ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿಯವರ ಶುಭ ಹಸ್ತದಿಂದ ’ಸನಾತನ ಪಂಚಾಂಗ 2023’ ರ ಕನ್ನಡ ಆ್ಯಪ್ ನ ಲೋಕಾರ್ಪಣೆ !

ಸನಾತನ ಸಂಸ್ಥೆ ನಿರ್ಮಿತ ಆ್ಯಪ್ ನಲ್ಲಿ ಹಬ್ಬ-ಹರಿದಿನ, ವ್ರತಗಳು, ಧರ್ಮಶಿಕ್ಷಣ ಇತ್ಯಾದಿ ವಿಷಯಗಳ ಕುರಿತು ವಿಶೇಷ ಮಾಹಿತಿ

ಆ್ಯಪ್ ನ ಲೋಕಾರ್ಪಣೆ ಮಾಡುತ್ತಿರುವ (ಬಲದಿಂದ) ಮಹರ್ಷಿ ಆನಂದ ಗುರೂಜಿ ಮತ್ತು ಅವರ ಸುಪುತ್ರ ಶ್ರೀನಿವಾಸ ಶರ್ಮಾ ಗುರೂಜಿ !

ಬೆಂಗಳೂರು : ಸನಾತನ ಸಂಸ್ಥೆ ನಿರ್ಮಿಸಿರುವ Android ಸನಾತನ ಪಂಚಾಂಗವು ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವಂತಹದ್ದು. ಕಳೆದ 11 ವರ್ಷಗಳಿಂದ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿಯ ಅವಿರತ ಕಾರ್ಯವು ಸನಾತನ ಪಂಚಾಂಗದ ಮೂಲಕ ನಡೆಯುತ್ತಿದೆ. ಮಹರ್ಷಿ ಆನಂದ ಗುರೂಜಿಯವರು ಗುರುವಾರ, ಜನವರಿ 5 ರಂದು ಈ App ಅನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಮಹರ್ಷಿಗಳ ಪುತ್ರರಾದ ಶ್ರೀನಿವಾಸ ಶರ್ಮಾ ಗುರೂಜಿ, ಸನಾತನ ಸಂಸ್ಥೆಯ ಸೌ. ಸುಧಾ ಸದಾನಂದ, ಶ್ರೀ. ಸುಜನ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಗುರೂಜಿಯವರು, ’ಸನಾತನ ಪಂಚಾಂಗ 2023 ಆ್ಯಪ್’ ನಲ್ಲಿ ಪಂಚಾಂಗ ಮತ್ತು ಶುಭ ಮುಹೂರ್ತ, ಹಬ್ಬ-ಹರಿದಿನ, ವ್ರತಗಳು, ಧರ್ಮಶಿಕ್ಷಣ, ರಾಷ್ಟ್ರ-ಧರ್ಮ ರಕ್ಷಣೆ, ಆಯುರ್ವೇದ, ಉಪಚಾರ ಪದ್ಧತಿ, ಅಧ್ಯಾತ್ಮ, ಇತ್ಯಾದಿ ಹೀಗೆ ವಿವಿಧ ವಿಷಯಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. ವಿವಿಧ ಮಾಹಿತಿಗಳಿರುವ ಈ ಆ್ಯಪ್ ಸಾಮಾನ್ಯ ಹಿಂದೂಗಳ ದೈನಂದಿನ ಜೀವನದಲ್ಲಿ ಮಾರ್ಗದರ್ಶಕವಾಗಿದೆ. ಸಮಸ್ತ ಭಾರತೀಯರು ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಉಪಯೋಗವನ್ನು ಗಮನದಲ್ಲಿಟ್ಟುಕೊಂಡು, Android ಮತ್ತು IOS ಸನಾತನ ಪಂಚಾಂಗ ಆ್ಯಪ್’ ಅನ್ನು ನಿರ್ಮಿಸಲಾಗಿದೆ. ಈ ಆ್ಯಪ್ ಮರಾಠಿ, ಹಿಂದಿ, ಇಂಗ್ಲಿಷ್, ಕನ್ನಡ, ಗುಜರಾತಿ, ತೆಲುಗು ಮತ್ತು ತಮಿಳು ಈ 7 ಭಾಷೆಗಳಲ್ಲಿ ಲಭ್ಯವಿದೆ. ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಜನರು ’ಆಂಡ್ರಾಯ್ಡ್’ ಹಾಗೂ 1 ಲಕ್ಷಕ್ಕೂ ಹೆಚ್ಚು ಜನರು ’I0S’ನ ’ಸನಾತನ ಪಂಚಾಂಗ’ವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ’ಗೂಗಲ್ ಪ್ಲೇ ಸ್ಟೋರ್’ ಮತ್ತು ’ಆಪಲ್ ಸ್ಟೋರ್’ ನಲ್ಲಿ ಉಚಿತವಾಗಿ ಲಭ್ಯವಿದೆ.