ಗಾಯನ, ವಾದನ, ನೃತ್ಯ ಕ್ಷೇತ್ರದ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಸಂಶೋಧನಾಕಾರ್ಯದ ಅಂತರ್ಗತ ಅನೇಕ ಕಲಾವಿದರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಆಗ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದ ಲಾಭವಾಯಿತು. ‘ಸಂಗೀತದಿಂದ ಸಾಧನೆ ಮಾಡಲು ಇಚ್ಛಿಸುವವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಿಂದ ಲಾಭವಾಗಬೇಕು’ ಎಂಬ ಉದ್ದೇಶದಿಂದ ಆ ಅಂಶಗಳನ್ನು ಕೊಡಲಾಗಿದೆ.

(ಭಾಗ ೩)

ಎಡಗಡೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಅವರ ಪಕ್ಕದಲ್ಲಿ ಶಾಸ್ತ್ರೀಯ ಗಾಯಕ ಪಂಡಿತ ನಿನಾದ ಬಾಕರೆ ೭. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಾವಿದರಿಗೆ ‘ಅವರ ಸಾಧನೆಯಾಗುತ್ತಿದೆ’, ಎಂಬುದರ ಅರಿವು ಮಾಡಿಕೊಡುವುದು
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/123203.html

೭ ಅ. ‘ತಬಲಾವಾದಕ ಗುರುಗಳ ಮಾರ್ಗದರ್ಶನದಲ್ಲಿ ಕಲಿಯುತ್ತಿರುವಾಗ ಭಾವದ ಸ್ತರದಲ್ಲಿ ಪ್ರಯತ್ನಿಸಿದ್ದರಿಂದ ತಬಲಾ ಕಲಾವಿದನಲ್ಲಿ ಶಿಷ್ಯನ ಗುಣಗಳು ಬಂದಿವೆ’, ಎಂದು ತಬಲಾ ವಾದಕನಿಗೆ ಹೇಳುವುದು : ‘ಓರ್ವ ಕಲಾವಿದರು ತಮ್ಮ ತಬಲಾವಾದಕ ಗುರುಗಳಿಂದ ಶಿಷ್ಯಭಾವದಿಂದ ತಬಲಾವಾದನ ಕಲಿತಿರುವುದರಿಂದ ಅವರಲ್ಲಿ ಶಿಷ್ಯನ ಗುಣಗಳು ಬಂದಿವೆ ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದರು. ”ಆ ತಬಲಾವಾದಕರ ಸಾಧನೆ ಅಂತರ್ಮನಸ್ಸಿನಲ್ಲಿ ನಡೆಯುತ್ತಿದೆ” ಎಂದು ಹೇಳಿದರು.

೭ ಆ. ಓರ್ವ ಕಲಾವಿದರು ‘ಕಲೆಯನ್ನು ಸಾಧನೆಯೆಂದು ನೋಡಿದ್ದರಿಂದ ಅವರು ಮಾಯೆಯ ಆಸಕ್ತಿ ಕಡಿಮೆಯಾಗುವ ಹಂತವನ್ನು ತಲಪಿದರು’, ಎಂದು ಹೇಳುವುದು : ಓರ್ವ ತಬಲಾವಾದಕರು, ”ನನ್ನ ಮನಸ್ಸಿನಲ್ಲಿ ಅಖಂಡ ತಬಲಾವಾದನದ ವಿಚಾರಗಳೇ ಇರುತ್ತವೆ. (ತಬಲಾದ ನುಡಿ, ಬಂದಿಶಿ ಇತ್ಯಾದಿ) (ಟಿಪ್ಪಣಿ) ಅದರಿಂದ ನನಗೆ ಮಾಯೆಯಲ್ಲಿನ ವಿಷಯಗಳು ಮರೆತು ಹೋಗುತ್ತವೆ” ಎಂದು ಹೇಳಿದರು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ”ನೀವು ಕಲೆಯನ್ನು ಸಾಧನೆಯೆಂದು ನೋಡುವುದರಿಂದ ‘ಮಾಯೆಯಲ್ಲಿನ ಆಸಕ್ತಿ ಕಡಿಮೆಯಾಗುವುದು ಎಂಬ ಹಂತವನ್ನು ತಲುಪಿದ್ದೀರಿ” ಎಂದು ಹೇಳಿದರು.

