ಜೀವಮಾನವಿಡೀ ಹಿಂದೂವೇ ಆಗಿದ್ದ ಗೌತಮ ಬುದ್ಧರು !

ಪ್ರಾ. ಶಂಕರ ಶರಣ

‘ನಮ್ಮ ದೇಶದಲ್ಲಿನ ಅನೇಕ ಬುದ್ಧಿಜೀವಿಗಳು ಒಂದು ಭ್ರಮೆಗೆ ಬಲಿಯಾಗಿ ದ್ದಾರೆ, ಅವರಿಗೆ ಗೌತಮ ಬುದ್ಧರ ಜೊತೆಗೆ ಭಾರತದಲ್ಲಿ ಒಂದು ಹೊಸ ಧರ್ಮ ಪ್ರಾರಂಭವಾಯಿತು ಮತ್ತು ಅದು ಹಿಂದೂ ಧರ್ಮದ ವಿರುದ್ಧ ವಿದ್ರೋಹವಾಗಿತ್ತು ಎಂದು ಅನಿಸುತ್ತದೆ. ಇನ್ನೂ ಒಂದು ವಿಷಯವಂತೂ ಕಪೋಲಕಲ್ಪಿತವಾಗಿದೆ, ಅದೇನೆಂದರೆ ಬುದ್ಧನು ಜಾತಿಭೇದವನ್ನು ನಾಶ ಮಾಡಿದನು ಮತ್ತು ಒಂದು ಸಮಾಜದ ಸ್ಥಾಪನೆಯನ್ನು ಮಾಡಿದನು. ಒಂದು ವೇಳೆ ಬುದ್ಧರಿಗೆ ಜಾತಿ ಪರಂಪರೆಗಳೊಂದಿಗೆ ವಿದ್ರೋಹ ಮಾಡುವುದಿದ್ದರೆ ಅಥವಾ ಹೊಸ ಮಾರ್ಗವನ್ನು ನಿರ್ಮಿಸುವುದಿದ್ದರೆ, ಅವರು ಸಾಮಾಜಿಕ ಮತ್ತು ಜಾತಿ ಪರಂಪರೆಯನ್ನು ತಿರಸ್ಕರಿಸಲು ಹೇಳುತ್ತಿದ್ದರು. ಆದರೆ ಅವರು ಎಂದಿಗೂ ಹಾಗೇನೂ ಮಾಡಿಲ್ಲ.

೧. ಗೌತಮ ಬುದ್ಧರ ಜೊತೆಗೆ ಭಾರತದಲ್ಲಿಒಂದು ಹೊಸ ಧರ್ಮ ಪ್ರಾರಂಭವಾಗಿದ್ದು, ಅದು ಹಿಂದೂ ಧರ್ಮದ ವಿರುದ್ಧ ‘ವಿದ್ರೋಹ’ವಾಗಿದೆ ಎಂಬ ಪ್ರಸಾರ !

