ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಎರಡೂ ಅಂಗೈಗಳ ಮೇಲಿನ ರೇಖೆಗಳು ಬಹಳ ಹೆಚ್ಚಾಗಿರುವುದರ ಹಿಂದಿನ ಕಾರಣ

ಪೂ. ಡಾ. ಓಂ. ಉಲಗನಾಥನ್

ಸರ್ವಸಾಮಾನ್ಯ ಮನುಷ್ಯರ ತುಲನೆಯಲ್ಲಿ ದಾನ ಮಾಡುವ ಶ್ರೀಮಂತ ವ್ಯಕ್ತಿಗಳ ಹಸ್ತರೇಖೆಗಳು ಹೆಚ್ಚಿರುತ್ತವೆ. ದಾನ ಮಾಡುವ ಶ್ರೀಮಂತ ವ್ಯಕ್ತಿಗಳ ತುಲನೆಯಲ್ಲಿ ಒಳ್ಳೆಯ ರಾಜನ ಹಸ್ತರೇಖೆಗಳು ಹೆಚ್ಚಿರುತ್ತವೆ. ಮಹಾನ ಸಂತರು ಮತ್ತು ಗುರುಗಳ ಹಸ್ತರೇಖೆಗಳು ಒಳ್ಳೆಯ ರಾಜನ ತುಲನೆಯಲ್ಲಿ ಹೆಚ್ಚಿರುತ್ತವೆ. ಮಹಾನ ಸಂತರು ಮತ್ತು ಗುರುಗಳ ತುಲನೆಯಲ್ಲಿ ಅವತಾರಗಳ ಅಂಗೈಗಳ ಮೇಲಿನ ರೇಖೆಗಳು ಹೆಚ್ಚಿರುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಶ್ರೀವಿಷ್ಣುವಿನ ಅಂಶಾವತಾರ ಆಗಿರುವುದರಿಂದ ಅವರ ಅಂಗೈಗಳ ಮೇಲೆ ರೇಖೆಗಳು ಹೆಚ್ಚಿವೆ. ಈಗ ಹಿಂದೂ ರಾಷ್ಟ್ರವು ಸಮೀಪಿಸುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ಎಲ್ಲ ದೇವತೆಗಳ ತತ್ತ್ವಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಹೆಚ್ಚಾಗುತ್ತಿರುವುದರಿಂದ ಅವರ ಅಂಗೈಗಳ ಮೇಲಿನ ರೇಖೆಗಳೂ ಹೆಚ್ಚಾಗಿವೆ. ಅವರ ಅಂಗೈಗಳ ಮೇಲಿನ ರೇಖೆಗಳು ಹೆಚ್ಚಾಗುವುದು, ಅವರಲ್ಲಿನ ಅನೇಕ ದೇವತೆಗಳ ತತ್ತ್ವಗಳು ಕಾರ್ಯನಿರತ ಆಗಿರುವುದರ ಪ್ರತೀಕವಾಗಿದೆ.

– ಸಪ್ತರ್ಷಿಗಳು (ಪೂ. ಡಾ. ಓಂ. ಉಲಗನಾಥನ್ ಇವರ ಮಾಧ್ಯಮದಿಂದ ೧೩.೧೦.೨೦೨೧, ಬೆಳಗ್ಗೆ ೧೦.೪೮)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂಕ್ಷ್ಮದ ವಿಷಯಗಳ ಅರಿತುಕೊಳ್ಳುವ ಬಗೆಗಿನ ಅದ್ವಿತೀಯ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಶ್ರೀ. ರಾಮ ಹೊನಪ

‘ಇಂದಿನವರೆಗೆ ಅನೇಕ ಋಷಿಮುನಿಗಳು ಅಥವಾ ಸಂತರು ಸಪ್ತಲೋಕಗಳಿವೆ, ಎಂದು ಹೇಳಿದ್ದಾರೆ; ಆದರೆ ಸ್ವರ್ಗಲೋಕ, ಉಚ್ಚ ಸ್ವರ್ಗಲೋಕ, ಮಹರ್ಲೋಕ, ಜನಲೋಕದಲ್ಲಿನ ಜೀವಗಳು ಪೃಥ್ವಿಯ ಮೇಲೆ ಜನಿಸಿವೆ ಎಂದು ಹೇಳಿ ಅವರ ಪರಿಚಯವನ್ನು ಮಾಡಿಕೊಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಏಕೈಕರಾಗಿದ್ದಾರೆ.’

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೫.೨೦೨೦)