‘ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರ ತಾನಾಗಿಯೇ ಕೆಳಗೆ ಭೂಮಿಯ ಮೇಲೆ ಸ್ವಲ್ಪ ದೂರದಲ್ಲಿ ಬೀಳುವುದು’ ಈ ಆಧ್ಯಾತ್ಮಿಕ ಘಟನೆಯ ಬಗ್ಗೆ ಮಾಡಿದ ಸಂಶೋಧನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಒಳ್ಳೆಯ ಮತ್ತು ಕೆಟ್ಟ ಆಧ್ಯಾತ್ಮಿಕ ಘಟನೆಗಳು ಘಟಿಸುತ್ತಿರುತ್ತವೆ. ಈ ಆಧ್ಯಾತ್ಮಿಕ ಘಟನೆಗಳ ಸಂಶೋಧನೆಯನ್ನು ಮಾಡಿದರೆ ಅವುಗಳ ಹಿಂದಿನ ಕಾರ್ಯಕಾರಣಭಾವ ಗಮನಕ್ಕೆ ಬರುತ್ತದೆ, ಹಾಗೆಯೇ ಅಧ್ಯಾತ್ಮದಲ್ಲಿನ ವಿವಿಧ ಅಂಶಗಳು ಬೆಳಕಿಗೆ ಬರುತ್ತವೆ. ಇಂತಹ ಒಂದು ಆಧ್ಯಾತ್ಮಿಕ ಘಟನೆಯ ಬಗ್ಗೆ ಮಾಡಿದ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

ಸನಾತನದ ಗುರುಪರಂಪರೆ  : ೧ ಶ್ರೀಮತ್ಪರಮಹಂಸ ಚಂದ್ರಶೇಖರಾನಂದ ಮಹಾರಾಜರು, ೨ ಶ್ರೀ ಅನಂತಾನಂದ ಸಾಯೀಶರು, ೩ ಪ.ಪೂ. ಭಕ್ತರಾಜ ಮಹಾರಾಜರು ಮತ್ತು ೪ ಪ.ಪೂ. ರಾಮಾನಂದ ಮಹಾರಾಜರು ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯರಾದ ೫ ಡಾ. ಜಯಂತ ಬಾಳಾಜಿ ಆಠವಲೆ

ಸನಾತನದ ಆಶ್ರಮ, ರಾಮನಾಥಿಯಲ್ಲಿನ ಧ್ಯಾನ ಮಂದಿರ : ಇದರಲ್ಲಿರುವ ಶಿಷ್ಯ ಡಾ. ಆಠವಲೆ ಇವರ ಭಾವಚಿತ್ರವು ತನ್ನ ಸ್ಥಳದಿಂದ ಕೆಳಗೆ ಬಿದ್ದಿರುವುದು ಕಾಣಿಸುತ್ತಿದೆ.

ಟಿಪ್ಪಣಿಸನಾತನದ ಗುರುಪರಂಪರೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ತಮ್ಮ ಗುರು ಪ.ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ನೆಟ್ಟ ಚಿಕ್ಕ ಸಸಿಯು ಇಂದು ಸನಾತನ ಸಂಸ್ಥೆಯ ರೂಪದಲ್ಲಿ ದೊಡ್ಡ ವಟವೃಕ್ಷವಾಗಿದೆ. ಶ್ರೀಮತ್ಪರಮಹಂಸ ಚಂದ್ರಶೇಖರಾನಂದ ಇವರಿಂದ ಪ್ರಾರಂಭವಾದ ಈ ಪರಂಪರೆಯು ಮುಂದೆ ಬೆಳೆಯುತ್ತ ಹೋಯಿತು. ಶ್ರೀಮತ್ಪರಮಹಂಸ ಚಂದ್ರಶೇಖರಾನಂದ ಮಹಾರಾಜರು, ಶ್ರೀ ಅನಂತಾನಂದ ಸಾಯೀಶರು, ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪ.ಪೂ. ರಾಮಾನಂದ ಮಹಾರಾಜರು ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯರಾದ ಡಾ. ಜಯಂತ ಬಾಳಾಜಿ ಆಠವಲೆ ಇದು ಸನಾತನದ ಗುರುಪರಂಪರೆಯಾಗಿದೆ.

