ಕೆಲವು ದಿನಗಳ ಹಿಂದೆ ಆಸಾಮ್‌ನಲ್ಲಿನ ರಾಷ್ಟ್ರಪುರುಷ ಹಾಗೂ ಯೋಧ ಲಚಿತ ಬರಫುಕನ ಇವರ ೪೦೦ ನೇ ಜಯಂತಿಯನ್ನು ಆಚರಿಸಲಾಯಿತು. ಅವರ ಜಯಂತಿಯ ನಿಮಿತ್ತ ಆಸಾಮ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಂದ್ರೀಯ ಗೃಹಸಚಿವ ಅಮಿತ ಶಾಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಮಿತ ಶಾಹ ಇವರು ಲಚಿತ ಬರಫುಕನ ಇವರ ಶೌರ್ಯದ ವಿಷಯವನ್ನು ಸಭಿಕರಿಗೆ ಪರಿಚಯಿಸಿದರು. ಲಚಿತ ಬರಫುಕನ ಇವರ ಅಧೀನದಲ್ಲಿನ ಆಸಾಮ್‌ನಲ್ಲಿನ ಅಂದಿನ ಅಹೋಮ ಸಾಮ್ರಾಜ್ಯವು ದಬ್ಬಾಳಿಕೆ ಹಾಗೂ ಅತ್ಯಾಚಾರಿ ಔರಂಗಜೇಬ, ಅಕ್ಬರ ಇವರ ವಿರುದ್ಧ ದೊಡ್ಡ ಹೋರಾಟವನ್ನು ಮಾಡಿತ್ತು. ಆದ್ದರಿಂದ ಅನಂತರ ಮೊಘಲರಿಗೆ ಆಸಾಮಿನ ಕಡೆಗೆ ತಿರುಗಿ ನೋಡಲು ಕೂಡ ಸಾಧ್ಯವಾಗಲಿಲ್ಲ. ಲಚಿತ ಬರಫುಕನ ಇವರನ್ನು ‘ಪೂರ್ವೋತ್ತರದ ಶಿವಾಜಿ’, ಎನ್ನಲಾಗುತ್ತದೆ. ಅವರ ಈ ಶೌರ್ಯದ ವಿಷಯವು ಭಾರತದಲ್ಲಿ ಎಷ್ಟು ಜನರಿಗೆ ತಿಳಿದಿರಬಹುದು ? ಅದರ ಉತ್ತರ ‘ಬಹಳಷ್ಟು ಜನರಿಗೆ ಗೊತ್ತಿಲ್ಲ’, ಎಂದೇ ಹೇಳಬಹುದು.
ಸುಳ್ಳು ಇತಿಹಾಸ !
‘ಇಡೀ ಭಾರತದ ಮೇಲೆ ೯೦೦ ವರ್ಷ ಮೊಘಲರ ರಾಜ್ಯವಿತ್ತು’, ಎಂಬ ಸುಳ್ಳು ಇತಿಹಾಸವನ್ನೇ ಇದುವರೆಗೆ ಭಾರತೀಯರಿಗೆ ಕಲಿಸಲಾಯಿತು. ‘ಮೊಘಲರೆ ಭಾರತದ ನಿರ್ಮಾಪಕರಾಗಿದ್ದರು’, ಎಂದು ಎನ್.ಸಿ.ಇ.ಆರ್.ಟಿ.ಯ ಪುಸ್ತಕಗಳಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿಂಬಿಸಲಾಯಿತು. ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿನ ರಾಜ್ಯಸ್ತರದ ಇತಿಹಾಸದ ಪುಸ್ತಕಗಳಿಂದ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಸ್ವಲ್ಪವಾದರೂ ತಿಳಿಯುತ್ತದೆ. ಇತರ ರಾಜ್ಯಗಳಲ್ಲಿ ಹಾಗೂ ಎಲ್ಲಿ ಕೇಂದ್ರೀಯ ಶಾಲೆಗಳ ಪಠ್ಯಕ್ರವನ್ನು ಹಮ್ಮಿಕೊಳ್ಳಲಾಗುತ್ತದೋ, ಅಲ್ಲಿನ ಮಕ್ಕಳು ಗೌರವ ಶಾಲಿ ಭಾರತೀಯ ಇತಿಹಾಸದಿಂದ ವಂಚಿತರಾಗಿದ್ದಾರೆ ಹಾಗೂ ಅವರ ಮನಸ್ಸಿನಲ್ಲಿ ಭಾರತೀಯ ರಾಜರಲ್ಲ, ‘ಭಾರತಕ್ಕೆ ಹೊರಗಿನಿಂದ ಬಂದ ಮೊಘಲರೆ ಒಳ್ಳೆಯವರು’, ಎಂಬ ಇತಿಹಾಸವನ್ನು ಬಿಂಬಿಸಲಾಯಿತು. ಸ್ವಾತಂತ್ರ್ಯದ ನಂತರ ಹೀಗೆ ೬-೭ ಪೀಳಿಗೆಗಳು ಸಾಮ್ಯವಾದಿ ಮತ್ತು ಭಾರತದ್ವೇಷಿಗಳು ಬರೆದಿರುವ ಅಯೋಗ್ಯ ಇತಿಹಾಸವನ್ನು ಆಯ್ದುಕೊಂಡರು ಹಾಗೂ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ವಿಷಯದಲ್ಲಿ ಜನರನ್ನು ವಂಚಿಸಲಾಯಿತು.
