ಸನಾತನದ ‘ಮನೆಮನೆಯಲ್ಲಿ ಕೈದೋಟ’ ಅಭಿಯಾನ

ಸೌ. ರಾಘವಿ ಕೊನೆಕರ

ಪಕ್ಷಿಗಳಿಗೆ ತಂಗುದಾಣ ನಮ್ಮ ಕೃಷಿಯಲ್ಲಿ ಪಕ್ಷಿಗಳು ಬರುವುದು, ಕೀಟನಿಯಂತ್ರಣಕ್ಕಾಗಿ ಅತ್ಯಂತ ಅವಶ್ಯಕವಾಗಿದೆ. ಗಿಡಗಳ ಮೇಲಿರುವ ವಿವಿಧ ಹುಳಗಳು, ಕೀಟಗಳು ನಮಗೆ ಕಾಣಿಸುವುದಿಲ್ಲ. ಆದರೆ ಅವುಗಳು ಪಕ್ಷಿಗಳಿಗೆ ಸಹಜವಾಗಿ ಕಾಣುತ್ತವೆ ಮತ್ತು ಅದು ಅವುಗಳಿಗೆ  ಅತ್ಯಂತ  ಪ್ರಿಯವಾದ ಆಹಾರವಾಗಿದೆ. ಪಕ್ಷಿಗಳನ್ನು ಆಕರ್ಷಿಸಲು ಕೃಷಿಯಲ್ಲಿ ಮೆಕ್ಕೆಜೋಳ, ಜೋಳ, ಸಜ್ಜೆ ಇವುಗಳಂತ ಸಸಿಗಳನ್ನು ನೆಡುವುದು ಅವಶ್ಯಕವಾಗಿದೆ. ಈ ಸಸಿಗಳು ಎಂದರೆ ಪಕ್ಷಿಗಳಿಗೆ ತಂಗುದಾಣ. ಈ ಸಸಿಗಳ ತೆನೆಗಳಲ್ಲಿನ ಎಳೆಯ ಕಾಳುಗಳನ್ನು ತಿನ್ನಲು ಪಕ್ಷಿಗಳು ಬರುತ್ತವೆ ಮತ್ತು ಈ ಕಾಳಿನ ಜೊತೆಗೆ ಇತರ ಸಸ್ಯಗಳ ಮೇಲಿನ ಕೀಟಗಳನ್ನು ಕೂಡ ಹೆಕ್ಕಿ ತಿನ್ನುತ್ತವೆ.

– ಸೌ.  ರಾಘವಿ ಮಯೂರೇಶ ಕೊನೇಕರ, ಢವಳಿ, ಗೋವಾ, (೨೫.೧೧.೨೦೨೨)