‘ಸಾಮಾನ್ಯ ಸೌಂದರ್ಯವರ್ಧನೆ’ಯನ್ನು (Casual Makeup) ಮಾಡಿಕೊಂಡರೆ ಮಹಿಳೆಯರ ಮೇಲಾಗುವ ಆಧ್ಯಾತ್ಮಿಕ ಪರಿಣಾಮಗಳು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಮಹಿಳೆಯರು ‘ಸಾಮಾನ್ಯ ಸೌಂದರ್ಯವರ್ಧನೆ’ಯನ್ನು (Casual Makeup) ಮಾಡಿಕೊಂಡರೆ ಅವರ ಮೇಲಾಗುವ ಆಧ್ಯಾತ್ಮಿಕ ಪರಿಣಾಮ ‘ಇತ್ತೀಚೆಗೆ ಹೆಚ್ಚಿನ ಮಹಿಳೆಯರು ನೌಕರಿ, ಪ್ರಾಸಂಗಿಕ ಕೆಲಸಗಳಿಗಾಗಿ ಅಥವಾ ಚಿಕ್ಕ ಸಮಾರಂಭ ಇತ್ಯಾದಿಗಳಿಗಾಗಿ ಮನೆಯಿಂದ ಹೊರಗೆ ಹೋಗುವಾಗ, ಹಾಗೆಯೇ ಸಮಾಜದಲ್ಲಿ ಓಡಾಡುವಾಗ ‘ಆಕರ್ಷಕ ಹಾಗೆಯೇ ನಾಲ್ಕು ಜನರಲ್ಲಿ ಎದ್ದು ಕಾಣಿಸಬೇಕು’, ಎಂದು ಸೌಂದರ್ಯವರ್ಧನೆಯನ್ನು (Casual Makeup) ಮಾಡಿಕೊಳ್ಳುತ್ತಾರೆ. ‘ಮಹಿಳೆಯರು ಸಾಮಾನ್ಯ ಸೌಂದರ್ಯವರ್ಧನೆಯನ್ನು ಮಾಡಿಕೊಂಡರೆ ಅವರ ಮೇಲೆ ‘ಆಧ್ಯಾತ್ಮಿಕ ದೃಷ್ಟಿಯಲ್ಲಿ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಯು.ಎ.ಎಸ್.’ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಸೌ. ಮಧುರಾ ಕರ್ವೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರು ಸಾಧಕಿಯರ ಸಾಮಾನ್ಯ ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡುವ ಮೊದಲು ಮತ್ತು ಮಾಡಿದ ನಂತರ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ‘ಪರೀಕ್ಷಣೆಯಲ್ಲಿ ಸಾಧಕಿಯರ ಮೇಲೆ ಸೌಂದರ್ಯವರ್ಧನೆಯ ಪರಿಣಾಮವು ಎಷ್ಟು ಕಾಲ ಉಳಿಯುತ್ತದೆ ?’, ಎಂಬುದರ ಅಧ್ಯಯನಕ್ಕಾಗಿ ಪ್ರತಿ ಗಂಟೆಗೆ ಒಂದು ಸಲ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ಸಾಧಕಿಯರು ಅವರ ಮೂಲ ನೋಂದಣಿಗೆ (ಸ್ಥಿತಿಗೆ) ಬಂದ ನಂತರ ಅವರ ನಿರೀಕ್ಷಣೆ ಮಾಡುವುದನ್ನು ನಿಲ್ಲಿಸಲಾಯಿತು. ಇಬ್ಬರು ಸಾಧಕಿಯರು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ನಂತರ ಅವರ ಮೇಲಾದ ಪರಿಣಾಮವನ್ನು ಮುಂದೆ ಕೊಡಲಾಗಿದೆ.

೧ ಅ. ಪರೀಕ್ಷಣೆಯಲ್ಲಿ ಸೌಂದರ್ಯವರ್ಧನೆ (ಮೇಕ್‌ಅಪ್) ಮಾಡಿಕೊಂಡ ಇಬ್ಬರೂ ಸಾಧಕಿಯರ ಮೇಲೆ ನಕಾರಾತ್ಮಕ ಪರಿಣಾಮ ಆಗುವುದು

ಮೇಲಿನ ಪಟ್ಟಿಯಿಂದ ಗಮನಕ್ಕೆ ಬಂದ ಅಂಶಗಳು

೧. ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ : ಸೌಂದರ್ಯ ವರ್ಧನೆಯನ್ನು (ಮೇಕ್‌ಅಪ್) ಮಾಡಿದ ನಂತರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’

ಈ ಎರಡೂ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಯಿತು. (ಸೌಂದರ್ಯವರ್ಧನೆಯ ಪರಿಣಾಮವು ಒಟ್ಟು ೩ ಗಂಟೆಗಳ ವರೆಗೆ ಉಳಿಯಿತು.)

೨. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕಿ : ಸೌಂದರ್ಯ ವರ್ಧನೆಯನ್ನು ಮಾಡಿದ ಬಳಿಕ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿ ಅವಳಲ್ಲಿ ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು. (ಸೌಂದರ್ಯವರ್ಧನೆಯ ಪರಿಣಾಮ ಒಟ್ಟು ೨ ಗಂಟೆ ಉಳಿಯಿತು.)

೨. ನಿಷ್ಕರ್ಷ

‘ಮಹಿಳೆಯರು ಸಾಮಾನ್ಯ ಸೌಂದರ್ಯವರ್ಧನೆಯನ್ನು (ಸೌಂದರ್ಯವರ್ಧಕಗಳನ್ನು ಬಳಸುವುದು) ಮಾಡಿಕೊಳ್ಳುವುದು ಆಧ್ಯಾತ್ಮಿಕದೃಷ್ಟಿಯಿಂದ ಹಾನಿಕರವಾಗಿದೆ’, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಪರೀಕ್ಷಣೆಯಲ್ಲಿನ ಸಾಧಕಿಯರು ಸಾಮಾನ್ಯ ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡಿದ್ದರಿಂದ ಅವರ ಮೇಲೆ ನಕಾರಾತ್ಮಕ ಪರಿಣಾಮವಾಗುವುದರ ಕಾರಣ : ಪರೀಕ್ಷಣೆಯಲ್ಲಿನ ಸಾಧಕಿಯರು ಸಾಮಾನ್ಯ ಸೌಂದರ್ಯವರ್ಧನವನ್ನು (ಮೇಕ್‌ಅಪ್) ಮಾಡಿಕೊಳ್ಳಲು ಅವರ ಬಳಿಯಿರುವ (ಪ್ರಸಿದ್ಧ ಕಂಪನಿಗಳ) ವಿವಿಧ ಸೌಂದರ್ಯವರ್ಧಕಗಳ (Cosmetics) ಹಾಗೂ ಸಾಹಿತ್ಯ, ಉದಾ. ‘ಕಾಂಪ್ಯಾಕ್ಟ ಪೌಡರ್’ (Compacts powder) (ಮುಖದ ಮೇಲೆ ಹಚ್ಚುವ ಪುಡಿ), ‘ಬ್ಲಶರ್’ (brusher) (ಗಲ್ಲಗಳು ಕೆಂಪಾಗಲು ಉಪಯೋಗಿಸುವ ಸೌಂದರ್ಯವರ್ಧಕ), ‘ಲಿಪಸ್ಟಿಕ್’ (Lipstic) (ತುಟಿ ಆಕರ್ಷಕವಾಗಿ ಕಾಣಲು ಉಪಯೋಗಿಸಲಾಗುವ ಸೌಂದರ್ಯವರ್ಧಕ), ‘ಮಸ್ಕರಾ’ (maskara) (ಕಣ್ಣುಗಳ ರೆಪ್ಪೆಗಳ ಕೂದಲು ಸುಂದರವಾಗಿ ಕಾಣಿಸಬೇಕೆಂದು ಉಪಯೋಗಿಸಲಾಗುವ ಸೌಂದರ್ಯವರ್ಧಕ), ‘ಮೂಸ್’ (mousse) (ಕೇಶರಚನೆಗಾಗಿ ಉಪಯೋಗಿಸಲಾಗುವ ಸೌಂದರ್ಯವರ್ಧಕ) ಮತ್ತು ‘ಪೌಡರ್ ಬ್ರಶ್’ (powder brush) (ಸೌಂದರ್ಯವರ್ಧನೆಗಾಗಿ ಬಳಸಲಾಗುವ ಬ್ರಶ್) ಇತ್ಯಾದಿಗಳನ್ನು ಬಳಸಲಾಯಿತು. ಸಾಧಕಿಯರು ಸೌಂದರ್ಯವರ್ಧನೆಯನ್ನು ಮಾಡಿಕೊಳ್ಳಲು ಉಪಯೋಗಿಸಿದ ಸೌಂದರ್ಯವರ್ಧಕಗಳು ಮತ್ತು ಸಾಹಿತ್ಯ ಇವುಗಳಲ್ಲಿ ನಕಾರಾತ್ಮಕ ಊರ್ಜೆ (ತೊಂದರೆದಾಯಕ ಸ್ಪಂದನಗಳು) ಇರುವುದು ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳಿಂದ ಕಂಡುಬಂದಿತು. ತೊಂದರೆದಾಯಕ ಸ್ಪಂದನಗಳಿಂದ ಕೂಡಿದ ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ಮಾಡಿದ ಸೌಂದರ್ಯವರ್ಧನೆಯಿಂದ ಸಾಧಕಿಯರ ಮೇಲೆ ತೊಂದರೆದಾಯಕ (ಕಪ್ಪು) ಆವರಣ ಬಂದಿತು ಅಥವಾ ಅದರಲ್ಲಿ ಹೆಚ್ಚಳವಾಯಿತು.