ಲಚಿತ ಬರಫುಕನ ಇವರ ಶೌರ್ಯ
ನೌಕಾದಳದ ಮಹತ್ವವನ್ನು ಗುರುತಿಸಿ ಲಚಿತ ಬರಫುಕನ ಇವರು ನೌಕಾದಳವನ್ನು ನಿರ್ಮಿಸಿದ್ದರು. ಔರಂಗಜೇಬನ ವಿಶಾಲ ಸೇನೆಯನ್ನು ಅವರು ಧೂಳೀಪಟ ಮಾಡಿದ್ದರು. ಆಸಾಮ್‌ನಲ್ಲಿ ಬಲಿಷ್ಠ ‘ಅಹೋಮ’ ಸಾಮ್ರಾಜ್ಯವು ೧೨ ರಿಂದ ೧೮ ನೇ ಶತಮಾನ ಅಂದರೆ ೬೦೦ ವರ್ಷಗಳಷ್ಟು ದೀರ್ಘ ಕಾಲ ಕಾರ್ಯನಿರತವಾಗಿತ್ತು. ಅಹೋಮ ಸಾಮ್ರಾಜ್ಯದ ಆಡಳಿತದವರು ಹಿಂದೂ ಸಂಸ್ಕೃತಿಯನ್ನು ಅನುಸರಿಸಿದ್ದರು; ಆದರೆ ಇತಿಹಾಸ ದಲ್ಲಿ ಇದರ ಉಲ್ಲೇಖವಿಲ್ಲ. ಅಮಿತ ಶಾಹ ಇವರು ಕಾರ್ಯಕ್ರಮದಲ್ಲಿ, “ಇತಿಹಾಸವನ್ನು ತಪ್ಪಾಗಿ ಬರೆಯಲಾಗಿದೆ. ಈಗ ಹೊಸ ಇತಿಹಾಸ ಬರಲಿಕ್ಕಿದೆ. ಈಗ ಇತಿಹಾಸಕಾರರು ೩೦ ಸಾಮ್ರಾಜ್ಯಗಳನ್ನು ಆಯ್ದುಕೊಂಡು ಅವುಗಳ ಬಗ್ಗೆ ಬರೆಯಬೇಕು, ಹೊಸ ಇತಿಹಾಸ, ಸತ್ಯ ಇತಿಹಾಸವನ್ನು ಹೇಳುವ ಸಮಯ ಈಗ ಬಂದಿದೆ. ಲಚಿತ ಬರಫುಕನ ಇವರ ಶೌರ್ಯದ ವಿಷಯವನ್ನು ಹಿಂದಿಯಲ್ಲಿ ಬರೆದು ಸಂಪೂರ್ಣ ದೇಶಕ್ಕೆ ಪರಿಚಯಿಸಲಾಗುವುದು. ಇತಿಹಾಸಕ್ಕೆ ಪುನಃ ಜೀವದಾನ ಮಾಡಲಾಗುವುದು” ಎಂದು ಹೇಳಿದರು.
ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಅಭಿಮಾನವಿರುವ ಹಿಮ್ಮತ ಬಿಸ್ವ ಸರಮಾ ಇವರು ಆಸಾಮ್‌ಗೆ ಮುಖ್ಯಮಂತ್ರಿಯೆಂದು ಲಭಿಸಿದ್ದಾರೆ. ಅವರು ಅನಧಿಕೃತ ಮದರಸಾಗಳನ್ನು ಮುಚ್ಚುವುದು, ಒಡೆಯುವುದು, ಮದರಸಾಗಳನ್ನು ಶಾಲೆ, ಮಹಾವಿದ್ಯಾಲಯ, ಆಸ್ಪತ್ರೆಗಳನ್ನಾಗಿ ರೂಪಾಂತರಿಸುವಂತಹ ಪ್ರಯೋಗವನ್ನು ನಿರ್ಭಯವಾಗಿ ಮಾಡಿದ್ದಾರೆ. ಅವರು ಸಾಮ್ಯವಾದಿಗಳಿಂದ ಮೂಲೆಗುಂಪಾದ ಆಸಾಮ್‌ನ ಗೌರವಶಾಲಿ ಇತಿಹಾಸವನ್ನು ಪುನಃ ಸಮಾಜಕ್ಕೆ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಇತಿಹಾಸದ ಪಠ್ಯಪುಸ್ತಕ ಗಳಿಂದ ಕಾಣೆಯಾಗಿದ್ದ ಲಚಿತ ಬರಫುಕನ ಇವರ ಜಯಂತಿಯ ನಿಮಿತ್ತ ಅವರು ಆಸಾಮ್‌ನಲ್ಲಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಗಳಿಂದ ಅವರು ಲಚಿತ ಬರಫುಕನ ಇವರ ಪರಾಕ್ರಮ, ದೇಶಭಕ್ತಿಯ ಮೇಲೆ ಬೆಳಕು ಚೆಲ್ಲಿ ಆಸಾಮೀ ಜನರಿಗೆ ಹೊಸ ದೃಷ್ಟಿಕೋನ ನೀಡಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಇಂತಹ ಎಷ್ಟೋ ಬರಫುಕನ ಆಗಿ ಹೋಗಿದ್ದಾರೆ, ಜನರಿಗೆ ಅವರ ವಿಷಯಗೊತ್ತಿಲ್ಲ. ಇದನ್ನು ಗಮನದಲ್ಲಿಟ್ಟು ಅವರ ಇತಿಹಾಸವನ್ನು ಜನರ ಮಂದೆ ತರುವ ಹೊಣೆಯನ್ನು ಸರಕಾರ ಹಾಗೂ ಹಿಂದೂ ಬಾಂಧವರು ನೆರವೇರಿಸಬೇಕಾಗಿದೆ.