ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

೨೪ ರಿಂದ ೩೦ ಜೂನ್ ೨೦೨೪ ಈ ಅವಧಿಯಲ್ಲಿ ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿತ್ತ್ತು. ಈ ನಿಮಿತ್ತ ‘ಸನಾತನ ಪ್ರಭಾತ’ದ ಪತ್ರಕರ್ತ ಶ್ರೀ. ಅರವಿಂದ ಪಾನಸರೆ ಇವರು ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರ ಸಂದರ್ಶನ ತೆಗೆದುಕೊಂಡರು. ಅದರ ಸ್ವಲ್ಪ ಭಾಗವನ್ನು ಸಂಚಿಕೆ ೨೫/೫೦ ರಲ್ಲಿ ಓದಿದೆವು.

https://sanatanprabhat.org/kannada/124429.html

ಈ ವಾರ ಅದರ ಮುಂದಿನ ಭಾಗ ನೋಡೋಣ.

ಪ್ರಶ್ನೆ : ಒಂದು ನಿತ್ಯದ ಪ್ರಶ್ನೆ ! ಹಿಂದೂ ರಾಷ್ಟ್ರದಲ್ಲಿ ಇನ್ನಿತರ ಪಂಥಗಳ, ಅಂದರೆ ಮುಸಲ್ಮಾನರು ಮತ್ತು ಕ್ರೈಸ್ತರು ಏನಾಗುವರು ?

ಉತ್ತರ : ‘ಹಿಂದೂ ರಾಷ್ಟ್ರ’ದ ವಿಷಯ ಬಂದಾಗ ತಥಾಕಥಿತ ನಿಧರ್ಮಿವಾದಿ (ಜಾತ್ಯತೀತವಾದಿ)ಗಳಿಂದ ಪ್ರಶ್ನೆ ಕೇಳಲಾಗುತ್ತದೆ, ಅದೇನೆಂದರೆ, ‘ಹಿಂದೂ ರಾಷ್ಟ್ರದಲ್ಲಿ ಮುಸಲ್ಮಾನರನ್ನು ಮತ್ತು ಕ್ರೈಸ್ತರನ್ನು ಏನು ಮಾಡುವಿರಿ ? ಜಗತ್ತಿನಲ್ಲಿ ೧೫೨ ಕ್ರೈಸ್ತ ರಾಷ್ಟ್ರಗಳಿವೆ, ಅವುಗಳಲ್ಲಿ ಮುಸಲ್ಮಾನರೂ ಇರುತ್ತಾರೆ, ಹಿಂದೂಗಳೂ ಇರುತ್ತಾರೆ, ಇತರ ಧರ್ಮೀಯರೂ ಇರುತ್ತಾರೆ. ೫೨ ಇಸ್ಲಾಮೀ ರಾಷ್ಟ್ರಗಳಿವೆ, ಅವುಗಳಲ್ಲಿ ಕ್ರೈಸ್ತರೂ ಇರುತ್ತಾರೆ, ಹಿಂದೂಗಳೂ ಇರುತ್ತಾರೆ, ಹಾಗೂ ಇತರ ಧರ್ಮೀಯರೂ ಇರುತ್ತಾರೆ. ಹೀಗಿರುವಾಗ ಹಿಂದೂಗಳ ಒಂದು ರಾಷ್ಟ್ರವಾದರೆ ಇತರ ಧರ್ಮೀಯರಿಗೆ ಇರಲು ಅಡಚಣೆಯೇನು ? ಆದರೆ ಒಂದು ಪ್ರಶ್ನೆ ಇದೆ, ಯಾರು ಕೂಡ ಅವರನ್ನು ಅಲ್ಪಸಂಖ್ಯಾತರೆಂದು ಓಲೈಕೆ ಮಾಡಲಿಕ್ಕಿಲ್ಲ. ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರ ಹಿತವನ್ನು ಕಾಪಾಡಲಾಗುತ್ತದೆ. ಕೇವಲ ಏಕೈಕ ದೇಶವಾಗಿರುವ ಭಾರತದಲ್ಲಿ ಮಾತ್ರ ಬಹುಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಹಾಗೂ ಅಲ್ಪಸಂಖ್ಯಾತರಿಗೆ ಎಲ್ಲ ಸೌಲಭ್ಯ ಗಳು ಸಿಗುತ್ತವೆ. ಈ ಭೇದಭಾವ ಹಿಂದೂ ರಾಷ್ಟ್ರದಲ್ಲಿ ಇರುವುದಿಲ್ಲ. ಹಿಂದೂಹಿತಕ್ಕೆ ಮಾತ್ರ ಮೊದಲ ಪ್ರಾಧಾನ್ಯತೆ ಇರುವುದು.