೧. ಧ್ಯಾನಮಂದಿರದಲ್ಲಿನ ಮೇಜಿನ ಮೇಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರವು ತಾನಾಗಿಯೇ ಕೆಳಗೆ ಭೂಮಿಯ ಮೇಲೆ ಕೆಲವು ಅಂತರದಲ್ಲಿ ಬೀಳುವುದು

ಸೌ. ಮಧುರಾ ಕರ್ವೆ

ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಚೈತನ್ಯದಿಂದ ತುಂಬಿದೆ ಧ್ಯಾನಮಂದಿರವಿದೆ. ಧ್ಯಾನಮಂದಿರದಲ್ಲಿ ದೇವತೆಗಳ ಭಾವಚಿತ್ರ ಹಾಗೂ ಮೂರ್ತಿಗಳು, ಸನಾತನದ ಗುರುಪರಂಪರೆಯಲ್ಲಿನ (ಟಿಪ್ಪಣಿ) ಸಂತರ ಭಾವಚಿತ್ರಗಳು, ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದುಕೆಗಳನ್ನು ಇಡಲಾಗಿದೆ. ಆಶ್ರಮದ ಸಾಧಕರು ಧ್ಯಾನಮಂದಿರದಲ್ಲಿ ಕುಳಿತು ನಾಮಜಪ ಮುಂತಾದ ಉಪಾಯಗಳನ್ನು ಮಾಡುತ್ತಾರೆ.

ಸಾಧಕರು ೭.೪.೨೦೨೨ ರಂದು ಎಂದಿನಂತೆ ನಾಮಜಪ ಮುಂತಾದ ಉಪಾಯಗಳಿಗಾಗಿ ಧ್ಯಾನಮಂದಿರದಲ್ಲಿ ಕುಳಿತಿದ್ದರು. ಆಗ ಸ್ಥೂಲದ ಯಾವುದೇ ಕಾರಣವಿಲ್ಲದೆ ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರ ತನ್ನಿಂದತಾನೇ ಕೆಳಗೆ ಭೂಮಿಯ ಮೇಲೆ ಬಿದ್ದಿತು. ಇದನ್ನು ನೋಡಿ ಸಾಧಕರಿಗೆ ಆಶ್ಚರ್ಯವಾಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳು ಮತ್ತು ಅವುಗಳ ವಿವೇಚನೆ

೭.೪.೨೦೨೨ ರಂದು ಘಟಿಸಿದ ಘಟನೆಯ ಸಂಶೋಧನೆಯನ್ನು ಮಾಡಲು ಧ್ಯಾನಮಂದಿರದ ಕೆಲವು ಭಾವಚಿತ್ರಗಳನ್ನು ತೆಗೆಯಲಾಯಿತು. ‘ಯೂ.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಈ ಭಾವಚಿತ್ರಗಳ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಳ ನಿರೀಕ್ಷಣೆ ಮತ್ತು ಅವುಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

೨ ಅ. ಧ್ಯಾನಮಂದಿರದಲ್ಲಿನ ಭಾವಚಿತ್ರಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದು : ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ, ಹಾಗೆಯೇ ಈ ಭಾವಚಿತ್ರಗಳಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡುಬಂದಿತು.

