ಮುಸ್ಲಿಂ ಆಯೋಜಿಸಿದ್ದ ಗರಬಾ ಕಾರ್ಯಕ್ರಮವನ್ನು ಭಜರಂಗದಳದ ಪ್ರಯತ್ನದಿಂದ ರದ್ದು

ಗರಬಾವನ್ನು ‘ಲವ್ ಜಿಹಾದ್’ಗೆ ಬಳಸಿಕೊಳ್ಳಲಾಗುತ್ತಿದೆಯೆಂದು ಆರೋಪ

ಇಂದೋರ (ಮಧ್ಯಪ್ರದೇಶ) – ಇಲ್ಲಿನ ಭವರಕುವಾ ಪ್ರದೇಶದಲ್ಲಿ ಕಳೆದ 35 ವರ್ಷಗಳಿಂದ ನವರಾತ್ರಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದ ಆಯೋಜಕರಾದ ಫಿರೋಜ ಖಾನ ಇವರ ಮೇಲೆ ಲವ್ ಜಿಹಾದ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಾರ್ಯಕ್ರಮವನ್ನು ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ಸಂಬಂಧವನ್ನು ಉತ್ತೇಜಿಸಲು ಬಳಸಲಾಗುತ್ತಿತ್ತು ಎಂದು ಸ್ಥಳೀಯ ಬಜರಂಗದಳ ಆರೋಪಿಸಿದೆ. ಈ ಸಂದರ್ಭದಲ್ಲಿ ಅವರು ಪೊಲೀಸರಲ್ಲಿ ದೂರನ್ನೂ ಕೂಡ ನೀಡಿದ್ದಾರೆ. ಇದರಿಂದ ಈ ಗರಬಾ ಕಾರ್ಯಕ್ರಮದ ಆಯೋಜನೆಯನ್ನೇ ರದ್ದುಗೊಳಿಸಲಾಗಿದೆ.

1. ಬಜರಂಗದಳದ ಮುಖಂಡ ತನ್ನು ಶರ್ಮಾ ಮಾತನಾಡಿ, ನಮಗೆ ಈ ಹಿಂದೆ ಆಯೋಜಕರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ನಮಗೆ ಸಮಯವಿರುವಾಗಲೇ ಮಾಹಿತಿ ಸಿಕ್ಕಿತು ಮತ್ತು ಅವರಿಗೆ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಮಾಡಿದೆವು. ನಾವು ಸ್ಥಳೀಯ ಪೊಲೀಸರಿಗೆ ದೂರನ್ನು ದಾಖಲಿಸಿದ್ದೇವೆ ಎಂದು ಹೇಳಿದರು.

2. ಕಾರ್ಯಕ್ರಮದ ಆಯೋಜಕ ಖಾನ್ ಮಾತನಾಡಿ, ಕಳೆದ 35 ವರ್ಷಗಳಿಂದ ಇಲ್ಲಿ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. ನಾನು 25 ವರ್ಷಗಳಿಂದ ಕಾರ್ಯಕ್ರಮದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಕಳೆದ 15 ವರ್ಷಗಳಿಂದ ನಾನು ಸ್ವತಃ ಈ ಕಾರ್ಯಕ್ರಮದ ಆಯೋಜನೆಯನ್ನು ಮಾಡುತ್ತಿದ್ದೇನೆ. ನಮಗೆ ಈ ಹಿಂದೆ ಎಂದೂ ಇಂತಹ ಸಮಸ್ಯೆ ಎದುರಾಗಲಿಲ್ಲ.

3. ಇಂದೋರ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಮೀನಾ ಇವರು ಮಾತನಾಡಿ, ಈ ಪ್ರಕರಣದಲ್ಲಿ ಪೊಲೀಸರ ಕೈವಾಡವಿಲ್ಲ. ನಾವು ಯಾರಿಗೂ ಅನುಮತಿ ನೀಡಿಲ್ಲ ಅಥವಾ ನಾವು ಯಾವುದೇ ಕಾರ್ಯಕ್ರಮ ಸಂಘಟಕರಿಗೆ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಡ ಹೇರಿಲ್ಲ. ಸ್ಥಳೀಯ ಪಕ್ಷಗಳ ನಡುವಿನ ವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.