ಕಲಂ ೩೭೦ ಮತ್ತೆ ಜಾರಿಗೊಳಿಸುವಂತೆ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆ
ಜಮ್ಮು – ಕಾಶ್ಮೀರದಲ್ಲಿನ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಕಲಂ ೩೭೦ ಈ ಅಂಶ ಮುಂಚೂಣಿಯಲ್ಲಿದೆ. ಇದರಲ್ಲಿ ಈಗ ಪಾಕಿಸ್ತಾನ ಕೂಡ ಮೂಗು ತುರಿಸುತ್ತಿದೆ. ಕಾಶ್ಮೀರದಲ್ಲಿ ಕಲಂ ೩೭೦ ಮತ್ತು ೩೫ ಎ ಮತ್ತೊಮ್ಮೆ ಜಾರಿಗೊಳಿಸುವ ಅಂಶದ ಕುರಿತು ಪಾಕಿಸ್ತಾನ ಹಾಗೂ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಈ ಪಕ್ಷದ ಮೈತ್ರಿ, ನಾವು ಪರಸ್ಪರರು ಜೊತೆಗೆ ಇದ್ದೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಆಸಿಫ್ ಇವರು ಹೇಳಿಕೆ ನೀಡಿದ್ದಾರೆ.
ಭಾಜಪದಿಂದ ಟೀಕೆ
ಈ ಕುರಿತು ಭಾಜಪ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಪಾಕಿಸ್ತಾನದಂತಹ ಒಂದು ಭಯೋತ್ಪಾದಕ ದೇಶ ಕಾಶ್ಮೀರದ ಅಂಶಗಳ ಕುರಿತು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಇವರ ನಿಲುವಿಗೆ ಬೆಂಬಲ ನೀಡುತ್ತಿದೆ, ಎಂದು ಭಾಜಪದ ನಾಯಕ ಅಮಿತ್ ಮಾಲವೀಯ ಇವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಯಾವ ಅಂಶಗಳಿವೆ, ಅದೇ ಅಂಶಗಳು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಫರೆನ್ಸ್ ದು ಇದೆ, ಇದು ಈಗ ಸ್ಪಷ್ಟವಾಗಿದೆ, ಎಂದು ಭಾಜಪದ ನಾಯಕ ಶಹಜಾದ ಪುನಾವಾಲಾ ಇವರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಪಾಕಿಸ್ತಾನದ ನೀತಿ ಒಂದೇ ! – ಅಮಿತ್ ಶಾ
ಕಳೆದ ಕೆಲವು ವರ್ಷಗಳಿಂದ ರಾಹುಲ್ ಗಾಂಧಿ ದೇಶವಾಸಿಯರ ಭಾವನೆಗಳಿಗೆ ಧಕ್ಕೆ ತರುತ್ತಾ ಎಲ್ಲಾ ಭಾರತ ವಿರೋಧಿ ಶಕ್ತಿಗಳ ಜೊತೆಗೆ ನಿಂತಿದ್ದಾರೆ. ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಗಳ ಸಾಕ್ಷಿಗಳ ಕೇಳುವುದು ಆಗಿರಲಿ ಅಥವಾ ಭಾರತೀಯ ಸೈನ್ಯದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವುದಾಗಿರಲಿ, ರಾಹುಲ್ ಗಾಂಧಿ ಇವರ ಕಾಂಗ್ರೆಸ್ ಪಕ್ಷ ಮತ್ತು ಪಾಕಿಸ್ತಾನದ ನೀತಿಗಳು ಯಾವಾಗಲೂ ಸಮಾನವಾಗಿವೆ ಹಾಗೂ ಕಾಂಗ್ರೆಸ್ಸಿನ ಕೈವಾಡ ಯಾವಾಗಲೂ ದೇಶ ವಿರೋಧಿ ಶಕ್ತಿಗಳ ಜೊತೆಗೆ ಇರುತ್ತದೆ. ಆದರೂ ಕಾಂಗ್ರೆಸ್ ಪಕ್ಷ ಮತ್ತು ಪಾಕಿಸ್ತಾನ ಕೇಂದ್ರದಲ್ಲಿ ಮೋದಿ ಸರಕಾರ ಇದೆ ಎಂಬುದು ಮರೆಯುತ್ತಿದೆ. ಆದ್ದರಿಂದ ಕಾಶ್ಮೀರದಲ್ಲಿ ಕಲಂ ೩೭೦ ಅಥವಾ ಭಯೋತ್ಪಾದನೆ ಮರಳಿ ಬರಲಾರದು, ಎಂದು ಗೃಹಸಚಿವ ಅಮಿತ ಶಹಾ ಇವರು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡುವ ಪೋಸ್ಟನ್ನು ಪ್ರಸಾರ ಮಾಡುತ್ತಾ ಆಸಿಫ್ ಹೇಳಿಕೆಯ ಕುರಿತು ಪ್ರತ್ಯುತ್ತರ ನೀಡಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನ ಯಾರ್ಯಾರ ಜೊತೆಗೆ ಇದೆ ? ಮತ್ತು ಯಾರ್ಯಾರು ಪಾಕಿಸ್ತಾನದ ಜೊತೆಗೆ ಇದ್ದಾರೆ ? ಇದನ್ನು ಪಾಕಿಸ್ತಾನವೇ ಹೇಳಿದರೆ ಒಳ್ಳೆಯದು ! ಆದ್ದರಿಂದ ಈಗಲಾದರೂ ಭಾರತೀಯರಿಗೆ ಕಾಂಗ್ರೆಸ್ಸಿನ ನಿಜವಾದ ಬಣ್ಣ ತಿಳಿಯುವುದು ! |