ಕಳೆದ ಕೆಲವು ದಶಕಗಳಲ್ಲಿ ದೇಶದಲ್ಲಿ ಸಸಿಗಳನ್ನು ನೆಡುವ ಯಾವ ಆಯೋಜನೆಗಳನ್ನು ಹಮ್ಮಿಕೊಳ್ಳಲಾಯಿತೋ, ಅವುಗಳಲ್ಲಿ ಭ್ರಷ್ಟಾಚಾರ ಆಗದೇ ಇದ್ದಿದ್ದರೆ ಇಂದು ಈ ಪರಿಸರ ಪ್ರದೂಷಣೆಯ ಸಮಸ್ಯೆ ನಿರ್ಮಾಣವಾಗುತ್ತಿರಲಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ವಾಯುಪ್ರದೂಷಣೆ ಸಹಿತ ಎಲ್ಲ ರೀತಿಯ ಪ್ರದೂಷಣೆಗಳಿಗಾಗಿ ಮೂಲರೂಪದಲ್ಲಿ ಮನುಷ್ಯನು ಧರ್ಮಾಚರಣೆಯಿಂದ ದೂರ ಹೋಗಿರುವುದೇ ಕಾರಣವಾಗಿದೆ. ಭ್ರಷ್ಟಾಚಾರವಿರಲಿ ಅಥವಾ ಸುಖ ಸೌಲಭ್ಯಗಳನ್ನು ಭೋಗಿಸುವ ಪ್ರವೃತ್ತಿಯಿರಲಿ, ಇವು ಧರ್ಮದಿಂದ ದೂರ ಹೋಗಿರುವುದರಿಂದಲೇ ಉಂಟಾಗಿವೆ; ಆದ್ದರಿಂದ ಭೌತಿಕ ಪ್ರದೂಷಣೆಯಿರಲಿ ಅಥವಾ ಮಾನಸಿಕ ಪ್ರದೂಷಣೆಯಿರಲಿ ಅಥವಾ ಆಧ್ಯಾತ್ಮಿಕ ಪ್ರದೂಷಣೆಯಿರಲಿ ಈ ಎಲ್ಲವುಗಳಿಗೆ ಧರ್ಮದಲ್ಲಿಯೇ ಉತ್ತರವಿದೆ. ಯಾವುದೇ ರಾಜಕಾರಣಿಯ ಕಾರ್ಯಪದ್ಧತಿಯನ್ನು ನೋಡಿದರೆ ಅವನಿಂದ ಧರ್ಮಾಚರಣೆಯ ಆಸೆಯನ್ನು ಮಾಡುವುದು ವ್ಯರ್ಥವಾಗಿದೆ. ಇದರಿಂದ ಪುನಃ ಸ್ಪಷ್ಟವಾಗುವುದೇನೆಂದರೆ, ಪ್ರದೂಷಣೆಯಿಂದ ಮುಕ್ತಿ ಸಿಗಲು ಹಿಂದು ಧರ್ಮರಾಜ್ಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ.’
(ಸೌಜನ್ಯ : ಮಾಸಿಕ ‘ವೈದಿಕ ಉಪಾಸನೆ’, ವರ್ಷ ೧ ಸಂಚಿಕೆ ೬)