ಭಾರತವನ್ನು ಲೂಟಿಗೈಯ್ಯುವರು ಭಾರತಕ್ಕೆ ಬುದ್ಧಿ ಹೇಳಬಾರದು ! – ಜರ್ಮನ್ ಲೇಖಕಿ ಮಾರಿಯಾ ವರ್ಥ

ಮಾರಿಯಾ ವರ್ಥ್

ನವದೆಹಲಿ – ಭಾರತವನ್ನು ಲೂಟಿಗೈಯ್ಯುವ ಬ್ರಿಟಿಷರಿಗೆ ಭಾರತಕ್ಕೆ ಬುದ್ಧಿ ಕಲಿಸುವ ಧೈರ್ಯ ಮಾಡಬಾರದು. ಅದು ಅತ್ಯಂತ ಖೇದಕರ ಸಂಗತಿಯಾಗಿದೆ, ಎಂದು ಪ್ರಸಿದ್ಧ ಜರ್ಮನ ಲೇಖಕಿ ಮತ್ತು ಹಿಂದೂ ಧರ್ಮದ ಆಳವಾದ ಅಧ್ಯಯನ ಮಾಡಿರುವ ಮಾರಿಯಾ ವರ್ಥ್ ಇವರು ಟ್ವೀಟ್ ಮೂಲಕ ಹೇಳಿದ್ದಾರೆ. ಟ್ವೀಟ್ ಜೊತೆ ಒಂದು ಪೂರ್ಣ ಅಧ್ಯಯನ ಮಾಡಿರುವ ವಿಡಿಯೋ ಕೂಡ ಸೇರಿಸಿದ್ದಾರೆ. ಈ ವಿಡಿಯೋದಲ್ಲಿ, ೨೦ ನೇ ಶತಮಾನದ ಕೊನೆಯವರೆಗೆ ಭಾರತದಲ್ಲಿನ ಹಿಂದುಳಿದವರಿಗೆ ಹಿಂದೂ ಧರ್ಮ ಕಾರಣ ಎಂದು ಬೊಬ್ಬೆ ಹಾಕಲಾಗುತ್ತಿತ್ತು; ಆದರೆ ಪ್ರಾ. ಆಗಸ್ ಮಾಡಿಸನ್ ಇವರ ಅಧ್ಯಕ್ಷತೆಯಲ್ಲಿ ೩೬ ಶ್ರೀಮಂತ ದೇಶಗಳ `ಆರ್ಥಿಕ ವಿಕಾಸ ಮತ್ತು ಸಹಕಾರಿ ಸಂಘಟನೆಗಳಿಂದ ಒಂದು ವರದಿ ಪ್ರಸಿದ್ಧಿ ಮಾಡಲಾಯಿತು. ಇದರಲ್ಲಿ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಕಳೆದ ೨ ಸಾವಿರ ವರ್ಷದ ಅಧ್ಯಯನ ಮಾಡಲಾಗಿದೆ. ಅದರ ಪ್ರಕಾರ ವಿಶ್ವ ಮಟ್ಟದಲ್ಲಿ ಕ್ರೈಸ್ತ ಪೂರ್ವ ೧ ರಿಂದ ೧೦೦೦ ಈ ೧ ಸಾವಿರ ವರ್ಷಗಳಲ್ಲಿ ಭಾರತದ ಉತ್ಪಾದನೆಯು ಇತರ ಎಲ್ಲಾ ದೇಶದ ಆಂತರಿಕ ಉತ್ಪಾದನೆಗಿಂದ ನಿವ್ವಳ ಶೇಕಡ ೩೪.೮ ರಷ್ಟು ಆಗಿತ್ತು. ಹಾಗೂ ೧೭೫೭ ರಲ್ಲಿ ಅಂದರೆ ಭಾರತದ ಮೇಲೆ ಬ್ರಿಟನ್ ದಾಳಿ ಮಾಡುವ ಮೊದಲು ಈ ಪ್ರಮಾಣ ಶೇಕಡ ೨೪ ಕ್ಕಿಂತಲೂ ಹೆಚ್ಚಾಗಿತ್ತು. ಆದರೆ ಬ್ರಿಟನನಿಂದ ಮಾತ್ರ ಭಾರತದ ಮೇಲೆ ದಾಳಿ ಮಾಡಿದ ನಂತರ ಹಾಗೂ ವಿವಿಧ ಬರಗಾಲದಲ್ಲಿ ಭಾರತದ ಒಂದನೇ ಮೂರರಷ್ಟು ಜನರು ಸಾವನ್ನಪ್ಪಿದರೂ ಕೂಡ ಬ್ರಿಟನ್ ಹಣ ಅನೇಕ ಪಟ್ಟಿನಲ್ಲಿ ಹೆಚ್ಚುತ್ತಲೇ ಹೋಯಿತು. ೧೯೦೦ ರಲ್ಲಿ ಹೋಗಿ ಬರುತ್ತಾ ಭಾರತದ ಉತ್ಪಾದನೆ ಇದು ವಿಶ್ವ ಮಟ್ಟದಲ್ಲಿ ಕೇವಲ ಶೇಕಡ ೧.೭ ರಷ್ಟು ಉಳಿಯಿತು, ಹಾಗೂ ೧೭೫೭ ರಲ್ಲಿ ವಿಶ್ವದ ಶೇಕಡವಾರು ಕೇವಲ ಶೇಕಡ ೨.೧ ರಷ್ಟು ಇರುವ ಬ್ರಿಟನಿನ ಉತ್ಪಾದನೆ ಇದು ೧೯೦೦ ರಲ್ಲಿ ಶೇಕಡಾ ೧೮.೫ ಕ್ಕೆ ತಲುಪಿತು. ಇದರಿಂದ ಅದು ಭಾರತವನ್ನು ಎಷ್ಟು ಪ್ರಮಾಣದಲ್ಲಿ ಲೂಟಿ ಮಾಡಿದ್ದಾರೆ ಇದು ಕಾಣುತ್ತದೆ. ಸಿಂಧು ಸಂಸ್ಕೃತಿಯ ಕಾಲದಿಂದಲೂ ಉದ್ಯೋಗಿಕ ಕೆಲಸಗಳ ಆಧಾರಿತ ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಬ್ರಿಟಾನ ದಾಳಿ ಮಾಡಿದ ನಂತರ ಕೃಷಿಯನ್ನು ಅವಲಂಬಿಸಿದರು. ಭಾರತ ಹಸಿವಿನಿಂದ ಕಂಗಾಲ ಆಗುತ್ತಿತ್ತು. (ಭಾರತದ ನೂತನ ಶೈಕ್ಷಣಿಕ ನೀತಿಯ ಅಡಿಯಲ್ಲಿ ಇದು ವಾಸ್ತವದಲ್ಲಿ ಕಲಿಸಲಾಗುವುದು ಮತ್ತು `ಪಾಶ್ಚಾತ್ಯ ದೇಶ ಇದು ಭಾರತದ ಶತ್ರು ಹೇಗೆ ಆಗಿದೆ’, ಇದು ಉದಾಹರಣೆ ಸಹಿತ ಸ್ಪಷ್ಟ ಮಾಡಲಾಗುವುದೆಂದು ಅಪೇಕ್ಷೆ ! – ಸಂಪಾದಕರು)

ಸಂಪಾದಕೀಯ ನಿಲುವು

ಓರ್ವ ಜರ್ಮನ್ ಲೇಖಕಿಯ ಗಮನಕ್ಕೆ ಬರುತ್ತದೆ ಅದು ಭಾರತದಲ್ಲಿನ ಒಬ್ಬ ಪತ್ರಕರ್ತರಿಗಾದರೂ, ಲೇಖಕರಿಗೆ, ಅಧ್ಯಯನಕಾರರಿಗೆ ಹೇಗೆ ಗಮನಕ್ಕೆ ಬರುವುದಿಲ್ಲ? ಇವರೆಲ್ಲರೂ ಕೇವಲ `ಪ್ರಶಸ್ತಿ ಹಿಂದಿರುಗಿಸುವ’ ನಾಟಕವಾಡಿ ಭಾರತವನ್ನು ಆಧಾರಸ್ತಂಭವನ್ನು ಮುರಿಯುವ ಕಾರ್ಯ ಮಾಡುತ್ತಿರುತ್ತಾರೆ. ಇಂತಹವರಿಗೆ ಈಗ ಉತ್ತರ ಕೇಳುವ ಅವಶ್ಯಕತೆ ಬಂದಿದೆ !