ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯೆಂದರೆ ಪರಿಪೂರ್ಣತೆ ಹಾಗೂ ಪ್ರೀತಿಯ ಮೂರ್ತಿ ಸ್ವರೂಪ ! ಸರ್ವಜ್ಞರಾದ ಪರಾತ್ಪರ ಗುರು ಡಾಕ್ಟರರು ಸ್ಪರ್ಶಿಸದಿರುವ ವಿಷಯವೇ ಇಲ್ಲ. ಅವತಾರತ್ವದ ಮಾನವೀ ಶರೀರಕ್ಕೆ ಸೀಮಿತ ನಿರ್ಬಂಧವಿದ್ದರೂ ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ, ಅಂದರೆ ಕಟ್ಟಡ ನಿರ್ಮಾಣ ಕಾರ್ಯದಿಂದ ಸಂಗೀತದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅವರು ತಮ್ಮ ಸರ್ವಜ್ಞತೆಯ ಮುದ್ರೆಯನ್ನೊತ್ತಿದ್ದಾರೆ. ಅಧ್ಯಾತ್ಮದ ಕ್ಷೇತ್ರದಲ್ಲಿನ ಅವರ ಸ್ಥಾನವಂತೂ ಸರ್ವೋಚ್ಚ ಹಾಗೂ ಅದ್ವಿತೀಯವಾಗಿದೆ. ತನ್ನ ಜೊತೆಯಲ್ಲಿಯೆ ಸಾಧಕರನ್ನೂ ನಿರ್ಮಿಸುವ ಈ ವಿಭೂತಿ ಕಲಿಯುಗದಲ್ಲಿ ಅಮೂಲ್ಯವಾದುದು ! ಸಾಧಕರಿಗೆ ಅಪೂರ್ಣತೆಯ ಅರಿವು ಮೂಡಿಸಿ ಹಾಗೂ ಅವರಲ್ಲಿ ಪರಿಪೂರ್ಣತೆಯ ಧ್ಯಾಸವನ್ನು ನಿರ್ಮಾಣ ಮಾಡಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣಗೊಳಿಸಲು ಪ್ರೋತ್ಸಾಹಿಸುವ ಹಾಗೂ ಪ್ರಸಂಗಾನುಸಾರ ತನ್ನದೆ ಕೃತಿಯಿಂದ ಕಲಿಸುವ ಸಚ್ಚಿದಾನಂದ ಪರಬ್ರಹ್ಮರ ಬಗ್ಗೆ ಎಷ್ಟು ಕೃತಜ್ಞತೆಯ ಪುಷ್ಪಗಳನ್ನು ಅರ್ಪಿಸಬೇಕು ! ತಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸೂಕ್ಷ್ಮತ್ವವನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಒಯ್ಯುವ ಸಚ್ಚಿದಾನಂದ ಪರಬ್ರಹ್ಮರ ವಿಷಯದಲ್ಲಿ ‘ಕೃತಜ್ಞತೆ’ ಎಂಬ ಶಬ್ದವೂ ಅಪೂರ್ಣವೆನಿಸುತ್ತದೆ !

ಶ್ರೀ. ರಾಹುಲ ಕುಲಕರ್ಣಿ

ಸಾಧಕರ ಈಶ್ವರಪ್ರಾಪ್ತಿಯ ವ್ಯಷ್ಟಿ ಧ್ಯೇಯ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಸಮಷ್ಟಿ ಧ್ಯೇಯವು ಪರಸ್ಪರ ಪೂರಕ ಧ್ಯೇಯವಾಗಿದೆ, ಎಂಬುದು ಕೂಡ ಇಲ್ಲಿ ಅರಿವಾಗುತ್ತದೆ. ಅವರ ಸತ್ಸಂಗದಲ್ಲಿ ಅವರಿಂದ ಸಿಕ್ಕಿದ ಅಮೂಲ್ಯವಾದ ವಿಷಯಗಳನ್ನು ಅವರ ಶಬ್ದಗಳಲ್ಲಿಯೇ ನೀಡುತ್ತಿದ್ದೇವೆ.

