ಭಾರತ ವಿರೋಧಿ ಪತ್ರಕರ್ತರ ನಂತರ ರಾಹುಲ್ ಗಾಂಧಿ ಇವರು ಅಮೇರಿಕಾದ ಭಾರತ ವಿರೋಧಿ ಸಂಸದರ ಭೇಟಿ
ನವದೆಹಲಿ – ದೇಶ ವಿರೋಧಿ ಹೇಳಿಕೆ ನೀಡುವ ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅಮೆರಿಕಾದ ಪ್ರವಾಸದಲ್ಲಿರುವಾಗ ಬಹಿರಂಗವಾಗಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಈ ಕುರಿತು ಶಾರವರು ಟೀಕಿಸಿದ್ದಾರೆ. ”ಜಮ್ಮು -ಕಾಶ್ಮೀರದಲ್ಲಿ ದೇಶವಿರೋಧಿ ಮತ್ತು ಮೀಸಲಾತಿ ವಿರೋಧಿ ನೀತಿಯನ್ನು ಬೆಂಬಲಿಸುತ್ತಿರುವುದು ಅಥವಾ ವಿದೇಶದಲ್ಲಿನ ವೇದಿಕೆಗಳಲ್ಲಿ ಭಾರತದ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ಅವರು ಯಾವಾಗಲೂ ದೇಶದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ ಹಾಗೆಯೇ ಅವರು ಭಾರತೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಶಾ ಹೇಳಿದರು. “ರಾಹುಲ್ ಗಾಂಧಿ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಮತ್ತೊಮ್ಮೆ ತೋರಿಸಿದ್ದಾರೆ.” ಎಂದು ಭಾಜಪದ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ, ರಾಹುಲ್ ಹಿಂದೆ ‘ಬಾಲಿಶ ಕೃತ್ಯ’ಗಳಲ್ಲಿ ತೊಡಗಿದ್ದರು; ಆದರೆ ಈಗ ‘ಅಪಾಯಕಾರಿ ಕೆಲಸ’ದಲ್ಲಿ ತೊಡಗಿದ್ದಾರೆ ಎಂದೂ ಹೇಳಿದ್ದಾರೆ.
ಸಂಪಾದಕೀಯ ನಿಲಿವುಅಂತಹ ವ್ಯಕ್ತಿಯನ್ನು ಗೃಹ ಸಚಿವರು ಏಕೆ ಜೈಲಿಗೆ ಹಾಕುವುದಿಲ್ಲ ? |