‘ಕೆಲವು ಸಾಧಕರು ನಾಮಜಪ ಅಥವಾ ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ಬರೆಯಲು ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಹಾಗೆ ಮಾಡುವ ಬದಲು ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಎದ್ದು ಅಷ್ಟು ಸಮಯದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಬೇಕು.
ಕೆಲವು ಸೇವೆಗಳು ಪರಸ್ಪರರನ್ನು ಅವಲಂಬಿಸಿರುವುದರಿಂದ ಕೆಲವರಿಗೆ ರಾತ್ರಿ ಜಾಗರಣೆ ಮಾಡಲೇ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಸಾಧ್ಯವಿದ್ದರೆ ಎಲ್ಲರೂ ಒಟ್ಟಿಗೆ ‘ರಾತ್ರಿ ಜಾಗರಣೆ ಮಾಡುವ ಬದಲು ಅದೇ ಸೇವೆಯನ್ನು ಬೆಳಗ್ಗೆ ಬೇಗ ಎದ್ದು ಮಾಡಬಹುದೇ ?’ ಎಂಬ ಕುರಿತು ಸಕಾರಾತ್ಮಕ ಚಿಂತನೆಯನ್ನು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೧.೨೦೨೩)