ಪ್ರತಿದಿನ ಹಲ್ಲುಗಳ ಕಾಳಜಿ ತೆಗೆದುಕೊಳ್ಳಬೇಕು !

ವೈದ್ಯ ಮೇಘರಾಜ ಪರಾಡಕರ್

ನಾವು ದಂತವೈದ್ಯರಲ್ಲಿ ಹೋದಾಗಲೇ ‘ಇಷ್ಟೊಂದು ಚಿಕ್ಕ ಹಲ್ಲುಗಳ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಮತ್ತು ನೋವಾಗುತ್ತದೆ’, ಎಂಬುದು ತಿಳಿಯುತ್ತದೆ. ‘ನಮಗೆ ಅಂತಹ ಪ್ರಮೇಯ ಬರಬಾರದು’, ಎಂದು ಪ್ರತಿದಿನ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛವಾಗಿ ಉಜ್ಜಬೇಕು. ಏನೇ ಸೇವಿಸಿದರೂ ಅನಂತರ ೨-೩ ಬಾರಿ ಮುಕ್ಕಳಿಸಬೇಕು. ಹಾಗೆಯೇ ಬೆರಳುಗಳಿಂದ ಹಲ್ಲುಗಳನ್ನು ಸರಿಯಾಗಿ ಸ್ವಚ್ಛ ಮಾಡಬೇಕು. ಹಲ್ಲುಗಳ ಸಂದಿಯಲ್ಲಿ ಏನಾದರೂ ಸಿಕ್ಕಿಕೊಂಡಿದ್ದರೆ ಅದನ್ನು ‘ಬ್ರಶ್’ನಿಂದ ಆಯಾ ಸಮಯದಲ್ಲಿ ತೆಗೆಯಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೧೨.೨೦೨೨)