೭೨ ವರ್ಷಗಳ ನಂತರ ಇತ್ಯರ್ಥಗೊಂಡ ಭಾರತದ ಅತ್ಯಂತ ಹಳೆಯ ಪ್ರಕರಣ !

ಕೋಲಕಾತಾ (ಬಂಗಾಲ) – ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ೧೯೫೧ ರಲ್ಲಿನ ಒಂದು ಖಟ್ಲೆಗೆ ಕಳೆದ ವಾರ ತೀರ್ಪು ನೀಡಲಾಯಿತು. ೭೨ ವರ್ಷಗಳಿಂದ ಈ ಖಟ್ಲೆಯ ಆಲಿಕೆ ನಡೆಯುತ್ತಿತ್ತು. ಈ ಖಟ್ಲೆ ಬರಹಾಮಪುರ ಬ್ಯಾಂಕ್ ಲಿಮಿಟೆಡ್‌ನ ಸಾಲದ ವಿಷಯದಲ್ಲಿತ್ತು. ಈ ನ್ಯಾಯಾಲಯದ ಪ್ರಸ್ತುತ ನ್ಯಾಯಾಧೀಶರ ಜನ್ಮ ಈ ಖಟ್ಲೆ ದಾಖಲಾಗಿ ಸುಮಾರು ಒಂದು ದಶಕದ ನಂತರ ಆಗಿದೆ. ಈ ಖಟ್ಲೆಯಂತೆ ೧೯೫೨ ರಲ್ಲಿ ದಾಖಲಿಸಿದ ಇನ್ನೂ ೫ ಹಳೆಯ ಖಟ್ಲೆಗಳಿವೆ. ಇವುಗಳಲ್ಲಿನ ೨ ಖಟ್ಲೆಗಳು ದೀವಾಣಿಯಾಗಿದ್ದು ಅವುಗಳು ಬಂಗಾಲದ ಮಾಲದಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಕೋಲಕಾತಾ ಉಚ್ಚ ನ್ಯಾಯಾಲಯವು ನವಂಬರ ೧೯, ೧೯೪೮ ರಂದು ಬರಹಾನಪುರ ಬ್ಯಾಂಕನ್ನು ದೀವಾಳಿಯೆಂದು ಘೋಷಣೆ ಮಾಡುತ್ತಾ ಈ ಬ್ಯಾಂಕನ್ನು ಮುಚ್ಚಲು ಆದೇಶ ನೀಡಿತ್ತು; ಆದರೆ ಹೂಡಿಕೆದಾರರು ಅವರ ಹಣವನ್ನು ಹಿಂತಿರುಗಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.