‘ಶ್ರೀ ಗುರುಗಳ ಕೃಪೆಯಿಂದ ನನಗೆ ಅನೇಕ ಬಾರಿ ರಾಮನಾಥಿಗೆ ಹೋಗುವ ಅವಕಾಶ ಸಿಗುತ್ತದೆ. ಆ ಅವಧಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ನಾನು ಅನೇಕ ಬಾರಿ ಭೇಟಿಯಾಗಿದ್ದೇನೆ. ಆಗ ನನಗೆ ಅವರಿಂದ ಅನೇಕ ಅಂಶಗಳು ಕಲಿಯಲು ಸಿಕ್ಕಿದವು. ನನ್ನಲ್ಲಿ ವ್ಯಷ್ಟಿಯಿಂದ ಸಮಷ್ಟಿ ಹೀಗೆ ಬದಲಾವಣೆಯು ಕೇವಲ ಮತ್ತು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದಲೇ ಆಗಿದೆ. ಈ ಕುರಿತು ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಪ್ರತಿಯೊಂದು ಸೇವೆಯು ಪರಿಪೂರ್ಣವಾಗಲು ಅಗತ್ಯವಿರುವ ‘ವ್ಯವಸ್ಥಿತ ಮತ್ತು ಇತರರ ವಿಚಾರ ಮಾಡಿ ವರದಿಯನ್ನು ಹೇಗೆ ಕೊಡಬೇಕು ?’, ಎಂಬುದು ಕಲಿಯಲು ಸಿಗುವುದು
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಗೆ ಹೋದಾಗ ಅವರ ಸೇವೆಯ ಬಗೆಗಿನ ಎಲ್ಲ ಕಾಗದಗಳನ್ನು ಯಾವಾಗಲೂ ವ್ಯವಸ್ಥಿತವಾಗಿ ಇಟ್ಟಿರುತ್ತಾರೆ. ಅವರ ಬರವಣಿಗೆಯ ವಹಿಯಲ್ಲಿ ಬೇರೆ ಬೇರೆ ವಿಷಯಗಳನ್ನು ಒಂದು ವಿಶಿಷ್ಟ ಪದ್ಧತಿಯಿಂದ ಬರೆದಿರುತ್ತಾರೆ. ಅದನ್ನು ನೋಡಿ ‘ನನಗೆ ಸೇವೆಗಳ ವರದಿಯನ್ನು ಸಾಧನೆಯ ದೃಷ್ಟಿಯಿಂದ ಹೇಗೆ ಕೊಡಬೇಕು ?’, ಎಂಬುದು ಗಮನಕ್ಕೆ ಬಂದಿತು. ಜವಾಬ್ದಾರ ಸಾಧಕರಿಗೆ ಸೇವೆಗಳ ವರದಿಯನ್ನು ಕೊಡುವಾಗ ನಾನು ವಿಷಯಕ್ಕನುಸಾರ ಸಿದ್ದಪಡಿಸುವ ಪ್ರಯತ್ನವನ್ನು ಮಾಡತೊಡಗಿದೆನು. ಮಹತ್ವದ ವಿಷಯವನ್ನು ಎದ್ದುಕಾಣುವಂತೆ ಮತ್ತು ಕಡತದ ಆರಂಭದಲ್ಲಿಡುವುದು, ಮಾಹಿತಿಗಾಗಿ ಇರುವ ವಿಷಯವನ್ನು ಎಲ್ಲಕ್ಕಿಂತ ಕೊನೆಯಲ್ಲಿಡುವುದು. ‘ಯಾವುದು ಆದ್ಯತೆ ಕಮ್ಮಿಇದೆಯೋ, ಅಲ್ಲಿ ‘ಸಮಯಕ್ಕನುಸಾರ ಓದಬಹುದು’, ಎಂದು ಬರೆಯುವುದು, ಹೀಗೆ ಸೇವೆಯಲ್ಲಿನ ಅನೇಕ ಸಣ್ಣಪುಟ್ಟ ಅಂಶಗಳು ನನಗೆ ಕಲಿಯಲು ಸಿಕ್ಕಿತು. ಇದರಿಂದ ನನಗೆ ‘ಸೇವೆಯಲ್ಲಿನ ಪರಿಪೂರ್ಣತೆ ಮತ್ತು ಇತರರ ವಿಚಾರ ಮಾಡುವುದು’ ಈ ಗುಣಗಳನ್ನು ಅಂಗೀಕರಿಸಲು ಸಾಧ್ಯವಾಯಿತು.
