ಕತ್ತಲಲ್ಲಿ ಸಂಚಾರವಾಣಿ (ಮೊಬೈಲ್) ನೋಡುವುದರ ಗಂಭೀರ ಪರಿಣಾಮವನ್ನು ತಿಳಿದು ಶಾರೀರಿಕ ಹಾನಿಯನ್ನು ತಡೆಗಟ್ಟಿ !

ಡಾ. ಪಾಂಡುರಂಗ ಮರಾಠೆ

‘ಸದ್ಯ ಸಂಚಾರವಾಣಿಯ (ಮೊಬೈಲ್‌ನ) ಬಳಕೆಯ ಪ್ರಮಾಣ ಬಹಳ ಹೆಚ್ಚಾಗುತ್ತಿದೆ. ಹಗಲು ರಾತ್ರಿ ಸಂಚಾರವಾಣಿಯ ಬಳಕೆ ಮಿತಿಮೀರಿದೆ. ಅನೇಕ ಜನರು ರಾತ್ರಿಯ ಕತ್ತಲಲ್ಲಿಯೂ ಬಹಳಷ್ಟು ಹೊತ್ತು ಸಂಚಾರವಾಣಿಯನ್ನು ನೋಡುತ್ತಾರೆ. ಸಂಚಾರವಾಣಿಯನ್ನು ಕತ್ತಲಲ್ಲಿ ಬಳಸುವುದರಿಂದ ಗಂಭೀರ ಶಾರೀರಿಕ ಸಮಸ್ಯೆಗಳು ಉದ್ಭವಿಸಬಹುದು.

೧. ಕತ್ತಲಲ್ಲಿ, ಹಾಗೆಯೇ ಸಂಚಾರವಾಣಿಯ ಮಿತಿ ಮೀರಿದ ಬಳಕೆಯಿಂದ ಕಣ್ಣುಗಳ ಶುಷ್ಕತೆ ಹೆಚ್ಚಾಗುತ್ತದೆ. ಸಂಚಾರವಾಣಿಯ ಪರದೆಯ ಕಡೆಗೆ (ಸ್ಕ್ರಿನ್ ಕಡೆಗೆ) ಸತತ ನೋಡುವುದರಿಂದ ನಮ್ಮ ಕಣ್ಣುಗಳ ತೆರೆಯುವಿಕೆ-ಮುಚ್ಚುವಿಕೆಯು ಕಡಿಮೆ ಪ್ರಮಾಣದಲ್ಲಾಗುತ್ತದೆ. ಇದರಿಂದ ಕಣ್ಣುಗಳ ವಿವಿಧ ಸಮಸ್ಯೆಗಳು ಉದ್ಭವಿಸುತ್ತದೆ. ನಮ್ಮ ಕಣ್ಣುಗಳಲ್ಲಿ ಕಸ ಅಥವಾ ಇತರ ಕೆಲವು ವಸ್ತುಗಳು ಹೋದರೆ ಕಣ್ಣೀರು ಬಂದು ಕಣ್ಣುಗಳು ಸ್ವಚ್ಛವಾಗುವುದು, ಇದು ನೈಸರ್ಗಿಕ ಕ್ರಿಯೆ ಆಗಿರುತ್ತದೆ; ಆದರೆ ಸಂಚಾರವಾಣಿಯ ಬಳಕೆಯಿಂದ ಕಣ್ಣುಗಳಲ್ಲಿ ಅವಶ್ಯವಿದ್ದಷ್ಟು ಕಣ್ಣೀರು ಉತ್ಪನ್ನವಾಗುವುದಿಲ್ಲ. ಇದರ ಪರಿಣಾಮವೆಂದು, ಕಣ್ಣುಗಳು ನಿರೋಗಿಯಾಗಿರುವ ನೈಸರ್ಗಿಕ ಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತದೆ, ದೃಷ್ಟಿಯು ಮಸುಕಾಗಿ ದೃಷ್ಟಿದೋಷವು ಉಂಟಾಗುತ್ತದೆ.

೨. ತಡರಾತ್ರಿಯವರೆಗೆ ಸಂಚಾರವಾಣಿಯನ್ನು ನೋಡಿದರೆ ನಿದ್ರಾಹೀನತೆಯ ರೋಗವು ಬೇರೂರಬಹುದು. ಕೆಲವೊಮ್ಮೆ ಶಾಂತ ನಿದ್ದೆ ಬರದಿರುವುದು, ನಡುನಡುವೆ ಎಚ್ಚರಾಗುವುದು, ಎಚ್ಚರವಾಗುತ್ತಲೇ ಸಂಚಾರವಾಣಿಯನ್ನು ನೋಡುವ ತೀವ್ರ ಇಚ್ಛೆಯಾಗಿ ಹೆಚ್ಚು ಸಮಯದವರೆಗೆ ಅದನ್ನು ನೋಡುವ ಕೃತಿಯಾಗುವುದು, ಸಾಕಷ್ಟು ನಿದ್ದೆಯಾಗದಿರುವುದರಿಂದ ಮನಸ್ಸು ಏಕಾಗ್ರವಾಗದಿರುವುದು, ಅಸ್ವಸ್ಥವೆನಿಸುವುದು ಇವುಗಳಂತಹ ಸಮಸ್ಯೆಗಳಾಗಬಹುದು.

