
ಮಾಸ್ಕೋ – ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಮುಂಬರುವ ದಿನಗಳಲ್ಲಿ ಹೆಚ್ಚಿನ ದೇಶಗಳು ಪರಾಮಾಣು ಬಾಂಬ್ ಪಡೆಯಲು ಪ್ರಯತ್ನಿಸುತ್ತಿವೆ. ಆದ್ದರಿಂದ ಜಗತ್ತು ಮೂರನೇ ಮಹಾಯುದ್ಧದ ಅಂಚಿಗೆ ತಲುಪಿದೆ ಎಂದು ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿಟ್ರಿ ಮೆದವೆದೆವ ಹೇಳಿದ್ದಾರೆ. ಅವರು ಜಗತ್ತಿನಲ್ಲಿ ಹೆಚ್ಚುತ್ತಿರುವ ಪರಮಾಣು ಸ್ಪರ್ಧೆಗೆ ಪಾಶ್ಚಿಮಾತ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಗುಪ್ತ ಯುದ್ಧ ನಡೆಸುತ್ತಿವೆ, ಎಂದು ಅವರು ಹೇಳಿದರು. ಜಗತ್ತಿನಲ್ಲಿ ಪರಮಾಣುವಿನ ಅಪಾಯ ಹೆಚ್ಚುತ್ತಿದೆ ಮತ್ತು ಪರಿಸ್ಥಿತಿ ಮಹಾಯುದ್ಧದಂತಾಗಿದೆ. 2010 ರಲ್ಲಿ ರಷ್ಯಾ ಮತ್ತು ಅಮೇರಿಕಾ ನಡುವೆ ನಡೆದ ‘ಸ್ಟಾರ್ಟ್’ ಒಪ್ಪಂದದ ಬಗ್ಗೆ ಮೆದವೆದೆವ ಚರ್ಚಿಸಿದರು. ಎರಡೂ ದೇಶಗಳ ನಡುವಿನ ಪರಮಾಣು ಸ್ಪರ್ಧೆಯನ್ನು ಕಡಿಮೆ ಮಾಡಲು ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ರಷ್ಯಾದ ಅಂದಿನ ಅಧ್ಯಕ್ಷ ದಿಮಿಟ್ರಿ ಮೆದವೆದೆವ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದವು ಫೆಬ್ರವರಿ 2026 ರಲ್ಲಿ ಕೊನೆಗೊಳ್ಳಲಿದೆ.
1. ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ದುರ್ಬಲಗೊಳಿಸಲು ಯುಕ್ರೇನ್ ನನ್ನು ಬಳಸುತ್ತಿವೆ ಎಂದು ಮೆದವೆದೆವ ಹೇಳಿದರು. ಆದ್ದರಿಂದ ದೇಶದ ಭದ್ರತೆಗಾಗಿ ಪರಮಾಣುಗಳನ್ನು ಉಳಿಸಿಕೊಳ್ಳುವುದು ಅವಶ್ಯಕ ಎಂದು ರಷ್ಯಾ ಭಾವಿಸುತ್ತದೆ.
2. ಅಮೇರಿಕನ್ ಸೈಂಟಿಸ್ಟ್ಸ್ ಫೆಡರೇಶನ್ ಪ್ರಕಾರ, ರಷ್ಯಾ ಮತ್ತು ಅಮೇರಿಕಾ ವಿಶ್ವದ ಅತಿದೊಡ್ಡ ಪರಮಾಣು ಶಕ್ತಿ ದೇಶಗಳಾಗಿವೆ. ಎರಡೂ ದೇಶಗಳು ವಿಶ್ವದ ಅಂದಾಜು 88 ಪ್ರತಿಶತ ಅಣ್ವಸ್ತ್ರಗಳನ್ನು ಹೊಂದಿವೆ. ಇದರ ನಂತರ ಚೀನಾ, ಫ್ರಾನ್ಸ್, ಬ್ರಿಟನ್, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ ಸ್ಥಾನ ಪಡೆದಿವೆ.