‘ಲಿವ್ ಇನ್ ರಿಲೇಶನ್‌ಶಿಪ್’ ಈ ಪಾಶ್ಚಾತ್ಯ ವಿಕೃತಿಯನ್ನು ಭಾರತದಿಂದ ಗಡಿಪಾರು ಮಾಡುವುದೇ, ‘ಶ್ರದ್ಧಾ’ಳಿಗೆ ನೀಡುವ ನಿಜವಾದ ಶ್ರದ್ಧಾಂಜಲಿ !

(ವಿವಾಹವಾಗದೇ ಪತಿ-ಪತ್ನಿಯರಂತೆ ಒಟ್ಟಿಗಿರುವ ವಿದೇಶಿ ಸಂಕಲ್ಪನೆಗೆ ‘ಲಿವ್ ಇನ್ ರಿಲೇಶನ್‌ಶಿಪ್’ ಎನ್ನುತ್ತಾರೆ.)

ವರ್ಷಾ ಕುಲಕರ್ಣಿ

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರಳ ಹತ್ಯೆಯ ಪ್ರಕರಣವು ಸಂಪೂರ್ಣ ದೇಶದ ವಾತಾವರಣವನ್ನು ಕದಲಿಸಿದೆ. ಆಫ್ತಾಬ್ ಅಮೀನ್ ಪೂನಾವಾಲಾ ಇವನು ತನ್ನೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದ ಶ್ರದ್ಧಾ ವಾಲಕರ ಈ ೨೭ ವರ್ಷದ ಹಿಂದೂ ಯುವತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದನು. ಶ್ರದ್ಧಾಳ ೩೫ ತುಂಡು ಗಳನ್ನು ಮಾಡಿದ ಆಫ್ತಾಬ್‌ನ ವಾಸ್ತವವು ಕ್ರಮೇಣ ಬೆಳಕಿಗೆ ಬರುತ್ತಿದೆ. ಆಫ್ತಾಬ್‌ನು ಮೃತದೇಹದ ತುಂಡುಗಳನ್ನು ಮಾಡಿ ಅವುಗಳನ್ನು ೧೮ ದಿನಗಳ ವರೆಗೆ ಶೀತಕಪಾಟಿ(ಫ್ರೀಜ್)ನಲ್ಲಿಟ್ಟಿದ್ದನು ಮತ್ತು ಅವುಗಳನ್ನು ದೆಹಲಿಯ ವಿವಿಧ ಭಾಗಗಳಲ್ಲಿ ಒಂದೊಂದಾಗಿ ಎಸೆದಿದ್ದನು. ಈ ಹತ್ಯೆಯ ಬಗ್ಗೆ ಆಫ್ತಾಬ್‌ನಿಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ. ಈ ಸಂಪೂರ್ಣ ಹೃದಯವಿದ್ರಾವಕ ಘಟನೆಯನ್ನು ಎಷ್ಟು ಖಂಡಿಸಿದರೂ ಅದು ಕಡಿಮೆಯೇ.

೧. ಆಫ್ತಾಬ್‌ನಿಗೆ ನೀಡಿದಅವಕಾಶದಿಂದ ಶ್ರದ್ಧಾಳ ಕ್ರೂರ ಅಂತ್ಯ !

‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ಇರುವಾಗ ಆಫ್ತಾಬ್‌ನು ಶ್ರದ್ಧಾಳಿಗೆ ಅನೇಕ ಬಾರಿ ಹೊಡೆದಿರುವುದು ಈಗ ಬಯಲಿಗೆ ಬಂದಿದೆ. ೨ ವರ್ಷಗಳ ಹಿಂದೆ ಶ್ರದ್ಧಾ ತನ್ನ ಮಿತ್ರನಿಗೆ ಆಫ್ತಾಬ್ ಯಾವ ರೀತಿ ಅವಳಿಗೆ ಚಿತ್ರಹಿಂಸೆ ಕೊಡುತ್ತಾನೆ ಎಂಬುದನ್ನು ಹೇಳಿದ್ದಳು. ಆಫ್ತಾಬ್‌ನ ವಿರುದ್ಧ ಅವಳು ಪೊಲೀಸರಲ್ಲಿ ದೂರು ದಾಖಲಿಸುವುದೆಂದು ನಿರ್ಧರಿಸಿದ್ದಳು; ಆದರೆ ಆಫ್ತಾಬ್‌ನು ಶ್ರದ್ಧಾ ಳಿಗೆ ಇನ್ನು ಮುಂದೆ ಚೆನ್ನಾಗಿ ನಡೆದುಕೊಳ್ಳುತ್ತೇನೆ ಎಂಬ ಭರವಸೆ ನೀಡಿ ದೂರು ನೀಡದಿರಲು ಕೇಳಿಕೊಂಡಿದ್ದನು. ಶ್ರದ್ಧಾ ಆಫ್ತಾಬ್‌ನ ಮಾತುಗಳಿಗೆ ಮೋಸ ಹೋಗಿ ಜೀವವನ್ನು ಕಳೆದುಕೊಂಡಳು. ಆಫ್ತಾಬ್‌ನಿಗೆ ಸುಧಾರಿಸುವ ಅವಕಾಶ ನೀಡುವ ಹುಚ್ಚುತನದಲ್ಲಿ ಅವಳು ತನ್ನನ್ನು ಮುಕ್ತಮಾಡಿಕೊಳ್ಳುವ ಮಹತ್ವದ ಅವಕಾಶವನ್ನು ಕಳೆದುಕೊಂಡಳು ಮತ್ತು ಆಫ್ತಾಬ್‌ನು ದೊರಕಿದ ಅವಕಾಶದ ಲಾಭ ಪಡೆದು ಶ್ರದ್ಧಾಳನ್ನು ನಿರ್ದಯದಿಂದ ಹತ್ಯೆ ಮಾಡಿದನು.

೨. ‘ಲಿವ್ ಇನ್ ರಿಲೇಶನ್‌ಶಿಪ್’ಕ್ಕೆಕಾನೂನಿನ ಮಾನ್ಯತೆಯನ್ನು ನೀಡಿದಬಗ್ಗೆ ಮತ್ತೊಮ್ಮೆ ವಿಚಾರ ಮಾಡುವುದು ಆವಶ್ಯಕ !

ವಿದೇಶಗಳಲ್ಲಿ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ಪ್ರಮಾಣ ಅತ್ಯಧಿಕವಿದೆ. ವಿವಾಹದ ನಂತರ ಪರಸ್ಪರರ ಅಭಿಪ್ರಾಯಗಳು ಹೊಂದುವವೋ ಅಥವಾ ಇಲ್ಲವೋ ? ಎಂಬುದನ್ನು ಪರಿಶೀಲಿಸಲು ಕೆಲವೊಂದು ಸಮಯ ಒಟ್ಟಿಗೆ ಇರಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯವು ೧೫ ವರ್ಷಗಳ ಹಿಂದೆ ಬೇರೆ ಒಂದು ಪ್ರಕರಣದಲ್ಲಿ ತೀರ್ಪನ್ನು ನೀಡುವಾಗ ಪ್ರೌಢನಾದ ನಂತರ ವ್ಯಕ್ತಿಯು ಯಾರೊಂದಿಗಿರಬೇಕು ಅಥವಾ ಯಾರೊಂದಿಗೆ ವಿವಾಹ ಮಾಡಿ ಕೊಳ್ಳಬೇಕು ಎಂಬುದರ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರನಾಗಿ ರುತ್ತಾನೆ ಎಂದು ಹೇಳಿತ್ತು. ನ್ಯಾಯಾಲಯದ ಹೇಳಿಕೆಗನುಸಾರ, ರಿಲೇಶನ್‌ಶಿಪ್‌ನಲ್ಲಿರುವುದು ಅಪರಾಧವಲ್ಲ. ಹೀಗಿದ್ದರೂ ಶ್ರದ್ಧಾ ಹತ್ಯಾಕಾಂಡ ಪ್ರಕರಣದ ನಂತರ ‘ಲಿವ್ ಇನ್ ರಿಲೇಶನ್‌ಶಿಪ್’ಗೆ ಮಾನ್ಯತೆಯನ್ನು ನೀಡುವ ಕಾನೂನುಬದ್ಧ ನಿಯಮಗಳ ಬಗ್ಗೆ ಮತ್ತೊಮ್ಮೆ ವಿಚಾರ ಮಾಡುವುದು ಆವಶ್ಯಕವಾಗಿದೆ.

