ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು `ಒಳ್ಳೆಯವರು ಅಥವಾ ಕೆಟ್ಟವರು’ ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು.

ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ

ನ್ಯೂಯಾರ್ಕ(ಅಮೇರಿಕಾ)– ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು. ಈ ರೀತಿಯ ವರ್ಗೀಕರಣ ಭಯೋತ್ಪಾದಕರ ವಿರುದ್ಧ ಹೋರಾಡುವ ತತ್ಪರತೆಯನ್ನು ದುರ್ಬಲಗೊಳಿಸುತ್ತದೆ ಎನ್ನುವ ಶಬ್ದಗಳಲ್ಲಿ ಭಾರತವು ಸಂಯುಕ್ತ ರಾಷ್ಟçದಲ್ಲಿ ಪಾಕಿಸ್ತಾನವನ್ನು ಅದರ ಹೆಸರನ್ನು ಹೇಳದೆ ಟೀಕಿಸಿದೆ. ಸದ್ಯ ಭಾರತವು ೧೫ ದೇಶಗಳ ಸಂಯುಕ್ತ ರಾಷ್ಟç ಸುರಕ್ಷಾ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ಪರಿಷತ್ತು ಮುಂಬರುವ ಡಿಸೆಂಬರ ೧೪ ಮತ್ತು ೧೫ ರಂದು ವಿದೇಶಾಂಗಮಂತ್ರಿ ಎಸ್. ಜಯಶಂಕರ ಇವರ ಅಧ್ಯಕ್ಷತೆಯಲ್ಲಿ `ಸುಧಾರಿತ ಬಹುಪಕ್ಷವಾದ ಮತ್ತು ಭಯೋತ್ಪಾದನೆಗೆ ವಿರೋಧ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಿದೆ. ಇದರ ಪೂರ್ವದಲ್ಲಿ ಭಾರತವು ಸಂಯುಕ್ತ ರಾಷ್ಟçದ ಅಧ್ಯಕ್ಷ ಗುಟೆರಸ ಇವರಿಗೆ ಪತ್ರವನ್ನು ಬರೆದಿದೆ. ಅದರಲ್ಲಿ ಭಾರತವು ಮೇಲಿನಂತೆ ಹೇಳಿಕೆ ದಾಖಲಿಸಿದೆ.