೨. ‘ಒಂದು ಸೇವೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ದಿನಾಂಕಗಳಿಗನುಸಾರ ಬರೆದಿಡಬೇಕು’, ಎಂಬುದನ್ನು ಕಲಿಯುವುದು
ಅವರು ಒಂದು ಸೇವೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ಇಟ್ಟಿದ್ದರು. ಅದನ್ನು ನೋಡಿ ನಾನು ಸಹ ಒಂದು ಬೇರೆ ವಹಿಯನ್ನು ಮಾಡಿದೆನು. ‘ಯಾವುದಾದರೊಂದು ಅಂಶವನ್ನು ಅವರಿಗೆ ಕೇಳಬೇಕು’, ಎಂದೆನಿಸಿದರೆ, ಅಂದು ನಾನು ಆ ಅಂಶವನ್ನು ವಹಿಯಲ್ಲಿ ದಿನಾಂಕಕ್ಕನುಸಾರ ಬರೆದಿಡಲು ಪ್ರಾರಂಭಿಸಿದೆನು. ಆದುದರಿಂದ ಅವರ ಬಳಿಗೆ ಹೋಗುವಾಗ ‘ಯಾವುದಾದರೊಂದು ಅಂಶವು ಕೇಳುವುದು ಉಳಿಯಿತು’, ಹೀಗೆ ಆಗುವುದಿಲ್ಲ ಅಥವಾ ನನಗೆ ಅಂಶವನ್ನು ನೆನಪಿಸಿಕೊಳ್ಳಲು ಬುದ್ಧಿಗೆ ಒತ್ತಡವನ್ನೂ ಕೊಡಬೇಕಾಗುವುದಿಲ್ಲ.
೩. ‘ಸೇವೆಯ ಸಮಯವು ಎಲ್ಲಿಯೂ ವ್ಯರ್ಥವಾಗುವುದಿಲ್ಲವಲ್ಲ ?’, ಎಂಬುದರತ್ತ ಗಾಂಭೀರ್ಯದಿಂದ ಗಮನ ಕೊಡಲು ಸಾಧ್ಯವಾಗುವುದು
ಒಮ್ಮೆ ಅವರು ನನ್ನನ್ನು ಕರೆದಿದ್ದರು. ನಾನು ಅವರ ಬಳಿ ಹೋದೆನು, ಆಗ ಇತರ ಸಾಧಕರು ಅವರೊಂದಿಗೆ ಮಾತನಾಡುತ್ತಿರುವುದನ್ನು ನೋಡಿ ನಾನು ಅವರ ಕೋಣೆಯ ಹೊರಗೆ ನಿಂತುಕೊಂಡೆನು. ಅವರು ನನಗೆ ಒಳಗೆ ಕರೆದು, “ನೀನು ಹೊರಗೆ ಏಕೆ ನಿಂತಿರುವೆ ? ನಾನು ನಿನಗೆ ಕರೆದಿದ್ದಾಗ ಬೇಗ ಒಳಗೆ ಬರಬೇಕಾಗಿತ್ತು” ಎಂದು ಹೇಳಿದರು. ಇದರಲ್ಲಿ ‘ನನ್ನ ಸಮಯವು ವ್ಯರ್ಥವಾಯಿತು’, ಎಂಬುದನ್ನು ಅವರು ನನ್ನ ಗಮನಕ್ಕೆ ತಂದುಕೊಟ್ಟರು. ಆಗ ‘ನನ್ನ ಸಮಯದ ಬಗ್ಗೆ ನನಗಿಂತ ಅವರೇ ಹೆಚ್ಚು ವಿಚಾರ ಮಾಡುತ್ತಾರೆ’, ಎಂಬುದು ನನ್ನ ಗಮನಕ್ಕೆ ಬಂದಿತು. ಈ ಪ್ರಸಂಗದ ನಂತರ ಸಮಯದ ಕಡೆಗೆ ನೋಡುವ ನನ್ನ ದೃಷ್ಟಿಕೋನವು ಬದಲಾಯಿತು. ಪುನಃ ಇಂತಹ ತಪ್ಪುಗಳಾಗದಂತೆ ನನ್ನಿಂದ ಪ್ರಯತ್ನವಾಗತೊಡಗಿತು.
