ವಿಜಯಪುರದಲ್ಲಿ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ
ವಿಜಯಪುರ : ಹಿಂದೂ ಧರ್ಮದ ಮೇಲೆ ಬರುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕೆಂದಾದರೆ ಸಂಘಟನೆಯನ್ನು ಮಾಡುವುದು ಅವಶ್ಯಕವಾಗಿದೆ. ಅಲ್ಲದೇ ಸಾಧನೆಯೆಂದು ಧರ್ಮದ ಕಾರ್ಯ ಮಾಡಬೇಕಿದೆ, ಎಂದು ಆಂದೋಲದ ಪೂ. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ. ಅವರು ಡಿಸೆಂಬರ್ ೨೪ ರಂದು ನಗರದ ಮಾಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಹಿಂದೂ ರಾಷ್ಟ್ರದ ಆವಶ್ಯಕತೆಯೊಂದಿಗೆ ಆಧ್ಯಾತ್ಮಿಕ ಸಾಧನೆಯ ಮಹತ್ವದ ಬಗ್ಗೆ ಮಾರ್ಗದರ್ಶನ ಮಾಡುತ್ತಾ, “ಕೇವಲ ಶಾರೀರಿಕ ಮತ್ತು ಮನೋಬಲ ಸಾಕಾಗುವುದಿಲ್ಲ ಅದರೊಂದಿಗೆ ಆಧ್ಯಾತ್ಮಿಕ ಸಾಧನೆ ಬೇಕಾಗುತ್ತದೆ, ಎಂದು ತಿಳಿಸಿದರು
ಈ ವೇಳೆ ಮಾತನಾಡಿದ ಶ್ರೀ. ರಾಜೇಂದ್ರಕುಮಾರ ಶಿವಾಲಿಯವರು, ‘ಒಂದು ಕಡೆ ಲವ್ ಜಿಹಾದ್ ಮೂಲಕ ಮತಾಂತರ ಮಾಡುತ್ತಿದ್ದಾರೆ ಇನ್ನೊಂದೆಡೆ ಹಣ, ಉದ್ಯೋಗ ಮತ್ತು ಇತರ ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಿದ್ದಾರೆ’, ಎಂದು ಹೇಳಿದರು.
ಗಮನಾರ್ಹ ಅಂಶಗಳು
೧. ೩೫ ಗ್ರಾಮಗಳಿಂದ ಹಿಂದುನಿಷ್ಠರು ಅಧಿವೇಶನಕ್ಕೆ ಬಂದಿದ್ದರು.
೨. ಓರ್ವ ವಕೀಲರು ತುರ್ತು ಕೆಲಸ ಇದೆಯೆಂದು ಅಧಿವೇಶನದ ಸ್ಥಳದಿಂದ ಹೊರಗೆ ಹೋದರು. ಆದರೆ ಶ್ರೀ. ಗುರುಪ್ರಸಾದ ಗೌಡರವರ ಪ್ರವಚನವನ್ನು ಕೇಳಿ ಮರಳಿ ಬಂದು ಕಾರ್ಯಕ್ರಮದ ಕೊನೆಯವರೆಗೂ ಇದ್ದು ಹೋದರು.
೩. ಮೂವರು ಹಿಂದುತ್ವವಾದಿಗಳು ನಾವು ಸೇವೆ ಮಾಡುತ್ತೇವೆಂದು ಭೋಜನದ ತಟ್ಟೆಗಳನ್ನು ತೊಳೆಯುವ ಸೇವೆಯಲ್ಲಿ ಸಹಭಾಗಿಯಾದರು.
ಹಿಂದೂ ಜನಜಾಗೃತಿ ಸಮಿತಿಯಿಂದ ರಿಪ್ಪನ್‌ಪೇಟೆಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ !ಪ್ರತಿಯೊಬ್ಬ ಹಿಂದೂವೂ ಧರ್ಮಚರಣೆಯಿಂದಲೇ ಧರ್ಮರಕ್ಷಣೆಯಾಗಲಿದೆ ! – ಡಾ. ರೇವಣ್ಣಸಿದ್ದೇಶ್ವರಶಿವಮೊಗ್ಗ – ಕಳೆದ ೩ ಪೀಳಿಗೆಗಳಿಂದ ಹಿಂದೂಗಳಿಗೆ ಧರ್ಮದ ಜ್ಞಾನ ಸಿಗದಿದ್ದರಿಂದ ನಮಗೆ ನಮ್ಮ ಧರ್ಮದ ಮೇಲಿನ ಅಭಿಮಾನ ಕಡಿಮೆಯಾಗಿದೆ. ಆದ್ದರಿಂದ ಹಿಂದೂಗಳು ನಮ್ಮ ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತಗಳನ್ನು ಅಧ್ಯಯನ ಮಾಡಬೇಕು ಮತ್ತು ಅದರಂತೆ ಆಚರಣೆ ಮಾಡಬೇಕು. ಇದರಿಂದಲೇ ನಮ್ಮ ಧರ್ಮದ ರಕ್ಷಣೆ ಆಗಲಿದೆ, ಎಂದು ಡಾ. ರೇವಣಸಿದ್ದೇಶ್ವರ ಇವರು ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಇಲ್ಲಿನ ರಿಪ್ಪನ್‌ಪೇಟೆಯ ಶ್ರೀ ರಾಮಮಂದಿರದಲ್ಲಿ ಡಿಸೆಂಬರ್ ೧೮ ರಂದು ಆಯೋಜಿಸಲಾದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯ ರೇವಣಕರ ಹಾಗೂ ಸನಾತನ ಸಂಸ್ಥೆಯ ಸೌ. ಸೌಮ್ಯ ಮೊಗೇರ ಇವರು ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆಯ ಮತ್ತು ಸುತ್ತಮುತ್ತಲಿನ ಧರ್ಮಪ್ರೇಮಿ ಗ್ರಾಮಸ್ಥರು ಉಪಸ್ಥಿತರಿದ್ದರು. |