ಪಾಲಕರೇ, ಹೆಣ್ಣು ಮಕ್ಕಳ ಆತ್ಮಸನ್ಮಾನವನ್ನು ಕಾಪಾಡಿರಿ !

ಶ್ರದ್ಧಾ ವಾಲಕರ ಇವಳ ಕೊಲೆಯ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ !

ಡಾ. ಶಿಲ್ಪಾ ಚಿಟ್ನೀಸ ಜೋಶಿ

೧. ಮನೆಯಲ್ಲಿನ ಪ್ರತಿಕೂಲ ವಾತಾವರಣದಿಂದ ಮಕ್ಕಳ ಭಾವನಿಕ ಜಗತ್ತು ಕುಸಿದುಬಿದ್ದು ಅವರು ದಾರಿತಪ್ಪುವ ಸಾಧ್ಯತೆಯಿದೆ

ಶ್ರದ್ಧಾ ವಾಲಕರ ಇವಳ ಕುಟುಂಬದಲ್ಲಿನ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳಿದ್ದವು. ಅವಳ ತಾಯಿ-ತಂದೆ ಬೇರೆ ಬೇರೆ ಇರುತ್ತಿದ್ದರು. ಇಂತಹ ಕುಟುಂಬದ ಮಕ್ಕಳ ಮೇಲೆ ಮನೆಯ ಪ್ರತಿಕೂಲ ವಾತಾವರಣದ ಆಳವಾದ ಪರಿಣಾಮವಾಗುತ್ತದೆ. ತನ್ನ ತಾಯಿ ವಿವಿಧ ಶಾರೀರಿಕ ಅಥವಾ ಭಾವನಾತ್ಮಕ ಅತ್ಯಾಚಾರಗಳನ್ನು ಎದುರಿಸುತ್ತಿದ್ದರೆ, ಇದನ್ನು ನೋಡುವ ಮಕ್ಕಳ ಭಾವನೆಯ ಜಗತ್ತು ಕುಸಿದುಬೀಳುತ್ತದೆ. ಇದಕ್ಕೆ ಸಕಾಲದಲ್ಲಿ ಉಪಾಯ ಮಾಡದಿದ್ದರೆ ಮಕ್ಕಳ ವ್ಯಕ್ತಿತ್ವ ಶಾಶ್ವತವಾಗಿ ಕೆಟ್ಟು ಹೋಗುತ್ತದೆ. ಇಂತಹ ಮಕ್ಕಳು ತಪ್ಪು ದಾರಿಯನ್ನು ಹಿಡಿಯಬಹುದು, ಹಾಗೆಯೇ ಅವರು ಗೌರವ ಕೊಡದ ಸಂಬಂಧದಲ್ಲಿ ಸಿಲುಕುವ ಸಾಧ್ಯತೆಯೂ ಹೆಚ್ಚಿರುತ್ತದೆ. (ಮಾನಸಿಕ ಸ್ತರದಲ್ಲಿ ಇದು ಹೀಗಿದ್ದರೂ, ಮಕ್ಕಳಿಗೆ ಚಿಕ್ಕಂದಿನಿಂದಲೇ ಧರ್ಮಶಿಕ್ಷಣವನ್ನು ನೀಡಿದರೆ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ಎದೆಗುಂದದೇ ಪರಿಸ್ಥಿತಿಯನ್ನು ಎದುರಿಸುತ್ತಾರೆ. – ಸಂಕಲನಕಾರರು)

೨. ಮನೆಯವರು ಮಗಳ ಸಂಬಂಧವನ್ನು ಕಡಿದು ಹಾಕುವುದು ಅಪರಿಪಕ್ವ ಬುದ್ಧಿಯಾಗಿದೆ.

ಜೊತೆಗಾರನ ಹೊಡೆತಗಳನ್ನು ತಿನ್ನುತ್ತಾ ಶ್ರದ್ಧಾ ಅವನೊಂದಿಗೇ ಇರುತ್ತಿದ್ದಳು; ಏಕೆಂದರೆ ನನಗೆ ಇದೇ ಸರಿಯಾದ ಶಿಕ್ಷೆಯಾಗಿದೆ ಅಥವಾ ನಾನು ಇದಕ್ಕೇ ಅರ್ಹಳಾಗಿದ್ದೇನೆ ಎಂದು ಅವಳ ಗಾಯಾಳು ಮತ್ತು ನೋವುಂಡ ಅಂತರ್ಮನ ಅವಳಿಗೆ ಹೇಳುತ್ತಿತ್ತು. ಮನೆಯವರು ಕಡಿದುಹಾಕಿದ ಸಂಬಂಧದಿಂದ ಈ ತಿಳುವಳಿಕೆ ಅವಳಲ್ಲಿ ಇನ್ನೂ ಬಲಗೊಂಡಿರಬೇಕು. ಒಮ್ಮೆ ಆತ್ಮಗೌರವವನ್ನು ಕಳೆದುಕೊಂಡರೆ, ಆ ವ್ಯಕ್ತಿಯ ಮೇಲೆ ಅತ್ಯಾಚಾರ ಮಾಡುವುದು ಇತರರಿಗೆ ಸುಲಭವಾಗುತ್ತದೆ. ಅವಳ ಜೊತೆಗಾರನು ಇದರ ಸಂಪೂರ್ಣ ಲಾಭ ಪಡೆದುಕೊಂಡನು. ಮನೆಯವರು ಅವಳೊಂದಿಗಿನ ಸಂಬಂಧವನ್ನು ಕಡಿದು ಹಾಕುವುದು ಎಲ್ಲಕ್ಕಿಂತ ದೊಡ್ಡ ತಪ್ಪಾಗಿದೆ. ಅದು ಅಪರಿಪಕ್ವ ಬುದ್ಧಿಯ ಭಾಗವೇ ಆಗಿದೆ. ಇತರ ವಿಷಯಗಳಿಗಿಂತ ಇಂತಹ ಮನೆಯಲ್ಲಿನ ಮಕ್ಕಳಿಗೆ ಸಾಕಷ್ಟು ಮಾನಸಿಕ ಆಧಾರ ಮತ್ತು ಸಕಾಲದಲ್ಲಿ ಸದುಪದೇಶ ದೊರಕುವ ದೃಷ್ಟಿಯಿಂದ ಸಮಾಜದಲ್ಲಿ ಜಾಗರೂಕತೆ ನಿರ್ಮಾಣವಾಗಬೇಕು.

೩. ನಿಜವಾದ ಪಾಲಕತ್ವ ಎಂದರೆ ಏನು ?

ತಮ್ಮ ಹುಡುಗಿಯರನ್ನು ಕಠೋರ, ಸ್ವತಂತ್ರ ವ್ಯಕ್ತಿತ್ವದವರನ್ನಾಗಿ ಮಾಡುವುದು, ಜನರನ್ನು ಗುರುತಿಸಲು ಕಲಿಸುವುದು ಮತ್ತು ಆದರೂ ಏನಾದರೂ ಸಮಸ್ಯೆ ಬಂದರೆ, ಅವಳ ಹಿಂದೆ ದೃಢವಾಗಿ ನಿಲ್ಲುವುದು ಇದುವೇ ನಿಜವಾದ ಪಾಲಕತ್ವವಾಗಿದೆ !

– ಡಾ. ಶಿಲ್ಪಾ ಚಿಟಣೀಸ್-ಜೋಶಿ, ಸ್ತ್ರೀರೋಗ ಮತ್ತು ಬಂಜೆತನ ತಜ್ಞರು, ಕೋಥರೂಡ, ಪುಣೆ.