ಕೆಲವು ಎಡಪಂಥೀಯ ವಿಚಾರಶೈಲಿಯ ಲೇಖಕರು ಕಾರ್ಲ್ ಮಾಕ್ಸ್ ಇವರು ಪೂರ್ವಜನ್ಮದಲ್ಲಿನ ಗೌತಮಬುದ್ಧ ಆಗಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದರು. ಅದರಿಂದ ಅವರಿಗೆ ವರ್ಗಗಳಿಲ್ಲದ ಸಮಾಜ ನಿರ್ಮಿತಿಯ ವಿಚಾರವು ಗೌತಮ ಬುದ್ಧರಿಂದಲೇ ಆರಂಭವಾಗಿದೆ ಎಂದು ಹೇಳಲಿಕ್ಕಿದೆ. ಗೌತಮ ಬುದ್ಧರ ಜೀವನ, ಅವರ ವಿಚಾರ ಮತ್ತು ಕಾರ್ಯದ ಮೇಲೆ ದೃಷ್ಟಿಯನ್ನು ಹಾಯಿಸಿದರೆ, ಅವರ ಜೀವನದಲ್ಲಿ ಅವರು ವಂಶ ಮತ್ತು ಜಾತಿ-ವ್ಯವಹಾರಗಳನ್ನು ತಿರಸ್ಕರಿಸಲು ಹೇಳಿರುವುದರ ಒಂದು ಪ್ರಸಂಗವೂ ಇಲ್ಲ. ತದ್ವಿರುದ್ಧ ಯಾವಾಗ ಗೌತಮ ಬುದ್ಧರ ಮಿತ್ರ ಅಥವಾ ಅನುಯಾಯಿಗಳಿಗೆ ಅಡಚಣೆಗಳ ಪ್ರಸಂಗಗಳು ಬಂದಾಗ, ಬುದ್ಧರು ಸ್ಪಷ್ಟವಾಗಿ ಪ್ರಾಚೀನಕಾಲದಿಂದಲೂ ನಡೆದು ಬಂದಿರುವ ಪರಂಪರೆಗಳನ್ನು ಸನ್ಮಾನಿಸಲು ಹೇಳಿದ್ದಾರೆ.
ಒಮ್ಮೆ ಗೌತಮ ಬುದ್ಧರ ಮಿತ್ರ ಪ್ರಸೇನಾದಿಗೆ ತನ್ನ ಪತ್ನಿ ಸಂಪೂರ್ಣ ಶಾಕ್ಯಳಲ್ಲ, ಅವಳು ಶಾಕ್ಯ ರಾಜನಿಗೆ ಓರ್ವ ದಾಸಿಯಿಂದ ಹುಟ್ಟಿದ ಮಗಳು, ಎಂದು ತಿಳಿಯಿತು. ಆಗ ಅವನು ಅವಳನ್ನು ಮತ್ತು ಅವಳಿಂದಾದ ಮಗನನ್ನು ತ್ಯಾಗ ಮಾಡಿದನು. ಇದು ತಿಳಿದಾಗ ಗೌತಮ ಬುದ್ಧರು ತಮ್ಮ ಮಿತ್ರನಿಗೆ ಬುದ್ಧಿವಾದ ಹೇಳಿದರು ಮತ್ತು ಅವನ ನಿರ್ಣಯವನ್ನು ಹಿಂಪಡೆಯುವಂತೆ ಮಾಡಿದರು. ಈ ಸಂದರ್ಭದಲ್ಲಿ ಬುದ್ಧರು, ‘ಪರಂಪರೆಗನುಸಾರ ಮಗನ ಜಾತಿಯನ್ನು ತಂದೆಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಆದ್ದರಿಂದ ಶಾಕ್ಯ ರಾಜನ ಮಗಳು ಶಾಕ್ಯಳೇ ಆಗಿದ್ದಾಳೆ’ ಎಂದು ಹೇಳಿದರು ಗೌತಮ ಬುದ್ಧರ ಈ ವ್ಯವಹಾರವು ಯೋಗ್ಯವಾಗಿತ್ತು.

ಇದರ ಬಗ್ಗೆ ಪ್ರಸಿದ್ಧ ವಿದ್ವಾಂಸ ಡಾ. ಕಾನರಾಡ ಎಲ್ಸ್?ಟ ಇವರು ಅತ್ಯಂತ ಮಹತ್ವಪೂರ್ಣ ವಿಷಯವನ್ನು ಹೇಳಿದ್ದಾರೆ. ಅವರು, ‘ಯಾರಿಗೆ ಈ ಜಗತ್ತಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಲಿಕ್ಕಿದೆಯೊ, ಅವರು ಸಾಮಾಜಿಕ ಸಮಸ್ಯೆಗಳೆಡೆಗೆ ಬಹಳ ಕಡಿಮೆ ಗಮನ ಕೊಡುತ್ತಾರೆ. ಯಾವುದಾದರೊಂದು ಕ್ರಾಂತಿಯನ್ನು ಮಾಡುವುದು, ಹೊಸ ರಾಜಕೀಯ ಮತ್ತು ಆರ್ಥಿಕ ಉಪಕ್ರಮಗಳನ್ನು ನಡೆಸುವುದಂತೂ ಬಹಳ ದೂರದ ವಿಷಯ ವಾಯಿತು !’ ಎಂದು ಹೇಳುತ್ತಾರೆ. ಎಲ್ಸ್?ಟನ ಅಭಿಪ್ರಾಯದಲ್ಲಿ ‘ಯಾವುದಾದರೊಬ್ಬ ಮನುಷ್ಯನಿಗೆ ಅವನ ಸಾಧಾರಣ ಇಚ್ಛೆ ಯನ್ನು ಪೂರ್ಣಗೊಳಿಸುವುದೂ ಒಂದು ಕಠಿಣ ಕೆಲಸವಾಗಿರುತ್ತದೆ. ಹೀಗಿರುವಾಗ ಯಾವುದಾದರೊಂದು ಕಾಲ್ಪನಿಕ ಸಮಾನತಾವಾದಿ ಸಮಾಜದ ಕೊನೆಯಿಲ್ಲದ ಇಚ್ಛೆಯನ್ನು ಪೂರ್ಣಗೊಳಿಸಲು ನಿರ್ಧರಿಸುವುದು ತುಂಬಾ ಕಠಿಣವಾಗಿದೆ !’

