‘ಹಿಂದೂ ಧರ್ಮ’ವು ಹಿಂದುತ್ವದ ಅವಿಭಾಜ್ಯ ಅಂಗವೇ ಆಗಿದೆ ! – ಸ್ವಾತಂತ್ರ್ಯವೀರ ಸಾವರಕರ

ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆಯಾಗಿವೆಯೇ ?

ಸ್ವಾತಂತ್ರ್ಯವೀರ ಸಾವರಕರ

ಸದ್ಯ ಹಿಂದುತ್ವ ಮತ್ತು ಹಿಂದೂ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯನ್ನು ಹರಡಲಾಗುತ್ತಿದೆ. ಅದನ್ನು ದೂರಗೊಳಿಸುವುದು ಆವಶ್ಯಕವಾಗಿದೆ. ‘ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆಯಾಗಿವೆಯೇ ? ಒಂದು ವೇಳೆ ಬೇರೆಯಾಗಿದ್ದರೆ, ಏಕೆ ಬೇರೆಯಾಗಿವೆ ಮತ್ತು ಹೇಗೆ ಬೇರೆಯಾಗಿವೆ ?’, ಎಂಬುದರ ಉತ್ತರವನ್ನು ಹುಡುಕಲು ಈ ಲೇಖನದ ಮೂಲಕ ಪ್ರಯತ್ನಿಸಲಾಗಿದೆ.

೧. ಹಿಂದುತ್ವದ ಬಗೆಗಿನ ತಪ್ಪು ತಿಳುವಳಿಕೆಗಳು

ನೀವು ಯಾವುದಾದರೂ ಸಾಮಾನ್ಯ ಹಿಂದುತ್ವನಿಷ್ಠನಿಗೆ ಹಿಂದುತ್ವ ಮತ್ತು ಹಿಂದೂ ಧರ್ಮವೆಂದರೇನು ? ಎಂದು ಕೇಳಿದರೆ, ಅವನು ‘ಎರಡೂ ಒಂದೇ ಆಗಿದೆ’ ಎಂದು ಹೇಳಬಹುದು ಅಥವಾ ಅವನು, ‘ಹಿಂದುತ್ವವು ಹಿಂದೂ ಧರ್ಮದ ಹಾಗೆಯೇ ಇದೆ, ಆದರೆ ಅದಕ್ಕೆ ರಾಜಕಾರಣವನ್ನು ಜೋಡಿಸಲಾಗಿದೆ’ ಎಂದು ಹೇಳಬಹುದು. ಒಬ್ಬ ಮಾರ್ಕ್ಸ್‌ವಾದಿ ಇತಿಹಾಸತಜ್ಞನಿಗೆ ಅಥವಾ ನಾಸ್ತಿಕ ಅಥವಾ ಜಾತ್ಯತೀತ ವ್ಯಕ್ತಿಗೆ ಕೇಳಿದರೆ ಅವನು, ‘ಹಿಂದುತ್ವವೆಂದರೆ, ಉಚ್ಚವರ್ಣೀಯ, ಹಿಂದೂ ಫ್ಯಾಸಿಸ್ಟ್ (ಉಗ್ರ ಬಲಪಂಥೀಯ), ರಾಜಕೀಯ ವರ್ಚಸ್ವವಾದಿ,  ದುರಾಚಾರವಾದಿ ಅಥವಾ ಕೋಮುವಾದಿ ಶಕ್ತಿಯಾಗಿದೆ’ ಎಂದು ಹೇಳಬಹುದು. ಅದರಲ್ಲಿಯೂ ಹಿಂದುತ್ವವನ್ನು ಉಗ್ರವಾದದೊಂದಿಗೆ ಜೋಡಿಸುವುದು, ಅವರ ವಿಚಾರಶೀಲವೃತ್ತಿಯಲ್ಲಿರುವ ಕೊರತೆಯನ್ನೇ ತೋರಿಸುತ್ತದೆ; ಆದರೂ ತಥಾಕಥಿತ ವಿಚಾರವಾದಿಗಳು ಇನ್ನೂ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಬಾರದೆಂದು ಹಿಂದುತ್ವ ಮತ್ತು ಹಿಂದೂ ಧರ್ಮದ ಸಂಬಂಧವನ್ನು ತಿಳಿದುಕೊಳ್ಳೋಣ.

೨. ಹಿಂದುತ್ವವು ಇತಿಹಾಸವಾಗಿದೆ !