೧. ೨೦೦೩ – ಮೀರಜ್ ಆಶ್ರಮದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ವಿಷಯಗಳು

೧ ಅ. ಮಾಯೆಯ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮಿಕ ದೃಷ್ಟಿಯಲ್ಲಿ ನೋಡುವುದು

‘೨೦೦೩ ರ ಮಳೆಗಾಲದ ಸಮಯದಲ್ಲಿ ಮಿರಜ್ ಆಶ್ರಮದಲ್ಲಿ ಪ.ಪೂ.ಡಾ.ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಕ್ಕದ ಕೋಣೆಯ ಬಾಗಿಲು ಮಳೆಯಿಂದಾಗಿ ಉಬ್ಬಿಕೊಂಡಿತ್ತು. ಆಗ ದುರಸ್ತಿ ವ್ಯವಸ್ಥಾಪನೆ ವಿಭಾಗದಲ್ಲಿ ಬಡಗಿ (ಕಾರ್ಪೆಂಟರ್) ಕೆಲಸ ಮಾಡುವ ಸಾಧಕರು ಇಲ್ಲದ ಕಾರಣ ನಾನು ಆ ಬಾಗಿಲನ್ನು ತೆರೆದಾಗ ಅದು ಎಲ್ಲಿವರೆಗೆ ಬಂದು ನಿಲ್ಲುತ್ತದೆ ?’, ಎಂದು ನೋಡಿಕೊಂಡು ಬಾಗಿಲು ಎಷ್ಟು ಉಬ್ಬಿಕೊಂಡಿದೆಯೋ, ಅಷ್ಟೇ ಭಾಗವನ್ನು ಕತ್ತರಿಸಲು ಪ್ರಾರಂಭಿಸಿದೆ. ಆಗ ಪ.ಪೂ. ಡಾಕ್ಟರರು ಹೊರಗೆ ಬಂದು, “ಜಾಗರೂಕತೆಯಿಂದ ಮಾಡು, ಬಾಗಿಲು ಅವಶ್ಯಕತೆಯಿಂದ ಹೆಚ್ಚು ಕತ್ತರಿಸಬಾರದು”, ಎಂದರು. “ಈ ಹಲಗೆಯ ಅಡ್ಡಪಟ್ಟಿಗಳು ಒಂದಾಗಿರುವಂತೆಯೇ ನಮ್ಮ ಎಲ್ಲ ಸಾಧಕರು ಒಟ್ಟಾಗಿದ್ದಾರೆ”, ಎಂದು ಪುನಃ ಹೇಳಿದರು.

೧ ಆ. ಪ್ರತಿಯೊಂದು ಕೃತಿಯನ್ನು ಮಾಡುವ ಮೊದಲು ಅದರ ಹಿಂದಿನ ಕಾರಣವನ್ನು ತಿಳಿದುಕೊಂಡು ‘ಪರಿಪೂರ್ಣ ಕೃತಿಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅವರು ಕಲಿಸುತ್ತಾರೆ

ಮೀರಜ್ ಆಶ್ರಮದಲ್ಲಿ ಒಂದು ಕಪಾಟಿಗೆ ಪರದೆಯನ್ನು ಹಾಕಲು ನಾನು ಸ್ಲ್ಯಾಬ್‌ಗೆ ತೂತು ಮಾಡುತ್ತಿದ್ದೆ. ಆ ತೂತು ಕಪಾಟಿನಿಂದ ಒಂದು ಅಡಿ ದೂರದಲ್ಲಿತ್ತು. ಆಗ ಪ.ಪೂ.ಡಾಕ್ಟರರು ಅಲ್ಲಿಗೆ ಬಂದರು ಹಾಗೂ ನಮ್ಮ ನಡುವೆ ಈ ಮುಂದಿನ ಸಂಭಾಷಣೆಯಾಯಿತು.

ಪ.ಪೂ.ಡಾಕ್ಟರ್ : ಏನು ಮಾಡುತ್ತಿದ್ದೀ ? ಪರದೆಯನ್ನು ಹಾಕುವುದರಿಂದ ಕಪಾಟು ಚೆನ್ನಾಗಿ ಕಾಣಿಸಬೇಕೆಂದು ಹಾಕುತ್ತಿದ್ದಿಯಾ ಅಥವಾ ಕಪಾಟಿಗೆ ಧೂಳು ಹೋಗಬಾರದೆಂದು ಹಾಕುತ್ತಿದ್ದಿಯಾ ?

ಸಾಧಕ : ಕಪಾಟು ಚೆನ್ನಾಗಿ ಕಾಣಿಸಬೇಕೆಂದು ಹಾಕುತ್ತಿದ್ದೇನೆ.

ಪ.ಪೂ.ಡಾಕ್ಟರ್ : ನಮ್ಮ ೫ ಅಡಿ ಸ್ಥಳ ವ್ಯರ್ಥವಾಯಿತು. ಕಪಾಟಿಗೆ ಧೂಳು ತಗಲಬಾರದೆಂದು ಪರದೆಯನ್ನು ಹಾಕಲಾಗುತ್ತದೆ. ನಂತರ ಅವರು ಈ ತಪ್ಪನ್ನು ಆಶ್ರಮ ಸೇವಕರಿಗೂ ಹೇಳಿದರು ಹಾಗೂ ಪ್ರತಿ ಬುಧವಾರ ಆಶ್ರಮದಲ್ಲಿ ನಡೆಯುವ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಸತ್ಸಂಗದಲ್ಲಿಯೂ ಹೇಳಿದರು.

