Swami Sadananda Maharaj on Hindu Culture : ಸ್ವರಕ್ಷಣೆಯ ತರಬೇತಿಯನ್ನು ಪಡೆಯುವ ಜೊತೆಗೆ ಹಿಂದೂಗಳು ಪೂಜೆಯನ್ನೂ(ಆರಾಧನೆಯನ್ನೂ) ಮಾಡಬೇಕು! – ಸ್ವಾಮಿ ಸಾಧನಾನಂದ ಮಹಾರಾಜ, ಮುಖ್ಯ ಸಂಚಾಲಕರು, ಭಾರತ ಸೇವಾಶ್ರಮ ಸಂಘ (ಪೂವೋತ್ತರ ಕ್ಷೇತ್ರ)

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೇ ದಿನದ ಮೊದಲ ಸತ್ರ : ವಿವಿಧ ರಾಜ್ಯಗಳಲ್ಲಿ ಹಿಂದೂಗಳ ದುಸ್ಥಿತಿ

ಸ್ವಾಮಿ ಸಾಧನಾನಂದ ಮಹಾರಾಜ

ರಾಮನಾಥ ಸಭಾಂಗಣ – ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಹಿಂದೂ ಧರ್ಮ ದುರ್ಬಲರಿಗಾಗಿ ಇಲ್ಲ. ಹಿಂದೂಗಳು ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀ ಕೃಷ್ಣ ಇವರಂತೆ ಅನ್ಯಾಯದ ವಿರುದ್ಧ ಹೋರಾಡಬೇಕು. ಅದಕ್ಕಾಗಿ ಸ್ವರಕ್ಷಣೆಯ ತರಬೇತಿ ಪಡೆಯುವ ಜೊತೆಗೆ ಪೂಜೆಯನ್ನೂ ಮಾಡಬೇಕು, ಎಂಬ ಮಾರ್ಗದರ್ಶನವನ್ನು ಭಾರತ ಸೇವಾಶ್ರಮ ಸಂಘ (ಪೂವೋತ್ತರ ಕ್ಷೇತ್ರ)ದ ಮುಖ್ಯ ಸಂಯೋಜಕರಾದ ಸ್ವಾಮಿ ಸಾಧನಾನಂದ ಮಹಾರಾಜ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನದಂದು ಮಾಡಿದರು.

ಸ್ವಾಮಿ ಸಾಧನಾನಂದ ಮಹಾರಾಜ ಇವರು ಮುಂದೆ ಮಾತನಾಡುತ್ತಾ,

೧. ಹಿಂದೂ ಧರ್ಮಜಾಗೃತಿಯು ಮಾನವಿ ಪುನರುತ್ಥಾನದ ಕಾರ್ಯವಾಗಿದೆ. ಆದ್ದರಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಹೆಚ್ಚೆಚ್ಚು ಪ್ರಸಾರ ಮಾಡಬೇಕು. ಹಿಂದೂ ಧರ್ಮ ಉಳಿದರೆ, ಮಾತ್ರ ನಾವು ಸುರಕ್ಷಿತವಾಗಿರುತ್ತೇವೆ.

೨. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ; ಆದರೆ ಹಿಂದೂ ಧರ್ಮವನ್ನು ಗೌರವಿಸದವರಿಗೆ ಕಾನೂನಿನ ಮೂಲಕ ಶಿಕ್ಷೆಯನ್ನು ವಿಧಿಸಲೇ ಬೇಕಾಗುತ್ತದೆ. ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯವಾಗಿದೆ.

೩. ಪ್ರಸ್ತುತ ಹಿಂದೂಗಳು ಸಂಘಟಿತರಾಗಿಲ್ಲ. ಹಾಗಾಗಿ ಅವರು ಅಸುರಕ್ಷಿತರಾಗಿದ್ದಾರೆ. ಹಿಂದೂಗಳು ಸಂಘಟಿತರಾದಾಗ ಮಾತ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತದೆ ಮತ್ತು ಹಿಂದೂಗಳ ದುರ್ಗತಿ ನಿಲ್ಲುತ್ತದೆ.

೪. ಭಾರತ ಸೇವಾಶ್ರಮ ಸಂಘದ ಸಂಸ್ಥಾಪಕರಾದ ಸ್ವಾಮಿ ಪ್ರಣವಾನಂದ ಇವರು, ‘ಹಿಂದೂಗಳ ಎಲ್ಲ ದೇವತೆಗಳ ಕೈಗಳಲ್ಲಿ ಆಯುಧಗಳಿವೆ. ಆದುದರಿಂದ ಹಿಂದೂಗಳೂ ದುರ್ಬಲರಾಗದೇ ಬಲಿಷ್ಠರಾಗಬೇಕು’, ಎಂದು ಹೇಳಿದ್ದರು. ಇದನ್ನು ಅರಿತುಕೊಂಡು ಭಾರತ ಸೇವಾಶ್ರಮ ಸಂಘದ ವತಿಯಿಂದ ಹಿಂದೂಗಳಿಗೆ ಸ್ವರಕ್ಷಣಾ ಪ್ರಶಿಕ್ಷಣ ನೀಡಲಾಗುತ್ತದೆ.

೫. ಹಿಂದೂಗಳು ಲವ್ ಜಿಹಾದ್, ಮತಾಂತರದಂತಹ ಹಲವಾರು ದಾಳಿಗಳನ್ನು ಎದುರಿಸುತ್ತಿದ್ದಾರೆ. ಸೇವಾಶ್ರಮ ಸಂಘವು ಇದರ ವಿರುದ್ಧ ನ್ಯಾಯಸಮ್ಮತವಾಗಿ ಹೋರಾಡುತ್ತದೆ. ಸೇವಾಶ್ರಮ ಸಂಘವು ಮತಾಂತರವನ್ನು ನಿಲ್ಲಿಸುವುದರ ಜೊತೆಗೆ ಮತಾಂತರಿತ ಜನರನ್ನು ಹಿಂದೂ ಧರ್ಮಕ್ಕೆ ಘರವಾಪಸಿ ಮಾಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಬಡವರಿಗಾಗಿ ಶಾಲೆಗಳು, ಆಸ್ಪತ್ರೆಗಳು, ವಸತಿಗೃಹಗಳನ್ನು ನಡೆಸುವುದು, ಹೀಗೆ ವಿವಿಧ ಕೆಲಸಗಳನ್ನು ಮಾಡುತ್ತದೆ, ಎಂದು ಹೇಳಿದರು.