ಕಾಂಗ್ರೆಸ್‌ನ ರಾಹುಲ್ ಗಾಂಧಿಯವರೇ ನಿಜವಾದ ಕ್ಷಮಾವೀರರು !

ಕಾಂಗ್ರೆಸ್‌ನ ನಾಯಕ ಮತ್ತು ಸಂಸದ ರಾಹುಲ ಗಾಂಧಿಯವರು ವಾಶಿಮ್‌ನಲ್ಲಿ ‘ಭಾರತ ಜೊಡೊ’ ಯಾತ್ರೆಯಲ್ಲಿ ‘ಸ್ವಾತಂತ್ರ?ಯವೀರ ಸಾವರಕರ ಇವರು ಆಂಗ್ಲರಿಗಾಗಿ ಕಾಂಗ್ರೆಸ್‌ನ ವಿರುದ್ಧ ಕೆಲಸ ಮಾಡುತ್ತಿದ್ದರು. ಸ್ಡಾತಂತ್ರ್ಯವೀರ ಸಾವರಕರರು ಆಂಗ್ಲರಿಗೆ ಕ್ಷಮೆಯ ಪತ್ರವನ್ನು ಬರೆದಿದ್ದರು ಎಂದು ಸಾವರಕರದ್ವೇಷಿ ಹೇಳಿಕೆಯನ್ನು ನೀಡಿದರು. ಸದ್ಯದ ಸ್ಥಿತಿಯಲ್ಲಿ ಸ್ವಾತಂತ್ರ?ಯವೀರ ಸಾವರಕರರು ಕ್ಷಮೆಯನ್ನು ಯಾಚಿಸಿದರೋ ಅಥವಾ ಇಲ್ಲವೋ ? ಇದು ಮಹತ್ವದ ವಿಷಯವಲ್ಲ ಏಕೆಂದರೆ ರಾಹುಲ ಗಾಂಧಿಯವರು ಎಷ್ಟು ಸಲ ಕ್ಷಮೆಯನ್ನು ಯಾಚಿಸಿದ್ದಾರೆ ? ಎಂಬುದು ಮಹತ್ವದ ಪ್ರಶ್ನೆಯಾಗಿದೆ. ನಿಜವಾಗಿಯೂ ರಾಹುಲ ಗಾಂಧಿಯವರೇ ೩ ಸಲ ತಪ್ಪು ಮತ್ತು ಪ್ರಾಮಾಣಿಕವಾಗಿ ಸುಳ್ಳು ಹೇಳಿಕೆಗಳನ್ನು ನೀಡಿ ನಂತರ ಕ್ಷಮೆಯನ್ನು ಕೇಳಿದ್ದಾರೆ. ಅವರು ಇಲ್ಲಿಯವರೆಗೆ ಕೇಳಿದ ಕ್ಷಮೆ ಯಾಚನೆಯ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ರಾಹುಲ ಗಾಂಧಿಯವರು ಕ್ಷಮೆ ಕೇಳಿದ ಪ್ರಸಂಗಗಳು

೧. ರಾಹುಲ ಗಾಂಧಿಯವರು ಪ್ರಧಾನಮಂತ್ರಿ ಮೋದಿಯವರನ್ನು ‘ಚೌಕಿದಾರ್’ ಎಂದು ಕರೆದಿದ್ದರು. ಅನಂತರ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾದ ಅರ್ಜಿಯ ಆಲಿಕೆಯ ಸಮಯದಲ್ಲಿ ರಾಹುಲರು ಕ್ಷಮೆ ಕೇಳಿದ್ದರು.

೨. ‘ರಾಫೆಲ್’ ಈ ಯುದ್ಧ ವಿಮಾನವನ್ನು ಖರೀದಿಸುವ ಪ್ರಕರಣದಲ್ಲಿ ರಾಹುಲ ಗಾಂಧಿಯವರು ಟೀಕಿಸಿದಾಗಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದಕ್ಕೂ ರಾಹುಲ ಗಾಂಧಿಯವರು ಕ್ಷಮೆಯನ್ನು ಕೇಳಿದ್ದರು.

೩. ರಾಹುಲ ಗಾಂಧಿಯವರು ಒಂದು ವಿಷಯವನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವಾಗ ಅವರು ‘ಮೆಕ್ ಇನ್ ಇಂಡಿಯಾ’ (ಭಾರತದಲ್ಲಿ ಉತ್ಪಾದಿಸಿದ್ದು) ವನ್ನು ‘ರೆಪ್ ಇನ್ ಇಂಡಿಯಾ’ (ಭಾರತದಲ್ಲಿ ಅತ್ಯಾಚಾರ) ಹೀಗೆ ಮಾಡಿದುದರಿಂದ ಸಂಸತ್ತಿನಲ್ಲಿ ಗೊಂದಲವೆದ್ದಿತ್ತು. ಆ ಸಮಯದಲ್ಲಿಯೂ ಅವರು ಕ್ಷಮೆಯನ್ನು -ಕೇಳಿದ್ದರು. (ಕೃಪೆ : ‘ಹಿಂದೂಸ್ಥಾನ ಪೋಸ್ಟ್’ ವಾರ್ತಾಜಾಲತಾಣ)