೨ ಆ. ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರತಿಮೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದು : ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರತಿಮೆಯ ಮುಂದಿನ ಮತ್ತು ಹಿಂದಿನ ಬದಿಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು. ತುಲನೆಗಾಗಿ ೨೮.೧೨.೨೦೨೧ ರಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಭಾವಚಿತ್ರದ ನಿರೀಕ್ಷಣೆಯನ್ನೂ ಮುಂದೆ ಕೊಡಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಈ ಭಾವಚಿತ್ರದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲ ಮತ್ತು ಸಕಾರಾತ್ಮಕ ಉರ್ಜೆ ಬಹಳಷ್ಟು ಪ್ರಮಾಣದಲ್ಲಿದೆ.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಧ್ಯಾನಮಂದಿರದಲ್ಲಿನ  ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಕಾರಣ : ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿನ ಚೈತನ್ಯದಿಂದ ಅಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳಿವೆ. ೭.೪.೨೦೨೨ ರಂದು ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರವು ತಾನಾಗಿಯೇ ಕೆಳಗೆ ಬಿದ್ದನಂತರ ಮಾತ್ರ ಒಂದು ಬೇರೆಯೇ ಅನುಭವ ಬಂದಿತು. ಆಗ ಧ್ಯಾನಮಂದಿರದಲ್ಲಿ ತೆಗೆದ ಭಾವಚಿತ್ರಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು. ಇದರ ಕಾರಣವೇನೆಂದರೆ, ಸೂಕ್ಷ್ಮದಲ್ಲಿನ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರದ ಮೇಲೆ ತುಂಬಾ ಶಕ್ತಿಶಾಲಿ ಆಕ್ರಮಣವನ್ನು ಮಾಡಿದ್ದರಿಂದ ಅದು ತಾನಾಗಿಯೇ ಕೆಳಗೆ ಭೂಮಿಯ ಮೇಲೆ ಬಿದ್ದಿತು. ಆ ಸಮಯದಲ್ಲಿ ಧ್ಯಾನಮಂದಿರವು ಸೂಕ್ಷ್ಮದಲ್ಲಿನ ಯುದ್ಧದ ‘ರಣಭೂಮಿ’ಯೇ ಆಗಿತ್ತು. ಅಲ್ಲಿನ ವಾತಾವರಣವು ತೊಂದರೆದಾಯಕ ಶಕ್ತಿಯಿಂದ ತುಂಬಿಕೊಂಡಿತ್ತು. ಧ್ಯಾನಮಂದಿರದಲ್ಲಿನ ಸಾತ್ತ್ವಿಕತೆ ಮತ್ತು ಕೆಟ್ಟ ಶಕ್ತಿಗಳು ಬಿಟ್ಟಿರುವ ತೊಂದರೆದಾಯಕ ಕಪ್ಪು ಶಕ್ತಿ ಇವುಗಳಲ್ಲಿ ಸೂಕ್ಷ್ಮಯುದ್ಧವಾಯಿತು. ಇದರ ಪ್ರತಿಬಿಂಬವು ಧ್ಯಾನಮಂದಿರದಲ್ಲಿನ ಭಾವಚಿತ್ರದಲ್ಲಿ ಮೂಡಿತು.

೩ ಆ. ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರದಲ್ಲಿ ಬಹಳಷ್ಟು  ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಕಾರಣ : ‘ಹಿಂದೂ ರಾಷ್ಟ್ರ ಸ್ಥಾಪನೆಯಾಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜೀವಂತವಿರುವುದು ಅತ್ಯಂತ ಆವಶ್ಯಕವಾಗಿದೆ’, ಎಂದು ಅಧ್ಯಾತ್ಮದಲ್ಲಿನ ಬಹಳಷ್ಟು ಅಧಿಕಾರಿ ವ್ಯಕ್ತಿಗಳು ಹೇಳಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಸೂಕ್ಷ್ಮದಲ್ಲಿನ ಯುದ್ಧದ ಕೇಂದ್ರಬಿಂದು ಆಗಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಪ್ರಾರಂಭಿಸಿದ ಈ ಮಹಾನ ಕಾರ್ಯ ಪೂರ್ಣವಾಗಬಾರದೆಂದು ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕಾರ್ಯದಲ್ಲಿ ವಿಘ್ನಗಳನ್ನು ತರಲು ಅವು ವಿವಿಧ ಕಲ್ಪನೆಗಳನ್ನು ಉಪಯೋಗಿಸಿ ಸತತವಾಗಿ ಪ್ರಯತ್ನಿಸುತ್ತಿರುತ್ತವೆ. ೭.೪.೨೦೨೨ ರಂದು ಘಟಿಸಿದ ಘಟನೆ ಎಂದರೆ ಈ ಸೂಕ್ಷ್ಮಯುದ್ಧದ ಒಂದು ಭಾಗವಾಗಿದೆ.