೩. ಪ್ರಗತಿ (ಅಧೋಗತಿ)ಪರರಿಂದಉದ್ದೇಶಪೂರ್ವಕವಾಗಿ ಆಫ್ತಾಬ್‌ನ ಕೃತ್ಯಕ್ಕೆ ಸಮರ್ಥನೆ !

ಶ್ರದ್ಧಾ ಹತ್ಯಾಕಾಂಡದ ನಂತರ ಬಹಳಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೆಲವು ಪ್ರಗತಿ (ಅಧೋಗತಿ)ಪರರು ‘ಶ್ರದ್ಧಾಳ ತಾಯಿ-ತಂದೆ ವಿಭಕ್ತರಾಗಿದ್ದರು, ಅವರ ಜಗಳದಿಂದ ಶ್ರದ್ಧಾಳ ಮನಸ್ಸಿನ ಮೇಲೆ ಪರಿಣಾಮವಾಗಿತ್ತು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಆಫ್ತಾಬ್‌ನ ನಿರ್ದಯಿ ಕೃತ್ಯವನ್ನು ಸಮರ್ಥಿಸುವುದಾಗಿದೆ. ಸುಳ್ಳು ಪ್ರೇಮದ ಹೆಸರಿನಲ್ಲಿ ಶ್ರದ್ಧಾಳು ವಿನಾಕಾರಣ ‘ಲವ್ ಜಿಹಾದ್’ಗೆ ಬಲಿಯಾದಳು. ಆಫ್ತಾಬ್ ನಿಜವಾಗಿಯೂ ಶ್ರದ್ಧಾಳನ್ನು ಪ್ರೀತಿಸುತ್ತಿದ್ದರೆ, ಅವನು ಅವಳ ಹತ್ಯೆಯನ್ನು ಮಾಡುತ್ತಲೇ ಇರಲಿಲ್ಲ. ‘ಲಿವ್ ಇನ್ ರಿಲೇಶನ್‌ಶಿಪ್‌ನ ಬೆಂಬಲಿಗರು ಶ್ರದ್ಧಾಳ ಹತ್ಯೆಯ ಹೊಣೆ ಹೊತ್ತುಕೊಳ್ಳುವರೇ ? ಶ್ರದ್ಧಾಳ ಹತ್ಯೆಯ ಬಗ್ಗೆ ಹೇಳಿಕೆಯನ್ನು ನೀಡುವಾಗ ‘ಲವ್ ಜಿಹಾದ್’ ಮತ್ತು ‘ಲಿವ್ ಇನ್ ರಿಲೇಶನ್‌ಶಿಪ್’ ಈ ಎರಡೂ ದುಷ್ಪರಿಣಾಮಗಳನ್ನು ಉದ್ದೇಶಪೂರ್ವಕವಾಗಿ ದುರ್ಲಕ್ಷಿಸಿ ಪ್ರಗತಿ(ಅಧೋಗತಿ)ಪರರು ಅವಳ ತಾಯಿ-ತಂದೆಯ ಜಗಳದ ಕಾರಣವನ್ನು ಮುಂದಿಡುವುದನ್ನು ಹಿಂದೂಗಳು ಗಮನಲ್ಲಿಡಬೇಕು.

೪. ದೆಹಲಿ ಸರಕಾರವು ನಿರ್ಭಯಾಳಪ್ರಕರಣದಿಂದ ಏನು ಪಾಠ ಕಲಿಯಿತು ?