೩ ಆ. ಪರೀಕ್ಷಣೆಯಲ್ಲಿ ಸಾಧಕಿಯರು ಪ್ರಾಸಂಗಿಕ ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡಿದ್ದರಿಂದ ಅವರ ಮೇಲೆ ನಕಾರಾತ್ಮಕ ಪರಿಣಾಮವಾಗಿ ಅದು ಕೆಲವು ಗಂಟೆಗಳವರೆಗೆ ಉಳಿಯುವುದು : ಪರೀಕ್ಷಣೆಯಲ್ಲಿನ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಗೆ ಅನಿಷ್ಟ ಶಕ್ತಿಗಳ ತೊಂದರೆಯಿದೆ. (ಸದ್ಯ ಸಮಾಜದಲ್ಲಿನ ಬಹಳಷ್ಟು ಜನರಿಗೆ ಅನಿಷ್ಟ ಶಕ್ತಿಗಳ ತೊಂದರೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದೆ.) ಸಾಧಕಿಯು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ಮೇಲೆ ಅವಳ ಸುತ್ತಲಿನ ತೊಂದರೆದಾಯಕ ಆವರಣದಲ್ಲಿ ಹೆಚ್ಚಳವಾಯಿತು. ಆದುದರಿಂದ ಸಾಧಕಿಯಲ್ಲಿನ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು.

ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕಿಯು ಸೌಂದರ್ಯವರ್ಧನೆಯನ್ನು (ಮೇಕ್‌ಅಪ್) ಮಾಡಿಕೊಂಡ ನಂತರ ಅವಳ ಸುತ್ತಲಿನ ಆವರಣದಲ್ಲಿ ಹೆಚ್ಚಳವಾಯಿತು, ಹಾಗೆಯೇ ವಾತಾವರಣದಲ್ಲಿನ ತೊಂದರೆದಾಯಕ ಸ್ಪಂದನಗಳು ಅವಳ ಕಡೆಗೆ ಆಕರ್ಷಿಸಿದವು. ಆದುದರಿಂದ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು. ಹಾಗೆಯೇ ಅವಳಲ್ಲಿ ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆ ನಿರ್ಮಾಣವಾಗಿ ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು. ಸಾಮಾನ್ಯ ಸೌಂದರ್ಯವರ್ಧಕಗಳಿಂದ ಇಬ್ಬರು ಸಾಧಕಿಯರ ಮೇಲೆ ತುಂಬಾ ನಕಾರಾತ್ಮಕ ಪರಿಣಾಮವಾಗಿ ಅದು ೨ ರಿಂದ ೩ ಗಂಟೆಗಳ ವರೆಗೆ ಉಳಿಯಿತು. ಇದರಿಂದ ‘ಮಹಿಳೆಯರು ಸೌಂದರ್ಯವರ್ಧನೆಯನ್ನು ಮಾಡಿಕೊಳ್ಳುವುದು ಆಧ್ಯಾತ್ಮಿಕ ದೃಷ್ಟಿಯಿಂದ ಎಷ್ಟು ಹಾನಿಕರವಾಗಿದೆ’, ಎಂಬುದು ಗಮನಕ್ಕೆ ಬರುತ್ತದೆ. (‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಇಲ್ಲದಿರುವ ಇತರ ೮-೧೦ ಸಾಧಕಿಯರ ಮೇಲೆ ಸೌಂದರ್ಯವರ್ಧನೆ ಬಗ್ಗೆ  ಮಾಡಿದ ಪರೀಕ್ಷಣೆಗಳಿಂದಲೂ ಹೀಗೆಯೇ ಕಂಡುಬಂದಿತು.

ದೊಡ್ಡ ಸಮಾರಂಭಗಳಲ್ಲಿ, ‘ಪಾರ್ಟಿ’ ಇತ್ಯಾದಿಗಳ ಸಮಯದಲ್ಲಿ ಮಾಡಲಾಗುವ ದಪ್ಪ (ಹೇವಿ) ಸೌಂದರ್ಯವರ್ಧನೆಯ (‘ಹೇವಿ ಮೇಕ್‌ಅಪ್‌’ನ) ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗಿದೆ. ಈ ಸಂಶೋಧನೆಗಳನ್ನು ಇತರ ಲೇಖನಗಳಲ್ಲಿ ಕೊಡಲಾಗಿದೆ. – ಸಂಕಲನಕಾರರು)

೪. ಮಹಿಳೆಯರೇ, ಬಾಹ್ಯ ಸೌಂದರ್ಯಕ್ಕಿಂತ ‘ಸಾಧನೆ’ಯನ್ನು ಮಾಡಿ ತಮ್ಮ ಆಧ್ಯಾತ್ಮಿಕ ಸೌಂದರ್ಯವನ್ನು ಹೆಚ್ಚಿಸಿರಿ !

ಸದ್ಯ ಅನೇಕ ಮಹಿಳೆಯರು ಸುಂದರ (ಆಕರ್ಷಕ) ಕಾಣಿಸಲು ‘ಮೆಕ್‌ಅಪ್’ ಮಾಡಿಕೊಳ್ಳುವಂತಹ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ವಿಷಯಗಳ ಮೇಲೆ ಹೆಚ್ಚು ಗಮನ ಕೊಡುತ್ತಿರುವುದು ಕಂಡುಬರುತ್ತದೆ. ಬಾಹ್ಯ ಸೌಂದರ್ಯವು ಕೇವಲ ಕ್ಷಣಮಾತ್ರ ಸುಖ ಕೊಡುತ್ತದೆ; ಆದರೆ ಅದರಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಏನೂ ಲಾಭವಾಗುವುದಿಲ್ಲ, ಬದಲಾಗಿ ಹಾನಿಯೇ ಆಗುತ್ತದೆ. ಆದ್ದರಿಂದ ಮಹಿಳೆಯರು ಬಾಹ್ಯ ಸೌಂದರ್ಯಕ್ಕಿಂತ ‘ಸಾಧನೆ’ (ಈಶ್ವರಪ್ರಾಪ್ತಿಗಾಗಿ ಅಂದರೆ ಆನಂದಪ್ರಾಪ್ತಿಗಾಗಿ ಪ್ರತಿದಿನ ಮಾಡುವ ಪ್ರಯತ್ನ) ಮಾಡಿ ತಮ್ಮ ‘ಆಧ್ಯಾತ್ಮಿಕ ಸೌಂದರ್ಯ’ವನ್ನು ಹೆಚ್ಚಿಸುವುದೇ ಒಳ್ಳೆಯದಾಗಿದೆ. ಸಾಧನೆಯಿಂದ ವ್ಯಕ್ತಿಯಲ್ಲಿನ ಕಾಮ-ಕ್ರೋಧ ಮುಂತಾದ ಷಡ್ರಿಪುಗಳು ದೂರವಾಗುತ್ತವೆ, ಮನಸ್ಸಿನ ಮಲೀನತೆ ದೂರವಾಗಿ ಮನಸ್ಸು ನಿರ್ಮಲ ಮತ್ತು ಸಾತ್ತ್ವಿಕವಾಗುತ್ತದೆ. ಸಾಧನೆಯಿಂದ ನಿರ್ಮಾಣವಾಗುವ ಸಾತ್ತ್ವಿಕತೆಯು