ನಮ್ಮನ್ನು ಭಾರತದೊಂದಿಗೆ ಸೇರಿಸಿರಿ !

ಗಿಲಗಿಟ-ಬಾಲ್ಟಿಸ್ಥಾನ ಇಲ್ಲಿಯ ನಾಗರೀಕರ ಬಲವಾಗಿ ಬೇಡಿಕೆ

ಪಾಕಿಸ್ತಾನಿ ಸೈನ್ಯ ಭೂಮಿ ಕಬಳಿಸುತ್ತಿದೆ ಎಂದು ಆರೋಪ !

ನವ ದೆಹಲಿ – ಪಾಕಿಸ್ತಾನದಲ್ಲಿ ಆರ್ಥಿಕ ವಿಪತ್ತಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲಗಿಟ-ಬಾಲ್ಟಿಸ್ತಾನದಲ್ಲಿನ ಜನರು ಕಳೆದ ೧೨ ದಿನದಿಂದ ಪಾಕಿಸ್ತಾನದ ಸರಕಾರ ಮತ್ತು ಸೈನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. `ಭಾರತದಲ್ಲಿನ ಲಡಾಖನ ಕಾರ್ಗಿಲ್ ಜಿಲ್ಲೆಗೆ ಗಿಲಗಿಟ-ಬಾಲ್ಟಿಸ್ತಾನ ಸೇರಿಸಬೇಕು’, ಎಂದು ಅವರು ಆಗ್ರಹಿಸುತ್ತಿದ್ದಾರೆ. `ಪಾಕಿಸ್ತಾನದ ಸರಕಾರ ನಮ್ಮ ಜೊತೆ ಭೇದ ಭಾವ ಮಾಡುತ್ತಿದೆ; ಆದರೆ ಈಗ ನಾವು ಗಿಲಗಿಟ-ಬಾಲ್ಟಿಸ್ತಾನದ ನಿರ್ಣಯ ನಾವೇ ತೆಗೆದುಕೊಳ್ಳುತ್ತೇವೆ, ಎಂದು ಅವರ ಅಭಿಪ್ರಾಯವಾಗಿದೆ.

(ಸೌಜನ್ಯ :TIMES NOW)

೧. ಪ್ರತಿಭಟನೆ ನಡೆಸುವ ವಿಡಿಯೋ ಕೂಡ ಬೆಳಕಿಗೆ ಬರುತ್ತಿದೆ. ಅದರಲ್ಲಿ ಪ್ರತಿಭಟನಾಕಾರರು `ಆರ್-ಪಾರ್ ಜೋಡ ದೋ, ಕಾಶ್ಮೀರ್ ಕಾ ದ್ವಾರ ಖೋಲ ದೋ’ (ಕಾಶ್ಮೀರಿದ ಬಾಗಿಲು ತೆರೆದು ಈ ಕಡೆ ಆ ಕಡೆ ಇರುವ ಪರಿಸರವನ್ನು ಜೋಡಿಸಿರಿ) ಎಂಬ ಘೋಷಣೆ ನೀಡುತ್ತಿದ್ದಾರೆ. `ಪಾಕಿಸ್ತಾನ ಸರಕಾರ ನಮ್ಮ ನಿರ್ಣಯ ತೆಗೆದುಕೊಳ್ಳುವುದಿಲ್ಲ ಮತ್ತು ನಾವು ಅವರಿಗೆ ಹಾಗೆ ಮಾಡಲು ಬಿಡುವುದಿಲ್ಲ, ಎಂಬ ಆಕ್ರಮಣಕಾರಿ ನೀತಿಯನ್ನು ಪ್ರತಿಭಟನಾಕಾರರು ಅವಲಂಬಿಸಿದ್ದಾರೆ.

೨. ಸ್ಥಳೀಯರು, ಪಂಜಾಬ್ ಮತ್ತು ಖೈಬರ್ ಪಖ್ಟುನಕ್ವ ಇಲ್ಲಿಯ ಜನರು ಅವರ ಭೂಮಿಯ ಮೇಲೆ ಅತಿಕ್ರಮಣ ಮಾಡುತ್ತಿದ್ದಾರೆ. ಈ ಜನರಿಗೆ ಪಾಕಿಸ್ತಾನದ ಸೈನಿಕರ ಬೆಂಬಲವಿದೆ. ಅವರ ಭದ್ರತೆಗಾಗಿ ಸೈನಿಕರನ್ನು ನೇಮಕ ಮಾಡಲಾಗಿದೆ. ಪಾಕಿಸ್ತಾನದ ಸೈನ್ಯ ಅಕ್ರಮವಾಗಿ ಹಣ ಗಳಿಸುವುದಕ್ಕಾಗಿ ಜನರ ಭೂಮಿ ಕಬಳಿಸುತ್ತಿದ್ದಾರೆ.’ ಈ ಬಗ್ಗೆ ಭಾರತವು ಹಸ್ತಕ್ಷೇಪ ಮಾಡುವಂತೆ ಇಲ್ಲಿಯ ಜನರು ಆಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

೩. ಪಾಕಿಸ್ತಾನ ಸೈನ್ಯವನ್ನು ವಿರೋಧಿಸುತ್ತಿರುವ ಮೀನಾವರ ಗ್ರಾಮದಲ್ಲಿನ ಜನರಿಗೆ ಅಕ್ಕಪಕ್ಕದ ಪ್ರದೇಶದ ಜನರ ಬೆಂಬಲ ಕೂಡ ದೊರೆಯುತ್ತಿದೆ. ಅನೇಕ ಪ್ರತಿಭಟನಕಾರರು, ಸೈನ್ಯವು ಗುಂಡು ಹಾರಿಸಿದರೂ ನಾವು ನಮ್ಮ ಭೂಮಿಯ ಮೇಲೆ ಅವರಿಗೆ ನಿಯಂತ್ರಣ ಪಡೆಯಲು ಬಿಡುವುದಿಲ್ಲ. ಪಾಕಿಸ್ತಾನಿ ಸೈನ್ಯ ಬರುತ್ತದೆ ಮತ್ತು ನಮಗೆ ಥಳಿಸುತ್ತದೆ. ನಮ್ಮ ನೂರಾರು ಎಕರೆ ಭೂಮಿಗೆ ಸೈನ್ಯವು ಯಾವುದೇ ಬೆಲೆ ನೀಡದೆ ಕಬಳಿಸುತ್ತಿದ್ದಾರೆ. ಈಗ ನಾವು ಅವರಿಗೆ ಒಂದು ಇಂಚು ಭೂಮಿ ಕೂಡ ನೀಡುವುದಿಲ್ಲ. ಸೈನ್ಯ ನಮ್ಮ ಮನೆ ಮತ್ತು ಹೊಲಗಳನ್ನು ಕಬಳಿಸುತ್ತಿದೆ. ಕೆಲವು ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸೈನ್ಯವೇ ಜವಾಬ್ದಾರವಾಗುವುದು ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಭಾರತವು ಇನ್ನೂ ಹೆಚ್ಚು ದಾರಿ ಕಾಯದೆ ಸೈನ್ಯ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತೆ ಭಾರತದಲ್ಲಿ ಸೇರಿಸಬೇಕು. ಭಾರತ ಈ ಅವಕಾಶ ಕಳೆದುಕೊಳ್ಳಬಾರದೆಂದು ಜನರಿಗನಿಸುತ್ತಿದೆ !