ಮಾನವನನ್ನು ವಾಸನಾಮುಕ್ತನನ್ನಾಗಿಸಲು ಧರ್ಮದ ಆಂತರಿಕ ಪ್ರೇರಣೆಯೇ ಮಹತ್ವದ್ದಾಗಿದೆ !

ಗುರುದೇವ ಡಾ. ಕಾಟೇಸ್ವಾಮೀಜಿ

‘ಧರ್ಮ ಹಾಗೂ ಸಂಸ್ಕೃತಿಯ ಪ್ರೇರಣೆಯೇ ಮಾನವನನ್ನು (ಪುರುಷ ಮತ್ತು ಸ್ತ್ರೀಯರನ್ನು) ವಾಸನಾಮುಕ್ತಗೊಳಿಸಬಹುದು. ಧರ್ಮ ಮತ್ತು ಸಂಸ್ಕೃತಿಯು ನರನಾಡಿಗಳಲ್ಲಿ ಹರಿಯುವ ತತ್ವಜ್ಞಾನವೇ ಮಾನವನಲ್ಲಿನ ‘ಪುರುಷಾರ್ಥ’ವನ್ನು ಜಾಗೃತಗೊಳಿಸಲು ಸಾಧ್ಯವಿದೆ ! ಅದರ ಉದಾಹರಣೆ ಮುಂದಿನಂತಿದೆ 

೧. ಪದ್ಮಿನಿ ಮತ್ತು ಸಹಸ್ರಶಃ ಕ್ಷತ್ರೀಯ ಸ್ತ್ರೀಯರು ಚಿತ್ತೋಡದ ದುರ್ಗದ ಮೇಲೆ ಪ್ರಜ್ವಲಿಸುತ್ತಿದ್ದ ಬೆಂಕಿಯ ಜ್ವಾಲೆಯಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ನವವಧು ಹಾಡಾರಾಣಿಯ ವಿವಾಹಕ್ಕೆ ಕೇವಲ ಒಂದು ತಿಂಗಳಾಗಿರುತ್ತದೆ. ಸಮರಭೂಮಿಗೆ ಹೋಗುತ್ತಿದ್ದ ಅವಳ ಪತಿಯ ಮನಸ್ಸು ಅವಳ ಸುತ್ತಲೂ ಸುಳಿದಾಡುತ್ತಿತ್ತು. ಅವನು ಹಿಂದಿರುಗಿ ಬರುತ್ತಾನೆ. ಅವನಿಗೆ ಅವಳು ತನ್ನ ಆಂತರಿಕ ಪ್ರೇರಣೆಯಿಂದ ತನ್ನ ಮಸ್ತಕವನ್ನು ಕೊಯ್ದು ಅರ್ಪಿಸುತ್ತಾಳೆ. ಈಗ ಅವನು ನಿಃಸಂಶಯವಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವನು ಎಂಬುದಕ್ಕಾಗಿಯೇ ಅವಳು ಇದೆಲ್ಲವನ್ನೂ ಮಾಡುತ್ತಾಳೆ.

೨. ಓರ್ವ ರಾಜಸ್ಥಾನಿ ರಮಣಿ ಸಮರಭೂಮಿಯಿಂದ ಪಲಾಯನ ಗೈಯ್ಯುವ ತನ್ನ ಪತಿಯನ್ನು ಮನೆಯ ಹೊರಗೆ ನಿಲ್ಲಿಸಿ ಅವನಿಗೆ ಸೀರೆ, ರವಕೆ ಹಾಗೂ ಬಳೆಗಳ ಉಡುಗೊರೆ ಕೊಡುತ್ತಾಳೆ.

೩. ಇನ್ನೋರ್ವ ರಮಣಿ ಇಂತಹ ಹೇಡಿ ಪತಿಯನ್ನು ಮನೆಯೊಳಗೆ ಕರೆದುಕೊಳ್ಳುವುದೇ ಇಲ್ಲ. ಬಾಗಿಲಿನ ಹಿಂದಿನಿಂದ ಅವಳು ಹೇಳುತ್ತಾಳೆ,

‘ಹೇಡಿಗೆ ನನ್ನ ದರ್ಶನವಾಗುವುದಿಲ್ಲ. ಈ ಜನ್ಮದಲ್ಲಿ ಅಷ್ಟೇ ಅಲ್ಲ, ಮುಂದಿನ ಜನ್ಮದಲ್ಲಿಯೂ ಅಲ್ಲ, ಅನೇಕ ಜನ್ಮಗಳಲ್ಲಿಯೂ ಇಲ್ಲ ! ಈ ಜೀವನದಲ್ಲಿ ಪರಾಕ್ರಮ ತೋರಿಸಿರಿ, ಅಂದರೆ ಮುಂದಿನ ಜನ್ಮದಲ್ಲಿ ನಮ್ಮ ಭೇಟಿಯಾಗುವುದು.’

ಧರ್ಮದ ಆಂತರಿಕ ಪ್ರೇರಣೆಯಿಂದ ವಾಸನಮುಕ್ತವಾಗಿರುವ ಸ್ತ್ರೀಯರೆ ಹೀಗೆ ‘ಪೌರುಷ’ವನ್ನು ವ್ಯಕ್ತಪಡಿಸಲು ಸಾಧ್ಯ. ಧರ್ಮದ ಈ ಆಂತರಿಕ ಪ್ರೇರಣೆಯಿಂದ ಪರಮಾತ್ಮನು ಸಮಾಧಿಯನ್ನು ಪ್ರಾಪ್ತ ಮಾಡಿಕೊಡುತ್ತಾನೆ. ವಾಸನೆಯ (ಸಂಭೋಗದ) ವಿಷಯವೇ ಬೇಡ.’

– ಗುರುದೇವ ಡಾ. ಕಾಟೇಸ್ವಾಮೀಜಿ, ನಗರ, ಮಹಾರಾಷ್ಟ್ರ (ಆಧಾರ : ಸಾಪ್ತಾಹಿಕ ‘ಘನಗರ್ಜಿತ’, ಜನವರಿ ೨೦೧೨)