Call to Awake & Unite Saints : ಸಾಧು-ಸಂತರು ಜಾಗೃತರಾದರೆ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ! – ಪೂ. ಸಂತ ಶ್ರೀರಾಮ ಜ್ಞಾನಿದಾಸಜಿ ಮಹಾತ್ಯಾಗಿ, ಅಧ್ಯಕ್ಷರು, ಮಹಾತ್ಯಾಗಿ ಸೇವಾ ಸಂಸ್ಥಾನ, ತಿರಖೆಡಿ ಆಶ್ರಮ, ಗೊಂದಿಯಾ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ವಿಶೇಷ : ಹಿಂದೂ ಸಂಸ್ಕೃತಿ ಮತ್ತು ಹಿಂದೂ ಪ್ರತೀಕಗಳನ್ನು ಕಾಪಾಡುವ ಕಾರ್ಯ

ನಮ್ಮ ದೇಶದಲ್ಲಿ ಸಾಧು-ಸಂತರ ಸಾಧನೆಯ ಪದ್ದತಿಯು ಯಾವುದೇ ಇದ್ದರೂ ಅವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಒಂದಾಗಲೇಬೇಕು. ಈ ದೇಶದ ಸಾಧು-ಸಂತರು ಜಾಗೃತಗೊಂಡರೆ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ದೇಶದಾದ್ಯಂತ ಆಖಾಡಗಳು ಮತ್ತು ಖಾಲ್ಸಾಗಳು ಇವರನ್ನು ಸೇರಿಸಿಕೊಳ್ಳಬೇಕು. ಪ್ರಯಾಗರಾಜದಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಪ್ರತಿ ಆಖಾಡ ಮತ್ತು ಖಾಲ್ಸಾದಲ್ಲಿ ‘ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಪರವಾಗಿದ್ದೇವೆ’, ಎಂಬ ಫಲಕಗಳನ್ನು ಹಾಕಲಾಗಬೇಕು. ಇದರೊಂದಿಗೆ ದೇಶದಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು. ಪ್ರತಿಯೊಂದು ದೇವಸ್ಥಾನದಲ್ಲಿ ‘ಸಾತ್ವಿಕ ಉಡುಗೆ ಧರಿಸಿಯೇ ದೇವಸ್ಥಾನ ಪ್ರವೇಶಿಸಬೇಕು’, ಎಂಬ ಫಲಕ ಹಾಕಬೇಕು.