ಎಲ್ಲ ವ್ಯಾವಸಾಯಿಕರು (ವೃತ್ತಿಪರರು) ಡಾ. ರವೀಂದ್ರ ಭೋಸಲೆಯವರ ಕೃತಿಯಿಂದ ಕಲಿತು ತಮ್ಮ ಸಮಷ್ಟಿ ಸಾಧನೆಯಾಗಲು ಪ್ರಯತ್ನಿಸಬೇಕು !ಜೀವನದಲ್ಲಿ ಎಲ್ಲ ಸಮಸ್ಯೆಗಗಳಿಗೆ ‘ಸಾಧನೆ ಮಾಡುವುದು’ ಇದುವೇ ಏಕೈಕ ಉಪಾಯವಾಗಿದೆ. ಕೇವಲ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸುವುದು, ಇದು ‘ವ್ಯಷ್ಟಿ’ ಸಾಧನೆಯಾದರೆ ‘ತಮ್ಮೊಂದಿಗೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿಯೂ ಪ್ರಯತ್ನಿಸುವುದು, ಎಂದರೆ ‘ಸಮಷ್ಟಿ’ ಸಾಧನೆಯಾಗುತ್ತದೆ. ‘ತಮ್ಮ ನೌಕರಿ ಅಥವಾ ವ್ಯವಸಾಯದೊಂದಿಗೆ ಸಮಷ್ಟಿ ಸಾಧನೆಯನ್ನು ಹೇಗೆ ಮಾಡಬಹುದು, ಎಂಬ ಆದರ್ಶವನ್ನು ಡಾ. ರವೀಂದ್ರ ಭೋಸಲೆಯವರು ಹಾಕಿ ಕೊಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ರಾಷ್ಟ್ರಾಭಿಮಾನ ಜಾಗೃತ ಮಾಡಲು ಆಸ್ಪತ್ರೆಯಲ್ಲಿ ರಾಷ್ಟ್ರಗೀತೆಯನ್ನು ಹಾಕುವುದು; ರೋಗಿಯ ತೊಂದರೆಯ ಕಾರಣ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕವಿದೆಯೇ ಎಂದು ನಿಖರವಾಗಿ ಕಂಡು ಹಿಡಿಯುವುದು; ಹಾಗೆಯೇ ರೋಗಿಯ ತೊಂದರೆ ಮೂಲದಿಂದಲೇ ನಿವಾರಣೆ ಆಗಬೇಕು ಮತ್ತು ಅವನಿಗೆ ಆನಂದ ಸಿಗಬೇಕೆಂದು ರೋಗಿಗಳಿಗೆ ಸಾಧನೆಯನ್ನು ಕಲಿಸುವವರಲ್ಲಿ ಡಾ. ರವೀಂದ್ರ ಭೋಸಲೆಯವರು ಏಕೈಕ ಡಾಕ್ಟರರಾಗಿರಬಹುದು. ಎಲ್ಲ ಡಾಕ್ಟರರು ಮಾತ್ರವಲ್ಲ ವೃತ್ತಿಪರರೂ ಈ ರೀತಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಮುಂಬರುವ ಹಿಂದೂ ರಾಷ್ಟ್ರದಲ್ಲಿ ಎಲ್ಲ ವೃತ್ತಿಪರರು ಇದೇ ಮನೋಭಾವ ಹೊಂದಿರುತ್ತಾರೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೩೦.೯.೨೦೨೨) |
‘ಡಾ. ಭೋಸಲೆ ಹಾಸ್ಪಿಟಲ್ ಅನ್ನು ದೇವರು ನನಗೆ ಸಾಧನೆಯನ್ನು ಮಾಡಲು ಮಾಧ್ಯಮವೆಂದು ನನಗಾಗಿ ಸ್ಥಾಪಿಸಿದ್ದಾರೆ ಎಂದು ನನಗನಿಸುತ್ತದೆ. ದೇವರು ನಮ್ಮ ತಂದೆಯಾಗಿದ್ದಾರೆ. ಅವರೇ ನಮ್ಮನ್ನು ನಿರ್ಮಿಸಿದ್ದಾರೆ. ಆದುದರಿಂದ ದೇವರು ಅನೇಕ ಸಲ ನನಗೆ ಯಾವುದು ನಮಗಾಗಿ ಆವಶ್ಯಕವಾಗಿರುತ್ತದೆಯೋ ಅದನ್ನೇ ಅವರು ನಮಗೆ ನೀಡುತ್ತಿರುತ್ತಾರೆ ಎಂಬ ಪ್ರಚೀತಿಯನ್ನು ನೀಡಿದ್ದಾರೆ. ಆದುದರಿಂದ ನನ್ನ ದೇವರ ಮೇಲಿನ ಶ್ರದ್ಧೆಯು ಹೆಚ್ಚಾಯಿತು. ನನ್ನದು ವ್ಯಷ್ಟಿ ಪ್ರಕೃತಿ ಇದೆ. ಆದುದರಿಂದ ದೇವರು ನನ್ನಿಂದ ಆಸ್ಪತ್ರೆಯಲ್ಲಿದ್ದು ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಿದ್ದೇನೆ.