ಪ್ರಶ್ನೆ : ನೀವು ಹಿಂದೂ ರಾಷ್ಟ್ರವನ್ನು ಸಂವಿಧಾನಕ್ಕನುಸಾರ ಸ್ಥಾಪನೆ ಮಾಡುವೆವು, ಎನ್ನುತ್ತೀರಿ ಅದು ಹೇಗೆ ?

ಉತ್ತರ : ಇಷ್ಟರ ವರೆಗೆ ಭಾರತೀಯ ಸಂವಿಧಾನದಲ್ಲಿ ೧೨೫ ಕ್ಕಿಂತಲೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ. ಸಂವಿಧಾನದ ೩೬೮ ನೇ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, ಈ ಸಂವಿಧಾನದಲ್ಲಿ ಏನೇ ಇದ್ದರೂ, ಸಂಸತ್ತಿಗೆ ತನ್ನ ಸಂವಿಧಾನಾತ್ಮಕ ಅಧಿಕಾರ ವನ್ನು ಉಪಯೋಗಿಸಿ ಅದರಲ್ಲಿನ ಯಾವುದೇ ವ್ಯವಸ್ಥೆಯಲ್ಲಿ ಈ ಪರಿಚ್ಛೇದದಲ್ಲಿರುವ ಕಾರ್ಯಪದ್ಧತಿಗನುಸಾರ ಹೆಚ್ಚಿನ ಒತ್ತು ನೀಡಿ ಮರುಬದಲಾವಣೆ ಅಥವಾ ಸುಧಾರಣೆ ಮಾಡಬಹುದು !’

ಇಂದಿರಾ ಗಾಂಧಿಯವರು ೧೯೭೬ ರಲ್ಲಿ ೪೨ ನೇ ಸಂವಿಧಾನ ತಿದ್ದುಪಡಿ ಮಾಡಿ ‘ಧರ್ಮನಿರಪೇಕ್ಷ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸಿದ್ದರು. ಇದರ ಅರ್ಥ, ೧೯೭೫ ರಲ್ಲಿ ‘ಈ ರಾಷ್ಟ್ರವನ್ನು ನಿಧರ್ಮಿ ಮಾಡೋಣ’, ಎನ್ನುವ ಘೋಷಣೆ ನೀಡುವುದು ಸಂವಿಧಾನಬಾಹಿರವಾಗಿತ್ತೇ ? ಹೀಗಿರುವಾಗ ‘ಹಿಂದೂ ರಾಷ್ಟ್ರ’ದ ಘೋಷಣೆ ಸಂವಿಧಾನಬಾಹಿರ ಹೇಗಾಗುತ್ತದೆ ? ಸಂವಿಧಾನಾತ್ಮಕ ಮಾರ್ಗದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವುದು ಸಂವಿಧಾನಬಾಹಿರವಲ್ಲ. ಹೇಗೆ ಸಂವಿಧಾನ ೪೨ ನೇ ತಿದ್ದುಪಡಿ ‘ಧರ್ಮನಿರಪೇಕ್ಷ’ ಈ ಶಬ್ದ ವನ್ನು ಹಾಕಿದರೋ, ಹಾಗೆಯೇ ಆ ಶಬ್ದವನ್ನು ಅಳಿಸಿ ಆ ಸ್ಥಳದಲ್ಲಿ ‘ಹಿಂದೂ ರಾಷ್ಟ್ರ’ ಮತ್ತು ‘ಆಧ್ಯಾತ್ಮಿಕ’ ಈ ಶಬ್ದವನ್ನು ಹಾಕಬಹುದು. ಸಂವಿಧಾನದ ಚೌಕಟ್ಟಿನಲ್ಲಿದ್ದು ಸಮಾಜ ಹಾಗೂ ರಾಷ್ಟ್ರ ಹಿತದ ಸಂಕಲ್ಪನೆಯನ್ನು ಮಂಡಿಸುವುದು ಪೂರ್ಣ ಸಂವಿಧಾನಾತ್ಮಕವಾಗಿದೆ !

