‘ಕಾರ್ಯಕರ್ತರ ಮತ್ತು ಸಾಧಕರ ವ್ಯಷ್ಟಿ ಸಾಧನೆಯು ಉತ್ತಮವಾಗಬೇಕು’ ಇದುವೇ ಎಲ್ಲ ಶಿಬಿರಗಳ ಪ್ರಾಥಮಿಕ ಮಾನದಂಡ ಇರುವುದರಿಂದ ವ್ಯಷ್ಟಿ ಸಾಧನೆಗಾಗಿ ಗಾಂಭೀರ್ಯದಿಂದ ಪ್ರಯತ್ನಿಸಿ ಶಿಬಿರದಲ್ಲಿ ಪಾಲ್ಗೊಳ್ಳಿ !

ಕಾರ್ಯಕರ್ತರು ಮತ್ತು ಸಾಧಕರಿಗೆ ಮಹತ್ವದ ಸೂಚನೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಶಿಬಿರಾರ್ಥಿಯ ಸಾಧನೆಯ ಪ್ರಯತ್ನದ ಮೇಲೆ ಶಿಬಿರದ ಫಲನಿಷ್ಪತ್ತಿ ಅವಲಂಬಿಸಿರುತ್ತದೆ

‘ಪರಿಣಾಮಕಾರಿ ಧರ್ಮಪ್ರಚಾರ ಮತ್ತು ಸಾಧಕರ ಸಾಧನಾವೃದ್ಧಿ ಆಗುವುದು, ಇವುಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ‘ಸಾಧನಾ ಶಿಬಿರ’, ‘ವಕ್ತಾ ಕಾರ್ಯಶಾಲೆ’, ‘ನೇತೃತ್ವಗುಣವೃದ್ಧಿ ಶಿಬಿರ’ ಮುಂತಾದ ಶಿಬಿರಗಳ ಆಯೋಜನೆ ಮಾಡಲಾಗುತ್ತದೆ. ಅನೇಕ ಕಾರ್ಯಕರ್ತರು ಮತ್ತು ಸಾಧಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಶಿಬಿರಗಳಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ವ್ಯಷ್ಟಿ ಸಾಧನೆಯ ಅಡಿಪಾಯ ಒಳ್ಳೆಯದಾಗಿದ್ದರೆ ಮಾತ್ರ ಅವರು ಶಿಬಿರದಿಂದ ಶೇ. ೧೦೦ ರಷ್ಟು ಲಾಭ ಪಡೆಯಲು ಸಾಧ್ಯ.

೨. ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ನಿರಂತರವಾಗಿ ಮಾಡುವುದರ ಮಹತ್ವ !

ಕಟ್ಟಡದ ಅಡಿಪಾಯ ಗಟ್ಟಿಯಾಗಿದ್ದರೆ ಮಾತ್ರ ಅದರ ಮೇಲೆ ಸದೃಢವಾದ ಕಟ್ಟಡ ಕಟ್ಟಲು ಸಾಧ್ಯವಾಗುತ್ತದೆ. ಅದೇ ರೀತಿ ವ್ಯಷ್ಟಿ ಸಾಧನೆಯ ಅಡಿಪಾಯ ಗಟ್ಟಿಯಾಗಿದ್ದರೆ ಮಾತ್ರ ಪರಿಣಾಮಕಾರಿ ಸಮಷ್ಟಿ ಸಾಧನೆಯ ಕಟ್ಟಡ ನಿಲ್ಲಲು ಸಾಧ್ಯವಾಗುತ್ತದೆ. ಸಾಧಕರೊಬ್ಬರಲ್ಲಿ ಸ್ವಭಾವದೋಷ, ಅಹಂ ಮತ್ತು ಆಧ್ಯಾತ್ಮಿಕ ತೊಂದರೆ ಇವುಗಳು ತೀವ್ರವಾಗಿದ್ದರೆ ಅವರಿಂದ ಈಶ್ವರಪ್ರಾಪ್ತಿಗಾಗಿ ಮಾಡುವ ಸಾಧನೆಯ ಪ್ರಯತ್ನ ಮತ್ತು ಸೇವೆ ಯೋಗ್ಯ ರೀತಿಯಲ್ಲಿ ಆಗುವುದಿಲ್ಲ ಹಾಗೂ ಅವರ ಕೌಶಲ್ಯಾಭಿವೃದ್ಧಿಯ ದೃಷ್ಟಿಯಿಂದ ಎಷ್ಟೇ ಹೊಸ ವಿಷಯ ಕಲಿಸಿದರೂ ಅದರಿಂದ ವಿಶೇಷ ಪರಿಣಾಮವಾಗುವುದಿಲ್ಲ.

ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆ ಹಾಗೂ ನಾಮಜಪಾದಿ ಉಪಾಯ ಈ ಮಾಧ್ಯಮಗಳಿಂದ ಯಾವ ಸಾಧಕನಿಗೆ ತನ್ನ ಅಡಚಣೆಗಳನ್ನು ಪರಿಹರಿಸಲು ಸಾಧ್ಯವೋ ಅವನೇ ಇತರರ ಅಡಚಣೆಗಳನ್ನು ಪರಿಹರಿಸಲು ಸಾಧ್ಯ ಮತ್ತು ಅವರನ್ನು ಕಾರ್ಯದಲ್ಲಿ ಜೋಡಿಸಿಕೊಳ್ಳಬಹುದು.

ಜವಾಬ್ದಾರ ಸಾಧಕರು ವ್ಯಷ್ಟಿ ಸಾಧನೆಯ ಮಾನದಂಡದ ಆಧಾರದಲ್ಲಿ ಸಾಧಕರನ್ನು ಶಿಬಿರದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಬೇಕು !

ಸಾಧಕರು ಮತ್ತು ಕಾರ್ಯಕರ್ತರು ವ್ಯಷ್ಟಿ ಸಾಧನೆಯ ಯೋಗ್ಯ ಮತ್ತು ನಿಯಮಿತವಾಗಿ ಪ್ರಯತ್ನಿಸುತ್ತಿದ್ದರೆ, ಮಾತ್ರ ಅವರನ್ನು ಶಿಬಿರ ಮತ್ತು ಕಾರ್ಯಶಾಲೆಯಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಿರಿ.

೩. ಶಿಬಿರದಲ್ಲಿ ಪಾಲ್ಗೊಳ್ಳುವುದರ ಮಾನದಂಡ

ಸ್ವಭಾವದೋಷ-ನಿರ್ಮೂಲನೆ ಮತ್ತು ಅಹಂ-ನಿರ್ಮೂಲನೆಕೋಷ್ಟಕ ಬರೆಯುವುದು, ಸ್ವಯಂಸೂಚನಾ ಪದ್ಧತಿ ತಿಳಿದುಕೊಂಡು ಅದನ್ನು ತಯಾರಿಸುವುದು, ನಿಯಮಿತ ಸ್ವಯಂಸೂಚನಾ ಸತ್ರಗಳನ್ನು ಕೊಡುವುದು, ಭಾವಜಾಗೃತಿಗಾಗಿ ಪ್ರಯತ್ನಿಸುವುದು, ನಾಮಜಪದ ಉಪಾಯ ಮುಂತಾದ ವ್ಯಷ್ಟಿ ಸಾಧನೆಗಾಗಿ ನಿಯಮಿತವಾಗಿ ಪ್ರಯತ್ನಿಸುವ ಸಾಧಕರನ್ನು ಮತ್ತು ಕಾರ್ಯಕರ್ತರನ್ನು ಮುಂದಿನ ಎಲ್ಲಾ ಶಿಬಿರಕ್ಕಾಗಿ ಆಯ್ಕೆ ಮಾಡಲಾಗುವುದು.

ಸಾಧಕರೇ, ವ್ಯಷ್ಟಿ ಸಾಧನೆಯನ್ನು ನಿಯಮಿತವಾಗಿ ಮಾಡುವುದರಿಂದ ಸಮಷ್ಟಿ ಕಾರ್ಯವನ್ನು ಮಾಡಲು ಈಶ್ವರನ ಬೆಂಬಲ ದೊರೆತು ಗುರುಕಾರ್ಯ ಪರಿಪೂರ್ಣವಾಗುತ್ತದೆ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೧೧.೨೦೨೨)