ಟಿಪ್ಪಣಿ – ೧. ತಬಲಾದ ನುಡಿ : ತಬಲಾದಲ್ಲಿ ಬಾರಿಸುವ ನುಡಿ ಉದಾ. ಧಾ, ತಿರಕೀಟ, ಧೀಂ ಇತ್ಯಾದಿ

೨. ಬಂದಿಶ : ನಿಸರ್ಗದಲ್ಲಿನ ವಿವಿಧ ಘಟನೆಗಳ ವೇಗದ ಅನುಭೂತಿಯನ್ನು ನೀಡುವ ತಬಲಾದ ಭಾಷೆಯಲ್ಲಿನ ಕಾವ್ಯಮಯ ರಚನೆ.

(‘ಭಾರತೀಯ ಕಲೆಗಳು ಈಶ್ವರನಿಂದ ಉಗಮವಾಗಿರುವುದರಿಂದ ಅವುಗಳಲ್ಲಿ ಮೂಲತಃ ಸಾತ್ತ್ವಿಕತೆ ಇದೆ. ಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುವಾಗ ಆರಂಭದಲ್ಲಿ ಕಲೆಗೆ ಸಮರ್ಪಿಸಿ ಕೊಳ್ಳುವುದು, ಕಲೆಯದ್ದೇ ಧ್ಯಾಸವಿರುವುದು, ಇದು ನಾಮಜಪ ಮಾಡಿ ಏಕಾಗ್ರತೆ, ಅನುಸಂಧಾನ ಸಾಧಿಸುವ ಪ್ರಕ್ರಿಯೆಯಂತೆಯೇ ಕಾರ್ಯ ಮಾಡುತ್ತದೆ. ಆದ್ದರಿಂದ ಆ ಕಲಾವಿದರಲ್ಲಿ ಈ ಬದಲಾವಣೆ ಆಯಿತು.’ – ಸಂಕಲನಕಾರರು)

೭ ಇ. ಓರ್ವ ಕಲಾವಿದರು ಕೇಳಿದ ಪ್ರಶ್ನೆಗೆ ‘ನೀವು ಬೇರೆ ಬೇರೆ ರಾಗಗಳಲ್ಲಿ ನಾಮಜಪವನ್ನು ಮಾಡಬಹುದು ಹಾಗೂ ಅದರಿಂದ ನಿಮ್ಮಲ್ಲಿ ಭಾವಜಾಗೃತಿ ಆಗುವುದು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಿಳಿಸುವುದು : ಓರ್ವ ಕಲಾವಿದರು, ”ನಾನು ಕೇವಲ ನಾಮಜಪವನ್ನು ಮಾಡಿದರೆ, ಅದು ಅಷ್ಟು ಭಾವಪೂರ್ಣವಾಗುವುದಿಲ್ಲ; ಆದರೆ ನಾನು ಬೇರೆ ಬೇರೆ ರಾಗಗಳಲ್ಲಿ ನಾಮಜಪವನ್ನು ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ. ನಾನು ಹಾಗೆ ಮಾಡಬಹುದೇ ?” ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ”ನಿಮ್ಮದು ಗಾಯನಕ್ಷೇತ್ರ. ಆದ್ದರಿಂದ ನಿಮಗೆ ಅದು ಸುಲಭವಾಗಬಹುದು. ಅದರಿಂದ ನಿಮ್ಮ ಭಾವಜಾಗೃತಿಯೂ ಆಗಬಹುದು. ನೀವು ಹಾಗೆ ನಾಮಜಪ ಮಾಡಬಹುದು” ಎಂದು ಹೇಳಿದರು.

