ಗೋವಿನ ಸಗಣಿಯಿಂದ ತಯಾರಿಸಿರುವ ಮಿಥೇನ್ ನಿಂದ ಚಲಿಸುವ ಟ್ರ್ಯಾಕ್ಟರ್ !

ಬ್ರಿಟಿಷ್ ಕಂಪನಿಯಿಂದ ಸಂಶೋಧನೆ !

ನವ ದೆಹಲಿ – `ನ್ಯೂ ಹಾಲೆಂಡ್’ ಈ ಬ್ರಿಟಿಷ್ ಕಂಪನಿಯಿಂದ ದ್ರವರೂಪದ ಮಿಥೇನನಿಂದ ಚಲಿಸುವ ಹೊಸ ಟ್ರ್ಯಾಕ್ಟರ್ ಅಭಿವೃದ್ಧಿ ಪಡಿಸಿದೆ. ಈ ಟ್ರ್ಯಾಕ್ಟರಿನ ಉಪಯೋಗದಿಂದ ರೈತರಿಗೆ ಹೆಚ್ಚಿನ ಬೆಲೆಯ ಡೀಸೆಲ್ ಗೆ ಖಾರ್ಚವಾಗುವ ಹಣ ಉಳಿಯಲಿದೆ. ಹಾಗೂ ಕೃಷಿಯ ಕೆಲಸ ಮಾಡುವಾಗ ಟ್ರ್ಯಾಕ್ಟರ್ ನಿಂದ ಹೊರ ಸೂಸುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ತಡೆಯಬಹುದಾಗಿದೆ. ವಿಶೇಷವೆಂದರೆ ಹಸುವಿನ ಸಗಣಿಯಿಂದ ಟ್ರ್ಯಾಕ್ಟರ್ ಗಾಗಿ ಬೇಕಾಗಿರುವ ಮಿಥೆನ್ ಸುಲಭವಾಗಿ ತಯಾರಿಸಬಹುದು. `ಗುಡ್ ನ್ಯೂಸ್ ನೆಟ್ವರ್ಕ್’ ಈ ಬಗ್ಗೆ ವಾರ್ತೆ ಪ್ರಕಾಶಿಸಿದೆ.

ಬ್ರಿಟಿಷ್ ಕಂಪನಿಯಿಂದ ೧೦ ವರ್ಷಕ್ಕೂ ಹೆಚ್ಚಿನ ಕಾಲಾವಧಿಯಿಂದ ಬಯೋಮಿಥೇನ್ ಉತ್ಪಾದನೆಯ ಬಗ್ಗೆ ಸಂಶೋಧನೆ ಮಾಡುತ್ತಿದೆ. ಕಾರ್ನ್ವಾಲ್ ನ ಒಂದು ಹೊಲದಲ್ಲಿ ನಡೆಸಲಾದ ಪರಿಕ್ಷಣೆಯಲ್ಲಿ ಮಿಥೇನನಿಂದ ಚಲಿಸುವ ಈ ಟ್ರ್ಯಾಕ್ಟರ್ ಸಾಮಾನ್ಯ ಟ್ರ್ಯಾಕ್ಟರ್ ನ ಗತಿಯಲ್ಲಿ ಚಲಿಸುತ್ತಿದೆ. ಈ ಟ್ರ್ಯಾಕ್ಟರ್ ನ ಬಳಕೆಯಿಂದ ಒಂದು ವರ್ಷದಲ್ಲಿ ಬಿಡುಗಡೆ ಆಗುವ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣ ೨ ಸಾವಿರದ ೫೦೦ ಮೆಟ್ರಿಕ ಟನ್ ದಿಂದ ೫೦೦ ಮೆಟ್ರಿಕ ಟೆನ್ ನಷ್ಟು ಕಡಿಮೆಯಾಗುವ ಸಾಧ್ಯತೆ ಇರುವುದು ತಿಳಿದು ಬಂದಿದೆ.

ಸಂಪಾದಕರ ನಿಲುವು

ಈಗ ಹಸುವಿನ ಮಹತ್ವ ವಿದೇಶದಲ್ಲಿ ಕೂಡ ಸಾಬೀತಾಗುತ್ತಿದೆ, ಇದನ್ನು ಗಮನಿಸಿ ಭಾರತ ಸರಕಾರ ಗೋ ಹತ್ಯೆ ತಡೆದು ಗೋವಿನ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳುವುದೇ ?