ಫ್ರಾನ್ಸನ `ಶಾರ್ಲಿ ಹೆಬ್ದೊ’ ದಿಂದ ಈಗ ಇರಾನ ಮುಖಂಡ ಖಾಮೆನಿ ಅವರ ವ್ಯಂಗ್ಯಚಿತ್ರ ಪ್ರದರ್ಶನ !

ಈ ಕುರಿತು ಇರಾನನಿಂದ ಫ್ರಾನ್ಸ ರಾಯಭಾರಿಗೆ ತರಾಟೆ !

ಇರಾನಿನ ಪ್ರಮುಖ ಮುಖಂಡ ಅಯಾತುಲ್ಲಾ ಅಲಿ ಖಾಮೆನಿ

ಪ್ಯಾರಿಸ (ಫ್ರಾನ್ಸ) – ಫ್ರಾನ್ಸನ `ಶಾರ್ಲಿ ಹೆಬ್ದೊ’ ನಿಯತಕಾಲಿಕೆಯು ಮಹಮ್ಮದ ಪೈಗಂಬರರ ವ್ಯಂಗಚಿತ್ರ ಪ್ರಕಟಿಸಿದ ಬಳಿಕ ಈಗ ಇರಾನಿನ ಪ್ರಮುಖ ಮುಖಂಡ ಅಯಾತುಲ್ಲಾ ಅಲಿ ಖಾಮೆನಿಯವರ ವ್ಯಂಗಚಿತ್ರವನ್ನು ಪ್ರಕಟಿಸಿದೆ. ಇದರಿಂದ ಆಕ್ರೋಶಗೊಂಡ ಇರಾನ ತನ್ನ ದೇಶದಲ್ಲಿನ ಫ್ರಾನ್ಸನ ರಾಯಭಾರಿಗೆ ತರಾಟೆಗೆ ತೆಗೆದುಕೊಂಡಿದೆ. ಫ್ರಾನ್ಸನಿಂದ ಇದುವರೆಗೂ ಈ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನಿಡಿಲ್ಲ.

೧. ಇರಾನಿನ ವಿದೇಶಾಂಗ ಸಚಿವ ಹುಸೈನ ಆಮೀರ ಅಬ್ದುಲ್ಲಾಹಿಯನ ಇವರು, ಇರಾನಿನ ಧಾರ್ಮಿಕ ಮತ್ತು ರಾಜಕೀಯ ನಾಯಕತ್ವದ ವಿರುದ್ಧ ಫ್ರಾನ್ಸನ ನಿಯತಕಾಲಿಕೆಯು ಮಾಡಿದ ಅಪಮಾನಕಾರ ನಡತೆಗೆ ತಕ್ಕ ಉತ್ತರ ನೀಡಲಾಗುವುದು. ಫ್ರಾನ್ಸ ಸರಕಾರವು ತನ್ನ ಹದ್ದುಬಸ್ತಿನಲ್ಲಿರಬೇಕು. ಫ್ರಾನ್ಸ ಸರಕಾರವು ಖಂಡಿತವಾಗಿಯೂ ತಪ್ಪು ಮಾರ್ಗವನ್ನು ಆಯ್ಕೆ ಮಾಡಿದೆ. ಈ ಹಿಂದೆಯೂ ನಾವು ಈ ನಿಯತಕಾಲಿಕೆಯನ್ನು ನಿಷೇಧಿತ ಪಟ್ಟಿಯಲ್ಲಿಟ್ಟಿದ್ದೇವೆ ಎಂದು ಹೇಳಿದ್ದಾರೆ.

೨. ಇರಾನಿನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸೆರ ಕನಾನಿಯವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಮುಸ್ಲಿಂ ದೇಶದ ಪಾವಿತ್ರ್ಯದ ವಿಷಯಗಳ ಬಗ್ಗೆ ಅಪಮಾನ ಮಾಡಲು ಅಧಿಕಾರ ಫ್ರಾನ್ಸ ದೇಶಕ್ಕೆ ಇಲ್ಲ. ಫ್ರಾನ್ಸ್ ನ ಈ ನಿಯತಕಾಲಿಕೆಯ ವಿರುದ್ಧ ಫ್ರಾನ್ಸ ಸರಕಾರದಿಂದ ಉತ್ತರ ಮತ್ತು ಕ್ರಮ ಕೈಗೊಳ್ಳುವ ಬಗ್ಗೆ ಇರಾನ ಸರಕಾರ ಎದುರು ನೋಡುತ್ತಿದೆ.

ಇರಾನಿನ ಹಿಜಾಬ ವಿರೋಧದ ಹಿಂದಿರುವ ಸತ್ಯವನ್ನು ತೋರಿಸುವ ಪ್ರಯತ್ನ ! – ಶಾರ್ಲಿ ಹೆಬ್ದೊ

ಇರಾನಿನ ಎಚ್ಚರಿಕೆಯ ತಂತರವೂ ಶಾರ್ಲಿ ಹೆಬ್ದೋವು, ಇರಾನಿನಲ್ಲಿ ಹಿಜಾಬ ವಿರುದ್ಧ ಮುಂದುವರೆದಿರುವ ಪ್ರತಿಭಟನೆಗಳ ಹಿಂದಿರುವ ಸತ್ಯವನ್ನು ತೋರಿಸುವುದು ನಮ್ಮ ಪ್ರಯತ್ನವಾಗಿದೆ. 1979 ರಿಂದ ಇರಾನಿನ ವಿಚಾರಸರಣಿಯಿಂದ ಜನರಿಗೆ ತೊಂದರೆಯಾಗುತ್ತಿದೆ, ಅದರಿಂದ ಸ್ವಾತಂತ್ರ್ಯ ಪಡೆಯಲು ಜನರು ಪ್ರಾಣವನ್ನು ಪಣಕ್ಕಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಲು ನಮ್ಮ ಒಂದು ಪ್ರಯತ್ನವಾಗಿದೆ ಎಂದು ಹೇಳಿದೆ.