ವಿವಾದಿತ ಪಾಕ-ಚೀನಾ ಆರ್ಥಿಕ ಹೆದ್ದಾರಿ ಯೋಜನೆಗೆ ಪಾಕಿಸ್ತಾನದಲ್ಲಿ ಹಿಂಸಾತ್ಮಕ ವಿರೋಧ !

ಇಸ್ಲಾಮಾಬಾದ – ಬಲುಚಿಸ್ತಾನ ಪ್ರಾಂತ್ಯದಲ್ಲಿನ ಗ್ವಾದರನಲ್ಲಿ ವಿವದಿತ ಪಾಕ-ಚೀನಾ ಆರ್ಥಿಕ ಹೆದ್ದಾರಿ ಯೋಜನೆಯ ವಿರೋಧಕ್ಕೆ ಹಿಂಸಾತ್ಮಕ ತಿರುವು ದೊರೆತಿದೆ. ಈ ಯೋಜನೆಯ ವಿರುದ್ಧ ಗ್ವಾದರನ ನಾಗರೀಕರು ದೊಡ್ಡ ಪ್ರಮಾಣದಲ್ಲಿ ರಸ್ತೆಗಿಳಿದಿದ್ದಾರೆ. ಈ ಆಂದೋಲನದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಲ್ಲಿನ ಪರಿಸ್ಥಿತಿಯು ಪಾಕಿಸ್ತಾನದ ನಿಯಂತ್ರಣವನ್ನು ಮೀರುತ್ತಿದೆ. ಆದ್ದರಿಂದ ಪಾಕಿಸ್ತಾನವು ಇಲ್ಲಿ ಇಂಟರನೆಟ್‌ಅನ್ನು ತಡೆದು ಗುಂಪುಗೂಡುವುದರ ಮೇಲೆ ನಿಷೇಧ ಹೇರಿದೆ. ಆದರೂ ಈ ನಿರ್ಬಂಧವನ್ನು ತೊಡೆದು ನಾಗರೀಕರ ಆಂದೋಲನವು ಮುಂದುವರಿದಿದೆ. ಈ ವಿರೋಧದಿಂದಾಗಿ ಚೀನಾವು ಪಾಕಿಸ್ತಾನದ ಮೇಲೆ ಅಸಮಧಾನಗೊಂಡಿದೆ. ‘ಹಕ ದೊ ತಹರೀಕ’ ಈ ಸಂಘಟನೆಯು ಆಂದೋಲನದ ನೇತೃತ್ವವನ್ನು ವಹಿಸುತ್ತಿದೆ. ಆದ್ದರಿಂದ ಚೀನಾವು ಮುಂದಾಳತ್ವ ವಹಿಸಿ ‘ಹಕ ದೊ ತಹರೀಕ’ನ ಅಧ್ಯಕ್ಷ ರಹಮಾನನೊಂದಿಗೆ ಇತರ ಸ್ಥಳೀಯ ನೇತಾರರೊಂದಿಗೆ ಮಾತುಕತೆಯನ್ನು ಆರಂಭಿಸಿದೆ. ಆದರೂ ಆಂದೋಲನಕರರು ಕೇಳುವ ಮನಸ್ಥಿತಿಯಲ್ಲಿ ಇಲ್ಲದಿರುವುದರಿಂದ ಚರ್ಚೆಯ ದ್ವಾರಗಳು ಮುಚ್ಚುವ ಸ್ಥಿತಿಯಲ್ಲಿವೆ.

೫ ದಿನಗಳಲ್ಲಿ ೧೦೦ಕ್ಕೂ ಹೆಚ್ಚಿನ ಆಂದೋಲನಕಾರರ ಬಂಧನ !

ಈ ಪ್ರಕರಣದಲ್ಲಿ ಪಾಕಿಸ್ತಾನವು ಕಳೆದ ೫ ದಿನಗಳಲ್ಲಿ ಗ್ವಾದರ, ಪಾಸನೀ, ತುರಬತ, ಮಕರಾನ ಸಹಿತ ಇತರ ಭಾಗಗಳಿಂದ ೧೦೦ಕ್ಕೂ ಹೆಚ್ಚಿನ ಆಂದೋಲನಕಾರರನ್ನು ಬಂಧಿಸಿದೆ. ಇದರಲ್ಲಿ ಮಹಿಳೆಯರ ಗಮನಾರ್ಹ ಸಹಭಾಗವಿದೆ.

ಇದು ನಮ್ಮ ಅಧಿಕಾರಗಳ ಯುದ್ಧವಾಗಿರುವುದರಿಂದ ನಮ್ಮ ವಿರೋಧವು ಮುಂದುವರಿಯುವುದು ! – ಹಕ ದೊ ತಹರೀಕ

‘ಹಕ ದೊ ತಹರೀಕ’ ಸಂಘಟನೆಯ ವತಿಯಿಂದ ನಡೆಯುತ್ತಿರುವ ಆಂದೋಲನದ ನೇತೃತ್ವ ವಹಿಸಿದ ರಹಮಾನರವರು ಒಂದು ವೃತ್ತಪತ್ರಿಕೆಗೆ ‘ಈ ಸಂಘರ್ಷವು ನಮ್ಮ ಗ್ವಾದರನ ಜನರ ಹಕ್ಕುಗಳ ಯುದ್ಧವಾಗಿದೆ. ಆದ್ದರಿಂದ ನಮ್ಮ ವಿರೋಧವು ಮುಂದಿವರಿಯುವುದು. ‘ಪಾಕ-ಚೀನಾ ಆರ್ಥಿಕ ಹೆದ್ದಾರಿ ಯೋಜನೆಯು ಚೀನಾದ ಹಿತಕ್ಕಾಗಿ ಇದೆ. ಚೀನಾದ ಹಸ್ತಕ್ಷೇಪದಿಂದ ನಮ್ಮ ಜೀವನದ ಮೇಲೆ ಪರಿಣಾಮವಾಗಬಹುದು. ಇದನ್ನು ನಾವು ಸಹಿಸುವುದಿಲ್ಲ.’ ಎಂದು ಹೇಳಿದ್ದಾರೆ.