ಪ್ರಶ್ನೆ : ‘ಆಹಾರ ಹಾಗೂ ಔಷಧಗಳ ವ್ಯವಸ್ಥಾಪನೆ’ ಇರುವಾಗ ಹಲಾಲ ಪ್ರಮಾಣಪತ್ರದ ಆವಶ್ಯಕತೆ ಇಲ್ಲದಿದ್ದರೆ, ಹಿಂದೂ ಸಂಘಟನೆಗಳು ‘ಓಂ ಪ್ರಮಾಣಪತ್ರ’ ಹೇಗೆ ಆರಂಭಿಸಬಹುದು ? ಅದೇ ರೀತಿ ಪರಿಶುದ್ಧ ‘ಪ್ರಸಾದ’ದ ಭರವಸೆಯನ್ನು ಯಾರು ನೀಡುವರು ?

ಉತ್ತರ : ‘ಓಂ ಪ್ರಮಾಣಪತ್ರ’ವನ್ನು ಶ್ರೀ ರಣಜೀತ ಸಾವರಕರರ ‘ಓಂ ಪ್ರತಿಷ್ಠಾನ’ವು ಆರಂಭಿಸಿದೆ. ಈ ಪ್ರತಿಷ್ಠಾನದಲ್ಲಿ ನಾಶಿಕದಲ್ಲಿನ ಮಹಂತ ಅನಿಕೇತ ಶಾಸ್ತ್ರಿ ಇವರು ಕೂಡ ಕಾರ್ಯನಿರತರಾಗಿದ್ದಾರೆ. ಈ ಪ್ರಮಾಣಪತ್ರಕ್ಕೆ ೧೬ ಕ್ಕಿಂತಲೂ ಹೆಚ್ಚು ಹಿಂದುತ್ವವಾದಿ ಸಂಘಟನೆಗಳು ಬೆಂಬಲ ನೀಡಿವೆ. ಈ ಪ್ರಮಾಣಪತ್ರದ ಉದ್ದೇಶ ‘ದೇವರಿಗೆ ಅರ್ಪಣೆ ಮಾಡುವ ಹಾಗೂ ಭಕ್ತರಿಗೆ ಸಿಗುವ ಪ್ರಸಾದ ಶುದ್ಧವಾಗಿರಬೇಕು’, ಎಂಬುದಾಗಿದೆ. ಈ ಹಿಂದೆ ನೀವು ಓದಿರಬಹುದು, ಆಹಾರಪದಾರ್ಥಗಳಿಂದ ಹೇಗೆ ‘ಉಗುಳು ಜಿಹಾದ್’ ನಡೆಯುತ್ತಿದೆ ಎಂಬುದು. ಶಾಕಾಹಾರಿ ಪದಾರ್ಥಗಳಲ್ಲಿ ಮಾಂಸ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ‘ಹಲಾಲ’ ಉತ್ಪಾದನೆಗಳನ್ನು ದೇವರ ಪ್ರಸಾದಕ್ಕಾಗಿ ಉಪಯೋಗಿಸಲಾಗುತ್ತದೆ. ಹಲಾಲ ಇದು ಮುಸಲ್ಮಾನರಿಗಾಗಿ ಇದೆ. ಹಿಂದೂಗಳ ದೇವರಿಗೆ ಹಲಾಲ ಪುರಸ್ಕೃತ ಉತ್ಪಾದನೆ ಏಕೆ ಬೇಕು ? ಗೋಮಾಂಸ ಭಕ್ಷಕ ಮುಸಲ್ಮಾನರು ತಯಾರಿಸಿದ ಪ್ರಸಾದದಲ್ಲಿ ಪಾವಿತ್ರ್ಯವನ್ನು ಕಾಪಾಡಲಾಗುತ್ತದೆ ಎಂದು ಯಾರು ಭರವಸೆ ನೀಡುವರು ?

