ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಆಧ್ಯಾತ್ಮಿಕ ಉಪಾಯಗಳ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಿ !

(ಪೂ.) ಶ್ರೀ. ಸಂದೀಪ ಆಳಶಿ,

‘ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಆಧ್ಯಾತ್ಮಿಕ ಉಪಾಯಗಳಿಂದ ಬೇಗನೆ ಕಡಿಮೆಯಾಗುತ್ತವೆ; ಆದರೆ ಹೀಗಾಗಬಾರದೆಂದು ಕೆಟ್ಟ ಶಕ್ತಿಗಳು ಸಾಧಕರ ಆಧ್ಯಾತ್ಮಿಕ ಉಪಾಯಗಳಲ್ಲಿ ಅಡಚಣೆಗಳನ್ನು ತರಲು ಪ್ರಯತ್ನಿಸುತ್ತವೆ. ಬಹಳಷ್ಟು ಸಲ ಉಪಾಯಗಳು ಮನಃಪೂರ್ವಕವಾಗಿ ಆಗಲು ಸಾಧಕರಿಗೆ ಮನಸ್ಸಿನ ಸಂಘರ್ಷವನ್ನು ಮಾಡಿ ಪ್ರಯತ್ನಿಸಬೇಕಾಗುತ್ತದೆ. ಕೆಲವೊಮ್ಮೆ ಸಾಧಕರ ತೊಂದರೆಗಳು ಹೆಚ್ಚಾದರೆ ಅಥವಾ ಅವರ ಮನಸ್ಸಿನ ಶಕ್ತಿ ಕಡಿಮೆಬಿದ್ದರೆ, ಅವರಿಗೆ ಉಪಾಯ ಮಾಡಲು ಬೇಸರ ಬರುತ್ತದೆ. ಉಪಾಯಗಳ ಸಮಯದಲ್ಲಿ ಸಂತರ ಭಜನೆಗಳನ್ನು ಅಥವಾ ಸಾತ್ತ್ವಿಕ ನಾಮಜಪಗಳನ್ನು ಕೇಳದೇ ಸಾಮಾನ್ಯ ಗಾಯಕರು ಹಾಡಿದ ಭಕ್ತಿಗೀತೆಗಳನ್ನು ಕೇಳಬೇಕೆಂದು ಅನಿಸುವುದು, ಉಪಾಯಗಳಿಗಿಂತ ಸೇವೆಗಳಿಗೆ ಪ್ರಾಧಾನ್ಯತೆಯನ್ನು ನೀಡಬೇಕೆಂದು ಅನಿಸುವುದು ಇತ್ಯಾದಿ ಕಂಡು ಬರುತ್ತದೆ. ಸಾಧಕರ ಆಧ್ಯಾತ್ಮಿಕ ಉಪಾಯಗಳು ಪೂರ್ಣ ಅಥವಾ ಸರಿಯಾಗಿ ಆಗದಿದ್ದರೆ ಅವರು ನಕಾರಾತ್ಮಕ ಸ್ಥಿತಿಗೆ ಹೋಗುವುದು, ಇತರ ಸಾಧಕರ ಬಗ್ಗೆ ವಿಕಲ್ಪಗಳು ಬರುವುದು, ಸೇವೆಯಲ್ಲಿ ನಿರುತ್ಸಾಹ ಬರುವುದು, ಸಾಧನೆಯನ್ನು ಮಾಡುವುದೇ ಬೇಡ ಎಂದೆನಿಸುವುದು, ಮಾಯೆಯಲ್ಲಿ ಸುಖಪಡಬೇಕು ಎಂಬ ವಿಚಾರಗಳು ಹೆಚ್ಚಾಗುವುದು ಇತ್ಯಾದಿಗಳು ಕಂಡು ಬರುತ್ತವೆ.

ತೀವ್ರ ತೊಂದರೆಯಿರುವ ಸಾಧಕರ ಸಂದರ್ಭದಲ್ಲಿ ಮೇಲಿನಂತೆ ಘಟಿಸಬಾರದೆಂದು, ಅವರ ಜವಾಬ್ದಾರ ಸಾಧಕರು ಪ್ರತಿದಿನ ಒಂದು ಬಾರಿಯಾದರೂ ಅವರ ವರದಿಯನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಅವರು ಉಪಾಯಗಳನ್ನು ಪೂರ್ಣಗೊಳಿಸುತ್ತಾರೆಯೋ ಇಲ್ಲವೋ ? ಉಪಾಯಗಳನ್ನು ಮನಃಪೂರ್ವಕ ಮಾಡುತ್ತಾರೆಯೋ ಇಲ್ಲವೋ ? ಎಲ್ಲ ರೀತಿಯ ಉಪಾಯಗಳನ್ನು (ಉದಾ. ಆವರಣ ತೆಗೆಯುವುದು, ಅತ್ತರ-ಕರ್ಪೂರದ ಉಪಾಯ ಮಾಡುವುದು ಇತ್ಯಾದಿ) ಮಾಡುತ್ತಾರೆಯೋ, ಇಲ್ಲವೋ ? ಅವರ ತೊಂದರೆ ಕಡಿಮೆಯಾಗುತ್ತಿದೆಯೋ ಇಲ್ಲವೋ ? ಇತ್ಯಾದಿಗಳ ಬಗ್ಗೆ ವರದಿಯನ್ನು ತೆಗೆದುಕೊಳ್ಳಬೇಕು. ಸಾಧಕರು ಸರಿಯಾಗಿ ಉಪಾಯ ಮಾಡಿದ ನಂತರವೂ ಅವರ ತೊಂದರೆಗಳು ಕಡಿಮೆಯಾಗದಿದ್ದರೆ ಅವರಿಗೆ ಮುಂದುಮುಂದಿನ ಹಂತದ ಉಪಾಯವನ್ನು ಸ್ವತಃ ಹೇಳಬೇಕು ಅಥವಾ ಈ ಬಗ್ಗೆ ಹೆಚ್ಚು ತಿಳಿದಿರುವ ಅಥವಾ ಸಂತರಿಗೆ ಕೇಳಿಕೊಳ್ಳಬೇಕು.

ಬಹಳಷ್ಟು ಬಾರಿ ತೊಂದರೆಯಿರುವ ಸಾಧಕರಿಗೆ ತೊಂದರೆಗಳಿಂದಾಗಿ ತಮ್ಮ ಉಪಾಯಗಳ ಗಾಂಭೀರ್ಯ ಉಳಿಯುವುದಿಲ್ಲ. ಇಂತಹವರಿಗೆ ಸಹಾಯ ಮಾಡುವುದು ಜವಾಬ್ದಾರ ಸಾಧಕರ ಸಮಷ್ಟಿ ಸಾಧನೆಯೇ ಆಗಿದೆ. ಇದರೊಂದಿಗೆ ತೊಂದರೆ ಇರುವ ಸಾಧಕರು ತಮ್ಮ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡುವುದೂ ಅವರ ಸಾಧನೆಯೇ ಆಗಿದೆ.

– (ಪೂ.) ಸಂದೀಪ ಆಳಶಿ (೧೧.೧೧.೨೦೨೨)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ.