ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಜನ್ಮ, ಮೃತ್ಯು ಮತ್ತು ವಿವಾಹ ಎಂಬುದು ಪ್ರಾರಬ್ಧಕ್ಕನುಸಾರ ಆಗುತ್ತಿರುತ್ತವೆ. ಪೂರ್ಣವೇಳೆ ಸಾಧನೆ ಮಾಡುವ ಯುವ ಸಾಧಕ ಮತ್ತು ಸಾಧಕಿಯವರ ಮನಸ್ಸಿನಲ್ಲಿ ವಿವಾಹದ ಬಗ್ಗೆ ಬರುವ ವಿವಿಧ ವಿಚಾರಗಳು ಮತ್ತು ಅವುಗಳ ಮೇಲೆ ಯೋಗ್ಯ ದೃಷ್ಟಿಕೋನವನ್ನು ಮುಂದೆ ಕೊಡಲಾಗಿದೆ. ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರು ಮತ್ತು ಸಾಧಕಿಯರಿಗಾಗಿ ಈ ಅಂಶಗಳು ಮಾರ್ಗದರ್ಶಕವಾಗಬಹುದು !

೧. ನಾನು ಮದುವೆಯಾಗದಿದ್ದರೆ ತಂದೆ-ತಾಯಿಯವರ ಮೃತ್ಯುವಿನ ನಂತರ ನನಗೆ ಯಾರ ಆಧಾರವೇ ಇರಲ್ಲ !

೧ ಅ. ವಿಚಾರಗಳು : ಕೆಲವು ಸಾಧಕರಿಗೆ ‘ತಂದೆ-ತಾಯಿಯವರ ಮೃತ್ಯುವಿನ ನಂತರ ನನಗೆ ಯಾರ ಆಧಾರವೇ ಇರಲಾರದು. ನನಗೆ ಮುಂದಿನ ಜೀವನವೆಲ್ಲ ಒಂಟಿಯಾಗಿಯೇ ಕಳೆಯಬೇಕಾಗುವುದು’, ಎಂದು ಅನಿಸುವುದು ಮತ್ತು ಆದುದರಿಂದ ‘ಮದುವೆ ಮಾಡಿಕೊಳ್ಳಬೇಕು’, ಎಂಬ ವಿಚಾರಗಳು ಅವರ ಮನಸ್ಸಿನಲ್ಲಿ ಬರುತ್ತದೆ.

೧ ಆ. ಯೋಗ್ಯ ದೃಷ್ಟಿಕೋನ : ಭಗವಂತನೇ ಪ್ರತಿಯೊಬ್ಬರಿಗೂ ನಿಜವಾದ ಆಧಾರವಾಗಿರುತ್ತಾನೆ. ಆದುದರಿಂದ ಮಾಯೆಯಲ್ಲಿನ ಮಾನಸಿಕ ಆಧಾರ ಪಡೆಯುವ ಸಲುವಾಗಿ ಮದುವೆ ಮಾಡಿಕೊಳ್ಳುವುದಕ್ಕಿಂತ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಬೇಕು ಮತ್ತು ಸತತವಾಗಿ ನಮ್ಮೊಂದಿಗಿದ್ದು ಕೃಪೆಯ ಮಳೆ ಹರಿಸುವ ಚಿರಂತನವಾಗಿರುವ ಭಗವಂತನ ಅಸ್ತಿತ್ವದ ಅನುಭೂತಿಯನ್ನು ಪಡೆಯಬೇಕು.

೨. ನನ್ನ ಪ್ರಾರಬ್ಧದಲ್ಲಿ ಮದುವೆ ಇರುವುದರಿಂದ ನನಗೆ ಆ ಬಗ್ಗೆ ವಿಚಾರಗಳು ಬರುತ್ತಿವೆ !

೨ ಅ. ವಿಚಾರಗಳು : ಅನೇಕ ಸಾಧಕರಿಗೆ ‘ನನ್ನ ಪ್ರಾರಬ್ಧದಲ್ಲಿ ಮದುವೆ ಇರುವುದರಿಂದ ನನಗೆ ಹೀಗೆ ವಿಚಾರಗಳು ಬರುತ್ತಿವೆ’, ಎಂದು ಅನಿಸುತ್ತದೆ.