೨. ಗೌತಮ ಬುದ್ಧರ ಕೆಲವೊಂದು ಶಿಷ್ಯರಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಶಿಷ್ಯರು ಬ್ರಾಹ್ಮಣರಾಗಿದ್ದರು

ಗೌತಮಬುದ್ಧರಿಗೆ ಆಧ್ಯಾತ್ಮಿಕ ಸಂದೇಶವನ್ನು ನೀಡಲಿಕ್ಕಿದ್ದರೆ, ಅವರು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಕಡಿಮೆ ಗಮನ ಹರಿಸುತ್ತಿದ್ದರು, ಎಂಬುದು ಮನವರಿಕೆ ಆಗುವಂತಹದ್ದಾಗಿದೆ. ‘ಬ್ರಾಹ್ಮಣವಾದದ ವಿರುದ್ಧ ಬಂಡಾಯ’, ರಾಜಕೀಯ ಕಾರ್ಯಕ್ರಮ ಇತ್ಯಾದಿ ಚಿಂತನೆ ಅವರಲ್ಲಿರಲೇ ಇಲ್ಲ; ಆದ್ದರಿಂದ ಸ್ವಾಭಾವಿಕವಾಗಿ ಬುದ್ಧರ ಕೆಲವೇ ಶಿಷ್ಯರಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಜನರು ಬ್ರಾಹ್ಮಣರೇ ಆಗಿದ್ದರು. ಅವರಲ್ಲಿನ ಕೆಲವರು ಪ್ರಖರ ದಾರ್ಶನಿಕ ರೆಂದು (ತತ್ತ?ವಜ್ಞಾನಿಗಳೆಂದು) ಮುಂದೆ ಬಂದರು, ಕಾಲಾನುಸಾರ ಅವರೆ ಬೌದ್ಧ ದರ್ಶನ ಮತ್ತು ಗ್ರಂಥಗಳ ಮಹಾನ ಚಿಂತನೆ ಮತ್ತು ಆಳವಾದ ತರ್ಕಶೈಲಿಯ ಪರ್ಯಾಯವನ್ನು ಮಾಡಿದರು.

೩. ಗೌತಮ ಬುದ್ಧರು ಪ್ರಾಚೀನ ಜ್ಞಾನ, ಪರಂಪರೆ ಅಥವಾ ಧರ್ಮದ ವಿರುದ್ಧ ಯಾವುದೇ ಹೊಸತನ್ನು ಪ್ರಾರಂಭಿಸಲಿಲ್ಲ