ವ್ಯಕ್ತಿಗೆ ಆಧ್ಯಾತ್ಮಿಕ ಸೌಂದರ್ಯವನ್ನು ನೀಡುತ್ತದೆ. ವ್ಯಕ್ತಿಯ ಸಾಧನೆ ಹೆಚ್ಚಾಗುತ್ತಾ ಹೋದಂತೆ ಅವಳಲ್ಲಿನ ಸಾತ್ತ್ವಿಕತೆಯೂ ಹೆಚ್ಚುತ್ತದೆ. ಇದರಿಂದ ಅವಳಿಗೆ ಭಾವ, ಚೈತನ್ಯ, ಆನಂದ ಇವುಗಳ ಅನುಭೂತಿಗಳು ಬರುತ್ತವೆ. ನಿರಂತರ ಸಾಧನೆಯಿಂದ ಅವಳು ಈಶ್ವರನ ತತ್ತ್ವದೊಂದಿಗೆ ಜೋಡಿಸಲ್ಪಡುತ್ತಾಳೆ. ಮಹಿಳೆಯರು ಹಿಂದೂ ಸಂಸ್ಕೃತಿಯಲ್ಲಿ ಹೇಳಿದ ಆಚಾರಧರ್ಮವನ್ನು ಪಾಲಿಸಿದರೆ (ಉದಾ. ಹಣೆಗೆ ಕುಂಕುಮವನ್ನು ಹಚ್ಚುವುದು, ಸೀರೆಯನ್ನು ಉಡುವುದು, ಜಡೆ ಅಥವಾ ತುರುಬು ಹಾಕುವುದು, ಸಾತ್ತ್ವಿಕ ಅಲಂಕಾರಗಳನ್ನು ಧರಿಸುವುದು ಇತ್ಯಾದಿ) ಅವರ ಸಾಧನೆಯ ಮಾರ್ಗಕ್ರಮಣವು ಸುಲಭ ಮತ್ತು ಶೀಘ್ರವಾಗಿ ಆಗುವುದು. ಹಾಗೆಯೇ ಜೀವನದಲ್ಲಿನ ಪ್ರತಿಯೊಂದು ಕೃತಿಯ ಆಧ್ಯಾತ್ಮಿಕರಣ (ಪ್ರತಿಯೊಂದು ಕೃತಿಯಿಂದ ಸಾಧನೆಯಾಗುವಂತೆ ಪ್ರತಿಯೊಂದು ಕೃತಿಯನ್ನು ಮಾಡುವುದು) ಮಾಡಿದರೆ ಸಾಧನೆಯು ಬೇಗಬೇಗನೇ ಆಗುವುದು. ಇದರಿಂದ ಸ್ತ್ರೀಯರಿಗೆ ತಮ್ಮೊಂದಿಗೆ ಕುಟುಂಬ ಮತ್ತು ಸಮಾಜ ಇವರಿಗೂ ಆಧ್ಯಾತ್ಮಿಕ ಲಾಭವಾಗುವುದು. ಸ್ತ್ರೀಯರೇ, ‘ಆಧ್ಯಾತ್ಮಿಕ ಸೌಂದರ್ಯವೇ ನಿಜವಾದ ಸೌಂದರ್ಯವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ಸಾಧನೆಯನ್ನು ಮಾಡಲು ಆರಂಭಿಸಿರಿ !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧.೨೦೨೧)

ವಿ-ಅಂಚೆ : mav.research೨೦೧೪@gmail.com

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.