ಬೆಂಗಳೂರು – ಶ್ರಾವಣ ಹುಣ್ಣಿಮೆ ಮತ್ತು ಹಯಗ್ರೀವ ಜಯಂತಿಯ ಶುಭ ಮುಹೂರ್ತದಲ್ಲಿ, ಅಂದರೆ ೧೯ ಆಗಸ್ಟ್ ೨೦೨೪ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಬೆಂಗಳೂರಿನ ಸಾಧಕರಾದ ಶ್ರೀ. ಜನಾರ್ದನ ಗಾಡಿ ಮತ್ತು ಸೌ. ಪದ್ಮಾ ಜನಾರ್ದನ ಇವರ ಮನೆಯಲ್ಲಿ ‘ಶ್ರೀ ಸತ್ಯದತ್ತ ಪೂಜೆ’ಯನ್ನು ಮಾಡಿದರು. ಆ ಸಮಯದಲ್ಲಿ ಅವರು ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಲ್ಲೆಡೆಯಲ್ಲಿನ ಸಾಧಕರಿಗೆ ಆಗುವ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ದೂರವಾಗಬೇಕು’, ಎಂದು ಭಗವಾನ ದತ್ತಾತ್ರೆಯನ ಚರಣಗಳಲ್ಲಿ ಪ್ರಾರ್ಥನೆ ಮಾಡಿದರು. ಆ ಸಮಯದಲ್ಲಿ ಸನಾತನದ ದೆಹಲಿಯ ಸಂತರಾದ ಪೂ. ಸಂಜೀವ ಕುಮಾರ ಮತ್ತು ಪೂ. (ಸೌ.) ಮಾಲಾ ಕುಮಾರ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಬೆಂಗಳೂರಿನಲ್ಲಿನ ಸಾಧಕರೂ ಈ ಪೂಜೆಯಲ್ಲಿ ಭಾಗವಹಿಸಿದ್ದರು. ನಾವು ಯಾವ ರೀತಿ ಸತ್ಯನಾರಾಯಣನ ಪೂಜೆ ಮಾಡುತ್ತೇವೆಯೋ, ಅದೇ ರೀತಿ ಮನೋಕಾಮನೆಗಾಗಿ ಶ್ರೀ ಸತ್ಯದತ್ತನ ಪೂಜೆ ಮಾಡಲಾಗುತ್ತದೆ. ಶ್ರೀ ಸತ್ಯದತ್ತನ ಕಥೆಯನ್ನು ಶ್ರವಣ ಮಾಡಲಾಗುತ್ತದೆ. ಈ ಪೂಜೆಯನ್ನು ಸನಾತನ ವೇದಪಾಠಶಾಲೆಯ ಪುರೋಹಿತರಾದ ಶ್ರೀ. ಸಿದ್ಧೇಶ ಕರಂದೀಕರ ಇವರು ಮಾಡಿದರು.
ವೈಶಿಷ್ಟ್ಯಪೂರ್ಣ ಅಂಶ !
ಪೂಜೆಯ ಸಮಯದಲ್ಲಿ ಮನೆಯಲ್ಲಿದ್ದ ಸನಾತನ ನಿರ್ಮಿತ ಭಗವಾನ ದತ್ತಾತ್ರೆಯನ ಚಿತ್ರಕ್ಕೆ ಹಾರವನ್ನು ಹಾಕಿದ್ದೆವು. ೨೦ ಆಗಸ್ಟ್ ರಂದು ಅದರ ಎತ್ತರ ಹೆಚ್ಚುತ್ತ ಹೋಗಿ ಅದು ಉದ್ದವಾಯಿತು. (ಛಾಯಾಚಿತ್ರವನ್ನು ತೋರಿಸಲಾಗಿದೆ.)
‘ಶ್ರೀ ಸತ್ಯದತ್ತ ಪೂಜೆ’ಯ ಬಗ್ಗೆ…..