೧ ಇ. ಸೇವೆ ಮಾಡುವಾಗ ಶಕ್ತಿ ಹಾಗೂ ಸಮಯವನ್ನು ಉಳಿಸಲು ಉಪಲಬ್ದವಿರುವ ಯಂತ್ರವನ್ನು ಉಪಯೋಗಿಸಲು ಹೇಳಿದರು

೨೦೦೩ ರಲ್ಲಿ ಮೀರಜ್ ಆಶ್ರಮದಲ್ಲಿ ಬಡಗಿ ಕೆಲಸದ ಸೇವೆ ನಡೆಯುತ್ತಿತ್ತು. ಈ ಸೇವೆಯನ್ನು ಮಾಡುವ ಸಾಧಕರು ಗರಗಸದಿಂದ ಪ್ಲೈವುಡ್ ಕತ್ತರಿಸುವುದನ್ನು ನೋಡಿ ಪ.ಪೂ.ಡಾಕ್ಟರರು ಅದನ್ನು ‘ಪ್ಲೈವುಡ್ ಕತ್ತರಿಸುವ ಯಂತ್ರ’ದಿಂದ (‘ಕಟ್ಟರ್ ಮಶೀನ್’ನಿಂದ) ಕತ್ತರಿಸಲು ಹೇಳಿದರು. “ಆ ಯಂತ್ರ ನಮ್ಮಲ್ಲಿದೆಯಲ್ಲ ?”, ಎಂಬುದನ್ನು ಕೇಳಿಕೊಂಡರು ಹಾಗೂ ಇದ್ದರೆ ಅದನ್ನು ಉಪಯೋಗಿಸೋಣ”, ಎಂದು ಹೇಳಿದರು. ಅದೇ ಪದ್ಧತಿಯಲ್ಲಿ ರಾಮನಾಥಿ ಆಶ್ರಮದ ನಿರ್ಮಾಣದ ಸಮಯದಲ್ಲಿ ಕಿಟಕಿಯನ್ನು ತಯಾರಿಸುವಾಗ ಮರವನ್ನು ಕತ್ತರಿಸಲು ಯಾರಾದರೂ ಬಡಗಿ ಅಥವಾ ಸಾಧಕರು ಗರಗಸವನ್ನು ಉಪಯೋಗಿಸುವುದು ಕಾಣಿಸಿದರೆ ಪ.ಪೂ.ಡಾಕ್ಟರರು ಆ ಯಂತ್ರವನ್ನು ಉಪಯೋಗಿಸಲು ಹೇಳುತ್ತಿದ್ದರು. ‘ಯಂತ್ರದಿಂದ ಮರವನ್ನು ಕತ್ತರಿಸಿದರೆ ನಮ್ಮ ಶಕ್ತಿ ಹಾಗೂ ಸಮಯ ಉಳಿಯುತ್ತದೆ’, ಎಂದು ಅವರು ಹೇಳುತ್ತಿದ್ದರು.

೧ ಈ. ಚಿಕ್ಕಪುಟ್ಟ ದುರಸ್ತಿಗಾಗಿ ಹೊರಗಿನ ಕಾರ್ಮಿಕರನ್ನು ಕರೆಯುವ ಬದಲು ಸಾಧಕರು ಅದನ್ನು ಕಲಿತುಕೊಳ್ಳಲು ಹೇಳುತ್ತಿದ್ದರು

ಮೀರಜ್ ಆಶ್ರಮದಲ್ಲಿ ಒಂದು ಸಣ್ಣ ದುರಸ್ತಿಗಾಗಿ ಹೊರಗಿನಿಂದ ಕಾರ್ಮಿಕರನ್ನು ಕರೆಯಲಾಗಿತ್ತು. ಆ ವಿಷಯದಲ್ಲಿ ಮಾತನಾಡುವಾಗ ಪ.ಪೂ.ಡಾಕ್ಟರರು, “ಆ ದುರುಸ್ತಿಯನ್ನು ನಾವೇ ಕಲಿತುಕೊಳ್ಳಬೇಕು. ಆ ಕಾರ್ಮಿಕರ ಜೊತೆಗೆ ಯಾರಾದರೂ ನಿಂತು ಅದನ್ನು ಕಲಿತುಕೊಳ್ಳಬೇಕು”, ಎಂದರು.