ಭಾರತದಲ್ಲಿನ ಮಹಾನ ವಿಶ್ವವಿದ್ಯಾಲಯಗಳು ಗೌತಮ ಬುದ್ಧರ ಅವತಾರಕ್ಕಿಂತ ಮೊದಲಿನಿಂದಲೇ ಇದ್ದವು. ತಕ್ಷಶಿಲೆಯ ಪ್ರಸಿದ್ಧ ವಿಶ್ವವಿದ್ಯಾಲಯವು ಗೌತಮ ಬುದ್ಧರ ಅವತಾರವಾಗುವ ಮೊದಲಿನಿಂದಲೇ ಇತ್ತು. ಅಲ್ಲಿ ಬುದ್ಧರ ಮಿತ್ರ ಬಂಧುಲಾ ಮತ್ತು ಪ್ರಸೇನಾದಿ ಇವರು ಕಲಿತಿದ್ದರು. ಕೆಲವು ವಿದ್ವಾಂಸರು ಸ್ವತಃ ಸಿದ್ಧಾರ್ಥ ಗೌತಮರೂ ಅಲ್ಲಿಯೇ ಕಲಿತಿದ್ದರು ಎಂದು ಹೇಳುತ್ತಾರೆ. ಆದ್ದರಿಂದ ಬುದ್ಧರು ಹಿಂದೂ ಸಂಸ್ಥಾನಗಳಿಂದ ಲಭಿಸಿದ ಸಂಸ್ಥೆಗಳನ್ನು ಹೆಚ್ಚು ಪ್ರಬಲಗೊಳಿಸಿದರು, ಎಂದು ಹೇಳಿದರೆ ಯೋಗ್ಯವಾಗಬಹುದು. ನಂತರ ಬೌದ್ಧ ವಿಶ್ವವಿದ್ಯಾಲಯಗಳು ಆರ್ಯಭಟ್ಟರಂತಹ ಅನೇಕ ಅಬೌದ್ಧ ಶಾಸ್ತ್ರಜ್ಞರನ್ನೂ ವಿದ್ಯಾವಂತರನ್ನಾಗಿ ಮಾಡಿದವು. ವಾಸ್ತವಿಕ ಚಿಂತನೆ, ಶಿಕ್ಷಣ ಮತ್ತು ಲೋಕಾಚಾರದಲ್ಲಿ ಗೌತಮ ಬುದ್ಧರು ಯಾವುದೇ ಹೊಸತನ್ನು ಪ್ರಾರಂಭಿಸಿರಲಿಲ್ಲ, ಆದುದರಿಂದ ಅವರನ್ನು ಪ್ರಾಚೀನ ಜ್ಞಾನ, ಪರಂಪರೆ ಅಥವಾ ಧರ್ಮದ ವಿರೋಧಿಯೆಂದು ಹೇಳಲು ಸಾಧ್ಯವಿಲ್ಲ.

೪. ಗೌತಮ ಬುದ್ಧರು ತಮ್ಮ ಮಿತ್ರನಿಗೆ ರೂಢಿ ಪರಂಪರೆಗಳನ್ನು ಪಾಲಿಸಲು ನೀಡಿರುವ ಸಲಹೆ

ಗೌತಮ ಬುದ್ಧರು ತಮ್ಮಂತಹ ಬೇರೆ ಜ್ಞಾನಿ ಜನರ ಆಗಮನದ ಭವಿಷ್ಯವಾಣಿಯನ್ನೂ ಮಾಡಿದ್ದರು ಮತ್ತು ಅವರು ಬ್ರಾಹ್ಮಣ ಕುಲ ದಲ್ಲಿ ಹುಟ್ಟುವರು ಎಂದೂ ಹೇಳಿದ್ದರು. ಒಂದು ವೇಳೆ ಬುದ್ಧರಿಗೆ ಕುಲ, ಜಾತಿ ಮತ್ತು ವಂಶ ಮಹತ್ವಹೀನವಾಗಿದ್ದರೆ, ಅವರು ಹೀಗೆ ಹೇಳುತ್ತಿರಲಿಲ್ಲ. ಎಲ್ಲಕ್ಕಿಂತ ಪ್ರಾಚೀನ ಉಪನಿಷತ್ತಿನಲ್ಲಿ ಸತ್ಯಕಾಮ ಜಾಬಾಲನ ವಿಷಯದಲ್ಲಿ ಏನು ನಿರ್ಣಯವನ್ನು ಕೊಡಲಾಗಿತ್ತೊ, ಅದನ್ನೇ ತಮ್ಮ ಮಿತ್ರ ಪ್ರಸೆನಾದಿಗೂ ತಿಳಿಸಿ ಹೇಳಿದರು. ಅದು ಹೇಗಿತ್ತೆಂದರೆ, ಅವನ ತಾಯಿ ದಾಸಿ ಆಗಿದ್ದರೂ, ಪರಿಸ್ಥಿತಿಯು ಅವನ ತಂದೆಯನ್ನು ಬ್ರಾಹ್ಮಣಕುಲದ ವ್ಯಕ್ತಿಯೆಂದು ತೋರಿಸುತ್ತಿತ್ತು. ಆದ್ದರಿಂದ ಅವನು ಬ್ರಾಹ್ಮಣ ಬಾಲಕನಾಗಿದ್ದನು. ಈ ರೀತಿ ಅವನು ಅವನ ಗುರುಗಳು ಸ್ವೀಕರಿಸಿದ ಶಿಷ್ಯನಾಗಿದ್ದನು. ಅದೇ ಪಾರಂಪರಿಕ ರೂಢಿಯನ್ನು ಪಾಲಿಸಲು ಬುದ್ಧರು ತಮ್ಮ ಮಿತ್ರನಿಗೆ ಸಲಹೆ ನೀಡಿದ್ದರು.