ಸ್ವಾತಂತ್ರ್ಯವೀರ ಸಾವರಕರರು ತಮ್ಮ ‘ಹಿಂದುತ್ವ’ ಈ ಗ್ರಂಥದಲ್ಲಿ ಮುಂದಿನಂತೆ ಬರೆದಿದ್ದಾರೆ, ‘ಹಿಂದೂ ಧರ್ಮ’ ಈ ಶಬ್ದವು ಕೇವಲ ‘ಹಿಂದುತ್ವ’ದಿಂದ ಉತ್ಪನ್ನವಾಗಿರುವ ಅಂಶಾತ್ಮಕ ಮತ್ತು ಒಂದು ದೇಶವನ್ನು ತೋರಿಸುವ ಶಬ್ದವಾಗಿದೆ. ‘ಹಿಂದುತ್ವ’ ಈ ಶಬ್ದದ ಅರ್ಥವನ್ನು ಸ್ಪಷ್ಟಗೊಳಿಸದಿದ್ದರೆ ‘ಹಿಂದೂ ಧರ್ಮ’ ಇದರ ಅರ್ಥ ಅನಿಶ್ಚಿತವಾಗಿಯೇ ಉಳಿಯುತ್ತದೆ.’

೩. ಐತಿಹಾಸಿಕ ಐಕ್ಯದ ರಾಷ್ಟ್ರೀಯತ್ವ ಅಂದರೆ ಹಿಂದುತ್ವ !

ಈ ಇತಿಹಾಸದ ಸಾರವನ್ನು ತೆಗೆದುಕೊಳ್ಳುವಾಗ ವಿಚಾರವನ್ನು ಮಾಡಬೇಕಾದ ವಿಷಯವೆಂದರೆ, ಇಂತಹ ಯಾವ ವಿಷಯದಿಂದ ಹಿಂದೂಗಳನ್ನು ಐಕ್ಯದಿಂದ ಒಂದು ರಾಷ್ಟ್ರೀಯತ್ವದಿಂದ ಕಟ್ಟಿಟ್ಟಿದೆ ? ನಿಜವಾಗಿಯೂ ಹಿಂದೂ ಸಂಸ್ಕೃತಿ ಮತ್ತು ಧರ್ಮ ಇವುಗಳಲ್ಲಿನ ಹಿಂದೂತನ ನಿಶ್ಚಿತವಾಗಿ ಏನಾಗಿದೆ ? ಇಂತಹ ಪ್ರಶ್ನೆಗಳಿಗೆ ಸಾವರಕರರು ಉತ್ತರ ಹುಡುಕುತ್ತಿದ್ದರು. ಆ ಐತಿಹಾಸಿಕ ಐಕ್ಯತೆಯ ರಾಷ್ಟ್ರೀಯತ್ವಕ್ಕೆ ಅವರು ‘ಹಿಂದುತ್ವ’ವೆಂದು ಹೆಸರು ಕೊಟ್ಟರು  !

ಸಾವರಕರ ಹೇಳುತ್ತಾರೆ, “ಹಿಂದುತ್ವದ ಅರ್ಥವನ್ನು ಕೆಲವರು ‘ಹಿಂದೂ ಧರ್ಮ’ವೆಂದು ತಿಳಿಯುತ್ತಾರೆ, ಆದರೆ ಅದು ಹಾಗಿಲ್ಲ. ‘ಧರ್ಮ’ ಈ ಶಬ್ದದಿಂದ ಸಾಮಾನ್ಯವಾಗಿ ಯಾವುದಾದರೊಂದು ಆಧ್ಯಾತ್ಮಿಕ ಅಥವಾ ಧಾರ್ಮಿಕ ಪಂಥಗಳ ಅಥವಾ ಮತಗಳ ನಿಯಮಗಳ ಅಥವಾ ಸಿದ್ಧಾಂತದ ಸಂಗ್ರಹ ಎಂದು ಅರ್ಥ ಮಾಡಿಕೊಳ್ಳಲಾಗುತ್ತದೆ. ಭಾಷೆಯ ಪದ್ಧತಿಗಳು ನಮ್ಮ ದಾರಿಗೆ ಅಡ್ಡ ಬರದೇ ಇದ್ದರೆ, ‘ಹಿಂದೂತನ’ ಇದೇ ಶಬ್ದ ಹಿಂದುತ್ವಕ್ಕೆ ಸಮೀಪವೆಂದು ನಾವು ಆಯೋಜಿಸುತ್ತಿದ್ದೆವು.”

೪. ‘ಹಿಂದೂಯಿಸಮ್’ ಎಂದರೆ ಎಲ್ಲ ಹಿಂದೂಜಾತಿ !

ಸಹಜವಾಗಿ ‘ಹಿಂದೂಯಿಸಮ್’ (ಹಿಂದೂ ಧರ್ಮ) ಇದರ ಅರ್ಥ ‘ಈ ಭೂಮಿಯಲ್ಲಿರುವ ಜನರ ನೈಸರ್ಗಿಕ ಧರ್ಮ’ ಎಂದು ಆಗಿರಬೇಕು. ‘ಹಿಂದೂಯಿಸಮ್’ ಇದೊಂದು ಧರ್ಮಪದ್ಧತಿಯಾಗಿದೆ; ಆದರೆ ಪರಸ್ಪರ ಪ್ರತಿಕೂಲ, ಇಷ್ಟೇ ಏಕೆ ಪರಸ್ಪರ ವಿರೋಧಿ ಪದ್ಧತಿಯ ಸಮೂಹವು ಹೇಗೆ ಒಂದಾಗಿರಲು ಸಾಧ್ಯ ? ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ ಹಿಂದೂಗಳು ಹೀಗೆ ಐಕ್ಯತೆಯಿಂದ ಇರುವುದೇ ಇಲ್ಲ ಮತ್ತು ಇದು ಒಂದು ರಾಷ್ಟ್ರವೂ ಅಲ್ಲ; ತದ್ವಿರುದ್ಧ ವಿವಿಧ ಧರ್ಮಪಂಥಗಳಲ್ಲಿ ವಿಭಜಿಸಲ್ಪಟ್ಟಿದ್ದಾರೆ, ಎಂಬ ನಿಷ್ಕರ್ಷವನ್ನು ತೆಗೆಯಲಾಗುತ್ತದೆ.

ಸಾವರಕರರು ಹೇಳುತ್ತಾರೆ, ‘ಹಿಂದುತ್ವ’ ಮತ್ತು ‘ಹಿಂದೂಯಿಸಮ್’ ಇವೆರಡೂ ಶಬ್ದಗಳು ‘ಹಿಂದೂ’ ಈ ಶಬ್ದದಿಂದ ಉತ್ಪನ್ನವಾಗಿರುವುದರಿಂದ ಅವುಗಳ ಅರ್ಥ ‘ಎಲ್ಲ ಹಿಂದೂ ಜಾತಿ’ಗಳು ಎಂದೇ ತೆಗೆದುಕೊಳ್ಳಬೇಕು. ‘ಹಿಂದುಯಿಸಮ್’ನ ಯಾವ ವ್ಯಾಖ್ಯೆಯ ಯೋಗದಿಂದ ಹಿಂದೂ ಜಾತಿಯ ಯಾವುದೇ ಮಹತ್ವದ ಭಾಗ ಹೊರಗೆ ಉಳಿದರೆ ಅಥವಾ ಯಾವುದೇ ಕಾರಣದಿಂದ ಅದಕ್ಕೆ ತನ್ನ ಪರಿಚಯವನ್ನು ಅಡಗಿಸಿಡುವುದಾದರೆ ಆ ವ್ಯಾಖ್ಯೆಯು ನಿರುಪಯೋಗಿಯಾಗುವುದು. ‘ಹಿಂದುಯಿಸಮ್’ ಇದರ ಅರ್ಥವೆಂದರೆ, ಹಿಂದೂ ಜನರಲ್ಲಿ ಸರ್ವಸಾಧಾರಣ ಯಾವ ಧಾರ್ಮಿಕ ತಿಳುವಳಿಕೆಗಳು ಕಂಡುಬರುತ್ತವೆಯೋ, ಅವುಗಳನ್ನು ಒಗ್ಗೂಡಿಸುವ ಪದ್ಧತಿ ಹಾಗೂ ಹಿಂದೂಗಳ ಈ ಧಾರ್ಮಿಕ ತಿಳುವಳಿಕೆಗಳನ್ನು ಹುಡುಕಿ ತೆಗೆಯುವುದು ಅಂದರೆ ‘ಹಿಂದೂಯಿಸಮ್’ ಏನಿದೆ, ಎಂಬುದನ್ನು ತಿಳಿದು ಕೊಳ್ಳುವುದೊಂದೇ ಮಾರ್ಗವೆಂದು ಹೇಳಬೇಕು. ಅದಕ್ಕಾಗಿ ಮೊದಲು ನಾವು ‘ಹಿಂದೂ’ ಈ ಶಬ್ದದ ವ್ಯಾಖ್ಯೆಯನ್ನು ಮಾಡಬೇಕು; ಆದರೆ ಧಾರ್ಮಿಕ ಭಿನ್ನತೆಯಿದ್ದರೂ ಜೈನ, ವೈದಿಕ, ಸನಾತನಿ ಬೌದ್ಧ ಧರ್ಮಪಂಥಗಳ ವಿರುದ್ಧ ಅಭಿಪ್ರಾಯಗಳಿದ್ದರೂ ಎಲ್ಲರೂ ಒಟ್ಟಾಗಿ ಬಾಳುತ್ತಿದ್ದಾರೆ, ಅವರಲ್ಲಿ ಅವರ ಹಿಂದೂತನ ಇದ್ದೇ ಇದೆ ! ಅವರಲ್ಲಿನ ಈ ಬಂಧುತ್ವ, ಐಕ್ಯತೆ, ಹಿಂದೂತನ ಅಥವಾ ‘ಹಿಂದುತ್ವ’ವು ನಿಜವಾಗಿಯೂ ಯಾವುದರಿಂದ ಶಾಶ್ವತವಾಗಿ ಉಳಿದಿದೆ ? ಈ ಪ್ರಶ್ನೆಗಳ ಉತ್ತರಗಳು ಇದೇ ಇತಿಹಾಸದಲ್ಲಿವೆ. ಆ ಐಕ್ಯದ, ಹಿಂದುತ್ವದ ಕಾರಣಗಳನ್ನು ಸಾವರಕರರು ಕಂಡುಹಿಡಿದರು.

೫. ಸಾವರಕರರು ‘ಮತಾಂತರಿತರಾಗಿರುವ ಹಿಂದೂಗಳಿಗಾಗಿ ಭಾರತ ‘ಪಿತೃಭೂ’ ಹಾಗೂ ಅರಬಸ್ತಾನ ಅಥವಾ ಪ್ಯಾಲೆಸ್ಟೈನ್ ಅವರ ‘ಪುಣ್ಯಭೂ’, ಎಂದು ಹೇಳಿದ್ದಾರೆ

ಸಾವರಕರರು ಈ ವಿಷಯದ ಬಗ್ಗೆ ಸ್ಪಷ್ಟವಾಗಿ ಹೇಳುತ್ತಾರೆ, “ಮೊದಲು ಬಲವಂತವಾಗಿ ಹಿಂದೂಗಳನ್ನು ಮುಸಲ್ಮಾನ ಅಥವಾ ಕ್ರೈಸ್ತರನ್ನಾಗಿ ಮಾಡಲಾಯಿತು, ಆದ್ದರಿಂದಲೇ ಅವರಿಗೆ ಈ ದೇಶವೆಂದರೆ, ‘ಪಿತೃಭೂ’ ಆಗಿದೆ ಹಾಗೂ ಭಾಷೆ, ಲೌಕಿಕ ತಿಳುವಳಿಕೆ ಮತ್ತು ಇತಿಹಾಸ ಇವೆಲ್ಲವು ಸಂಸ್ಕೃತಿಯ ಕೆಲವು ಅಂಶದಲ್ಲಿ ಯಾರು ಪಾಲುದಾರರಾಗಿದ್ದಾರೆಯೋ, ಅವರು ‘ಪುಣ್ಯಭೂ’ವಿನ ಲಕ್ಷಣ ಮೀಮಾಂಸೆಯಿಂದ ಅವರು ಹಿಂದೂ ಮಾತ್ರ ಆಗಲು ಸಾಧ್ಯವಿಲ್ಲ. ಅವರ ‘ಪುಣ್ಯಭೂ’ ಬಹಳ ದೂರವಿರುವ ಅರಬಸ್ತಾನ ಅಥವಾ ಪ್ಯಾಲೆಸ್ಟೈನ್‌ನಲ್ಲಿದೆ. ನಾವು ಆ ವಿಷಯದಲ್ಲಿ ಅವರನ್ನು ಖಂಡಿಸುವುದಿಲ್ಲ ಅಥವಾ ಆ ವಿಷಯದಲ್ಲಿ ಕಣ್ಣೀರು ಹರಿಸುವುದಿಲ್ಲ. ನಾವು ಕೇವಲ ಯಾವ ವಿಷಯಗಳು ಹೇಗಿವೆಯೋ ಹಾಗೆಯೇ ಹೇಳುತ್ತಿದ್ದೇವೆ.”

೬. ‘ಹಿಂದುತ್ವ’ವು ‘ಹಿಂದೂ’ ಶಬ್ದದ ಆತ್ಮವಾಗಿದೆ !

‘ಹಿಂದೂ ಧರ್ಮ’ವು ಹಿಂದುತ್ವದ ಅವಿಭಾಜ್ಯ ಅಂಗವಾಗಿದೆ. ಹಿಂದುತ್ವ ಎಂದರೆ ಹಿಂದೂತನವಾಗಿದೆ, ಯಾವುದೇ ಉಗ್ರವಾದಿ ಅಥವಾ ರಾಜಕೀಯ ವಿಚಾರಧಾರೆ ಇಲ್ಲ. ‘ಹಿಂದುತ್ವ’ವು ‘ಹಿಂದೂ’ ಶಬ್ದದ ಆತ್ಮವಾಗಿದೆ. – ಕವಿತಕೆ ಆದಿತ್ಯ ಅಜಿತ (ಕೃಪೆ : ದೈನಿಕ ‘ಮುಂಬಯಿ ತರುಣ ಭಾರತ’)