೨ ಆ. ಯೋಗ್ಯ ದೃಷ್ಟಿಕೋನ : ಸಂಕಲ್ಪ-ವಿಕಲ್ಪ ಇವು ಮನಸ್ಸಿನ ಕಾರ್ಯವಾಗಿರುವುದರಿಂದ ನಾನಾ ಬಗೆಯ ವಿಚಾರಗಳು ಮನಸ್ಸಿನಲ್ಲಿ ಬರುವುದು ಸಹಜವಿದೆ. ‘ಮನಸ್ಸಿನಲ್ಲಿ ವಿಚಾರಗಳು ಬರುತ್ತವೆ, ಅಂದರೆ ನಮ್ಮ ಪ್ರಾರಬ್ಧದಲ್ಲಿ ಮದುವೆ ಇರಬಹುದು’, ಎಂದು ಸಾಧಕರು ತಪ್ಪು ದೃಷ್ಟಿಕೋನವನ್ನು ಇಟ್ಟುಕೊಳ್ಳಬಾರದು. ಅದಕ್ಕಿಂತ ‘ಶೇ. ೯೯ ರಷ್ಟು ಪ್ರಾರಬ್ಧವಿದ್ದರೂ, ಭಗವಂತನು ಕೊಟ್ಟಿರುವ ಶೇ. ೧ ರಷ್ಟು ಕ್ರಿಯಮಾಣವನ್ನು ಶೇ. ೧೦೦ ರಷ್ಟು ಉಪಯೋಗಿಸಿದರೆ, ನಾವು ಅದನ್ನು ಸಹಜವಾಗಿ ಎದುರಿಸಬಹುದು’, ಎಂಬುದನ್ನು ಗಮನದಲ್ಲಿಡಬೇಕು.

೩. ಸಂತರು ನನಗೆ ಮದುವೆಯ ಬಗ್ಗೆ ಕೇಳಿದರು, ಅಂದರೆ ನನಗೆ ವಿವಾಹಯೋಗ ಇರಬಹುದೇ ?

೩ ಅ. ವಿಚಾರಗಳು : ಸಂತರು ಕೆಲವು ಸಾಧಕರಿಗೆ ‘ನೀವು ಮದುವೆಯ ವಿಷಯದಲ್ಲಿ ಏನು ನಿರ್ಣಯವನ್ನು ತೆಗೆದುಕೊಂಡಿರುವಿರಿ ?’ ಎಂದು ಕೇಳುತ್ತಾರೆ. ಆಗ ಸಾಧಕರ ಮನಸ್ಸಿನಲ್ಲಿ ‘ನನಗೆ ಸಂತರು ಮದುವೆಯ ವಿಷಯದಲ್ಲಿ ಕೇಳುತ್ತಿದ್ದಾರೆ, ನನ್ನ ಪ್ರಾರಬ್ಧದಲ್ಲಿ ಮದುವೆ ಇದೆಯೇ ?’ ಎಂದು ಅನಿಸುವುದು ಮತ್ತು ಅವರ ಮನಸ್ಸಿನಲ್ಲಿ ದ್ವಂದ್ವವಾಗುತ್ತದೆ.

೩ ಆ. ಯೋಗ್ಯ ದೃಷ್ಟಿಕೋನ : ತನ್ನ ಮನಸ್ಸಿನಿಂದಲೇ ಸಂತರ ಮಾತಿನ ಭಾವಾರ್ಥಗಳನ್ನು ನಿರ್ಧರಿಸುವುದು ಅಯೋಗ್ಯವಾಗಿದೆ. ಅಧ್ಯಾತ್ಮದಲ್ಲಿನ ಅಧಿಕಾರಿವ್ಯಕ್ತಿಯಾಗಿರುವ ಸಂತರು ಸಾಧಕರಿಗೆ ಮಾಯೆಯ ಬಂಧನದಲ್ಲಿ ಸಿಲುಕಲು ಏಕೆ ಹೇಳುತ್ತಾರೆ ?

೪. ಸಾಧನೆ ಸರಿಯಾಗಿ ಆಗದಿರುವುದರಿಂದ ನನ್ನ ಮನಸ್ಸಿನಲ್ಲಿ ಮದುವೆಯ ವಿಚಾರಗಳು ಬರುತ್ತಿವೆ !

೪ ಅ. ವಿಚಾರಗಳು : ಮದುವೆ ಮಾಡಿಕೊಳ್ಳುವ ಬಗ್ಗೆ ಅಥವಾ ಓರ್ವ ಸಾಧಕನ ಬಗ್ಗೆ ಅಥವಾ ಸಾಧಕಿಯ ಬಗ್ಗೆ ವಿಚಾರಗಳು ಬರುತ್ತಿದ್ದರೆ ಕೆಲವು ಸಾಧಕರಿಗೆ ‘ನನ್ನ ಸಾಧನೆಯಾಗುವುದಿಲ್ಲ; ಆದುದರಿಂದ ನನಗೆ ಹೀಗೆ ಅನಿಸುತ್ತಿದೆ’, ಎಂಬ ಅಪರಾಧಿತನದಿಂದ ಅವರು ತಮಗೇ ದೋಷವನ್ನು ಕೊಡುತ್ತಿರುತ್ತಾರೆ.

