ಬಾಂಗ್ಲಾದೇಶದಲ್ಲಿ ಹಿಂದುತ್ವನಿಷ್ಠರ ಮೇಲಿನ ದಬ್ಬಾಳಿಕೆಯನ್ನು ತಿಳಿಯಿರಿ !

ಶ್ರೀ ರಾಕೇಶ್ ರಾಯ್

೧. ಕ್ರೈಸ್ತರ ಹಿಂದೂದ್ವೇಷವನ್ನು ತಿಳಿಯಿರಿ !

ಆಂಧ್ರಪ್ರದೇಶದ ವಿಜಯವಾಡಾದಲ್ಲಿರುವ ಅಯ್ಯಪ್ಪ ಸ್ವಾಮಿಗಳ ದೀಕ್ಷೆ ಪಡೆದ ಭಕ್ತರೊಬ್ಬರು ವ್ರತದ ಅಂಗವಾಗಿ ತಮ್ಮ ಮನೆಯಲ್ಲಿ ಭಜನೆಯ ಕಾರ್ಯಕ್ರಮವನ್ನು ಆಯೋಜಿಸಿದಾಗ ನೆರೆಯಲ್ಲಿದ್ದ ಕ್ರೈಸ್ತರು ಜೋರಾಗಿ ಪ್ರಾರ್ಥನೆಯನ್ನು ಪ್ರಾರಂಭಿಸಿ ಭಜನೆಗೆ ಅಡ್ಡಿಪಡಿಸಿದರು.

೨. ‘ಚರ್ಚಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದರೆ’ ಜಾನ್ ಬ್ರಿಟ್ಸ್ ಇದೇ ಮಾತನ್ನು ಹೇಳುತ್ತಿದ್ದರೇ ?

‘ಭಾರತೀಯ ಜನತಾ ಪಕ್ಷವು ಮೊದಲು ಬಾಬರಿ ಮಸೀದಿಯನ್ನು ಗುರಿಯಾಗಿಸಿತು ಮತ್ತು ಈಗ ಅದು ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಈದ್ಗಾ ಮಸೀದಿಯನ್ನು ಗುರಿಯಾಗಿಸುತ್ತಿದೆ’, ಎಂದು ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಜಾನ್ ಬ್ರಿಟ್ಸ್ ಇವರು ಆರೋಪಿಸಿದ್ದಾರೆ.

೩. ಬಾಂಗ್ಲಾದೇಶದಲ್ಲಿ ಹಿಂದುತ್ವನಿಷ್ಠರ ಮೇಲಿನ ದಬ್ಬಾಳಿಕೆಯನ್ನು ತಿಳಿಯಿರಿ !

ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಬಾಂಗ್ಲಾದೇಶದ ‘ಜಾತಿಯಾ ಹಿಂದೂ ಮಹಾಜೋತೆ’ ಈ ಹಿಂದೂ ಸಂಘಟನೆಯ ನಾಯಕ ರಾಕೇಶ ರಾಯ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ಟಕಾ (೮೦ ಸಾವಿರ ರೂಪಾಯಿ) ದಂಡ ವಿಧಿಸಲಾಗಿದೆ.

೪. ಕಾನೂನಿಗೆ ದ್ರೋಹ ಬಗೆಯುವ ಮತಾಂಧರ ಕೂಗಾಟವನ್ನು ತಿಳಿಯಿರಿ !

ನಾಸಿಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ.ಐ.ಎಂ. ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇವರು, “ಭಾಜಪದ ಆಡಳಿತವಿರುವ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ಮಾಡಲಾಗಿದೆ, ಅದು ಸಂವಿಧಾನವಿರೋಧಿಯಾಗಿದೆ” ಎಂದು ಹೇಳಿದ್ದಾರೆ.

೫. ಸರ್ವಧರ್ಮಸಮಭಾವದವರು ಈಗೆಲ್ಲಿದ್ದಾರೆ ?

ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರವನ್ನು ಸ್ಫೋಟಿಸುವುದಾಗಿ ಕುಖ್ಯಾತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಅಲ್ ಕಾಯದಾ’ ಬೆದರಿಕೆಯೊಡ್ಡಿದೆ.

೬. ಖಲಿಸ್ತಾನಿ ಉಗ್ರರನ್ನು ಸದೆಬಡಿಯಿರಿ !

‘ಲಷ್ಕರ್-ಎ-ಖಾಲಸಾ’ ಎಂಬ ಖಲಿಸ್ತಾನಿ ಉಗ್ರವಾದಿ ಸಂಘಟನೆಯು  ಭಾಜಪದ ಸಂಸದ ಘನಶಾಮ ಲೋಧಿ ಹಾಗೂ ಇತರ ನಾಯಕರನ್ನು  ಭಾಜಪ ತೊರೆಯುವಂತೆ ಹಾಗೂ ಆ ರೀತಿ ಮಾಡದಿದ್ದರೆ ಅವರನ್ನು ಕುಟುಂಬ ಸಮೇತ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

೭. ಸರ್ವಧರ್ಮಸಮಭಾವದವರು ಈಗೆಲ್ಲಿದ್ದಾರೆ ?

ಕ್ರೈಸ್ತ, ಜ್ಯೂ ಮುಂತಾದ ಮುಸಲ್ಮಾನೇತರಾದ ನಾಸ್ತಿಕರು, ಯಾವ ಪಂಥಧಲ್ಲಿ ಇದ್ದಾರೆಯೋ ಅವರು ಅಲ್ಲಾನ ಶತ್ರುಗಳಾಗಿದ್ದಾರೆ. ಅವರು ಅಲ್ಲಾನ ಶತ್ರುವಾಗಿದ್ದರಿಂದ ನಿಮ್ಮ ಶತ್ರು ಸಹ ಆಗಿದ್ದಾರೆ, ಎಂದು ಕೆನಡಾದ ಇಮಾಮ್ ಶೇಖ ಯುನೂಸ್ ಕೃಥರಾಡಾರು ದ್ವೇಷಭರಿತ ಹೇಳಿಕೆಯನ್ನು ನೀಡಿದ್ದಾರೆ.