೧. ಹೊರ ರೋಗಿಗಳ ವಿಭಾಗ (ಓಪಿಡಿಯನ್ನು) ಆರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಕುವುದು
ಜನರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಳಿಸಲು ಹೊರರೋಗಿಗಳ ವಿಭಾಗವನ್ನು ಆರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಕುವ ಒಂದು ಒಳ್ಳೆಯ ಉಪಕ್ರಮವನ್ನು ದೇವರು ನನಗೆ ಸೂಚಿಸಿದರು. ಪ್ರತಿದಿನ ಹೊರ ರೋಗಿಗಳ ವಿಭಾಗವನ್ನು ಆರಂಭಿಸುವ ಮೊದಲು ಎಲ್ಲರಿಗೂ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲಲು ಹೇಳಲಾಗುತ್ತದೆ. ರಾಷ್ಟ್ರಗೀತೆಯನ್ನು ಕೇಳಿದ ನಂತರ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೂ ಒಳ್ಳೆಯದೆನಿಸುತ್ತದೆ.
೨. ಆಸ್ಪತ್ರೆಯಲ್ಲಿ ಮಾಡಲಾಗುವ ಆಧ್ಯಾತ್ಮಿಕ ಉಪಾಯ
೨ ಅ. ಆಸ್ಪತ್ರೆಯಲ್ಲಿ ಎಲ್ಲ ಸ್ಥಳಗಳಲ್ಲಿ ಕರ್ಪೂರ ಮತ್ತು ಬಜೆಯ ಮಿಶ್ರಣವನ್ನಿಡುವುದು : ಒಂದು ಪಾತ್ರೆಯಲ್ಲಿ ಕರ್ಪೂರ ಮತ್ತು ಬಜೆಯ ಮಿಶ್ರಣವನ್ನು ಹೊರ ರೋಗಿಗಳ ವಿಭಾಗ (ಓಪಿಡಿ), ಸಾಮಾನ್ಯ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಶನ್ ಕೊಠಡಿ), ವಿಶೇಷ ಕೊಠಡಿ (ಸ್ಪೆಶಲ್ ಕೊಠಡಿ) ಇತ್ಯಾದಿ ಸ್ಥಳಗಳಲ್ಲಿ ಉಪಾಯಗಳಿಗಾಗಿ ಇಡಲಾಗಿದೆ. ಇದರಿಂದ ಹಲವರು ಚಿಕಿತ್ಸಾಲಯದಲ್ಲಿನ ವಾತಾವರಣವು ಪ್ರಸನ್ನವಾಗಿರುತ್ತದೆ ಎಂದು ಅನುಭವಿಸಿದ್ದಾರೆ.
೨ ಆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಊದುಬತ್ತಿ ಹಚ್ಚಿಡುವುದು : ಸಾಧ್ಯವಾದಾಗ ಪ್ರತಿಯೊಂದು ಚಿಕ್ಕ-ದೊಡ್ಡ ಶಸ್ತ್ರಚಿಕಿತ್ಸೆಯ ಮೊದಲು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸನಾತನದ ಚಂದನದ ಊದುಬತ್ತಿಯನ್ನು ಉರಿಸಲಾಗುತ್ತದೆ. ಇದರಿಂದ ದೇವರು ನನಗೆ ‘ಶಸ್ತ್ರಚಿಕಿತ್ಸೆ ಬೇಗನೆ ಮತ್ತು ನಿರ್ವಿಘ್ನವಾಗಿ ನೆರವೇರುತ್ತದೆ’, ಎಂಬ ಅನುಭೂತಿಯನ್ನು ನೀಡಿದ್ದಾರೆ.