೪ ಆ. ಯೋಗ್ಯ ದೃಷ್ಟಿಕೋನ : ಯುವ ವಯಸ್ಸಿನಲ್ಲಿ ವಿವಾಹದ ವಿಷಯದಲ್ಲಿ ವಿಚಾರಗಳು ಬರುವುದು ನೈಸರ್ಗಿಕವಾಗಿದೆ. ಆದುದರಿಂದ ಅದಕ್ಕಾಗಿ ತಮಗೆ ದೋಷ ಕೊಡುವುದಕ್ಕಿಂತ ಆ ವಿಚಾರಗಳನ್ನು ಎದುರಿಸಲು ಸಾಧಕರು ವಿಚಾರಗಳ ತೀವ್ರತೆಗನುಸಾರ ಅವಶ್ಯಕವಿರುವ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು

೫. ಬೇರೆಯವರ ಮದುವೆ ನಿಶ್ಚಿತವಾಗಿದೆ ಎಂದು ತಿಳಿದ ಮೇಲೆ ಮುಂದಿನ ದೃಷ್ಟಿಕೋನವನ್ನಿಡಿ !

ಸಂಬಂಧಿಕರು, ಸ್ನೇಹಿತರ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಮೇಲೆ ಕೆಲವು ಸಾಧಕರ ಮನಸ್ಸಿನಲ್ಲಿ ತನ್ನ ಮದುವೆಯ ವಿಚಾರಗಳು ಬರಬಹುದು. ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡುತ್ತಿದ್ದರೆ ಕಾಲಾಂತರದಿಂದ ಈ ವಿಚಾರಗಳು ಬರುವುದು ತನ್ನಷ್ಟಕ್ಕೆ ನಿಲ್ಲುತ್ತದೆ. ಆ ವಿಚಾರಗಳ ಕಾಳಜಿ ಮಾಡಬಾರದು !

೬. ಮದುವೆಯ ವಿಚಾರಗಳು ಕಡಿಮೆಯಾಗುವ ಸಲುವಾಗಿ ಸಾಧನೆ ಹೆಚ್ಚಿಸುವುದು ಆವಶ್ಯಕವಿದೆ !

ಸಾಧನೆ ಮಾಡುವಾಗ ಆಧ್ಯಾತ್ಮಿಕ ಮಟ್ಟ ಶೇ. ೫೦ ಕ್ಕಿಂತಲೂ ಹೆಚ್ಚಾಗಿದ್ದರೆ, ಮಾಯೆಯ ಸೆಳೆತ ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಆದುದರಿಂದ ‘ಮದುವೆ ಮಾಡಿಕೊಳ್ಳಬೇಕು’, ಎಂಬ ವಿಚಾರಗಳು ಕಡಿಮೆಯಾಗುತ್ತಾ ಹೋಗುತ್ತದೆ. ಸಾಧನೆಯಿಂದ ಲಭಿಸುವ ಆನಂದದ ಅನುಭೂತಿ ಬಂದರೆ, ವಿವಾಹದಿಂದ ಸಿಗುವ ಸುಖದ ಸೆಳೆತ ಕಡಿಮೆಯಾಗುತ್ತದೆ. ಆದುದರಿಂದ ‘ಮದುವೆ ಮಾಡಿಕೊಳ್ಳಬೇಕು’, ಹೀಗೆ ಅನಿಸುವುದು ಕಡಿಮೆಯಾಗುತ್ತಾ ಹೋಗುತ್ತದೆ. ಅನೇಕ ಸಾಧಕರ ಮನಸ್ಸಿನಲ್ಲಿ ಮೇಲಿನಂತೆ ವಿಚಾರಗಳು ಬಂದರೆ ಅದನ್ನು ಸಮವಯಸ್ಕ ಸಾಧಕರೊಂದಿಗೆ ಮನಮುಕ್ತವಾಗಿ ಮಾತನಾಡುತ್ತಾರೆ. ಸಾಧನೆಯ ದೃಷ್ಟಿಯಿಂದ ಯೋಗ್ಯ ದೃಷ್ಟಿಕೋನವನ್ನು ಪಡೆಯಲು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಸಾಧಕರೊಂದಿಗೆ ಈ ಬಗ್ಗೆ ಮಾತನಾಡಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.