೧ ಉ. ಪ.ಪೂ.ಡಾಕ್ಟರರು ಸಾಧಕರು ಮಾಡುತ್ತಿದ್ದ ಕಷ್ಟದ ಕೆಲಸವನ್ನು ಅವರೆ ಸ್ವತಃ ಮಾಡಿ ನೋಡುತ್ತಿದ್ದರು

ಮೀರಜ್ ಆಶ್ರಮದಲ್ಲಿ ನೀರಿನ ಟ್ಯಾಂಕಿಯ ಮೇಲೆ ಹತ್ತಲು ಒಂದು ಮರದ ಕಂಬಕ್ಕೆ ಸಣ್ಣ ಸಣ್ಣ ಕಟ್ಟಿಗೆಯ ತುಂಡುಗಳನ್ನು ಜೋಡಿಸಲಾಗಿತ್ತು. ‘ಟ್ಯಾಂಕಿಯಲ್ಲಿನ ನೀರಿನ ಮಟ್ಟವನ್ನು ನೋಡಲು ಸಾಧಕರು ಈ ಕಟ್ಟಿಗೆಗಳಿಗೆ ಕಾಲಿಟ್ಟು ಮೇಲೆ ಹೋಗಬೇಕಾಗುತ್ತಿತ್ತು. ಒಮ್ಮೆ ಇದರ ಮೇಲೆ ಕಾಲಿಟ್ಟು ನೀರಿನ ಮಟ್ಟವನ್ನು ನೋಡಲು ಶ್ರೀ. ಶಂಕರ ನರುಟೆ ಹೋಗುತ್ತಿರುವಾಗ ಪ.ಪೂ. ಡಾಕ್ಟರರು ಅವನನ್ನು ನೋಡಿದರು. ಅನಂತರ ಅವರು ಸ್ವತಃ ಆ ಕಟ್ಟಿಗೆಯ ಮೇಲೆ ಕಾಲಿಟ್ಟು ಮೇಲೆ ಹತ್ತಲು ಪ್ರಾರಂಭಿಸಿದರು. ಸಾಧಕರು ಮಾಡುತ್ತಿದ್ದ ಕಷ್ಟದ ಕೆಲಸಗಳನ್ನು ಪ.ಪೂ.ಡಾಕ್ಟರರು ಸ್ವತಃ ಮಾಡಿ ನೋಡುತ್ತಿದ್ದರು.

೧ ಎ. ಪ.ಪೂ.ಡಾಕ್ಟರರು ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಲು ಹೇಳುವುದು

ಒಮ್ಮೆ ನಾನು ಕನ್ಸೀಲ್ಡ್ ಪೈಪಿಂಗ್ (‘ಗೋಡೆಯ ಒಳಗೆ ವಿದ್ಯುತ್ ವಾಯರಿಂಗ್ ಮಾಡಲು ಹಾಕುವ ಪೈಪ್’) ಮಾಡಲು ಗೋಡೆಯನ್ನು ಒಡೆಯುತ್ತಿದ್ದೆನು. ಗೋಡೆಯ ಇಟ್ಟಿಗೆಯ ತುಂಡು ಕೆಳಗೆ ಬಿದ್ದಾಗ ಅದನ್ನು ಒಟ್ಟುಮಾಡಲು ಕೆಳಗೆ ಗೋಣಿಗಳನ್ನು ಹಾಕಿದ್ದೆವು. ಆಗ ಪ.ಪೂ.ಡಾಕ್ಟರರು ಅಲ್ಲಿಗೆ ಬಂದರು ಹಾಗೂ ನಮ್ಮಲ್ಲಿ ಈ ಮುಂದಿನ ಸಂಭಾಷಣೆ ನಡೆಯಿತು.

ಪ.ಪೂ. ಡಾಕ್ಟರ್ : ಒಳ್ಳೆಯ ಗೋಣಿಗಳನ್ನು ಕೆಳಗೆ ಏಕೆ ಹಾಸಿದ್ದೀರಿ ?

ನಾನು : ಅದು ಹರಿದಿರುವ ಗೋಣಿ; ಆದರೆ ಅದರ ಮೇಲಿನ ಭಾಗ ಚೆನ್ನಾಗಿದೆ.

ಪ.ಪೂ.ಡಾಕ್ಟರ್ : ಅದರ ಮೇಲಿನ ಭಾಗ ಚೆನ್ನಾಗಿರುವುದರಿಂದ ನಾವು ಅದನ್ನು ಕುಳಿತುಕೊಳ್ಳಲು ಉಪಯೋಗಿಸಬಹುದು (ಮುಂದುವರಿಯುವುದು)

– ಶ್ರೀ. ರಾಹುಲ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೨.೮.೨೦೨೦)