ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಾರ್ಶನಿಕತೆ !
‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು’, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.
ಪ.ಪೂ. ಡಾಕ್ಟರರು ಅವಳ ಬಗ್ಗೆ ತೆಗೆದ ಉದ್ಗಾರದ ನಂತರ ಸುಮಾರು ೧೬ ವರ್ಷಗಳ ನಂತರ ಅವಳಲ್ಲಿ ಸಾಧನೆಯ ಬಗ್ಗೆ ಅಂತರ್ಮುಖತೆ ಬರತೊಡಗಿದ್ದು ಅವಳ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ. ಇದರಿಂದ ಸಚ್ಚಿದಾನಂದ ಪರಾತ್ಪರ ಗುರು ದೇವರ ೨೦ ವರ್ಷಗಳ ಹಿಂದಿನ ನುಡಿಗಳು ಯಾವ ರೀತಿ ನಿಜವಾಗುತ್ತಿದೆ’ ಎಂದು ಗಮನಕ್ಕೆ ಬರುತ್ತದೆ ಮತ್ತು ಅವರ ದಾರ್ಶನಿಕತೆಯ ಅನುಭವ ಬರುತ್ತದೆ.
ಸಾಧಕರೇ ‘ಆಧ್ಯಾತ್ಮಿಕ ಉನ್ನತಿ ಯಾವಾಗ ಆಗುವುದು ?’, ಎಂಬ ಬಗ್ಗೆ ಕಾಳಜಿ ಮಾಡದೇ ಪರಾತ್ಪರ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ತಳಮಳದಿಂದ ಪ್ರಯತ್ನಿಸುತ್ತಿರಿ !’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೧೨.೨೦೨೨)
ಸಾಧಕರೆ, ‘ಗುರುಸೇವೆ ಮಾಡುವಾಗ ‘ಜವಾಬ್ದಾರಿ ಸಿಗಬೇಕು’, ಎಂದು ಅನಿಸುವುದು, ಇದು ಅಹಂನ ಲಕ್ಷಣವಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ತಮ್ಮಲ್ಲಿ ಸೇವಕಭಾವವನ್ನು ಅಂಕಿತಗೊಳಿಸಲು ಪ್ರಯತ್ನಿಸಿ !೧. ಈಶ್ವರನು ಜೀವಕ್ಕೆ ಯೋಗ್ಯ ಸಮಯದಲ್ಲಿ ಜವಾಬ್ದಾರಿಯನ್ನು ನೀಡಿ ಅದರ ಆಧ್ಯಾತ್ಮಿಕ ಉನ್ನತಿಯನ್ನು ಶೀಘ್ರಗತಿಯಲ್ಲಿ ಮಾಡಿಸಿಕೊಳ್ಳುತ್ತಾನೆ ಸಾಧಕರು ಮುಂದಾಳತ್ವವನ್ನು ವಹಿಸಿ ತಳಮಳದಿಂದ ಗುರುಸೇವೆ ಮಾಡಿದರೆ ಅವರಲ್ಲಿ ಸಮಷ್ಟಿ ಗುಣ ನಿರ್ಮಾಣವಾಗಲು ಸಹಾಯವಾಗುತ್ತದೆ. ಜೀವದಲ್ಲಿ ಜವಾಬ್ದಾರಿಯನ್ನು ವಹಿಸಲು ಆವಶ್ಯಕವಿರುವ ಗುಣ ನಿರ್ಮಾಣವಾದ ನಂತರ ಈಶ್ವರನು ಆ ಜೀವಕ್ಕೆ ಯೋಗ್ಯ ಸಮಯದಲ್ಲಿ ಜವಾಬ್ದಾರಿಯನ್ನು ನೀಡಿ ಅದರ ಮುಂದಿನ ಆಧ್ಯಾತ್ಮಿಕ ಉನ್ನತಿಯನ್ನು ಶೀಘ್ರಗತಿಯಲ್ಲಿ ಮಾಡಿಸಿಕೊಳ್ಳುತ್ತಾನೆ. ೨. ಸಾಧಕರ ಮನಸ್ಸಿನಲ್ಲಿ ಸೇವೆಯ ಜವಾಬ್ದಾರಿ ವಹಿಸುವ ವಿಚಾರ ಬರುತ್ತಿದ್ದರೆ ಅವರು ‘ನನ್ನ ಪ್ರಗತಿಗಾಗಿ ಏನು ಆವಶ್ಯಕವಿದೆಯೊ, ಅದನ್ನು ದೇವರು ಜವಾಬ್ದಾರ ಸಾಧಕರ ಮೂಲಕ ನನಗೆ ಕೊಡುತ್ತಿದ್ದಾರೆ’, ಎಂಬ ದೃಷ್ಟಿಕೋನವನ್ನಿಡಬೇಕು ! ‘ಮುಂದಾಳತ್ವ ವಹಿಸಿಕೊಂಡು ಗುರುಸೇವೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು’, ಇದು ಸಮಷ್ಟಿ ಗುಣವೃದ್ಧಿಯ ಲಕ್ಷಣವಾಗಿದೆ. ಕೆಲವು ಸಾಧಕರ ಮನಸ್ಸಿನಲ್ಲಿ ‘ನನಗೆ ಜವಾಬ್ದಾರಿಯ ಸೇವೆ ಸಿಗಬೇಕು ಹಾಗೂ ಯಾವುದೇ ಜವಾಬ್ದಾರಿಯ ಸೇವೆಯನ್ನು ಸಂಬಂಧಿತ ಸಾಧಕರಿಗಿಂತ ನಾನು ಯೋಗ್ಯ ರೀತಿಯಲ್ಲಿ ಮಾಡಬಲ್ಲೆನು’, ಎಂಬ ವಿಚಾರ ಬರುತ್ತದೆ. ಇದು ಅಹಂನ ವಿಚಾರವಾಗಿದ್ದು ಅದು ಸಾಧಕರ ಸಾಧನೆಯಲ್ಲಿ ಅಡಚಣೆಯನ್ನು ನಿರ್ಮಾಣ ಮಾಡುತ್ತದೆ. ಸಾಧನೆಯಲ್ಲಿ ಸ್ವೇಚ್ಛೆಗಿಂತ ಈಶ್ವರೇಚ್ಛೆಗೆ ಹೆಚ್ಚು ಮಹತ್ವ ಇದೆ. ‘ನನ್ನ ಪ್ರಗತಿಗಾಗಿ ಏನು ಆವಶ್ಯಕವಿದೆಯೊ, ಅದನ್ನು ದೇವರು ಜವಾಬ್ದಾರ ಸಾಧಕರ ಮೂಲಕ ನನಗೆ ಕೊಡುತ್ತಿದ್ದಾರೆ’, ಎನ್ನುವ ದೃಷ್ಟಿಕೋನವನ್ನಿಟ್ಟು ಈ ವಿಚಾರಗಳನ್ನು ಎದುರಿಸಬೇಕು. ಈ ವಿಚಾರಗಳ ತೀವ್ರತೆ ಹೆಚ್ಚು ಪ್ರಮಾಣದಲ್ಲಿದ್ದರೆ, ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಅದಕ್ಕೆ ಸ್ವಯಂಸೂಚನೆಯನ್ನು ನೀಡಬೇಕು. ೩. ಸಾಧಕರೇ, ಸ್ವೇಚ್ಛೆಯನ್ನು ತ್ಯಜಿಸಿ ಈಶ್ವರೇಚ್ಛೆಯಿಂದ ಗುರುಸೇವೆ ಮಾಡುವುದರ ಆನಂದವನ್ನು ಅನುಭವಿಸಿರಿ !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೫.೧೨.೨೦೨೨) |