ದೆಹಲಿಯಲ್ಲಿ ೧೦ ವರ್ಷಗಳ ಹಿಂದೆ ನಿರ್ಭಯಾ ಪ್ರಕರಣ ಘಟಿಸಿತು. (ಡಿಸೆಂಬರ್ ೨೦೧೨ ರಲ್ಲಿ ದೆಹಲಿಯಲ್ಲಿ ಚಲಿಸು ತ್ತಿರುವ ಬಸ್‌ನಲ್ಲಿ ಕ್ರೂರ ಸಾಮೂಹಿಕ ಅತ್ಯಾಚಾರದಿಂದಾಗಿ ಓರ್ವ ಯುವತಿಯು ಸಾವನ್ನಪ್ಪಿದ್ದಳು. ಈ ಯುವತಿಯ ಪ್ರಕರಣಕ್ಕೆ ‘ನಿರ್ಭಯಾ’ ಎಂದು ಹೆಸರಿಡಲಾಗಿದೆ.) ಅನಂತರ ಯಾವ ರೀತಿ ಕೋಲಾಹಲವೆದ್ದಿತ್ತೋ ಅದು ಶ್ರದ್ಧಾ ವಾಲಕರ ಪ್ರಕರಣದಲ್ಲಿ ಕಾಣಿಸಲಿಲ್ಲ. ಸಮಾಜದ ಭಾವನೆಗಳು ಕ್ರಮೇಣ ಸಾಯುತ್ತಿದೆಯೇ ?ದೆಹಲಿಯಲ್ಲಿ ೧೦ ವರ್ಷಗಳ ನಂತರವೂ ಮಹಿಳೆಯರಿಗೆ ಸುರಕ್ಷಿತ ವಾತಾವರಣವಿಲ್ಲ, ಇದು ದುರದೃಷ್ಟವೆಂದೇ ಹೇಳಬೇಕು. ಹಾಗಾದರೆ ದೆಹಲಿ ಸರಕಾರವು ನಿರ್ಭಯಾ ಪ್ರಕರಣದಿಂದ ಏನು ಪಾಠ ಕಲಿಯಿತು ? ‘ಲಿವ್ ಇನ್ ರಿಲೇಶನ್‌ಶಿಪ್’ಅನ್ನು ಬೆಂಬಲಿಸುವವರು ಶ್ರದ್ಧಾ ಹತ್ಯಾಕಾಂಡ ಬಗ್ಗೆ ಏನೂ ಮಾತೇ ಆಡುತ್ತಿಲ್ಲ, ಇದನ್ನು ಗಮನದಲ್ಲಿಡಿ. ಈ ಪ್ರಕರಣದ ಬಗ್ಗೆ ಅನೇಕರು ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ; ಆದರೆ ಅದರ ಬಗ್ಗೆ ಕಠಿಣ ಉಪಾಯಯೋಜನೆಯನ್ನು ಮಾಡಲೂ ಯಾರೂ ಮುಂದೆ ಬರುವುದು ಕಾಣಿಸುವುದಿಲ್ಲ.

೫. ‘ಲಿವ್ ಇನ್ ರಿಲೇಶನ್‌ಶಿಪ್’ ಈಪಾಶ್ಚಾತ್ಯ ವಿಕೃತಿ ಸಮಾಜೋಪಯೋಗಿ ಹೇಗೆ ?