೩. ತಮ್ಮ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆದಾಗ ಬಂದ ಅನುಭೂತಿ
೩ ಅ. ರೋಗಿಗಳ ತಪಾಸಣೆ ಮಾಡಿದ ನಂತರ ಸ್ವತಃದ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆದಾಗ ಆಯಾಸವಾಗುವ ಪ್ರಮಾಣ ಕಡಿಮೆಯಾಗುವುದು : ಈ ಮೊದಲು ರೋಗಿಗಳನ್ನು ಪರೀಕ್ಷಿಸಿದ ನಂತರ ನನಗೆ ಆಗಾಗ ಆಯಾಸವಾಗುವುದು ಮತ್ತು ತಲೆ ಜಡವಾಗುವುದು, ಈ ರೀತಿಯ ತೊಂದರೆಯಾಗುತ್ತಿತ್ತು. ‘ಈ ಆಯಾಸ ಶಾರೀರಿಕವಾಗಿದೆ’ ಎಂಬ ವಿಚಾರ ಮಾಡಿ ನಾನು ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆನು. ಕೆಲವೊಮ್ಮೆ ವಿಶ್ರಾಂತಿ ತೆಗೆದುಕೊಂಡರೂ ನನಗೆ ಗುಣವೆನಿಸುತ್ತಿರಲಿಲ್ಲ. ಅನಂತರ ಒಂದು ದಿನ ದೇವರು ನನಗೆ ನನ್ನ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯಲು ಸೂಚಿಸಿದರು. ನಾನು ೧೦ ನಿಮಿಷಗಳ ಕಾಲ ಆವರಣವನ್ನು ತೆಗೆದಾಗ ನನಗೆ ಒಳ್ಳೆಯದೆನಿಸತೊಡಗಿತು ಮತ್ತು ನನ್ನ ಎಲ್ಲ ತೊಂದರೆಗಳು ಇಲ್ಲದಂತಾದವು. ಅಂದಿನಿಂದ ಪ್ರತಿಯೊಂದು ರೋಗಿಯನ್ನು ಪರೀಕ್ಷಿಸಿದ ನಂತರ ಎರಡನೇಯ ರೋಗಿ ಒಳಗೆ ಬರುವ ಮೊದಲು ನಾನು ನನ್ನ ಮೇಲಿನ ಆವರಣವನ್ನು ತೆಗೆಯುತ್ತೇನೆ. ಇದರಿಂದ ನನಗಾಗುವ ಆಯಾಸದ ಪ್ರಮಾಣ ಕಡಿಮೆಯಾಗಿದೆ.
೩ ಆ. ಪ್ರತಿ ಶಸ್ತ್ರಚಿಕಿತ್ಸೆಗೂ ಮೊದಲು ನಾನು ನನ್ನ ಮೇಲಿನ ಆವರಣವನ್ನು ತೆಗೆಯುತ್ತೇನೆ. ಹಾಗಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನನಗೆ ಆಯಾಸವಾಗುವುದಿಲ್ಲ ಮತ್ತು ಶಸ್ತ್ರಚಿಕಿತ್ಸೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
೪. ರೋಗಿಗಳ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಮಾಡುವಾಗ ಸ್ವತಃ ನಾಮಜಪವನ್ನು ಮಾಡಲು ಪ್ರಯತ್ನಿಸುವುದು
ಶ್ರೀ ಗುರುದೇವರು ಹೇಳಿದಂತೆ, ನಾನು ಶ್ರೀಕೃಷ್ಣನ ಜಪವನ್ನು ಮಾಡುತ್ತಾ ರೋಗಿಗಳನ್ನು ಪರೀಕ್ಷಿಸುತ್ತೇನೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ನನ್ನ ನಾಮಜಪವು ಮಧ್ಯದಲ್ಲಿ ನಿಲ್ಲುತ್ತದೆ. ಇದು ಗಮನಕ್ಕೆ ಬಂದ ನಂತರ, ನಾನು ಅದನ್ನು ಮತ್ತೆ ಆರಂಭಿಸುತ್ತೇನೆ.