೫. ಹಿಂದೂ ಸಮಾಜವನ್ನು ಬಿಟ್ಟು ಬೇರೆ ಹಿಂದೂಯೇತರ ಬೌದ್ಧ ಸಮಾಜವು ಭಾರತದಲ್ಲಿ ಯಾವತ್ತೂ ಇರಲಿಲ್ಲ, ಇದೇ ಐತಿಹಾಸಿಕ ಸತ್ಯವಾಗಿದೆ !

ಆದ್ದರಿಂದ ಸತ್ಯ ಇತಿಹಾಸ ಹೇಗಿದೆಯೆಂದರೆ, ಪೂರ್ವ ಭಾರತದಲ್ಲಿ ಗಂಗೆಯ ತೀರದಲ್ಲಿನ ದೊಡ್ಡ ರಾಜರು ಮತ್ತು ಕ್ಷತ್ರಿಯರು ಗೌತಮ ಬುದ್ಧರನ್ನು ತಮ್ಮವರಲ್ಲಿಯ ಒಬ್ಬ ವಿಶೇಷ ವ್ಯಕ್ತಿಯೆಂದು ಅವರನ್ನು ಸನ್ಮಾನಿಸಿದ್ದರು. ಆ ರಾಜಕಾರಣಿಗಳೆ ಬುದ್ಧರ ಅನುಯಾಯಿ ಮತ್ತು ಭಿಕ್ಷುಗಳಿಗಾಗಿ ದೊಡ್ಡ ದೊಡ್ಡ ಮಠ, ವಿಹಾರ ಇತ್ಯಾದಿ ಗಳನ್ನು ನಿರ್ಮಿಸಿದರು. ಗೌತಮ ಬುದ್ಧರು ದೇಹತ್ಯಾಗ ಮಾಡಿದಾಗ ೮ ನಗರಗಳಲ್ಲಿನ ರಾಜರು ಮತ್ತು ಗಣ್ಯವ್ಯಕ್ತಿಗಳು ಅವರ ಅಸ್ಥಿಗಾಗಿ ತಮ್ಮ ಹಕ್ಕನ್ನು ಹೇಳಿದ್ದರು ‘ನಾವು ಕ್ಷತ್ರಿಯರಾಗಿದ್ದೇವೆ, ಆದ್ದರಿಂದ ‘ಅವರ ಅಸ್ಥಿ ಮತ್ತು ಬೂದಿಯ ಮೇಲೆ ನಮ್ಮ ಅಧಿಕಾರವಿದೆ’ ಎಂದು ಹೇಳಿದ್ದರು. ಗೌತಮ ಬುದ್ಧರ ದೇಹತ್ಯಾಗದ ನಂತರ ಸುಮಾರು ಅರ್ಧ ಶತಮಾನದ ವರೆಗೆ ಬುದ್ಧರ ಶಿಷ್ಯರು ಸಾರ್ವಜನಿಕವಾಗಿ ತಮ್ಮ ಜಾತಿಯ ನಿಯಮಗಳನ್ನು ಸಂಕೋಚವಿಲ್ಲದೆ ಪಾಲಿಸುವುದು ಕಂಡುಬರುತ್ತದೆ. ಅದು ಸಹಜವಾಗಿಯೇ ಆಗುತ್ತಿತ್ತು. ಬುದ್ಧರು ಕೂಡ ಅವರಿಗೆ ಅವರ ಜಾತಿಯ ಸಂಬಂಧವನ್ನು ತ್ಯಜಿಸಲು ಹೇಳಿರಲಿಲ್ಲ. ಉದಾ. ತಮ್ಮ ಹೆಣ್ಣುಮಕ್ಕಳ ವಿವಾಹವನ್ನು ಇತರ ಜಾತಿಗಳಲ್ಲಿ ಮಾಡುವುದು ಇತ್ಯಾದಿ. ಆದ್ದರಿಂದ ಹಿಂದೂ ಸಮಾಜವನ್ನು ಬಿಟ್ಟು ಬೇರೆ ಹಿಂದೂಯೇತರ ಬೌದ್ಧ ಸಮಾಜ ಭಾರತದಲ್ಲಿ ಯಾವತ್ತೂ ಇರಲಿಲ್ಲ, ಇದುವೇ ಐತಿಹಾಸಿಕ ಸತ್ಯವಾಗಿದೆ. ಹೆಚ್ಚಿನಂಶ ಹಿಂದೂಗಳು ವಿವಿಧ ದೇವೀ-ದೇವತೆಗಳ ಉಪಾಸನೆಯನ್ನು ಮಾಡುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವೊಮ್ಮೆ ಯಾರನ್ನಾದರೂ ಜೋಡಿಸುವ ಅಥವಾ ಬೇರ್ಪಡಿಸುವ ಕೆಲಸ ಆಗಿಲ್ಲ. ಹೇಗೆ ಇಂದು ಶಿವ-ಪಾರ್ವತಿ ಅಥವಾ ರಾಮ, ದುರ್ಗಾದೇವಿ ಮುಂತಾದವರು ಒಂದು ಸಾಲಿನಲ್ಲಿ ಕಾಣಿಸುತ್ತಾರೆಯೋ, ಹಾಗೆಯೇ, ಅನೇಕ ಹಿಂದೂಗಳ ಮನೆಗಳಲ್ಲಿ ರಾಮಕೃಷ್ಣ ಪರಮಹಂಸ, ಯೋಗಿ ಅರವಿಂದ ಅಥವಾ ಡಾ. ಅಂಬೇಡ್ಕರ್ ಮುಂತಾದವರು ಒಂದೇ ಸಾಲಿನಲ್ಲಿ ಕಾಣಿಸುತ್ತಾರೆ. ಗೌತಮ ಬುದ್ಧ, ಸಂತ ಕಬೀರ ಅಥವಾ ಗುರುನಾನಕರ ಉಪಾಸನೆಯೂ ಅದೇ ರೀತಿಯದ್ದಾಗಿದೆ. ಅವರು ಇತರ ಬೌದ್ಧ ಅಥವಾ ಸಿಕ್ಖ್ರಾಗಿರಲಿಲ್ಲ.