೩. ಕತ್ತಲಲ್ಲಿ ಸಂಚಾರವಾಣಿಯನ್ನು ಬಳಸುವುದರಿಂದ ಅದರಿಂದ ಹೊರಗೆ ಬೀಳುವ ರೆಡಿಯೇಶನ್‌ನ ಕಣ್ಣುಗಳ ಮೇಲೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮವಾಗುತ್ತದೆ. ಇದರಿಂದ ಶರೀರದಲ್ಲಿನ ಮೆಲಾಟೊನಿನ್ ಈ ಹಾರ್ಮೋನ್‌ನ ಮಟ್ಟವು ಕಡಿಮೆಯಾಗತೊಡಗುತ್ತದೆ. ಇದರಿಂದ ಮೆದುಳಿನಲ್ಲಿ ಗಂಟು (ಬ್ರೆನ್ ಟ್ಯೂಮರ್) ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

೪. ಸಂಚಾರವಾಣಿಯಿಂದ ಕೈಗಳ ಮಾಂಸಖಂಡಗಳ ಮೇಲೆ ಒತ್ತಡ ನಿರ್ಮಾಣವಾಗುತ್ತದೆ. ಪರಿಣಾಮಸ್ವರೂಪ, ಮೆದುಳಿನಲ್ಲಿ ನಕಾರಾತ್ಮಕತೆ ನಿರ್ಮಾಣವಾಗುವ ಅಪಾಯ ಹೆಚ್ಚಾಗುತ್ತದೆ.

ಕೆಲವೊಮ್ಮೆ ಕತ್ತಲಲ್ಲಿ ಸಂಚಾರವಾಣಿಯನ್ನು ನೋಡುವುದು ಅನಿವಾರ್ಯವಿರುತ್ತದೆ. ಇಂತಹ ಸಮಯದಲ್ಲಿ ಮುಂದಿನಂತೆ ಕಾಳಜಿವಹಿಸಬೇಕು.

೧. ಕತ್ತಲಲ್ಲಿ ಸಂಚಾರವಾಣಿಯ ಸ್ಕ್ರಿನ್‌ನ ಬ್ರೈಟನೆಸ್ (brightness) ತೀರಾ ಕಡಿಮೆ ಇಡಬೇಕು.

೨. ಕತ್ತಲಲ್ಲಿ, ಹಾಗೆಯೇ ಹಗಲಲ್ಲಿಯೂ ಸಂಚಾರವಾಣಿಯ ಕಡೆಗೆ ತದೇಕಚಿತ್ತದಿಂದ ನೋಡದೇ ಕಣ್ಣುಗಳನ್ನು ಹೆಚ್ಚು ಪ್ರಮಾಣದಲ್ಲಿ ತೆರೆಯುವುದು-ಮುಚ್ಚುವುದು ಮಾಡಬೇಕು.

೩. ಕತ್ತಲಲ್ಲಿ ಸಂಚಾರವಾಣಿಯನ್ನು ನಮ್ಮ ಪಕ್ಕದಲ್ಲಿಟ್ಟುಕೊಳ್ಳದೇ ಶರೀರದಿಂದ ಕನಿಷ್ಠ ೩ ಅಡಿ ದೂರವಿಡಬೇಕು, ಇದರಿಂದ ಅದರ ಕಿರಣಗಳ ನೇರ ಪರಿಣಾಮ ಶರೀರದ ಮೇಲಾಗುವುದಿಲ್ಲ.

ದೇವರು ನಮಗೆ ನೀಡಿದ ಶರೀರದ ಕಾಳಜಿ ತೆಗೆದುಕೊಳ್ಳುವುದು, ನಮ್ಮ ಸಾಧನೆಯಾಗಿದೆ, ಈ ಭಾವದಿಂದ ಶರೀರಕ್ಕೆ ಹಾನಿಯಾಗದಂತೆ ಎಚ್ಚರವಹಿಸಿ.’

– ಡಾ. ಪಾಂಡುರಂಗ ಮರಾಠೆ, ಫೋಂಡಾ, ಗೋವಾ. (೨೬.೧೧.೨೦೨೨)