೫. ರೋಗಿಗಳಿಗೆ ಸಾಧನೆಯನ್ನು ಕಲಿಸುವುದು ಮತ್ತು ದೇವರಲ್ಲಿ ಅವರ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸುವುದು
ನನ್ನ ಬಳಿಗೆ ಬರುವ ಜಿಜ್ಞಾಸು ರೋಗಿಗಳಿಗೆ ನಾನು ಸಾಧನೆಯ ಮಹತ್ವವನ್ನು ಹೇಳುತ್ತೇನೆ ಮತ್ತು ಸಾಧನೆಯನ್ನು ಮಾಡಲು ಸಿದ್ಧರಿರುವ ಮತ್ತು ಒಪ್ಪುವ ರೋಗಿಗಳಿಗೆ ಈ ಕೆಳಗಿನ ಕೃತಿಗಳನ್ನು ಮಾಡುತ್ತೇನೆ.
೫ ಅ. ರೋಗಿಗಳಿಗೆ ಅವರ ತೊಂದರೆಯ ಕಾರಣವನ್ನು ತಿಳಿಸಿ ಅದನ್ನು ನಿವಾರಿಸಲು ನಾಮಜಪಿಸಲು ಹೇಳುವುದು : ಶ್ರೀ ಗುರುದೇವರ ಕೃಪೆಯಿಂದ ಹೊರರೋಗಿ ವಿಭಾಗಕ್ಕೆ ಬರುವ ರೋಗಿಗಳಿಗೆ ಅವರ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಕಾರಣಗಳಲ್ಲಿ ಯಾವುದಾಗಿದೆ ಎಂಬುದು ನನಗೆ ಹೇಳಲು ಸಾಧ್ಯವಾಗತೊಡಗಿದೆ. ಅದರಂತೆ ಅವರಿಗೆ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ನಾಮಜಪವನ್ನು ಮಾಡಲು ಹೇಳುತ್ತೇನೆ. ‘ತಪಾಸಣೆಗಾಗಿ ಬರುವ ರೋಗಿಗಳಲ್ಲಿ ಹೆಚ್ಚಿನವರಿಗೆ ‘ಶ್ರೀ ಹನುಮತೇ ನಮಃ |’ ಮತ್ತು ‘ಶ್ರೀ ಗುರುದೇವ ದತ್ತ |’ ಇವುಗಳ ಪೈಕಿ ಒಂದು ಜಪದ ಅಗತ್ಯ ಇರುತ್ತದೆ’, ಎಂಬುದು ನನಗೆ ಗಮನಕ್ಕೆ ಬಂದಿದೆ. ಹಾಗಾಗಿ ನಾನು ರೋಗಿಗಳಿಗೆ ಅವರ ಸಂಚಾರವಾಣಿಯಲ್ಲಿ ‘ಸನಾತನ ಚೈತನ್ಯವಾಣಿ’ ಅಪ್ಲಿಕೇಶನ್‌ಅನ್ನು ಡೌನ್‌ಲೋಡ್ ಮಾಡಿಸಿ ತಕ್ಷಣವೇ ನಾಮಜಪವನ್ನು ಆರಂಭಿಸಲು ಹೇಳುತ್ತೇನೆ. ‘ಈ ಜಪವನ್ನು ೨೪ ಗಂಟೆಗಳ ಕಾಲ ಮೆಲುಧ್ವನಿಯಲ್ಲಿ ನಿಮ್ಮ ಹತ್ತಿರ ಇರಿಸಿ ಮತ್ತು ಅದರೊಂದಿಗೆ ನೀವು ಸಹ ಜಪ ಮಾಡಿ ಎಂದು ಹೇಳುತ್ತೇನೆ. ‘ನಾನೂ ಜಪ ಹಾಕಿದ್ದೇನೆ’, ಎಂದು ಅವರಿಗೆ ತೋರಿಸುತ್ತೇನೆ.