ಜುಲೈ ೨೦೨೪ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದತ್ತಾವತಾರಿ ಸಂತರಾದ ಪ.ಪ. (ಪರಮಹಂಸ ಪರಿವ್ರಾಜಕಾಚಾರ್ಯ) ಟೆಂಬ್ಯೆಸ್ವಾಮಿಯವರ ದೃಷ್ಟಾಂತ ವಾಯಿತು. ಈ ಸಮಯದಲ್ಲಿ ಸ್ವಾಮಿಗಳು ಅವರಿಗೆ ಎಲ್ಲ ಸಾಧಕರ ತೊಂದರೆ ನಿವಾರಣೆಗಾಗಿ ಸತತ ಮೂರು ಹುಣ್ಣಿಮೆಯಂದು ‘ಶ್ರೀ ಸತ್ಯದತ್ತ ಪೂಜೆ’ಯನ್ನು ಮಾಡಲು ಆಜ್ಞೆಯನ್ನು ನೀಡಿದರು. ಅದರಂತೆ ಗುರುಪೂರ್ಣಿಮೆಯಂದು ಗೋವಾದಲ್ಲಿ ಮೊದಲನೇ ಪೂಜೆ ನಡೆಯಿತು. ಎರಡನೇ ಪೂಜೆಯು ಬೆಂಗಳೂರಿನಲ್ಲಿ ನೆರವೇರಿತು ಮತ್ತು ಮೂರನೇ ಪೂಜೆಯು ಮುಂದಿನ ಹುಣ್ಣಿಮೆಯಂದು ಕಾಂಚಿಪುರಮ್ (ಶ್ರೀ ಕಾಮಾಕ್ಷಿದೇವಿ ಕ್ಷೇತ್ರ, ತಮಿಳುನಾಡು)ನಲ್ಲಿ ನಡೆಯಲಿದೆ.
ಶ್ರೀ ಸತ್ಯದತ್ತ ಪೂಜೆಗಾಗಿ ಉಪಯೋಗಿಸಿದ ದತ್ತಮೂರ್ತಿಯ ಹಿಂದಿನ ಇತಿಹಾಸ
ಶ್ರೀ ಸತ್ಯದತ್ತ ಪೂಜೆಗಾಗಿ ಉಪಯೋಗಿಸಿದ ದತ್ತಮೂರ್ತಿಯನ್ನು ಕಳೆದ ೧೨ ವರ್ಷಗಳ ಕಾಲ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ತಾಯಿ-ತಂದೆ (ಸನಾತನದ ಪೂ. ಸದಾಶಿವ ಪರಾಂಜಪೆ ಮತ್ತು ಪೂ. (ಸೌ.) ಶೈಲಜಾ ಪರಾಂಜಪೆ) ಇವರು ಪೂಜಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಪೂ. (ಸೌ.) ಶೈಲಜಾ ಪರಾಂಜಪೆ ಇವರಿಗೆ ಆದ ದೈವೀ ದೃಷ್ಟಾಂತಕ್ಕನುಸಾರ ಅವರು ಈ ಮೂರ್ತಿಯನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಕೊಟ್ಟರು. ಪೂ. ಸದಾಶಿವ ಪರಾಂಜಪೆ ಮತ್ತು ಪೂ. (ಸೌ.) ಶೈಲಜಾ ಪರಾಂಜಪೆ ಇವರು ಪ್ರತಿದಿನ ಮಾಡಿದ ಭಾವಪೂರ್ಣ ಪೂಜೆಯಿಂದ ಈ ದತ್ತನ ಮೂರ್ತಿ ಜಾಗೃತವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ದತ್ತಮೂರ್ತಿಯನ್ನು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಕಾಂಜೀಪುರಮ್‌ನ ನಿವಾಸಸ್ಥಳದಲ್ಲಿ ಪೂಜಿಸಲಾಗುತ್ತದೆ.