ಪಾದ್ರಿಯಾಗುವ ತರಬೇತಿ ಶಿಬಿರದಲ್ಲಿ ಸಮಲೈಂಗಿಕ ಕ್ಲಬ್ !

  • ದಿವಂಗತ ಮಾಜಿ ೧೬ ನೇ ಪೋಪ್ ಬೆನೆಡಿಕ್ಟ ಇವರ ಪುಸ್ತಕದಲ್ಲಿ ದಾವೆ

  • ಅಶ್ಲೀಲ ಚಲನಚಿತ್ರ ಪ್ರದರ್ಶನ !

ನವದೆಹಲಿ – ಕ್ರೈಸ್ತರ ಮಾಜಿ ಸರ್ವೋಚ್ಚ ಧರ್ಮಗುರು ೧೬ ನೇ ಪೋಪ್ ಬೆನೆಡಿಕ್ಟ್ ಇವರ ನಿಧನದ ನಂತರ ಅವರ ಪುಸ್ತಕ ‘ಕ್ರೈಸ್ತ ಧರ್ಮ ಏನು ಆಗಿದೆ ?’ ಇದು ಪ್ರಕಾಶೀತಗೊಂಡಿದೆ. ಇದರಲ್ಲಿ ಅವರು ಹ್ವಾಟಿಕನ್ ನ ಅಡಿಯಲ್ಲಿ ನಡೆಯುವ ಕ್ಯಾಥೋಲಿಕ್ ಚರ್ಚ್ ನಲ್ಲಿ ಅನೈತಿಕ ವಿಷಯದ ಮಾಹಿತಿ ಬಹಿರಂಗ ಪಡಸಿದ್ದಾರೆ. ಇದರಲ್ಲಿ ಪಾದ್ರಿಯಾಗುವ ತರಬೇತಿ ಶಿಬಿರದಲ್ಲಿ ಸಮಲೈಂಗಿಕ ಕ್ಲಬ್ ನಡೆಸುತ್ತಾರೆ, ಎಂದು ದಾವೆ ಮಾಡಿದ್ದಾರೆ, ‘ಇಂತಹ ದಾವೆಯಿಂದ ಬಹುಶಃ ಅವರು ಅವರ ನಿಧನದ ನಂತರ ಪುಸ್ತಕ ಪ್ರಕಾಶಿತ ಗೊಳಿಸಲು ಹೇಳಿದ್ದರೋ ಏನೋ ? ಎಂದು ಚರ್ಚೆ ನಡೆಯುತ್ತಿದೆ.

 

೧. ೧೬ ನೇ ಪೋಪ್ ಬೆನೆಡಿಕ್ಟ್ ಇವರ ಪುಸ್ತಕದಲ್ಲಿ, ಪೋಪ್ ಫ್ರಾನ್ಸಿಸ್ ಇವರ ಕಾರ್ಯಕಾಲದಲ್ಲಿ ಪಾದ್ರಿ ಆಗುವುದಕ್ಕೆ ನೀಡುತ್ತಿರುವ ತರಬೇತಿ ಶಿಬಿರದಲ್ಲಿ ವಿಶೇಷವಾಗಿ ಅಮೇರಿಕಾದ ಶಿಬಿರದಲ್ಲಿ ಬಹಿರಂಗವಾಗಿ ಸಮಲೈಂಗಿಕ ಕ್ಲಬ್ ನಡೆಯುತ್ತಿದೆ. ಅವರು ಬಹಿರಂಗವಾಗಿಯೇ ಈ ಕೆಲಸ ಮಾಡುತ್ತಿದ್ದರು. ಈ ಎಲ್ಲಾ ಅನೈತಿಕ ಕೆಲಸದಿಂದ ಶಿಬಿರದ ವಾತಾವರಣ ಬದಲಾಗಿತ್ತು.

೨. ಈ ಪುಸ್ತಕದಲ್ಲಿ ಇನ್ನಷ್ಟು ಮಾಹಿತಿ ಬಹಿರಂಗಪಡಿಸುತ್ತಾ, ಓರ್ವ ಬಿಷಪ್ (ಮೇಲ್ಮಟ್ಟದ ಪಾದ್ರಿ) ಶಿಬಿರದಲ್ಲಿ ಅಶ್ಲೀಲ ಚಲನಚಿತ್ರ ತೋರಿಸುವ ಅನುಮತಿ ನೀಡಿದ್ದರು.

೩. ದಕ್ಷಿಣ ಜರ್ಮನಿಯ ಒಂದು ಶಿಬಿರದಲ್ಲಿ ಪಾದ್ರಿ ಮತ್ತು ವಿದ್ಯಾರ್ಥಿ ಒಟ್ಟಾಗಿ ಇರುತ್ತಿದ್ದರು. ಹಾಗೂ ಪತ್ನಿ, ಮಕ್ಕಳು ಮತ್ತು ಕೆಲವು ಪ್ರಸಂಗದಲ್ಲಿ ಸ್ನೇಹಿತೆಯರ ಜೊತೆ ಭೋಜನ ಮಾಡುತ್ತಿದ್ದರು.

ಸಂಪಾದಕೀಯ ನಿಲುವು

ಈಗ ಸ್ವತಃ ಮಾಜಿ ಪೋಪ್ ಇವರೇ ಈ ಮಾಹಿತಿ ಬಹಿರಂಗಪಡಿಸಿದ ನಂತರ ಪಾದ್ರಿಗಳ ನೈತಿಕತೆ ಉಳಿಯುವುದಿಲ್ಲ ! ಇದರ ಬಗ್ಗೆ ಭಾರತದಲ್ಲಿನ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಎಂದಿಗೂ ಬಾಯಿ ಬಿಡುವುದಿಲ್ಲ ಅಥವಾ ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆ ಪ್ರಸಾರವಾಗುವುದಿಲ್ಲ !