ಸ್ವಾಮಿ ವಿವೇಕಾನಂದರು ಲಂಡನ್‌ನಲ್ಲಿರುವಾಗ ಅವರ ಒಬ್ಬ ಆಂಗ್ಲ ಸ್ನೇಹಿತನು ಅವರಿಗೆ ಅಪಹಾಸ್ಯ ಮಾಡಿ, ‘ನಾಲ್ಕು ವರ್ಷ ಭೋಗವಾದ, ಝಗಮಗಿಸುವ ಮತ್ತು ಶಕ್ತಿಯಿಂದ ಪರಿಪೂರ್ಣವಾದ ಈ ಪಾಶ್ಚಿಮಾತ್ಯ ಜಗತ್ತಿನ ಅನುಭವ ಪಡೆದ ನಂತರ ಈಗ ನಿಮಗೆ ನಿಮ್ಮ ಮಾತೃಭೂಮಿ (ಭಾರತ) ಹೇಗನಿಸುತ್ತದೆ ?” ಆಗ ಆ ವಿದೇಶಿ ಸ್ನೇಹಿತನಿಗೆ, ಸ್ವಾಮಿ ವಿವೇಕಾನಂದರ ಮುಖದಲ್ಲಿ ನಿರಾಶೆ ಮೂಡುವುದು, ಎಂದೆನಿಸಿತು. ಆದರೆ ಈ ಬಹಾದುರನು, ಸದ್ಗುರುವಿನ ಶಿಷ್ಯನು, ಭಾರತಮಾತೆಯ ಸುಪುತ್ರನು ಮತ್ತು ಧರ್ಮಧುರಂಧರನು (ಸ್ವಾಮಿ ವಿವೇಕಾನಂದರು) ತಮ್ಮ ಮನಸ್ಸು ಹಗುರ ಮಾಡಿಕೊಂಡರು. ಸ್ವಾಮಿ ವಿವೇಕಾನಂದರು ಉತ್ತರಿಸುತ್ತಾ, “ನಾನು ಮೊದಲು ಮಾತೃಭೂಮಿ ಈ ಸಂಬಂಧದಿಂದ ಭಾರತಮಾತೆಯಯನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ವಿದೇಶದ ವಿಲಾಸ ನೋಡಿ ಹಾಗೂ ತತ್ವಜ್ಞಾನರಹಿತ ಜೀವನವನ್ನು ನಡೆಸುವ, ಅದರ ಪ್ರಕಾರ ಶರೀರಕ್ಕೆ ‘ನಾನು’ ಎಂದು ತಿಳಿದುಕೊಂಡಿರುವ, ಸಂಸಾರವನ್ನೇನಿಜವೆಂದು ತಿಳಿದಿರುವ ಮತ್ತು ೫ ರಿಂದ ೨೫ ಜನರ ಹೊಗಳಿಕೆಯಲ್ಲಿ ಜೀವನವನ್ನು ಕೊನೆಗೊಳಿಸುವವರನ್ನು ನೋಡಿ ನನಗನಿಸುವುದೆಂದರೆ ಭಾರತಮಾತೆಯನ್ನು ಕೇವಲ ಪ್ರೀತಿಸಿದರೆ ಸಾಲದು, ಈಗ ನಾನು ಆಕೆಗೆ ನಮಸ್ಕಾರ ಮಾಡುತ್ತೇನೆ. ಏಕೆಂದರೆ ಭಾರತದ ಸನಾತನ ಧರ್ಮದ ಜೀವನ ಪದ್ಧತಿಯಲ್ಲಿ ಮುಕ್ತಿ ಇದೆ. ನಮ್ರತೆ, ಸಹಜತೆ ಮತ್ತು ಸಜ್ಜನಿಕೆ ಇದೆ. ಪರೋಪಕಾರ ತುಂಬಿದೆ ಮತ್ತು ಅಲ್ಲಿಯ ಜನರು ಎಲ್ಲವನ್ನೂ ಮಾಡಿ ‘ಭಗವಂತನೇ ಮಾಡಿದ್ದಾನೆ’, ಎಂಬ ವಿಚಾರ ಮಾಡುತ್ತಾರೆ. ಈಗ ಭಾರತದ ಧೂಳು ಸಹ ನನಗೆ ಪವಿತ್ರವಾಗಿದೆ. ಈಗ ನನಗಾಗಿ ಅದು ಒಂದು ಪುಣ್ಯಭೂಮಿ ಮತ್ತು ಒಂದು ತೀರ್ಥಕ್ಷೇತ್ರವಾಗಿದೆ. ನಾನು ಭಾರತಮಾತೆಯನ್ನು ಪೂಜಿಸುವೆನು”, ಎಂದರು.
ಈ ವಿದೇಶಿಯನ ಮುಖ ಬಾಡಿ ಹೋಯಿತು. ಅವನು ನಾಚಿಕೆಯಿಂದ ಮೌನವಾದನು. ಈ ಭೂಮಿಗಾಗಿ ಯಾರೆಲ್ಲ ಬಲಿದಾನ ನೀಡಿದ್ದಾರೆ, ಅವರು ನಿಜವಾದ ದೇಶಭಕ್ತರಂತೂ ಆಗಿದ್ದರು ಆದರೆ ಭಗವಂತನ ಭಕ್ತರೂ ಆಗಿದ್ದರು. ಅವರು ಕೋಟ್ಯಾಂತರ ಹಿಂದೂಗಳನ್ನು ದೌರ್ಜನ್ಯದಿಂದ ರಕ್ಷಿಸಿದರು ಮತ್ತು ನಗುನಗುತ್ತಾ ನಮ್ಮ ದೇಶಕ್ಕಾಗಿ ಬಲಿದಾನ ನೀಡಿದರು.
(ಕೃಪೆ : ಮಾಸಿಕ ‘ಋಷಿ ಪ್ರಸಾದ’, ಜುಲೈ ೨೦೧೭)