೬. ಬೌದ್ಧ ಧರ್ಮದ ವಿಷಯದಲ್ಲಿ ದಾರಿತಪ್ಪಿಸುವ ವ್ಯಾಖ್ಯೆ !

ಹಳೆಯ ಬೌದ್ಧವಿಹಾರ, ಮಠ, ಮಂದಿರ ಇತ್ಯಾದಿಗಳನ್ನು ನೋಡಿದರೆ ಅವುಗಳಲ್ಲಿ ವೈದಿಕ ಪ್ರತೀಕಗಳು ಮತ್ತು ವಾಸ್ತುಶಾಸ್ತ್ರ ಇವುಗಳು ಹೆಚ್ಚು ನೋಡಲು ಸಿಗುತ್ತವೆ. ಅವು ಹಳೆಯ ಹಿಂದೂ ಮಾದರಿಗಳ ಅನುಕರಣೆಯೇ ಆಗಿದೆ. ಯಾವಾಗ ಬೌದ್ಧ ಧರ್ಮ ಭಾರತದ ಹೊರಗೆ ಹರಡಿತೋ, ಆಗ ಇಲ್ಲಿಂದ ವೈದಿಕ ದೇವತೆಗಳೂ ಹೊರಗೆ ಹೋದವು, ಉದಾ. ಜಪಾನ್‌ನ ಪ್ರತಿಯೊಂದು ನಗರದಲ್ಲಿ ದೇವೀ ಸರಸ್ವತಿಯ ಮಂದಿರಗಳಿವೆ. ಸರಸ್ವತಿಯನ್ನು ಅಲ್ಲಿಗೆ ಒಯ್ಯುವವರು ಬ್ರಾಹ್ಮಣರಲ್ಲ, ಬೌದ್ಧರೆ ಆಗಿದ್ದರು. ಗೌತಮ ಬುದ್ಧರು ತಮ್ಮ ಜೀವನದ ಅಂತ್ಯದಲ್ಲಿ ಜೀವನದ ೭ ಸಿದ್ಧಾಂತಗಳ ಉಲ್ಲೇಖಿಸಿದ್ದರು. ಇದನ್ನು ಪಾಲಿಸಿದರೆ ಯಾವುದೇ ಸಮಾಜ ನಷ್ಟವಾಗುವುದಿಲ್ಲ. ಪ್ರಸಿದ್ಧ ಇತಿಹಾಸಕಾರ ಸೀತಾರಾಮ ಗೋಯಲ ಇವರು ತಮ್ಮ ‘ಸಪ್ತ-ಶೀಲ’ (೧೯೬೦) ಈ ಸುಂದರ ಉಪನ್ಯಾಸದಲ್ಲಿ ಅದರದ್ದೇ ವೈಶಾಲಿ ಗಣತಂತ್ರದ ಹಿನ್ನೆಲೆಯಲ್ಲಿ ತಮ್ಮ ಕಥೆಯನ್ನು ತಯಾರಿಸಿದ್ದರು.