೪. ‘ಭಾವನೆಯ ಸ್ತರದಲ್ಲಿ ಕೃತಿ ಮಾಡದೇ ಹೆಚ್ಚು ಯೋಗ್ಯ ವಿಚಾರವನ್ನು ಹೇಗೆ ಮಾಡಬೇಕು ?’, ಎಂಬುದು ಕಲಿಯಲು ಸಿಗುವುದು
ಒಮ್ಮೆ ನಾನು ರಾಮನಾಥಿ ಆಶ್ರಮದಲ್ಲಿದ್ದಾಗ ಅವರು ನನಗೆ ಅಂತರ್ಗತ ದೂರವಾಣಿ (ಇಂಟರ್‌ಕಾಮ್‌ದಿಂದ) ಕರೆ ಮಾಡಲು ಹೇಳಿದರು. ಅವರ ಕೋಣೆಯಲ್ಲಿ ಅಂತರ್ಗತ ದೂರವಾಣಿಯು ಕಾರ್ಯನಿರತವಾಗಿರುವುದರಿಂದ ನಾನು ತಕ್ಷಣವೇ ಅವರನ್ನು ಭೇಟಿಯಾಗಲು ಅವರ ಕೋಣೆಗೆ ಹೋದೆನು. ಆಗ ಅವರು ನನಗೆ, “ಯಾವುದೇ ಸಂದೇಶಕ್ಕಾಗಿ ಕೈಯಲ್ಲಿದ್ದ ಸೇವೆಯನ್ನು ಬಿಟ್ಟು ಬರುವುದು ಬೇಡ. ಸ್ವಲ್ಪ ಸಮಯದ ನಂತರ ಪುನಃ ದೂರವಾಣಿಯನ್ನು ಮಾಡಬಹುದಿತ್ತು. ಇದರಲ್ಲಿ ನಿನ್ನ ಸಮಯ ಮತ್ತು ಶಕ್ತಿ ಎರಡೂ ವ್ಯರ್ಥವಾಯಿತು” ಎಂದು ಅರಿವು ಮಾಡಿಕೊಟ್ಟರು. ಇದರಿಂದ ನನಗೆ ‘ಭಾವನೆಯ ಸ್ತರದಲ್ಲಿ ಕೃತಿಯನ್ನು ಮಾಡದೇ ಹೆಚ್ಚು ಯೋಗ್ಯ ವಿಚಾರವನ್ನು ಹೇಗೆ ಮಾಡಬೇಕು ?’, ಎಂದು ಕಲಿಯಲು ಸಿಕ್ಕಿತು.
೫. ‘ಪ್ರತಿಯೊಂದು ಅಂಶದ ಪೂರ್ಣ ಅಧ್ಯಯನವನ್ನು ಮಾಡಬೇಕು, ಇದರಿಂದ ಸಾಧನೆಯಾಗುತ್ತದೆ’, ಎಂಬುದು ಕಲಿಯಲು ಸಿಗುವುದು
ಒಮ್ಮೆ ಒಂದು ಅಂಶದ ಪೂರ್ಣ ಅಧ್ಯಯನವನ್ನು ಮಾಡದೇ ನಾನು ಅವರಿಗೆ ಆ ಅಂಶವನ್ನು ಹೇಳಿದೆನು. ಆಗ ಅವರು ನನಗೆ, “ನಿನ್ನಲ್ಲಿ ಪ್ರತಿಯೊಂದು ಅಂಶದ ಅಧ್ಯಯನವನ್ನು ಮಾಡುವ ಕ್ಷಮತೆಯಿದೆ; ಆದುದರಿಂದ ನೀನು ಯಾವಾಗಲೂ ಅಧ್ಯಯನವನ್ನು ಮಾಡಿಯೇ ಅಂಶವನ್ನು ಹೇಳಬೇಕು. ನಾವು ಪರಿಪೂರ್ಣ ಅಧ್ಯಯನ ಮಾಡಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ ಮತ್ತು ಗುರುದೇವರಿಗೆ ಅದೇ ಇಷ್ಟವಾಗುತ್ತದೆ” ಎಂದು ಹೇಳಿದರು. ಇದರಿಂದ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಅವರು ಸರಿಯಾಗಿ ಗುರುತಿಸಿದರು ಮತ್ತು ನನಗೆ ಮುಂದಿನ ಮಾರ್ಗವನ್ನು ತೋರಿಸಿದರು. ಆದುದರಿಂದಲೇ ನನಗೆ ಪ್ರತಿಯೊಂದು ಅಂಶವನ್ನು ಆಳವಾಗಿ ಅಧ್ಯಯನ ಮಾಡುವ ರೂಢಿಯಾಯಿತು.’
– (ಪೂ.) ಕು. ರತ್ನಮಾಲಾ ದಳವಿ, ಸನಾತನ ಆಶ್ರಮ, ದೇವದ, ಪನವೇಲ. (೧೫.೮.೨೦೨೧)