ದತ್ತ ಜಯಂತಿಯು ಶರಣಾಗತರ ಭವತಾಪಗಳನ್ನು ಹರಣ ಮಾಡುವ ಶ್ರೀ ದತ್ತ ಗುರುಗಳ ಮಹಿಮೆಯ ಗುಣಗಾನ ಮಾಡುವ ದಿನ ! ಅದರ ಜೊತೆಗೆ ಸಚ್ಚಿದಾನಂದ ಪರ ಬ್ರಹ್ಮ ಡಾ. ಜಯಂತ ಅಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬ ಇರುತ್ತದೆ. ಯಾವಾಗಲೂ ಸಪ್ತರ್ಷಿಯ ಆಜ್ಞೆಯಂತೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೈವಿ ಪ್ರವಾಸ ಮಾಡುವ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬವನ್ನು ಸನಾತನದ ರಾಮನಾಥಿ (ಗೋವಾ) ಇಲ್ಲಿಯ ಆಶ್ರಮದಲ್ಲಿ ಒಂದು ಅನೌಪಚಾರಿಕ ಸಮಾರಂಭದ ಮೂಲಕ ಆಚರಿಸಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಪರಿವಾರದವರು ಮತ್ತು ಕೆಲವು ಸಾಧಕರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಿತು.
ಈ ಶುಭ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಉಡುಗೊರೆ ನೀಡಿದರು. ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ಓದಿದರು. ಹಾಗೂ ಸಪ್ತರ್ಷಿಗಳು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ವ್ಯಕ್ತಪಡಿಸಿರುವ ಗೌರವೋದ್ಗಾರದ ಬಗ್ಗೆ ಉಪಸ್ಥಿತರಿಗೆ ತಿಳಿಸಿದರು. ಸದ್ಗುರು ಡಾ. ಮುಕುಲ ಗಾಡಗೀಳ ಇವರ ಸಹಿತ ಪರಿವಾರದ ಇತರರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕ ಗುಣವೈಶಿಷ್ಟ್ಯಗಳನ್ನು ಹೇಳಿದರು.