ಈ ೭ ಸದ್ಗುಣಗಳಲ್ಲಿ ನಮ್ಮ ಹಬ್ಬ-ಉತ್ಸವಗಳನ್ನು ಗೌರವಿಸುವುದು ಮತ್ತು ಅವುಗಳನ್ನು ಆಚರಿಸುವುದು, ತೀರ್ಥಯಾತ್ರೆ ಮತ್ತು ಅನುಷ್ಠಾನಗಳನ್ನು ಮಾಡುವುದು, ಸಾಧುಸಂತರನ್ನು ಸತ್ಕರಿಸುವುದು ಇವುಗಳ ಸಮಾವೇಶವಿದೆ.

ಮಹಾಭಾರತದಲ್ಲಿಯೂ ನದಿಯ ತೀರದಲ್ಲಿ ತೀರ್ಥಯಾತ್ರೆಯನ್ನು ಮಾಡುವ ಮಾಹಿತಿಯು ಸಿಗುತ್ತದೆ. ಸರಸ್ವತಿ ಮತ್ತು ಗಂಗಾ ನದಿಗಳ ತೀರದಲ್ಲಿ ಬಲರಾಮ ಮತ್ತು ಪಾಂಡವರು ತೀರ್ಥಯಾತ್ರೆಯನ್ನು ಮಾಡಲು ಹೋಗಿದ್ದರು. ಆದ್ದರಿಂದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಹಾರದ ದೃಷ್ಟಿಯಿಂದ ನೋಡಿದರೆ, ಗೌತಮ ಬುದ್ಧರು ಯಾವತ್ತೂ ಹಳೆಯ (ಮುಂಚಿನ) ವ್ಯವಹಾರಗಳನ್ನು ವಿರೋಧಿಸಲಿಲ್ಲ. ಅವುಗಳ ವಿಷಯದಲ್ಲಿ ಏನಾದರೂ ಹೇಳಿದ್ದರೆ, ಅವುಗಳ ಗೌರವ ಮತ್ತು ಅವುಗಳ ಪಾಲನೆ ಮಾಡುವ ವಿಷಯದಲ್ಲಿಯೇ ಹೇಳಿದ್ದಾರೆ. ಈ ರೀತಿ ಅವರು ಯಾವುದೇ ರೀತಿಯ ವಿದ್ರೋಹಿಗಳು ಆಗಿರಲಿಲ್ಲ, ಅವರು ಸಂಪೂರ್ಣ ಪರಂಪರಾವಾದಿಗಳಾಗಿದ್ದರು. ಅವರು ಸದ್ಯ ನಡೆಯುತ್ತಿರುವ ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ಅವರು ಜೀವಮಾನವಿಡೀ ಓರ್ವ ಹಿಂದೂ ದಾರ್ಶನಿಕರಾಗಿದ್ದರು. ಡಾ. ಕಾನರಾಡ್ ಎಲ್ಸ್?ಟ ಇವರ ಮಾತುಗಳಲ್ಲಿ ‘ಗೌತಮ ಬುದ್ಧರ ರೋಮರೋಮಗಳಲ್ಲಿ ಹಿಂದುತ್ವ ತುಂಬಿತ್ತು’, ಆದರೆ ಈ ವಿಷಯವನ್ನು ನಿರಾಕರಿಸಲು ಬೌದ್ಧ ಧರ್ಮದ ದಾರಿ ತಪ್ಪಿಸುವ ವ್ಯಾಖ್ಯೆಯನ್ನು ಮಾಡಲಾಗುತ್ತಿದೆ. ಅದನ್ನು ಪರಿಶೀಲಿಸುವುದು ಆವಶ್ಯಕವಾಗಿದೆ.’
– ಪ್ರಾ. ಶಂಕರ ಶರಣ, ಹಿರಿಯ ಲೇಖಕರು ಮತ್ತು ಸ್ತಂಭಲೇಖಕರು, ದೆಹಲಿ. (೨೧.೧೦.೨೦೨೨)