ಶ್ರೀರಾಮಚರಿತಮಾನಸ ನಿಷೇಧಿಸಲು ಒತ್ತಾಯಿಸಿದ ಸ್ವಾಮಿ ಪ್ರಸಾದ ಮೌರ್ಯ ಇವರ ವಿರುದ್ಧ ದೂರು ದಾಖಲು

ಮೌರ್ಯ ಇವರಿಗೆ ಲಕ್ಷ್ಮಣಪುರಿ ಇಲ್ಲಿ ಪ್ರಸಿದ್ಧ ಲೇಟೆ ಹನುಮಾನ ದೇವಸ್ಥಾನ ಪ್ರವೇಶಕ್ಕೆ ನಿಷೇಧ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಚರಿತಮಾನಸವನ್ನು ನಿಷೇಧಿಸುವಂತೆ ಒತ್ತಾಯಿಸಿರುವ ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರಿಗೆ ಈಗ ಇಲ್ಲಿಯ ಪ್ರಸಿದ್ಧ ಲೇಟೆ ಹನುಮಾನ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿದೆ. ಈ ಕುರಿತು ಒಂದು ಭಿತ್ತಿ ಪತ್ರ ಅಂಟಿಸಿದ್ದು ಅವರನ್ನು ‘ಅಧರ್ಮಿ’ ಎನ್ನಲಾಗಿದೆ. ದೇವಸ್ಥಾನದ ಆಡಳಿತದಿಂದ ಈ ನಿಷೇಧ ಹೇರಿರುವುದು ಎಂದು ಈ ಪತ್ರದಲ್ಲಿ ಹೇಳಿದೆ. ಹಾಗೂ ನಗರದಲ್ಲಿನ ಹಜರತಗಂಜ ಪೊಲೀಸ ಠಾಣೆಯಲ್ಲಿ ಮೌರ್ಯ ಇವರ ವಿರುದ್ಧ ದೂರು ದಾಖಲಿಸಿದೆ.


೧. ಮಂದಿರ ಆಡಳಿತದ ಓರ್ವ ಸದಸ್ಯರು, ನಾವು ಈ ರೀತಿಯ ಅಧರ್ಮಿ ಮಾನಸಿಕತೆ ಇರುವವರಿಗೆ ದೇವಸ್ಥಾನದ ಪರಿಸರದಲ್ಲಿ ಬರಲು ಬಿಡುವುದಿಲ್ಲ ಎಂದು ಹೇಳಿದರು.

೨. ಬೇರೆ ಇನ್ನೋರ್ವ ಸದಸ್ಯರು, ಮೌರ್ಯ ಇವರಿಗೆ ಧರ್ಮದ ಯಾವುದೇ ಜ್ಞಾನವಿಲ್ಲ. ಭವಿಷ್ಯದಲ್ಲಿ ದೇವಸ್ಥಾನ ಆಡಳಿತ ಸನಾತನ ಧರ್ಮದ ವಿರುದ್ಧ ಯಾರೇ ಹೇಳಿಕೆ ನೀಡಿದರು, ಅವರಿಗೆ ದೇವಸ್ಥಾನ ಪ್ರವೇಶ ನಿಷೇಧಿಸುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ದ್ವೇಷಿ ಮೌರ್ಯ ಇವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಹಿಂದೂಗಳು ಕಾನೂನರೀತ್ಯ ಹೋರಾಡಿ ಸರಕಾರದ ಮೇಲೆ ಒತ್ತಡ ತರುವುದು ಅಗತ್ಯ !