ಹಿಂದೂಗಳನ್ನು ಭ್ರಷ್ಟಗೊಳಿಸಲು ಹೀಗೆ ಮಾಡಲಾಗುತ್ತದೆ. ಇದನ್ನು ತಡೆಗಟ್ಟಿ ಹಿಂದೂಗಳಿಗೆ ಶುದ್ಧ ಪ್ರಸಾದ ಸಿಗಬೇಕೆಂದು ಈ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ‘ಹಲಾಲ ಪ್ರಮಾಣಪತ್ರ’ ‘ಜಮಿಯತ ಉಲೇಮಾ ಎ ಹಿಂದ್’, ‘ಹಲಾಲ ಇಂಡಿಯಾ ಪ್ರಾ.ಲಿ,’ ಇತ್ಯಾದಿ ಖಾಸಗಿ ಮುಸಲ್ಮಾನ ಸಂಸ್ಥೆಗಳು ನೀಡಿದರೆ ನಡೆಯುತ್ತದೆ, ಆದರೆ ಹಿಂದೂಗಳು ಪ್ರಸಾದದ ಶುದ್ಧತೆಗಾಗಿ ‘ಓಂ ಪ್ರಮಾಣಪತ್ರ ನೀಡಿದರೆ, ಏನಾಯಿತು ? ಅದೇ ರೀತಿ ಈ ಪ್ರಮಾಣಪತ್ರ ಹಣ ಸಂಪಾದನೆಗಾಗಿ ಅಲ್ಲ, ಅದು ಹಿಂದೂಗಳಿಗೆ ಶುದ್ಧ ಪ್ರಸಾದವನ್ನು ಪೂರೈಸುವ ಚಳುವಳಿಯಾಗಿದೆ, ಕಲಬೆರಕೆಯನ್ನು ತಡೆಯಲಿಕ್ಕಾಗಿ ಇದೆ. ಇದರಲ್ಲಿ ಅಂಗಡಿಯವರಿಗೆ ‘ಕ್ಯೂಆರ್. ಕೋಡ್’ ಉಚಿತವಾಗಿ ಕೊಡಲಾಗುತ್ತದೆ. ಅವರಿಂದ ಹಣ ತೆಗೆದುಕೊಳ್ಳುವುದಿಲ್ಲ. ಅವರಲ್ಲಿನ ಸಾಧನ ಸೌಲಭ್ಯಗಳ ಪರಿಶೀಲನೆ ಮಾಡಿಯೇ ಈ ಪ್ರಮಾಣಪತ್ರ ನೀಡಲಾಗುತ್ತದೆ. ಅದರಿಂದ ಭಕ್ತರಿಗೆ ಶುದ್ಧ ಪ್ರಸಾದ ಸಿಗುವುದು.

ಹಲಾಲ ಪ್ರಮಾಣಪತ್ರದ ಮೂಲಕ ೩.೫ ಟ್ರ್ರಿಲಿಯನ್ ಡಾಲರ್ನಷ್ಟು ಜಾಗತಿಕ ಅರ್ಥವ್ಯವಸ್ಥೆ ನಿರ್ಮಾಣ ಮಾಡಲಾಗಿದೆ. ಹಲಾಲನಿಂದ ಬರುವ ಹಣವನ್ನು ೭೦೦ ಭಯೋತ್ಪಾದಕರ ನ್ಯಾಯಾಂಗ ಖಟ್ಲೆಗಳನ್ನು ನಡೆಸಲು ಉಪಯೋಗಿಸಲಾಗು ತ್ತದೆ, ಅದೇ ರೀತಿ ಜಾಗತಿಕ ಸ್ತರದಲ್ಲಿ ಈ ಹಣವನ್ನು ಭಯೋತ್ಪಾದನೆಗಾಗಿ ಉಪಯೋಗಿಸುತ್ತಿರುವುದರ ಬಗ್ಗೆ ಅನೇಕ ದೇಶಗಳ ಗುಪ್ತಚರ ವಿಭಾಗಗಳಿಂದ ಮಾಹಿತಿ ಸಿಕ್ಕಿದೆ. ಆದ್ದರಿಂದ ಹಲಾಲ ಪ್ರಮಾಣಪತ್ರಕ್ಕೆ ನಮ್ಮ ವಿರೋಧವಿದೆ.
ಹಲಾಲ ಪ್ರಮಾಣಪತ್ರಕ್ಕಾಗಿ ಪ್ರತಿವರ್ಷ ವ್ಯಾಪಾರಿಗಳು ಪ್ರತಿಯೊಂದು ಉತ್ಪಾದನೆಗೆ ೬೩ ಸಾವಿರ ರೂಪಾಯಿ ಕೊಡ ಬೇಕು, ಅಷ್ಟು ಮಾತ್ರವಲ್ಲ, ಉತ್ಪಾದನೆ ಹಲಾಲಕ್ಕನುಸಾರ ಇದೆಯೆ ಎಂದು ತಪಾಸಣೆಗಾಗಿ ಪ್ರತಿಯೊಬ್ಬ ವ್ಯಾಪಾರಿ ತನ್ನ ಕಂಪನಿಯಲ್ಲಿ ಇಬ್ಬರು ಮುಸಲ್ಮಾನರನ್ನು ಸಹ ನೇಮಕ ಮಾಡ ಬೇಕು. ನಾವೇನೂ ಹಾಗೆ ಮಾಡುವುದಿಲ್ಲ. ಆದ್ದರಿಂದ ಹಲಾಲ ಪ್ರಮಾಣಪತ್ರವನ್ನು ಓಂ ಪ್ರಮಾಣಪತ್ರದೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ. (ಮುಕ್ತಾಯ)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ.