ಆಡಳಿತದಲ್ಲಿ ಜಿಹಾದ್ !

ಸದ್ಯ ದೇಶದಲ್ಲಿ ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ಹಲಾಲ್ ಜಿಹಾದ್’ ಇತ್ಯಾದಿ ಜಿಹಾದ್ ನಡೆಯುತ್ತಿರುವಾಗ, ಈಗ ‘ಆಡಳಿತ ಜಿಹಾದ್’ ಎಂಬುದು ಹೊಸತಾಗಿ ಆರಂಭವಾಗಿದೆಯೆ ಅಥವಾ ಆ ದೃಷ್ಟಿಯಲ್ಲಿ ಯಾರಾದರೂ ಪ್ರಯತ್ನಿಸುತ್ತಿದ್ದಾರೆಯೇ, ಎಂದು ಯಾರಾದರೂ ಹೇಳಿದರೆ, ಆಶ್ಚರ್ಯವೆನಿಸಲಿಕ್ಕಿಲ್ಲ. ಇದರ ಮೂಲಕ ಭಾರತೀಯ ಆಡಳಿತ ಸೇವೆಯಲ್ಲಿ ‘ತಮ್ಮ’ ಜನರನ್ನು ತುರುಕಿಸಿ ದೇಶದ ಆಡಳಿತ ವ್ಯವಸ್ಥೆಯನ್ನು ತಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳುವ ಹೊಂಚನ್ನು ಜಿಹಾದಿಗಳು ರಚಿಸಿದ್ದಾರೆ, ಎಂಬುದು ಇಷ್ಟರಲ್ಲಿ ಬೆಳಕಿಗೆ ಬಂದಿಲ್ಲ; ಆದರೆ ಅಂತಹ ಪ್ರಯತ್ನ ನಡೆಯುತ್ತಿದ್ದರೆ, ಇಂತಹ ಸಾಧ್ಯತೆಯನ್ನು ಯಾರಾದರೂ ಉಲ್ಲೇಖಿಸುತ್ತಿದ್ದರೆ, ಅದರ ಬಗ್ಗೆ ವಿಚಾರ ಮಾಡುವ ಅವಶ್ಯಕತೆಯಿದೆ. ‘ಸುದರ್ಶನ ಟೀವಿ’ ಈ ಹಿಂದಿ ವಾರ್ತಾವಾಹಿನಿಯು ೨ ವರ್ಷಗಳ ಹಿಂದೆ ‘ಯು.ಪಿ.ಎಸ್.ಸಿ. ಜಿಹಾದ್’ ಎಂಬ ಹೆಸರಿನ ಒಂದು ಕಾರ್ಯಕ್ರಮವನ್ನು ರೂಪಿಸಿದ್ದರು. ಅದರಲ್ಲಿ ಅವರು ‘ಮುಸಲ್ಮಾನರು ಭಾರತೀಯ ಆಡಳಿತ ಸೇವೆಯಲ್ಲಿ ಉದ್ದೇಶಪೂರ್ವಕ ನುಗ್ಗಲು ಪ್ರಯತ್ನಿಸುತ್ತಿದ್ದಾರೆ’, ಎಂದು ಹೇಳಿದ್ದರು. ಈ ಕಾರ್ಯಕ್ರಮ ಪ್ರಸಾರವಾಗಬಾರದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದಾಗ ನ್ಯಾಯಾಲಯ ಅದರ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದರ ಅರ್ಥ ೨ ವರ್ಷಗಳ ಹಿಂದೆ ಯಾರೋ ರಾಷ್ಟ್ರೀಯ ಸ್ತರದಲ್ಲಿ ಈ ವಿಚಾರವನ್ನು ಮಂಡಿಸಲಿಕ್ಕಿದ್ದರು; ಆದರೆ ಅದು ಧಾರ್ಮಿಕ ದ್ವೇಷವಾಗಬಹುದೆಂದು ಅದಕ್ಕೆ ನಿರ್ಬಂಧ ಹೇರಲಾಯಿತು. ಈಗ ಇದನ್ನು ಹೇಳುವ ಉದ್ದೇಶವೆಂದರೆ, ಸರಕಾರಿ ಸೇವೆಯಲ್ಲಿ ನೌಕರಿ ಪಡೆಯಲು ಮಹಾರಾಷ್ಟ್ರದಲ್ಲಿ ಅಲ್ಪಸಂಖ್ಯಾತ ವಿಕಾಸ ವಿಭಾಗದಿಂದ ಪ್ರತಿವರ್ಷ ೫೦ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಯ ಪಠ್ಯಕ್ರಮದ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಈಗ ಈ ಅಲ್ಪಸಂಖ್ಯಾತರೆಂದರೆ, ಬಹುಸಂಖ್ಯಾತ ಮುಸಲ್ಮಾನರೆಂದೇ ಹೇಳಲಾಗುತ್ತದೆ. ಮಹಾರಾಷ್ಟ್ರದಲ್ಲಿ ೨೦೦೯ ರಿಂದ ಸರಕಾರದಿಂದ ಅವರಿಗೆ ಆವಶ್ಯಕವಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆ ಯಾರಿಂದಲೂ ವಿರೋಧವಾಗಿಲ್ಲ. ಪ್ರಸ್ತುತ ಸರಕಾರ ಹಿಂದುತ್ವನಿಷ್ಠ ಆಗಿದ್ದರೂ, ‘ಇದರಿಂದ ಮುಂದೆ ಹೀಗೇನಾದರೂ ಘಟಿಸಿದರೆ’, ಎಂದು ಹೇಳಿ ಇದನ್ನು ವಿರೋಧಿಸುವ ಧೈರ್ಯ ಸರಕಾರ ಮಾಡುವುದಿಲ್ಲ, ಎಂಬುದೂ ಅಷ್ಟೆ ಸತ್ಯ; ಏಕೆಂದರೆ ವಿರೋಧಿಗಳು ಅಷ್ಟೇ ವಿಷಯವನ್ನು ಎತ್ತಿಹಿಡಿದು ಸರಕಾರವನ್ನು ಅಲುಗಾಡಿಸುವರು ಎಂಬುದರಲ್ಲಿ ಆಶ್ಚರ್ಯವಿಲ್ಲ. ಆದರೂ ೨೦೦೯ ರಿಂದ ಈ ಯೋಜನೆಯ ಮೂಲಕ ಯಾರನ್ನೆಲ್ಲ ಭರ್ತಿ ಮಾಡಲಾಗಿದೆಯೋ, ಅವರ ಇಷ್ಟರವರೆಗಿನ ಚಟುವಟಿಕೆಗಳನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ. ಇದರ ಜೊತೆಗೆ ಮುಂದೆ ಭರ್ತಿಯಾಗುವವರ ಮೇಲೆ ಕೂಡ ಗಮನಹರಿಸುವ ಅವಶ್ಯಕತೆಯಿದೆ.

ಭಾರತದಲ್ಲಿ ಹಿಂದೂಗಳಿಗೆ ಜಾತ್ಯತೀತತೆಯ ಕಶಾಯವನ್ನು ಕುಡಿಸಲಾಯಿತು ಹಾಗೂ ಅದಕ್ಕನುಸಾರ ಹಿಂದೂಗಳು ವರ್ತಿಸುವುದರಿಂದ ಹಿಂದೂಗಳಿಂದ ಸ್ವಧರ್ಮಕ್ಕಾಗಿ ಸರಕಾರಿ ಅಧಿಕಾರವನ್ನು ಉಪಯೋಗಿಸಲಾಯಿತು ಎನ್ನುವ ಉದಾಹರಣೆಯು ಎಲ್ಲಿಯೂ ಕಾಣಿಸಲಿಲ್ಲ; ಆದರೆ ‘ಯಾರಿಗೆ ದೇಶದ ಮೊದಲು ಧರ್ಮವಿದೆ ಹಾಗೂ ಧರ್ಮಕ್ಕಾಗಿ ಪ್ರಾಣವನ್ನೂ ನೀಡಲು ಸಿದ್ಧರಾಗಿರುವವರು ಇಂತಹ ಹುದ್ದೆಗೆ ತಲುಪಿದಾಗ ಧರ್ಮಕ್ಕಾಗಿಯೇ ಪ್ರಾಧಾನ್ಯತೆಯಿಂದ ಕೃತಿ ಮಾಡುವರು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದ್ದರಿಂದ ಜಾಗರೂಕರಾಗಿರುವ ಅವಶ್ಯಕತೆಯಿದೆ. ಇದಕ್ಕೆ ಕೋಮುದ್ವೇಷವೆಂದು ಹೇಳಲು ಸಾಧ್ಯವಿಲ್ಲ. ಮುಂಬಯಿ ಪೊಲೀಸ್ ದಳದ ಅಂದಿನ ಅಧಿಕಾರಿ ಎ.ಎ. ಖಾನ್ ಇವರ ಮೇಲೆ ಗಲಭೆಯಲ್ಲಿ ಹಿಂದೂಗಳನ್ನು ಗುರಿ ಪಡಿಸಿದ್ದಾರೆ ಎಂಬ ಆರೋಪವಿತ್ತು, ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಸರಕಾರಿ ಯೋಜನೆಯನ್ನು ದುರುಪಯೋಗಿಸಿ ಯಾರಾದರೂ ‘ಆಡಳಿತ ಜಿಹಾದ್’ ಮಾಡುವರು ಅಥವಾ ಮಾಡುತ್ತಿದ್ದರೆ, ಅದನ್ನು ತಡೆಗಟ್ಟುವ ಹೊಣೆ ಸರಕಾರಸಹಿತ ಹಿಂದೂ ಸರಕಾರಿ ಅಧಿಕಾರಿಗಳದ್ದೂ ಅಷ್ಟೇ ಇದೆ.