೭ ಈ. ಓರ್ವ ಕಲಾವಿದರ ಕ್ಷಮತೆಯನ್ನು ನೋಡಿ ಅವರಿಗೆ ‘ಸಂಗೀತದಿಂದ ಸಾಧನೆ’ ಈ ವಿಷಯವನ್ನು ಅಭ್ಯಾಸ ಮಾಡಲು ಮಾರ್ಗದರ್ಶನ ಮಾಡುವುದು : ಓರ್ವ ಗಾಯಕ ಕಲಾವಿದರ ಸಾಧನೆ ಚೆನ್ನಾಗಿರುವುದರಿಂದ ಹಾಗೂ ಅವರಿಗೆ ಸಂಶೋಧನೆಯಲ್ಲಿ ಆಸಕ್ತಿ ಇರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ಗಾಯನದಲ್ಲಿನ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಲು ಹೇಳಿ ಮಾರ್ಗದರ್ಶನ ಮಾಡಿದರು. (ಕೆಲವು ಕಲಾವಿದರಿಗೆ ಸೂಕ್ಷ್ಮದಿಂದ ಅಭ್ಯಾಸ ಮಾಡುವ ಕ್ಷಮತೆ ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ‘ಸಂಗೀತ-ನೃತ್ಯ ಇವುಗಳಿಗೆ ಅಧ್ಯಾತ್ಮವನ್ನು ಹೇಗೆ ಜೋಡಿಸಬೇಕು ?’, ಎನ್ನುವ ವಿಷಯದಲ್ಲಿಯೂ ಮಾರ್ಗದರ್ಶನ ಮಾಡುತ್ತಾರೆ, ಉದಾ. ನೃತ್ಯದಲ್ಲಿನ ಮುದ್ರೆಗಳ, ಗಾಯನ-ವಾದನದಲ್ಲಿನ ಸ್ವರಗಳಿಂದ ಷಟ್ಚಕ್ರಗಳು, ಪಂಚಮಹಾಭೂತಗಳು, ವ್ಯಕ್ತಿಯ ನಾಡಿ ಇತ್ಯಾದಿಗಳ ಮೇಲೆ ಏನು ಪರಿಣಾಮವಾಗುತ್ತದೆ ಇತ್ಯಾದಿ)

೭ ಉ. ಓರ್ವ ಕಲಾವಿದರಿಗೆ ‘ವ್ಯಾವಹಾರಿಕ ಜೀವನದಲ್ಲಿಯೂ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದೀರಿ’, ಎಂದು ಹೇಳುವುದು : ಓರ್ವ ಕಲಾವಿದರು ‘ತಮ್ಮ ಜೀವನದಲ್ಲಿನ ಬಹಳಷ್ಟು ಕಠಿಣ ಪ್ರಸಂಗಗಳಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಹೇಗೆ ಇಟ್ಟುಕೊಳ್ಳುತ್ತೇನೆ ? ಹಾಗೂ ಸಾಧನೆಯನ್ನು ಅನುಸರಿಸಿ ಯೋಗ್ಯ ದೃಷ್ಟಿಕೋನವನ್ನು ಹೇಗೆ ಇಟ್ಟುಕೊಳ್ಳುತ್ತೇನೆ ?’, ಇದರ ಬಗ್ಗೆ ಹೇಳಿದರು. ಅವರು ಕಲಾವಿದರಾಗಿದ್ದರೂ ಸಾಧನೆಯ ವಿಷಯದಲ್ಲಿ ಒಳ್ಳೆಯ ದೃಷ್ಟಿಕೋನ ಇಟ್ಟಿರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ”ಕಳೆದ ಜನ್ಮದಲ್ಲಿ ನೀವು ತುಂಬಾ ಭಕ್ತಿ ಮಾಡಿದ್ದೀರಿ. ಆದ್ದರಿಂದ ನೀವು ಈ ಜನ್ಮದಲ್ಲಿ ವ್ಯಾವಹಾರಿಕ ಜೀವನದಲ್ಲೂ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದೀರಿ” ಎಂದರು.

ಕು. ತೇಜಲ್ ಪಾತ್ರಿಕರ್

೮. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಕಲಾವಿದರಿಗೆ ಬಂದಿರುವ ಅನುಭೂತಿಗಳು ಮತ್ತು ಕಲಾವಿದರಿಗೆ ಅವರಲ್ಲಿರುವ ಭಾವ

೮ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಓರ್ವ ಕಲಾವಿದರ ಮನಸ್ಸಿನ ವಿಷಯವನ್ನರಿತು ಉತ್ತರ ಕೊಡುವುದು : ಓರ್ವ ನೃತ್ಯಾಂಗನೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರನ್ನು ಭೇಟಿಯಾಗುವ ಮೊದಲು ನನ್ನ ಬಳಿ, ”ಗುರುದೇವರಿಂದ ನನಗೆ ನನ್ನ ಹಿಂದಿನ ಜನ್ಮದ ವಿಷಯ ಏನಾದರೂ ತಿಳಿದರೆ ಚೆನ್ನಾಗಿರುವುದು” ಎಂದು ಹೇಳಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೇಟಿಯಲ್ಲಿ ಸಹಜವಾಗಿ ಆ ನೃತ್ಯಾಂಗನೆಗೆ ‘ನಿಮ್ಮ ಪೂರ್ವಜನ್ಮದ ಸಾಧನೆ ಚೆನ್ನಾಗಿದೆ’, ಎಂದಾಗ ಆ ನೃತ್ಯಾಂಗನೆಗೆ ತನ್ನ ಇಚ್ಛೆ ಪೂರ್ಣವಾದÀ ಆನಂದವಾಯಿತು.

