ಭಯೋತ್ಪಾದಕ ನಸರುಲ್ಲಾನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸುವವರ ಕುರಿತು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಟೀಕೆ
ಸೋನಿಪತ (ಹರಿಯಾಣ) – ಇತ್ತೀಚಿಗೆ ಇಸ್ರೇಲಿ ಸೈನ್ಯವು ಭಯೋತ್ಪಾದಕ ಸಂಘಟನೆ ಹಿಜಬುಲ್ಲಾದ ಮುಖ್ಯಸ್ಥ ಹಸನ್ ನಸರುಲ್ಲಾ ಇವನನ್ನು ಹತಗೊಳಿಸಿದ್ದಾರೆ. ಯಾರನ್ನಾದರೂ ಎಲ್ಲಿಯಾದರೂ ಹೊಡೆದುರುಳಿಸುವುದು ಇದು ಅವರ ದೇಶದ ಆಂತರಿಕ ವಿಷಯವಾಗಿದ್ದು ಅದರ ಕುರಿತು ನಾವು ಏನನ್ನು ಮಾತನಾಡುವ ಅವಶ್ಯಕತೆ ಇಲ್ಲ; ಆದರೆ ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿ, ‘ನಸರುಲ್ಲಾನ ಸಾವಿನಿಂದ ನಮಗೆ ದುಃಖವಾಗಿದೆ; ಆದ್ದರಿಂದ ನಾವು ಪ್ರಚಾರ ಮಾಡುವುದಿಲ್ಲ.’ ಎಂದು ಹೇಳಿದರು.
लेबनान में हिजबुल्लाह के अध्यक्ष को मारा गया और भारत में INDI गठबंधन वाले मातम मचा रहे हैं। @BJP4Haryana pic.twitter.com/IkmLxB3fZ8
— Himanta Biswa Sarma (@himantabiswa) September 29, 2024
ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ ಮತ್ತು ರಾಹುಲ್ ಗಾಂಧಿ ಈ ‘ಇಂಡಿ’ ಮೈತ್ರಿಕೂಟಕ್ಕೆ, ಯಾವಾಗ ಭಯೋತ್ಪಾದಕರ ದಾಳಿಯಲ್ಲಿ ಹಿಂದೂ ಸಾವನ್ನಪ್ಪುತ್ತಾನೆ ಅಥವಾ ಭಯೋತ್ಪಾದಕರು ಯಾವಾಗ ಹಿಂದೂ ಸೈನಿಕರನ್ನು ಕೊಲ್ಲುತ್ತಾರೆ, ಆಗ ನಿಮಗೆ ದುಃಖ ಅನಿಸುತ್ತದೆಯೇ ? ಎಂದು ಭಾಜಪದ ನಾಯಕ ಹಾಗೂ ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಸರಮಾ ಇವರು ಇಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಪ್ರಶ್ನೆ ಕೇಳಿದರು. ಭಾಜಪದ ವಕ್ತಾರ ಮತ್ತು ಜಮ್ಮು-ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಕವಿಂದರ್ ಗುಪ್ತ ಇವರು, ನಸರುಲ್ಲಾನ ಸಾವಿನಿಂದ ಮೆಹಬೂಬ ಮುಫ್ತಿ ಇವರಿಗೆ ಇಷ್ಟೊಂದು ನೋವು ಏಕೆ ಆಗುತ್ತಿದೆ ? ಇದರ ಹಿಂದಿನ ಉದ್ದೇಶ ಜನರಿಗೆ ತಿಳಿದಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳ ಹತ್ಯೆ ನಡೆಯುತ್ತಿರುವಾಗ ಅವರು ಒಂದು ಶಬ್ದ ಕೂಡ ಮಾತನಾಡಲಿಲ್ಲ. ಅವರ ಕುರಿತು ಮೆಹಬೂಬ ಮುಫ್ತಿ ಇವರು ಕಣ್ಣೀರು ಸುರಿಸಲಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುನಸ್ರುಲ್ಲಾ ಸಾವಿನ ಕುರಿತು ದುಃಖ ಪಡುವವರಿಗೆ ಲೆಬೇನಾನ್ ಗೆ ಕಳುಹಿಸಬೇಕು, ಎಂದು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ತಪ್ಪೇನು ಇಲ್ಲ ! |