ಭಾರತೀಯ ಸಂಸ್ಕೃತಿಯು ‘ಸ್ತ್ರೀ ಮತ್ತು ಪುರುಷರು ಪರಸ್ಪರ ರನ್ನು ಗೌರವಿಸಬೇಕು’ ಎಂಬುದನ್ನು ಕಲಿಸುತ್ತದೆ. ನಮ್ಮ ಮಹಾನ, ಪ್ರಾಚೀನ ಹಿಂದೂ ಧರ್ಮದಲ್ಲಿ ‘ಸ್ತ್ರೀಯರಿಗೆ ಗೌರವದ ಸ್ಥಾನವನ್ನು ಕೊಡಲಾಗಿದೆ. ಹಿಂದಿನ ಕಾಲದಲ್ಲಿ ಅನೇಕ ಸ್ತ್ರೀಯರು ರಾಜಕೀಯ ಕ್ಷೇತ್ರದಲ್ಲಿ ಅಮೂಲ್ಯ ಯೋಗದಾನವನ್ನು ನೀಡಿದ್ದಾರೆ. ಆದರೂ ಅವರು ಎಲ್ಲಿಯೂ ನೈತಿಕಮೌಲ್ಯಗಳ ಮತ್ತು ಸಂಸ್ಕಾರಗಳ ತ್ಯಾಗ ವನ್ನು ಮಾಡಲಿಲ್ಲ. ಆದುದರಿಂದಲೇ ಅವರ ಇತಿಹಾಸವನ್ನು ನೂರಾರು ವರ್ಷಗಳ ನಂತರವೂ ಅಧ್ಯಯನ ಮಾಡಲಾಗುತ್ತದೆ. ಆದುದರಿಂದ ‘ರೂಢಿ, ಪರಂಪರೆಗಳು ಮಲಿನವಾಗಿವೆ’, ಎಂದು ಹೇಳುವುದು ಯೋಗ್ಯವಲ್ಲ. ‘ಲಿವ್ ಇನ್ ರಿಲೇಶನ್‌ಶಿಪ್’ ಈ ಪಾಶ್ಚಾತ್ಯ ವಿಕೃತಿಗೆ ಓರ್ವ ಮುಗ್ಧ ಶ್ರದ್ಧಾಳ ಜೀವವನ್ನು ರಕ್ಷಿಸಲು ಆಗಲಿಲ್ಲ, ಅದು ಸಮಾಜೋಪಯೋಗಿ ಆಗಿದೆ ಅಥವಾ ಅದರಿಂದ ಲಾಭವಾಗುವುದು ಎಂದು ಹೇಗೆ ಹೇಳಲು ಸಾಧ್ಯ ?

೬. ಧರ್ಮಪಾಲನೆಯನ್ನು ಮಾಡಿದರೆ ಧರ್ಮವುನಿಮ್ಮ ರಕ್ಷಣೆಯನ್ನು ಮಾಡಲು ಸಮರ್ಥವಾಗಿದೆ !

ಸದ್ಯದ ಯುವಕರಿಗೆ ಧರ್ಮಪಾಲನೆ ಎಂದರೆ ಒಂದು ರೀತಿಯ ಬಂಧನವೆನಿಸುತ್ತದೆ. ಆದುದರಿಂದ ‘ಲಿವ್ ಇನ್’ನಂತಹ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ವಾಸ್ತವದಲ್ಲಿ ಧರ್ಮಪಾಲನೆ ಮಾಡಿದರೆ ಧರ್ಮವು ನಿಮ್ಮ ರಕ್ಷಣೆಯನ್ನು ಮಾಡಲು ಸಮರ್ಥವಿದೆ. ‘ಇದು ಹೇಗೆ ಸಾಧ್ಯ’ ಎಂದು ಕೆಲವರಿಗೆ ಅನಿಸಬಹುದು. ಯಾವ ರೀತಿ ಪ್ರೇಮವನ್ನು ಮಾಡುವವರಿಗೆ ‘ಲಿವ್ ಇನ್’ನಲ್ಲಿ ಇರದ ಹೊರತು ಜೋಡಿದಾರರ ಸ್ವಭಾವ ತಿಳಿಯಲು ಸಾಧ್ಯವಿಲ್ಲ ಎಂದು ಅನಿಸುತ್ತದೆಯೋ, ಅದೇ ರೀತಿ ಧರ್ಮಪಾಲನೆಯನ್ನು ಮಾಡದ ಹೊರತು ಧರ್ಮ ಹೇಗೆ ರಕ್ಷಿಸುತ್ತದೆ ಎಂಬುದನ್ನು ಅನುಭವಿಸಲು ಬರುವುದಿಲ್ಲ, ಇದನ್ನೂ ಗಮನದಲ್ಲಿ ತೆಗೆದುಕೊಳ್ಳಬೇಕು.

೭. ‘ಶ್ರದ್ಧಾ’ಳ ಹತ್ಯೆಯ ಬಗ್ಗೆ ಒಬ್ಬ ಮುಸಲ್ಮಾನ ಮುಖಂಡನೂ ಏಕೆ ಖಂಡಿಸಲಿಲ್ಲ ?