೮ ಆ. ಕೆಲವು ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೊದಲ ಭೇಟಿಯಲ್ಲಿಯೇ ಭಾವಜಾಗೃತಿಯಾಗುದು : ಕೆಲವು ಕಲಾವಿದರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಮೊದಲ ಬಾರಿ ನೋಡಿದ್ದರೂ ಅವರೊಂದಿಗೆ ಮಾತನಾಡುವಾಗ ಕಲಾವಿದರಿಗೆ ಭಾವಜಾಗೃತಿಯಾಗುತ್ತಿತ್ತು. ಭಾವವಿರುವ ಕಲಾವಿದರಿಗೆ ಸಾಧನೆಗಾಗಿ ಪ್ರೋತ್ಸಾಹ ನೀಡಿ ಅವರಿಗೆ ಸಾಧನೆಯಲ್ಲಿ ಮುಂದೆ ಹೋಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾರ್ಗದರ್ಶನ ಮಾಡುತ್ತಾರೆ.

೯. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನಿರಪೇಕ್ಷ ಪ್ರೀತಿ

೯ ಅ. ಕಲಾವಿದರಿಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಬರಲು ಆಮಂತ್ರಣ ನೀಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆತ್ಮೀಯತೆಯಿಂದ ಕಲಾವಿದರಿಗೆ, ”ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ನಿಮ್ಮ ಮನೆಯೇ ಆಗಿದೆ. ಈ ವಾಸ್ತುವನ್ನು ಸಾಧನೆಗಾಗಿ ಬರುವವರಿಗಾಗಿಯೇ ನಾವು ನಿರ್ಮಿಸಿದ್ದೇವೆ. ನಿಮಗೆ ಇಲ್ಲಿಗೆ ಬರಬೇಕೆಂದು ಅನಿಸಿದಾಗ ನೀವು ಇಲ್ಲಿಗೆ ಬರಬಹುದು” ಎಂದು ಹೇಳಿದರು

೯ ಆ. ಓರ್ವ ಕಲಾವಿದರ ಪತ್ನಿಯು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನಮ್ಮ ಹಕ್ಕಿನ ಮನೆ ಆಗಿದೆ’ ಎಂದು ಹೇಳಿದರು : ಓರ್ವ ಕಲಾವಿದರು ಮತ್ತು ಅವರ ಪತ್ನಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಳಿದರು, ”ನಿಮಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಬಂದಾಗ ಹೇಗನಿಸಿತು ?” ಆಗ ಅವರು, ”ನನಗೆ ನನ್ನ ಸ್ವಂತ ಮನೆಯ ಹಾಗೆ ಅನಿಸಿತು” ಎಂದು ಹೇಳಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ, ”ನನಗೆ ನೀವು ತವರು ಮನೆಗೆ ಬಂದಿದ್ದೇನೆ, ಎಂದು ಹೇಳುವಿರಿ ಎಂದು ಅನಿಸಿತ್ತು” ಎಂದಾಗ ಆ ಕಲಾವಿದರ ಪತ್ನಿ, ”ತವರು ಮನೆ ಮತ್ತು ಪತಿಯ ಮನೆ ಇವೆರಡೂ ಕೊನೆಗೆ ಪರಕೀಯವೇ ಆಗಿರುತ್ತವೆ. ನಮ್ಮ ಹಕ್ಕಿನ ನಮ್ಮದೇ ಮನೆ ಇರುವುದರಿಂದ ನಾನು ಹಾಗೆ ಹೇಳಿದೆ” ಎಂದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆ ಕಲಾವಿದರ ಪತ್ನಿಯ ಉತ್ತರವನ್ನು ಶ್ಲಾಘಿಸಿದರು.