೫ ಆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ (ವಾರ್ಡ್‌ನಲ್ಲಿ ದಾಖಲಾದಾಗ) ‘ಸನಾತನ ಚೈತನ್ಯವಾಣಿ’ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ರೋಗಿಯ ಇಷ್ಟ ದೇವತೆಯ ಜಪವನ್ನು ಹಚ್ಚಿಡುವ ಪ್ರಯತ್ನವಿರುತ್ತದೆ. ಆದ್ದರಿಂದ ಆ ನಾಮಜಪವು ಅವರ ಅಂತರ್ಮನಕ್ಕೆ ಹೋಗುತ್ತದೆ.
೫ ಇ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾಮಜಪವನ್ನು ಮಾಡಲು ಹೇಳಿ ಅವರ ಕಿವಿಯ ಬಳಿ ಸಂಚಾರವಾಣಿಯಲ್ಲಿ ಆ ಜಪ ಹಾಕಿಡುವುದು : ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರೋಗಿಯ ಅಂತರ್ಮನಸ್ಸಿನ ವರೆಗೆ ನಾಮಜಪ ತಲುಪಿಸುವ ಅವಕಾಶ ನನಗೆ ಸಿಗುತ್ತದೆ. ಶಸ್ತ್ರಚಿಕಿತ್ಸೆಗಾಗಿ ರೋಗಿಯು ತನ್ನ ದೇಹವನ್ನು ನನಗೆ ಸಂಕೋಚವಿಲ್ಲದೇ ಒಪ್ಪಿಸಿದ್ದರಿಂದ ಅವನ ಹೊರ ಮನಸ್ಸಿನಲ್ಲಿ ಯಾವುದೇ ಗೊಂದಲವಿರುವುದಿಲ್ಲ. ಆ ಸಮಯದಲ್ಲಿ ಅವನ ಅಂತರ್ಮನಸ್ಸು ಹೆಚ್ಚು ಗ್ರಹಿಸುವ ಸ್ಥಿತಿಯಲ್ಲಿರುತ್ತದೆ. ಅದರ ಸದುಪಯೋಗವನ್ನು ಪಡೆದುಕೊಂಡು ನಾನು ರೋಗಿಗೆ ‘ಅವನ ಇಷ್ಟದೇವತೆ ಅಥವಾ ಉಪಾಸ್ಯದೇವತೆ ಯಾರು ?’, ಎಂದು ಕೇಳುತ್ತೇನೆ ಮತ್ತು ಆ ದೇವತೆಯ ಜಪವನ್ನು ನಾವಿಬ್ಬರೂ ಮೊದಲು ಐದು ಬಾರಿ ದೊಡ್ಡದಾಗಿ ಹೇಳುತ್ತೇವೆ. ನಂತರ ರೋಗಿಗೆ ಅವನ ಮನಸ್ಸಿನಲ್ಲಿಯೆ ಆ ನಾಮಜಪವನ್ನು ಮಾಡುವಂತೆ ಹೇಳುತ್ತೇನೆ. ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ, ನಡುನಡುವೆ ರೋಗಿಗೆ ‘ನಿಮ್ಮ ನಾಮಜಪ ನಡೆದಿದೆಯೇ ?’ ಎಂದು ಕೇಳಿ ಅವರಿಗೆ ನಾಮ ಜಪದ ಬಗ್ಗೆ ನೆನಪಿಸುತ್ತೇನೆ. ಅವರ ಇಷ್ಟದೇವತೆಯ ಜಪ ‘ಸನಾತನ ಚೈತನ್ಯವಾಣಿ’ ಅಪ್ಲಿಕೇಶನ್‌ನಲ್ಲಿದ್ದರೆ, ಶಸ್ತ್ರಚಿಕಿತ್ಸೆ ಮುಗಿಯುವ ವರೆಗೂ ಅವರ ಕಿವಿಯ ಬಳಿ ಸಣ್ಣ ಧ್ವನಿಯಲ್ಲಿ ಜಪ ಹಾಕಿ ಇಡುತ್ತೇನೆ.