ಹಿಂದೂ ಯುವತಿ ‘ಶ್ರದ್ಧಾ’ಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಆಫ್ತಾಬ್ ಪೂನಾವಾಲಾನನ್ನು ಭಾರತದಲ್ಲಿನ ಅನೇಕ ಮತಾಂಧರು ಬೆಂಬಲಿಸುತ್ತಿದ್ದಾರೆ. ಇದು ಭಾರತದಲ್ಲಿನ ಹಿಂದೂ ಗಳಿಗೆ ಎಚ್ಚರಿಕೆಯ ಗಂಟೆ. ಮುಸಲ್ಮಾನ ಸಮಾಜದ ನ್ಯಾಯ ಹಕ್ಕುಗಳಿಗಾಗಿ ಧ್ವನಿ ಎತ್ತುವ ಒಬ್ಬ ಮುಸಲ್ಮಾನ ಮುಖಂಡನೂ ‘ಶ್ರದ್ಧಾ’ಳ ಹತ್ಯೆಯ ಬಗ್ಗೆ ದುಃಖವನ್ನು ವ್ಯಕ್ತಪಡಿಸುವುದಂತೂ ದೂರದ ಮಾತಾಯಿತು; ಅವನು ಒಂದು ಸಾಮಾನ್ಯ ಖೇದ ವ್ಯಕ್ತಪಡಿಸಲಿಲ್ಲ, ಎಂಬುದನ್ನು ಗಮನದಲ್ಲಿಡಿ. ಇದರ ಬಗ್ಗೆ ಯಾರೂ ಕೇಳುವ ಧೈರ್ಯವನ್ನೇಕೆ ಮಾಡುವುದಿಲ್ಲ ?

೮. ಶ್ರದ್ಧಾಳಿಗೆ ನಿಜವಾದ ಶ್ರದ್ಧಾಂಜಲಿ !

ಹಿಂದೂಗಳೇ, ಇನ್ನು ಮುಂದೆ ಯಾವುದೇ ಹಿಂದೂ ಯುವತಿಯಜೀವನ ಹಾಳಾಗಬಾರದೆಂದು ಹಿಂದೂ ಹುಡುಗಿಯರ ಜೀವದ ಮೇಲೆ ಬಂದಿರುವ ‘ಲವ್ ಜಿಹಾದ್’ಅನ್ನು ತಡೆಗಟ್ಟಲು ಇಡೀ ದೇಶದಾದ್ಯಂತ ‘ಲವ್ ಜಿಹಾದ್ ವಿರೋಧಿ ಕಾನೂನು’ ಜಾರಿಗೆ ತರುವ ಬಗ್ಗೆ ಸರಕಾರವನ್ನು ಒತ್ತಾಯಿಸಬೇಕು. ಯಾವುದೇ ಶಾಸ್ತ್ರಾಧಾರವಿಲ್ಲದ ‘ಲಿವ್ ಇನ್ ರಿಲೇಶನ್‌ಶಿಪ್’ ಈ ಪಾಶ್ಚಾತ್ಯ ವಿಕೃತಿಯನ್ನು ಭಾರತದಿಂದ ಗಡಿಪಾರು ಮಾಡಲು ಕಾನೂನನ್ನು ಜಾರಿಗೆ ತರುವಂತೆ ಸರಕಾರವನ್ನು ಒತ್ತಾಯಿಸಬೇಕು. ಹಿಂದೂಗಳಿಗೆ ಚಿಕ್ಕಂದಿನಿಂದಲೇ ಧರ್ಮಶಿಕ್ಷಣ ಸಿಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಮಾಡಬೇಕು. ಈ ಬೇಡಿಕೆಗಳಿಗಾಗಿ ಮಾಡಿದ ಪ್ರತಿಯೊಂದು ಪ್ರಯತ್ನವೇ ‘ಶ್ರದ್ಧಾ’ಳಿಗೆ ನಿಜವಾದ ಶ್ರದ್ಧಾಂಜಲಿಯಾಗುವುದು.

– ವರ್ಷಾ ಕುಲಕರ್ಣಿ, ಸೊಲ್ಲಾಪೂರ (೨೧.೧೧.೨೦೨೨)