ಧ್ಯಾನಮಂದಿರದಲ್ಲಿ ಇಟ್ಟಿರುವ ಗುರುಪರಂಪರೆಯಲ್ಲಿನ ಭಾವ ಚಿತ್ರಗಳಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಭಾವಚಿತ್ರದ ಮೇಲೆ ಆಕ್ರಮಣ ಮಾಡುವುದೆಂದರೆ ‘ಸಾಧಕರನ್ನು ಚೈತನ್ಯದಿಂದ ವಂಚಿಸುವುದು, ಅವರ ಮನಸ್ಸಿನಲ್ಲಿ ಭಯ ಹುಟ್ಟಿಸುವುದು, ಗುರುಗಳ ಮೇಲಿನ ಸಾಧಕರ ಶ್ರದ್ದೆಯನ್ನು ಕಡಿಮೆ ಮಾಡುವುದು, ಇದಕ್ಕಾಗಿ ಕೆಟ್ಟ ಶಕ್ತಿಗಳ ಈ ಆಯೋಜನೆ ಇತ್ತು’, ಎಂಬುದು ಅರಿವಾಯಿತು. (ಈ ಹಿಂದೆ ಒಮ್ಮೆ ಗುರುಪರಂಪರೆಯಲ್ಲಿನ ಭಾವಚಿತ್ರಗಳಲ್ಲಿನ ಪ.ಪೂ. ರಾಮಾನಂದ ಮಹಾರಾಜರ ಭಾವಚಿತ್ರವು ಸ್ಥೂಲದಲ್ಲಿನ ಯಾವುದೇ ಕಾರಣವಿಲ್ಲದೆ ಕೆಳಗೆ ಬಿದ್ದಿತ್ತು.)

೨೮.೧೨.೨೦೨೧ ರಂದು ಅಂದರೆ, ಈ ಘಟನೆ ಘಟಿಸುವ ಮೊದಲು ಸುಮಾರು ೩ ತಿಂಗಳ ಹಿಂದೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಭಾವಚಿತ್ರದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅದರಲ್ಲಿ ಸಕಾರಾತ್ಮಕ ಊರ್ಜೆ ೧೨೯೩.೮೦ ಮೀಟರ್‌ಗಳಷ್ಟು ಇತ್ತು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿ ಎಷ್ಟು ಅಗಾಧ ಪ್ರಮಾಣದಲ್ಲಿ ಚೈತನ್ಯವಿದೆ, ಎಂಬುದು ಗಮನಕ್ಕೆ ಬರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿನ ಚೈತನ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ೭.೪.೨೦೨೨ ರಂದು ಘಟಿಸಿದ ಘಟನೆಯ ನಂತರ ಧ್ಯಾನಮಂದಿರದಲ್ಲಿನ ಅವರ ಭಾವಚಿತ್ರದಲ್ಲಿ ೧೩೫.೩೦ ಮೀಟರ್ ನಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಭಾವಚಿತ್ರದ ಮೇಲೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳು ಮಾಡಿದ ಆಕ್ರಮಣದ ತಾತ್ಕಾಲಿಕ ಪರಿಣಾಮವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಯಾವ ರೀತಿ ಆಕ್ರಮಣಗಳನ್ನು ಮಾಡುತ್ತವೆ ಮತ್ತು ಅವುಗಳ ತೀವ್ರತೆ ಎಷ್ಟು ಹೆಚ್ಚಿದೆ’, ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೧೦.೨೦೨೨)

ವಿ-ಅಂಚೆ : mav.research2014@gmail.com

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.