೫ ಈ. ಶಸ್ತ್ರಚಿಕಿತ್ಸೆಯ ಬಳಿಕ ‘ಇಷ್ಟದೇವತೆಯ ಕೃಪೆಯಿಂದ ಶಸ್ತ್ರಚಿಕಿತ್ಸೆಯು ವ್ಯವಸ್ಥಿತವಾಗಿ ನಿರ್ವಿಘ್ನವಾಗಿ ನಡೆದಿದೆ. ನಿಮ್ಮ ಮೇಲೆ ಇಷ್ಟದೇವತೆಯ ಕೃಪೆ ಇದೆ’, ಎಂದು ರೋಗಿಗಳಿಗೆ ಹೇಳುವ ಮೂಲಕ ಅವರ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ.
೫ ಉ. ರೋಗಿಗಳಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ಇಷ್ಟದೇವತೆಯ ಕಿರುಗ್ರಂಥವನ್ನು ಉಡುಗೊರೆಯಾಗಿ ನೀಡುವುದು : ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ‘ಗೂಗಲ್’ನಲ್ಲಿ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಆಸ್ಪತ್ರೆಯಲ್ಲಿನ ಸುಧಾರಣೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಆ ಸಮಯದಲ್ಲಿ, ರೋಗಿಗಳಿಗೆ ಅವರ ಇಷ್ಟದೇವತೆಯ ಉಪಾಸನೆ ಮಾಡಲು ಆ ದೇವತೆಯ ಕಿರು ಗ್ರಂಥವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ರೋಗಿಗೆ ಗ್ರಂಥವನ್ನು ಉಡುಗೊರೆಯಾಗಿ ನೀಡುವಾಗ ನಾನು ಮತ್ತು ರೋಗಿಯು ಆ ದೇವರ ಜಪ ಐದು ಬಾರಿ ಜೋರಾಗಿ ಜಪಿಸುತ್ತೇವೆ ಮತ್ತು ಅವರಿಗೆ ಗ್ರಂಥವನ್ನು ಪ್ರತಿನಿತ್ಯ ಅವಶ್ಯ ಓದಬೇಕೆಂದು ವಿನಂತಿಸುತ್ತೇನೆ.
೫ ಉ. ‘ಶ್ರೀಕೃಷ್ಣನ ಕೃಪೆಯಿಂದ ಶಸ್ತ್ರಚಿಕಿತ್ಸೆಯು ನಿರ್ವಿಘ್ನವಾಗಿ ನೆರವೇರಿತು’, ಎಂದು ರೋಗಿಗಳಿಗೆ ಅರಿವು ಮಾಡಿಕೊಡುವುದು : ಶಸ್ತ್ರಚಿಕಿತ್ಸೆಯು ನಿರ್ವಿಘ್ನವಾಗಿ ನೆರವೇರಿದುದರಿಂದ ರೋಗಿಗಳಿಗೆ ನನ್ನ ಮೇಲಿನ ಶ್ರದ್ಧೆ ಹೆಚ್ಚಿರುತ್ತದೆ. ವಾಸ್ತವದಲ್ಲಿ ಮಾಡುವವನು ಶ್ರೀ ಕೃಷ್ಣನೇ ಆಗಿರುತ್ತಾನೆ; ಆದರೆ ಶ್ರೇಯಸ್ಸು ನನಗೆ ಸಿಗುತ್ತದೆ. ಹಾಗಾಗಿ ‘ನನ್ನ ಮಾತಿನಿಂದ ರೋಗಿಗೆ ಪ್ರಯೋಜನವಾಗುತ್ತದೆ’, ಎಂದು ನನಗನಿಸುತ್ತದೆ. ಹೊರರೋಗಿ ವಿಭಾಗದಲ್ಲಿ ಇಟ್ಟಿರುವ ಶ್ರೀಕೃಷ್ಣನ ಭಾವಚಿತ್ರಕ್ಕೆ ನಮಸ್ಕರಿಸಿ ‘ಕರ್ತಾ ಕರವಿತಾ ಶ್ರೀಕೃಷ್ಣರೇ ಆಗಿದ್ದಾರೆ. ಅವರ ಕೃಪೆಯಿಂದಲೇ ಎಲ್ಲವೂ ನಿರ್ವಿಘ್ನವಾಗಿ ನೆರವೇರಿತು’ ಎಂಬ ಸತ್ಯದ ಅರಿವು ನಾನು ನನಗೂ ರೋಗಿಗೂ ಮಾಡಿಸಿಕೊಟ್ಟು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
೬. ಪ್ರಾರ್ಥನೆ ಮತ್ತು ಕೃತಜ್ಞತೆ
ಪ್ರತಿಯೊಂದು ಆಸ್ಪತ್ರೆಯು ಜನರಿಗೆ ಸಾಧನೆ ಮತ್ತು ಧರ್ಮಶಿಕ್ಷಣವನ್ನು ಕಲಿಸುವ ಮಾಧ್ಯಮವಾಗಲಿ, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕರ್ತಾ-ಕರವಿತಾ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಗಳು !
– ಡಾ. ರವೀಂದ್ರ ಭೋಸಲೆ, ಅಹಮದ್‌ನಗರ (೧೦.೪.೨೦೨೨)
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿಕೆಲವರಿಗೆ ಧರ್ಮಪ್ರಸಾರ ಮಾಡಲು ಮನೆ ಮನೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ; ಆದರೆ ಅವರು ತಮ್ಮ ನೌಕರಿ ಅಥವಾ ವ್ಯವಸಾಯಗಳ ನಿಮಿತ್ತ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ಸಾಧನೆಯನ್ನು ಹೇಳಿ ಸಮಷ್ಟಿ ಸಾಧನೆಯನ್ನು ಮಾಡುತ್ತಾರೆ. ಡಾ. ರವೀಂದ್ರ ಭೋಸಲೆಯವರು ಮಾಡಿದ ಪ್ರಯತ್ನ, ಇದರದ್ದೇ ಒಂದು ಉದಾಹರಣೆಯಾಗಿದೆ. ಇಂತಹ ಉದಾಹರಣೆಗಳು ನಿಮಗೆ ಗೊತ್ತಿದ್ದರೆ ಅಥವಾ ನೀವು ಸ್ವತಃ ಈ ರೀತಿ ಸಮಷ್ಟಿ ಸಾಧನೆಯನ್ನು ಮಾಡುವವರಾಗಿದ್ದರೆ, ಆ ಬಗೆಗಿನ ಮಾಹಿತಿಯನ್ನು ನಮಗೆ ಅವಶ್ಯ ತಿಳಿಸಿರಿ. ಈ ಮಾಹಿತಿಯನ್ನು ಸನಾತನದ ನಿಯತಕಾಲಿಕೆಗಳಲ್ಲಿ, ಹಾಗೆಯೇ ಗ್ರಂಥಗಳಲ್ಲಿ ಪ್ರಕಟಿಸಲಾಗುವುದು. ಇದರಿಂದ ಇತರರಿಗೂ ಸಾಧನೆಯನ್ನು ಮಾಡಲು ಪ್ರೇರಣೆ ಸಿಗುವುದು. ಮಾಹಿತಿಯನ್ನು ಕಳುಹಿಸುವಾಗ ತಮ್ಮ ಹೆಸರು, ವಿಳಾಸ, ಸಂಪರ್ಕ ಕ್ರಮಾಂಕ, ಸಾಧನೆಯ ವಿಷಯದಲ್ಲಿ ಮಾಡಿದ ಕೃತಿ ಮತ್ತು ಬಂದ ಅನುಭೂತಿ ಈ ಸ್ವರೂಪದಲ್ಲಿ ಕಳುಹಿಸಬೇಕು. ಮಾಹಿತಿಯನ್ನು ತಿಳಿಸಲು ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ೨೪/ಬಿ, ಸನಾತನ ಆಶ್ರಮ, ರಾಮನಾಥಿ, ಗೋವಾ. ವಿ-ಅಂಚೆ ವಿಳಾಸ : [email protected] (ವಿ-ಅಂಚೆಯಲ್ಲಿ ವಿಷಯ (Subject) ಬರೆಯುವ ಸ್ಥಳದಲ್ಲಿ ‘ನೌಕರಿ/ವ್ಯವಸಾಯದ ನಿಮಿತ್ತ ಸಂಪರ್ಕದಲ್ಲಿ ಬರುವವರಿಗೆ ಸಾಧನೆಯನ್ನು ಹೇಳಿದುದರ ಉದಾಹರಣೆ’ ಎಂದು ಬರೆಯಬೇಕು.) |