ಏರ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದ ಸಿದ್ಧತೆಯಲ್ಲಿ ಇದ್ದರು !

ಅಮೇರಿಕಾದ ಮಾಜಿ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಯೋ ಇವರ ದಾವೇ

ಮಾಯಿಕ ಪಾಂಪಿಯೋ

ವಾಷಿಂಗ್ಟನ್ (ಅಮೆರಿಕ) – ಬಾಲಕೋಟದಲ್ಲಿ ಏರ್ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದ ಸಿದ್ಧತೆಯಲ್ಲಿ ಇದ್ದರು, ಎಂದು ಅಮೇರಿಕಾದ ಅಂದಿನ ವಿದೇಶಾಂಗ ಸಚಿವ ಮಾಯಿಕ ಪಾಂಪಿಯೋ ಅವರು ಅವರ ‘ನೆವರ್ ಗಿವ್ ಅಂಡ್ ಇಂಚ್ : ಫೈರಿಂಗ್ ಫಾರ್ ದಿ ಅಮೆರಿಕ ಐ ಲವ್’ ಈ ಪುಸ್ತಕದಲ್ಲಿ ದಾವೆ ಮಾಡಿದ್ದಾರೆ. ಪಾಂಪಿಯೋ ಇವರ ಈ ದಾವೇಯ ಬಗ್ಗೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಫೆಬ್ರುವರಿ ೨೦೧೯ ರಂದು ಪುಲ್ವಾಮದಲ್ಲಿ ನಡೆದ ದಾಳಿಯ ನಂತರ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರದ ಮೇಲೆ ಏರ್ ಸ್ಟ್ರೈಕ್ ಮಾಡಿತ್ತು.

ಪಂಪಿಯೋ ಇವರು, ಭಾರತದ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಪರಮಾಣು ದಾಳಿಯ ಸಿದ್ಧತೆಯಲ್ಲಿ ಇರುವ ಬಗ್ಗೆ ಭಾರತದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಇವರು ನನ್ನನ್ನು ನಿದ್ದೆಯಿಂದ ಎಬ್ಬಿಸಿದ್ದರು. ಹಾಗೂ ಪಾಕಿಸ್ತಾನವು ಆಕ್ರಮಣ ನಡೆಸಿದರೆ ಪ್ರತ್ಯುತ್ತರಕ್ಕಾಗಿ ಪರಮಾಣು ಮೂಲಕ ದಾಳಿ ನಡೆಸಲು ಭಾರತ ಕೂಡ ಸಿದ್ಧತೆ ಮಾಡುತ್ತಿದೆ ಎಂದೂ ಸಹ ಸುಷ್ಮಾ ಸ್ವರಾಜ್ ಹೇಳಿದ್ದರು. ನಂತರ ಅದನ್ನು ತಡೆಯಲು ಕೆಲವು ಗಂಟೆಯ ಸಮಯ ಬೇಕಾಯಿತು. ಇದಕ್ಕಾಗಿ ದೆಹಲಿ ಮತ್ತು ಇಸ್ಲಾಮಾಬಾದ್ ನಲ್ಲಿಯ ನಮ್ಮ ತಂಡ ಒಳ್ಳೆಯ ಕೆಲಸ ಮಾಡಿತು. ಅವರು ಪರಮಾಣು ಯುದ್ಧದ ಸಿದ್ಧತೆ ಮಾಡಬಾರದು ಎರಡು ದೇಶಕ್ಕೆ ತಿಳಿಸಿ ಹೇಳಿದರು ಎಂದು ಅವರು ದಾವೆ ಮಾಡಿದ್ದಾರೆ.