೯ ಇ. ಕಲಾವಿದರಿಗೆ ಪ್ರಸಾದ ಕಳುಹಿಸುವುದು : ಕಲಾವಿದರು ಬರೆದಿರುವ ಭಾವಪೂರ್ಣ ಲೇಖನವನ್ನು ಓದಿ ಹಾಗೂ ಅವರು ಸಂಗೀತ ಸಾಧನೆಗಾಗಿ ಪ್ರಯತ್ನಿಸಿರುವುದು ತಿಳಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಪ್ಪದೇ ಅವರಿಗೆ ಪ್ರಸಾದ ಕಳುಹಿಸಲು ಸೂಚಿಸುತ್ತಾರೆ ಹಾಗೂ ಅವರಿಗೆ ‘ಲೇಖನ ಇಷ್ಟವಾಯಿತು’, ಎಂದು ತಿಳಿಸಲು ಹೇಳುತ್ತಾರೆ.

೧೦. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡುತ್ತಿರುವ ಸಮಷ್ಟಿಯ ವಿಚಾರ

ಅ. ಕಲಾವಿದರು ಕಲೆಯ ವಿಷಯದಲ್ಲಿ ಅಥವಾ ಜೀವನಪ್ರವಾಸದಲ್ಲಿ ಬರುವ ಅನುಭೂತಿಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಹೇಳುತ್ತಾರೆ. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರಿಗೆ ಬರೆದು ಕೊಡಲು ಹೇಳುತ್ತಾರೆ. ಕಲಾವಿದರು ಹೇಳಿದ ಅಂಶಗಳು ಎಲ್ಲರಿಗೂ ಉಪಯೋಗವಾಗಬಹುದು’, ಎನ್ನುವುದೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವ್ಯಾಪಕ ಸಮಷ್ಟಿ ದೃಷ್ಟಿಕೋನವಾಗಿರುತ್ತದೆ.

ಆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಅನೇಕ ಕಲಾವಿದರ ವಿವಿಧ ಸಂಶೋಧನಾತ್ಮಕ ಪ್ರಯೋಗಗಳು ಆಗುತ್ತವೆ. ಕಲಾವಿದರು ಪ್ರಸ್ತುತಪಡಿಸುವ ಕಲೆಯಿಂದ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯವಾಗಿ ಅವರಲ್ಲಿ ಹಗುರವೆನಿಸುತ್ತದೆ ಹಾಗೂ ಅವರ ಸಾಧನೆ ಚೆನ್ನಾಗಿ ಆಗಲು ಸಹಾಯವಾಗುತ್ತದೆ. ಯಾವ ಸಾಧಕರು ಕಲೆಯನ್ನು ಪ್ರಸ್ತುತಪಡಿಸಿದ ನಂತರ ಸಾಧಕರಿಗೆ ಸಹಾಯವಾಗುತ್ತದೆಯೋ, ಆ ಕಲಾವಿದರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರ ಗಾಯನ, ವಾದನ ಮತ್ತು ನೃತ್ಯಗಳಿಗೆ ಸಂಬಂಧಿಸಿದ ‘ಆಡಿಯೋ’ (ಧ್ವನಿಮುದ್ರಿಕೆ) ಮತ್ತು ‘ವಿಡಿಯೋ’ (ಧ್ವನಿಚಿತ್ರಮುದ್ರಿಕೆ)ಗಳನ್ನು ಕಳುಹಿಸಲು ಹೇಳುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇತರ ಕಲಾವಿದರಿಗೆ ಅವರಲ್ಲಿರುವ ‘ಆಡಿಯೋ’ ಮತ್ತು ವಿಡಿಯೋ’ಗಳ ಸಂಗ್ರಹವನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಅಭ್ಯಾಸ ಮಾಡುವ ಸಾಧಕರಿಗೆ ಕೊಡಲು ಹೇಳುತ್ತಾರೆ. ಈ ‘ಆಡಿಯೋ’ ಮತ್ತು ವಿಡಿಯೋ’ ಎಲ್ಲರಿಗೂ ಉಪಯೋಗವಾಗಬಹುದು’, ಎಂಬ ದೃಷ್ಟಿಕೋನವಿರುತ್ತದೆ.’

(ಮುಕ್ತಾಯ)

ಸುಶ್ರೀ (ಕು.) ತೇಜಲ ಪಾತ್ರೀಕರ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೦, ಸಂಗೀತ ವಿಶಾರದೆ ಮತ್ತು ಸಂಗೀತ ಸಮನ್ವಯಕಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೧.೫.೨೦೨೪)