‘ಕಾನೂನು ಜಾರಿ ಆಗುತ್ತದೆ ಅಥವಾ ಇಲ್ಲ ಇದರ ಬಗ್ಗೆ ನ್ಯಾಯಾಲಯವೇ ತೀರ್ಪು ನೀಡಬೇಕು !’ (ಅಂತೆ) – ಶಾಮ ಮಾನವ, ಅಂನಿಸ

ಶಾಮ ಮಾನವ, ಅಂನಿಸ

ನಾಗಪುರ – ಇಲ್ಲಿಯ ಪೊಲೀಸ ಆಯುಕ್ತ ಅಮಿತೇಶ ಕುಮಾರ ಇವರು ಬಾಗೆಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಮಹಾರಾಜ ಇವರ ವಿರುದ್ಧ ದೂರು ದಾಖಲಿಸಿ ಕೊಳ್ಳಲು ನಿರಾಕರಿಸಿದರು. ಹಾಗೂ ಮಹಾರಾಜರ ದಿವ್ಯ ದರ್ಬಾರದಲ್ಲಿ ತಾಂತ್ರಿಕ ವಿದ್ಯೆ ಕಾನೂನು ವಿರೋಧಿ ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರ ಬಗ್ಗೆ ಇಲ್ಲಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಅಂಧಶ್ರದ್ಧ ನಿರ್ಮೂಲ ಸಮಿತಿಯ ಸಂಸ್ಥಾಪಕ ಶ್ಯಾಮ ಮಾನವ ಇವರು, ಈ ಪ್ರಕರಣದಲ್ಲಿ ಈಗ ನಮ್ಮ ಎದುರು ನ್ಯಾಯಾಲಯಕ್ಕೆ ಹೋಗದೆ ಬೇರೆ ಪರ್ಯಾಯ ಇಲ್ಲ; ಕಾರಣ ಉಚ್ಚ ನ್ಯಾಯಾಲಯ ಸಂಭಾಜಿನಗರ ಖಂಡಪೀಠದ ತೀರ್ಪಿನ ಇದು ಅವಮಾನವಾಗಿದೆ ಎಂದು ಹೇಳಿದರು.
ಮೊದಲು ಸರಕಾರಕ್ಕೆ ಸಮಿತಿವತಿಯಿಂದ ದೂರು ನೀಡಿದ್ದರಿಂದ ಮೊದಲು ಸರಕಾರದ ಮಟ್ಟದಲ್ಲಿ ಸಾಧ್ಯವಿದ್ದಷ್ಟು ಎಲ್ಲಾ ಪ್ರಯತ್ನ ಮಾಡಿದೆ. ಕೊನೆಗೆ ‘ನೀವು ಮೊದಲು ಏನು ಮಾಡಿದಿರಿ’, ಎಂದು ನ್ಯಾಯಾಲಯ ಕೇಳಬಹುದು. ಆದ್ದರಿಂದ ಇದನ್ನು ನ್ಯಾಯಾಲಯದ ಮುಂದೆ ಮಂಡಿಸಲು ಅವಕಾಶ ದೊರೆಯಬೇಕು. ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದರು ಕೂಡ ಸರಕಾರ ಈ ರೀತಿ ನಿರ್ಣಯ ಕೈಗೊಂಡಿದ್ದು ಮತ್ತು ಕಾನೂನು ಜಾರಿ ಆಗುವುದಿಲ್ಲ ಹೀಗೆ ಹೇಳುತ್ತಿದ್ದರೆ ಆಗ ನ್ಯಾಯಾಲಯವೆ ಕಾನೂನು ಜಾರಿ ಆಗುತ್ತದೆ ಅಥವಾ ಇಲ್ಲ ಇದರ ಬಗ್ಗೆ ತೀರ್ಪು ನೀಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಪೊಲೀಸ ದಳ ಇದು ಸರಕಾರದ ಒಂದು ಭಾಗವಾಗಿದೆ ಮತ್ತು ಪೊಲೀಸರ ಅಧ್ಯಯನದ ಕೊನೆಯಲ್ಲಿ ನಿರ್ಣಯ ಘೋಷಿಸಿದ ನಂತರ ಕೂಡ ಅದಕ್ಕೆ ವಿರೋಧಿಸುವುದು ಎಂದರೆ ಪೊಲೀಸರ ಮೇಲೆ ವಿಶ್ವಾಸ ಇಲ್ಲ ಎಂದು ತೋರಿಸುವುದು. ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?